ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವರ ನಿರ್ದೇಶದ ಮೇರೆಗೆ ಹೆಚ್ಚಿನ ಡೆಂಗಿ ಪ್ರಕರಣಗಳಿರುವ 9 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉನ್ನತ ಮಟ್ಟದ ತಂಡವನ್ನು ರವಾನಿಸಿದ ಕೇಂದ್ರ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಡೆಂಗಿಯನ್ನು ಸಮರ್ಥವಾಗಿ ನಿಯಂತ್ರಿಸಲು ಹಾಗು ನಿರ್ವಹಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳಲ್ಲಿ ನೆರವು ನೀಡಲಿರುವ ಕೇಂದ್ರ ತಂಡ

Posted On: 03 NOV 2021 9:57AM by PIB Bengaluru

ಕೇಂದ್ರ ಆರೋಗ್ಯ ಸಚಿವಾಲಯವು ಹೆಚ್ಚಿನ ಡೆಂಗಿ ಪ್ರಕರಣಗಳು ವರದಿಯಾಗಿರುವ  9 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಡೆಂಗಿ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳಲ್ಲಿ ರಾಜ್ಯಗಳನ್ನು ಬೆಂಬಲಿಸಲು ಉನ್ನತ ಮಟ್ಟದ ತಂಡಗಳನ್ನು ರವಾನಿಸಿದೆ. ಇದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯ ಅವರು 2021 ನವೆಂಬರ್ 1ರಂದು ದೆಹಲಿಯಲ್ಲಿ ಡೆಂಗಿ ಪರಿಸ್ಥಿತಿಯ ಪರಿಶೀಲನಾ ಸಭೆಯಲ್ಲಿ ನೀಡಿದ ನಿರ್ದೇಶನಕ್ಕೆ ಅನುಗುಣವಾಗಿ ಕಳುಹಿಸಲಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹರಿಯಾಣ, ಕೇರಳ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರಗಳಾಗಿವೆ.

ಕೇಂದ್ರ ಆರೋಗ್ಯ ಸಚಿವರು ಹೆಚ್ಚಿನ ಡೆಂಗಿ ಪ್ರಕರಣಗಳಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ಒದಗಿಸುವಂತೆ ಆರೋಗ್ಯ ಸಚಿವಾಲಯಕ್ಕೆ ನಿರ್ದೇಶಿಸಿದ್ದರು. ಒಟ್ಟಾರೆ 1,16,991 ಡೆಂಗಿ ಪ್ರಕರಣಗಳು ದೇಶಾದ್ಯಂತದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕೆಲವು ರಾಜ್ಯಗಳಲ್ಲಿ ಕಳೆದ ಅಕ್ಟೋಬರ್ ನಲ್ಲಿ ಗಣನೀಯವಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಒಟ್ಟು 15 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸಕ್ತ ವರ್ಷ ಗರಿಷ್ಠ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿವೆ. ರಾಜ್ಯಗಳು ಅಕ್ಟೋಬರ್ 31ರವರೆಗೆ ದೇಶದಲ್ಲಿ ವರದಿಯಾದ ಒಟ್ಟಾರೆ ಡಂಘ್ಯೂ ಪ್ರಕರಣಗಳ ಪೈಕಿ ಶೇ.86ರಷ್ಟು ಹೊಂದಿವೆ.

ನಿಟ್ಟಿನಲ್ಲಿ, ಎನ್.ವಿ.ಬಿ.ಡಿ.ಸಿ.ಪಿ., ಎನ್.ಸಿ.ಡಿ.ಸಿ. ಮತ್ತು ಪ್ರಾದೇಶಿಕ ಕಚೇರಿಗಳ ತಜ್ಞರನ್ನು ಒಳಗೊಂಡ  ಕೇಂದ್ರ ತಂಡಗಳನ್ನು ಸೆಪ್ಟೆಂಬರ್ ಗೆ ಹೋಲಿಸಿದರೆ ಅಕ್ಟೋಬರ್ ನಲ್ಲಿ ಹೆಚ್ಚಿನ ಪ್ರಕರಣ ವರದಿ ಮಾಡಿದ 9 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.

ತಂಡಗಳಿಗೆ ರಾಜ್ಯಗಳಿಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಹೆಚ್ಚಿಸಲು ರಾಜ್ಯಗಳಿಗೆ ಸಹಾಯ ಮಾಡಲು ಮತ್ತು ಬೆಂಬಲಿಸುವ ಸವಾಲು ನೀಡಲಾಗಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದ ಸ್ಥಿತಿ, ಕಿಟ್‌ ಗಳು ಮತ್ತು ಔಷಧಿಗಳ ಲಭ್ಯತೆ, ಆರಂಭದಲ್ಲೇ ರೋಗ ಪತ್ತೆ, ಕೀಟನಾಶಕಗಳ ಲಭ್ಯತೆ ಮತ್ತು ಬಳಕೆ, ಲಾರ್ವಾ ನಿಗ್ರಹ ಮತ್ತು ವಯಸ್ಕರಲ್ಲಿ ಸೊಳ್ಳೆಯಿಂದ ಬರುವ ರೋಗ ನಿಯಂತ್ರಣ ಕ್ರಮಗಳ ಸ್ಥಿತಿ ಇತ್ಯಾದಿಗಳ ಕುರಿತು ವರದಿ ಮಾಡಲು ತಂಡಗಳಿಗೆ ಸೂಚಿಸಲಾಗಿದೆ. ತಂಡದ ಸದಸ್ಯರು ತಮ್ಮ ಅಧ್ಯಯನದ ಅಭಿಪ್ರಾಯಗಳ ಬಗ್ಗೆ ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

***



(Release ID: 1769199) Visitor Counter : 227