ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

2021ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಘೋಷಣೆ


ಭಾರತದ ರಾಷ್ಟ್ರಪತಿಗಳು ನವೆಂಬರ್ 13, 2021ರಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ

Posted On: 02 NOV 2021 9:18PM by PIB Bengaluru

ಮುಖ್ಯಾಂಶಗಳು

 • 12 ಕ್ರೀಡಾ ಪಟುಗಳಿಗೆ 2021ನೇ ಸಾಲಿನ ʼಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿʼ ಪ್ರದಾನ ಮಾಡಲಾಗುವುದು
 • ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ 2021ನೇ ಸಾಲಿನ ಅರ್ಜುನ ಪ್ರಶಸ್ತಿಗಳನ್ನು ಸ್ವೀಕರಿಸಲಿರುವ 35 ಕ್ರೀಡಾಪಟುಗಳು

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಇಂದು ʻ2021ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿʼಗಳನ್ನು ಘೋಷಿಸಿದೆ. 2021 ನವೆಂಬರ್‌ 13ರಂದು (ಶನಿವಾರ) 16:30 ಗಂಟೆಗೆ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ಶ್ರೇಷ್ಠ ಪ್ರದರ್ಶನವನ್ನು ಗುರುತಿಸಿ, ಸಮ್ಮಾನಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯದ್ಭುತ ಮತ್ತು ಶ್ರೇಷ್ಠ ಪ್ರದರ್ಶನ ನೀಡಿದ ಕ್ರೀಡಾಪಟುವಿಗೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ'ಯನ್ನು ನೀಡಲಾಗುತ್ತದೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮತ್ತು ನಾಯಕತ್ವ, ಕ್ರೀಡಾಮನೋಭಾವ ಹಾಗೂ ಶಿಸ್ತಿನ ಗುಣಗಳನ್ನು ಪ್ರದರ್ಶಿಸಿದ ಕ್ರೀಡಾಪಟುಗಳಿಗೆ 'ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿ'ಯನ್ನು ನೀಡಲಾಗುತ್ತದೆ.

ಶ್ರೇಷ್ಠ ಮತ್ತು ಪ್ರತಿಭಾನ್ವಿತ ತರಬೇತಿ ಕಾರ್ಯದಲ್ಲಿ ನಿರಂತರಂತೆ ಕಾಯ್ದುಕೊಂಡ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಉತ್ಕೃಷ್ಟ ಸಾಧನೆ ಮಾಡಲು ಅನುವು ಮಾಡಿಕೊಟ್ಟಂತಹ ತರಬೇತುದಾರರಿಗೆ ʻದ್ರೋಣಾಚಾರ್ಯ ಪ್ರಶಸ್ತಿ' ನೀಡಲಾಗುತ್ತದೆ.

ತಮ್ಮ ಪ್ರದರ್ಶನದ ಮೂಲಕ ಕ್ರೀಡೆಗೆ ಕೊಡುಗೆ ನೀಡಿದ ಮತ್ತು ನಿವೃತ್ತಿಯ ನಂತರವೂ ಕ್ರೀಡಾ ಸ್ಫೂರ್ತಿಯ ಉತ್ತೇಜನ ಮುಂದುವರಿಸಿದ ಕ್ರೀಡಾಪಟುಗಳನ್ನು ಗೌರವಿಸಲು ʻಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿʼಯನ್ನು ನೀಡಲಾಗುತ್ತದೆ.

ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಗುರುತಿಸುವಂತಹ ಪಾತ್ರವನ್ನು ವಹಿಸಿದ ಕಾರ್ಪೊರೇಟ್ ಸಂಸ್ಥೆಗಳು(ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡರಲ್ಲೂ), ಕ್ರೀಡಾ ನಿಯಂತ್ರಣ ಮಂಡಳಿಗಳು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಸ್ಥೆಗಳು ಸೇರಿದಂತೆ ʻಎನ್‌ಜಿಒʼಗಳಿಗೆ 'ರಾಷ್ಟ್ರೀಯ ಖೇಲ್ ಪ್ರೊತ್ಸಹನ್ ಪುರಸ್ಕಾರ್' ನೀಡಲಾಗುತ್ತದೆ.

ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಗಳಲ್ಲಿ ಒಟ್ಟಾರೆ ಉನ್ನತ ಪ್ರದರ್ಶನ ನೀಡುವ ವಿಶ್ವವಿದ್ಯಾಲಯಕ್ಕೆ ʻಮೌಲಾನಾ ಅಬ್ದುಲ್‌ ಕಲಾಂ ಆಜಾದ್ (ಎಂಎಕೆಎ) ಟ್ರೋಫಿʼಯನ್ನು ನೀಡಲಾಗುತ್ತದೆ.

ಹಾಲಿ ವರ್ಷದಲ್ಲಿ ಪ್ರಶಸ್ತಿಗಳಿಗಾಗಿ ಅತ್ಯಧಿಕ ಸಂಖ್ಯೆಯ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು. ನ್ಯಾ.ಮುಕುಂದಕಮ್ ಶರ್ಮಾ (ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು) ನೇತೃತ್ವದ, ಪ್ರಸಿದ್ಧ ಕ್ರೀಡಾಪಟುಗಳು ಮತ್ತು ಕ್ರೀಡಾ ಪತ್ರಿಕೋದ್ಯಮದಲ್ಲಿ ಅನುಭವಿ ವ್ಯಕ್ತಿಗಳು ಹಾಗೂ ಕ್ರೀಡಾ ಆಡಳಿತದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ನಾಮನಿರ್ದೇಶಗಳನ್ನು ಪರಿಶೀಲಿಸಿ ಆಯ್ಕೆ ನಡೆಸಿದೆ.

ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸೂಕ್ತ ಪರಿಶೀಲನೆಯ ನಂತರ, ಸರಕಾರವು ಕೆಳಗಿನ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ:

 1. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ- 2021

ಕ್ರ.ಸಂ.

ಕ್ರೀಡಾಪಟುವಿನ ಹೆಸರು

ವಿಭಾಗ

1.

ನೀರಜ್ ಚೋಪ್ರಾ

ಅಥ್ಲೆಟಿಕ್ಸ್

2.

ರವಿ ಕುಮಾರ್

ಕುಸ್ತಿ

3.

ಲೊವ್ಲಿನಾ ಬೊರ್ಗೊಹೆನ್

ಬಾಕ್ಸಿಂಗ್

4.

ಶ್ರೀಜೇಶ್ ಪಿ.ಆರ್

ಹಾಕಿ

5.

ಅವನಿ ಲೇಖರಾ

ಪ್ಯಾರಾ ಶೂಟಿಂಗ್

6.

ಸುಮಿತ್ ಆಂತಿಲ್

ಪ್ಯಾರಾ ಅಥ್ಲೆಟಿಕ್ಸ್

7.

ಪ್ರಮೋದ ಭಗತ್

ಪ್ಯಾರಾ ಬ್ಯಾಡ್ಮಿಂಟನ್

8.

ಕೃಷ್ಣ ನಾಗರ್‌

ಪ್ಯಾರಾ ಬ್ಯಾಡ್ಮಿಂಟನ್

9.

ಮನೀಶ್ ನರ್ವಾಲ್

ಪ್ಯಾರಾ ಶೂಟಿಂಗ್

10.

ಮಿಥಾಲಿ ರಾಜ್

ಕ್ರಿಕೆಟ್

11.

ಸುನಿಲ್ ಛೇತ್ರಿ

ಫುಟ್ಬಾಲ್

12.

ಮನ್‌ಪ್ರೀತ್ ಸಿಂಗ್

ಹಾಕಿ

2) ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ 2021ನೇ ಸಾಲಿನ ಅರ್ಜುನ ಪ್ರಶಸ್ತಿಗಳು

ಕ್ರ.ಸಂ.

ಕ್ರೀಡಾಪಟುವಿನ ಹೆಸರು

ವಿಭಾಗ

 1.  

ಅರ್ಪಿಂದರ್ ಸಿಂಗ್

ಅಥ್ಲೆಟಿಕ್ಸ್

 1.  

ಸಿಮ್ರಾನ್‌ಜಿತ್ ಕೌರ್

ಬಾಕ್ಸಿಂಗ್

 1.  

ಶಿಖರ್ ಧವನ್

ಕ್ರಿಕೆಟ್

 1.  

ಭವಾನಿ ದೇವಿ ಚಡಲವಾಡ ಆನಂದ ಸುಂಧರರಮಣ್‌

ಕತ್ತಿ ವರಸೆ (ಫೆನ್ಸಿಂಗ್)

 1.  

ಮೋನಿಕಾ

ಹಾಕಿ

 1.  

ವಂದನಾ ಕಟಾರಿಯಾ

ಹಾಕಿ

 1.  

ಸಂದೀಪ್ ನರ್ವಾಲ್

ಕಬಡ್ಡಿ

 1.  

ಹಿಮಾನಿ ಉತ್ತಂ ಪರಬ್‌

ಮಲ್ಲಕಂಬ

 1.  

ಅಭಿಷೇಕ್ ವರ್ಮಾ

ಶೂಟಿಂಗ್

 1.  

ಅಂಕಿತಾ ರೈನಾ

ಟೆನ್ನಿಸ್

 1.  

ದೀಪಕ್ ಪುನಿಯಾ

ಕುಸ್ತಿ

 1.  

ದಿಲ್‌ಪ್ರೀತ್ ಸಿಂಗ್

ಹಾಕಿ

 1.  

ಹರ್ಮನ್ ಪ್ರೀತ್‌ ಸಿಂಗ್

ಹಾಕಿ

 1.  

ರೂಪಿಂದರ್ ಪಾಲ್ ಸಿಂಗ್

ಹಾಕಿ

 1.  

ಸುರೇಂದರ್ ಕುಮಾರ್

ಹಾಕಿ

 1.  

ಅಮಿತ್ ರೋಹಿದಾಸ್

ಹಾಕಿ

 1.  

ಬೀರೇಂದ್ರ ಲಾಕ್ರಾ

ಹಾಕಿ

 1.  

ಸುಮಿತ್

ಹಾಕಿ

 1.  

ನೀಲಕಂಠ ಶರ್ಮಾ

ಹಾಕಿ

 1.  

ಹಾರ್ದಿಕ್ ಸಿಂಗ್

ಹಾಕಿ

 1.  

ವಿವೇಕ ಸಾಗರ ಪ್ರಸಾದ್

ಹಾಕಿ

 1.  

ಗುರ್ಜಾಂತ್‌ ಸಿಂಗ್

ಹಾಕಿ

 1.  

ಮನ್‌ದೀಪ್ ಸಿಂಗ್

ಹಾಕಿ

 1.  

ಶಂಶೇರ್ ಸಿಂಗ್

ಹಾಕಿ

 1.  

ಲಲಿತ್ ಕುಮಾರ್ ಉಪಾಧ್ಯಾಯ್‌

ಹಾಕಿ

 1.  

ವರುಣ್ ಕುಮಾರ್

ಹಾಕಿ

 1.  

ಸಿಮ್ರಾನ್‌ಜೀತ್ ಸಿಂಗ್

ಹಾಕಿ

 1.  

ಯೋಗೇಶ್ ಕಥುನಿಯಾ

ಪ್ಯಾರಾ ಅಥ್ಲೆಟಿಕ್ಸ್

 1.  

ನಿಶಾದ್ ಕುಮಾರ್

ಪ್ಯಾರಾ ಅಥ್ಲೆಟಿಕ್ಸ್

 1.  

ಪ್ರವೀಣ್ ಕುಮಾರ್

ಪ್ಯಾರಾ ಅಥ್ಲೆಟಿಕ್ಸ್

 1.  

ಸುಹಾಶ್‌ ಯತಿರಾಜ್

ಪ್ಯಾರಾ ಬ್ಯಾಡ್ಮಿಂಟನ್

 1.  

ಸಿಂಘ್ರಾಜ್‌ ಅಧಾನ

ಪ್ಯಾರಾ ಶೂಟಿಂಗ್

 1.  

ಭವೀನಾ ಪಟೇಲ್

ಪ್ಯಾರಾ ಟೇಬಲ್ ಟೆನ್ನಿಸ್

 1.  

ಹರ್ವಿಂದರ್ ಸಿಂಗ್

ಪ್ಯಾರಾ ಆರ್ಚರಿ (ಬಿಲ್ಲುಗಾರಿಕೆ)

 1.  

ಶರದ್ ಕುಮಾರ್

ಪ್ಯಾರಾ ಅಥ್ಲೆಟಿಕ್ಸ್

3) ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ತರಬೇತುದಾರರರಿಗೆ  2021ನೇ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿ

. ಜೀವಮಾನದ ಸಾಧನೆ ವರ್ಗ:

ಕ್ರ.ಸಂ.

ಕೋಚ್ ಹೆಸರು

ವಿಭಾಗ

 1.  

ಟಿ.ಪಿ. ಔಸೆಫ್

ಅಥ್ಲೆಟಿಕ್ಸ್

 1.  

ಸರ್ಕಾರ್ ತಲ್ವಾರ್

ಕ್ರಿಕೆಟ್

 1.  

ಸರ್ಪಾಲ್ ಸಿಂಗ್

ಹಾಕಿ

 1.  

ಆಶಾನ್ ಕುಮಾರ್

ಕಬಡ್ಡಿ

 1.  

ತಪನ್ ಕುಮಾರ್ ಪಾಣಿಗ್ರಹಿ

ಈಜು

ಬಿ. ಸಾಮಾನ್ಯ ವರ್ಗ:

ಕ್ರ.ಸಂ.

ಕೋಚ್ ಹೆಸರು

ವಿಭಾಗ

 1.  

ರಾಧಾಕೃಷ್ಣನ್ ನಾಯರ್ ಪಿ

ಅಥ್ಲೆಟಿಕ್ಸ್

 1.  

ಸಂಧ್ಯಾ ಗುರುಂಗ್

ಬಾಕ್ಸಿಂಗ್

 1.  

ಪ್ರೀತಮ್‌ ಸಿವಾಚ್

ಹಾಕಿ

 1.  

ಜೈ ಪ್ರಕಾಶ್ ನೌತಿಯಾಲ್

ಪ್ಯಾರಾ ಶೂಟಿಂಗ್

 1.  

ಸುಬ್ರಮಣಿಯನ್ ರಾಮನ್

ಟೇಬಲ್ ಟೆನ್ನಿಸ್

4) ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಜೀವಮಾನ ಸಾಧನೆಗಾಗಿ 2021ನೇ ಸಾಲಿನ ಧ್ಯಾನ್ ಚಂದ್ ಪ್ರಶಸ್ತಿ

ಕ್ರ.ಸಂ.

ಹೆಸರು

ವಿಭಾಗ

 1.  

ಲೇಖಾ ಕೆ.ಸಿ.

ಬಾಕ್ಸಿಂಗ್

 1.  

ಅಭಿಜೀತ್ ಕುಂತೆ

ಚದುರಂಗ

 1.  

ದಾವಿಂದರ್ ಸಿಂಗ್ ಗರ್ಚಾ

ಹಾಕಿ

 1.  

ವಿಕಾಸ್ ಕುಮಾರ್

ಕಬಡ್ಡಿ

 1.  

ಸಜ್ಜನ್ ಸಿಂಗ್

ಕುಸ್ತಿ

5) ರಾಷ್ಟ್ರೀಯ ಖೇಲ್ ಪ್ರೊತ್ಸಹನ್ ಪುರಸ್ಕಾರ-2021

ಕ್ರ.ಸಂ.

ವರ್ಗ

ʻರಾಷ್ಟ್ರೀಯ ಖೇಲ್ ಪ್ರೋತ್ಸಹನ್ ಪುರಸ್ಕಾರ್-2021ʼಕ್ಕೆ ಶಿಫಾರಸುಗೊಂಡ ಸಂಸ್ಥೆ

1.

ಉದಯೋನ್ಮುಖ ಮತ್ತು ಯುವ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಪೋಷಣೆ

ಮಾನವ ರಚ್ನಾ ಶಿಕ್ಷಣ ಸಂಸ್ಥೆ

2.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ಕ್ರೀಡೆಗೆ ಪ್ರೋತ್ಸಾಹ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್

(6) ಮೌಲಾನಾ ಅಬ್ದುಲ್‌ ಕಲಾಂ ಆಜಾದ್ (ಎಂಎಕೆಎ) ಟ್ರೋಫಿ - 2021:

ಪಂಜಬ್ ವಿಶ್ವವಿದ್ಯಾಲಯ - ಚಂಡೀಗಢ

***(Release ID: 1769186) Visitor Counter : 397