ನೀತಿ ಆಯೋಗ

ನೀತಿ ಆಯೋಗದಿಂದ “ನಾಪತ್ತೆಯಾಗಿರುವ ಭಾರತದ ಮಧ್ಯಮವರ್ಗಕ್ಕೆ ಆರೋಗ್ಯ ವಿಮೆ” ಕುರಿತ ವರದಿ ಬಿಡುಗಡೆ

Posted On: 29 OCT 2021 3:38PM by PIB Bengaluru

ನೀತಿ ಆಯೋಗವು “ಭಾರತದ ಮಧ್ಯಮ ವರ್ಗಕ್ಕೆ ದೊರೆಯದ ಆರೋಗ್ಯ ವಿಮೆ’ ಕುರಿತ ಸಮಗ್ರ ವರದಿಯನ್ನು ಇಂದು ಬಿಡುಗಡೆ ಮಾಡಿದೆ, ಇದು ಭಾರತದ ಜನಸಂಖ್ಯೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ವಿಮಾ ಕೊಡುಗೆ ಪರಿಹಾರಗಳನ್ನು ಒದಗಿಸುವಲ್ಲಿ ಆರೋಗ್ಯ ವಿಮಾ ವ್ಯಾಪ್ತಿಯಲ್ಲಿಯ ಕಂದಕಗಳನ್ನು ಕುರಿತ ವರದಿಯಾಗಿದೆ.

ವರದಿಯನ್ನು ನೀತಿ ಆಯೋಗದ ಸಿ.ಇ.ಒ. ಅಮಿತಾಭ್ ಕಾಂತ್ ಮತ್ತು ಹೆಚ್ಚುವರಿ ಕಾರ್ಯದರ್ಶಿ ಡಾ. ರಾಕೇಶ್ ಸರ್ವಾಲ್ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

ನೀತಿ ಆಯೋಗ ಸದಸ್ಯರಾದ ಡಾ. ವಿ.ಕೆ. ಪೌಲ್ ಅವರು ವರದಿಯ ಮುನ್ನುಡಿಯಲ್ಲಿ ಎಲ್ಲರಿಗೂ ಆರೋಗ್ಯ ವಿಮೆಯ ವ್ಯಾಪ್ತಿಯ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾವಿಸಿರುವರಲ್ಲದೆ “ ಆರೋಗ್ಯ ವಿಮೆಯ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳಲು ಮತ್ತು ಜನಸಮೂಹಕ್ಕೆ ತಲುಪಲು ಪ್ರಮುಖ ಸವಾಲುಗಳನ್ನು ಎದುರಿಸಬೇಕಾಗಿದೆ” ಎಂದು ಹೇಳಿದ್ದಾರೆ. ಮುಂದುವರಿದು ಅವರು “ ಈ ಪ್ರಯತ್ನದಲ್ಲಿ ಸರಕಾರ ಮತ್ತು ಖಾಸಗಿ ವಲಯ ಒಗ್ಗೂಡಿ ಕೆಲಸ ಮಾಡಬೇಕಾದ ಅಗತ್ಯ ಇದೆ”  ಎಂದೂ ಹೇಳಿದ್ದಾರೆ. “ಖಾಸಗಿ ವಲಯದ ಜಾಣ್ಮೆ ಮತ್ತು ದಕ್ಷತೆಯು  ಕಳೆದು ಹೋಗಿರುವ ಅಥವಾ ನಾಪತ್ತೆಯಾಗಿರುವ  ಮಧ್ಯಮ ವರ್ಗವನ್ನು  ತಲುಪಲು ಮತ್ತು ಬಲಿಷ್ಠವಾದ ಉತ್ಪನ್ನಗಳನ್ನು ರೂಪಿಸಲು ಅವಶ್ಯವಾಗಿದೆ. ಬಳಕೆದಾರ ಜಾಗೃತಿಯನ್ನು ಮತ್ತು ವಿಶ್ವಾಸವನ್ನು ಹೆಚ್ಚಿಸುವಲ್ಲಿ ಸರಕಾರಕ್ಕೆ ಮಹತ್ವದ ಪಾತ್ರವಿದೆ. ಪ್ರಮಾಣಿತ ಉತ್ಪನ್ನಕ್ಕಾಗಿ ನಿಯಂತ್ರಣ ನಿಯಮಾವಳಿಗಳ ಪರಿಷ್ಕರಣೆ ಮತ್ತು ಬಳಕೆದಾರ ರಕ್ಷಣೆ, ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಸಮರ್ಪಕವಾದ ವೇದಿಕೆಯನ್ನು ಒದಗಿಸುವುದರಲ್ಲಿ  ಸರಕಾರಕ್ಕೆ ಮುಖ್ಯ ಪಾತ್ರವಿದೆ” ಎಂದೂ ಅವರು ಹೇಳಿದ್ದಾರೆ.

ನೀತಿ ಆಯೋಗದ ಸಿ.ಇ.ಒ. ಅಮಿತಾಭ್ ಕಾಂತ್ “ ಈ ವರದಿಯು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ವಿಸ್ತಾರ ಗುರಿಗಳನ್ನು ಸಾಧಿಸಲು ಮತ್ತು ಆರೋಗ್ಯಕ್ಕೆ ಹಣಕಾಸು ರಕ್ಷಣೆಯನ್ನು ಹೆಚ್ಚಿಸಲು ಮಾತುಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಯತ್ನ. ಇದು ಆರೋಗ್ಯ ವಿಮಾ ವ್ಯಾಪ್ತಿಯಲ್ಲಿ ಪ್ರಸ್ತುತ ಇರುವ ಭೌತಿಕ ವೈದೃಶ್ಯ, ಇರುವ ಅಂತರಗಳನ್ನು ಉಲ್ಲೇಖಿಸುವುದಲ್ಲದೆ ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಶಿಫಾರಸುಗಳನ್ನು ಮತ್ತು ಹಾದಿಗಳನ್ನು ಸ್ಪಷ್ಟಪಡಿಸುತ್ತದೆ” ಎಂದರು.

ಆಯುಷ್ಮಾನ್ ಭಾರತ್ –ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ- ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯತ್ತ ಸಾಗುವ  ಪ್ರಮುಖ ಯೋಜನೆಯಾಗಿದೆ ಮತ್ತು ರಾಜ್ಯ ಸರಕಾರದ ವಿಸ್ತರಣಾ ಯೋಜನೆಗಳು-ತಳದಲ್ಲಿರುವ ಶೇಖಡಾ 50ರಷ್ಟು ಜನತೆಗೆ ಸಮಗ್ರ ಆಸ್ಪತ್ರೆ ಚಿಕಿತ್ಸಾ ವ್ಯಾಪ್ತಿಯನ್ನು ಒದಗಿಸುತ್ತಿವೆ. ಸುಮಾರು 20% ದಷ್ಟು ಜನತೆಗೆ ಸಾಮಾಜಿಕ ಆರೋಗ್ಯ ವಿಮಾ ವ್ಯಾಪ್ತಿ ಲಭಿಸಿದೆ. ಮತ್ತು ಖಾಸಗಿ ಸ್ವಯಂ ಆರೋಗ್ಯ ವಿಮೆಯು ಪ್ರಾಥಮಿಕವಾಗಿ ಹೆಚ್ಚು ಆದಾಯದ ಗುಂಪುಗಳಿಗೆ ಅನುಗುಣವಾಗಿ ವಿನ್ಯಾಸ ಮಾಡಲ್ಪಟ್ಟಿದೆ. ಇನ್ನುಳಿದ 30% ಜನಸಂಖ್ಯೆ ಆರೋಗ್ಯ ವಿಮಾ ಸೌಲಭ್ಯದಿಂದ ವಂಚಿತವಾಗಿದೆ, ಮತ್ತು ಅದನ್ನು “ನಾಪತ್ತೆಯಾದ ಮಧ್ಯಮ ವರ್ಗ” ಎಂದು ಪರಿಗಣಿಸಲಾಗಿದೆ. ಈ ನಾಪತ್ತೆಯಾಗಿರುವ ಮಧ್ಯಮವರ್ಗ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಎಲ್ಲಾ ಆದಾಯ ಮತ್ತು ಖರ್ಚಿನ ಬಹು ಗುಂಪುಗಳಲ್ಲಿ ಹರಡಿ ಹೋಗಿದೆ.

ವರದಿಯು ಕಡಿಮೆ  ವೆಚ್ಚದ ಸಮಗ್ರ ಆರೋಗ್ಯ ವಿಮಾ ಉತ್ಪನ್ನವನ್ನು ಇದರ ವ್ಯಾಪ್ತಿಯಲ್ಲಿ ಬಾರದೇ ಇರುವ ಮಧ್ಯಮವರ್ಗದವರಿಗಾಗಿ ರೂಪಿಸಬೇಕಾದ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದೆ. ವ್ಯಾಪ್ತಿಯಲ್ಲಿ ಕಾಣದಿರುವ ಮಧ್ಯಮ ವರ್ಗದವರಿಗಾಗಿ ಕಡಿಮೆ ಹಣಕಾಸು ವೆಚ್ಚದ ಆರೋಗ್ಯ ರಕ್ಷಣಾ ವಿಮೆಯನ್ನು ಅದು ಪ್ರಾಥಮಿಕವಾಗಿ ಪರಿಗಣನೆಗೆ ತೆಗೆದುಕೊಂಡಿದೆ. ಮತ್ತು ಆರೋಗ್ಯ ವಿಮೆಯನ್ನು ಆ ಕೊರತೆಯನ್ನು ನಿಭಾಯಿಸಲು ಇರುವ ದಾರಿ ಎಂದು ಪರಿಗಣಿಸಿದೆ. ಹಾಗೆ ಮಾಡುವಾಗ ವರದಿಯು ಪರಿಹಾರಗಳು ಮತ್ತು ನಿರ್ದಿಷ್ಟ ಉತ್ಪನ್ನಗಳ ಬಗ್ಗೆ ಮಧ್ಯಮ ವರ್ಗದವರ  ಒಳಗೊಳ್ಳುವಿಕೆಯನ್ನು ಸುಧಾರಿಸಲು ವಿಸ್ತಾರವಾದ ಸಮಾಲೋಚನೆಗಳೂ ಆರಂಭದ ಹಂತದಲ್ಲಿ ನಡೆಯಬೇಕು ಎಂದೂ ಹೇಳಿದೆ.

ವರದಿಯು ಉದ್ಯಮ ಮತ್ತು ಸರಕಾರಿ ಭಾಗೀದಾರರ  ನಡುವೆ ಸಮಾಲೋಚನೆಗಳು, ಚರ್ಚೆಗಳು ನಡೆಯಬೇಕು ಎಂದು ಪ್ರಸ್ತಾಪಿಸಿದೆಯಲ್ಲದೆ ಬಳಕೆದಾರ ಗುಂಪುಗಳ ನಡುವೆಯೂ ನಿರ್ದಿಷ್ಟ ಸಮಸ್ಯೆಯ ಮೂಲಗಳನ್ನು ಅರಿಯಲು ಹಾಗು ಸಮರ್ಪಕ ಪರಿಹಾರಗಳನ್ನು ರೂಪಿಸಲು ಚರ್ಚೆ ನಡೆಯಬೇಕು ಎಂದೂ ಅಭಿಪ್ರಾಯಪಟ್ಟಿದೆ.

ಇಡೀ ವರದಿಯನ್ನು ಪೂರ್ಣವಾಗಿ ಇಲ್ಲಿ ನೋಡಬಹುದು.

***



(Release ID: 1767732) Visitor Counter : 250