ಚುನಾವಣಾ ಆಯೋಗ
azadi ka amrit mahotsav g20-india-2023

ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಗೌರವಾನ್ವಿತ ಶ್ರೀ ಸುಶೀಲ್ ಚಂದ್ರ ಅಧ್ಯಕ್ಷೀಯ ಚುನಾವಣೆಗಳ ಅಂತಾರಾಷ್ಟ್ರೀಯ ವೀಕ್ಷಕರಾಗಿ ಉಜ್ಬೇಕಿಸ್ತಾನಕ್ಕೆ ಭೇಟಿ (2021ರ ಅಕ್ಟೋಬರ್ 21-25)

Posted On: 28 OCT 2021 11:16AM by PIB Bengaluru

ಉಜ್ಬೇಕಿಸ್ತಾನದ ಕೇಂದ್ರ ಚುನಾವಣಾ ಆಯೋಗ (ಸಿಇಸಿ-ಯು) ಅಧ್ಯಕ್ಷರ ಆಹ್ವಾನದ ಮೇರೆಗೆ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುಶಿಲ್ ಚಂದ್ರ ನೇತೃತ್ವದ ಮೂವರು ಸದಸ್ಯರ ನಿಯೋಗ 2021 ಅಕ್ಟೋಬರ್ 24ರಂದು ಉಜ್ಬೇಕಿಸ್ತಾನದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳ ವೀಕ್ಷಕರಾಗಿ ಭೇಟಿ ನೀಡಿತ್ತು. ಹೊಸ ಚುನಾವಣಾ ಸಂಹಿತೆಯಡಿ ನಡೆದ ಚುನಾವಣೆಯ ಮೇಲೆ  ಅಂತಾರಾಷ್ಟ್ರೀಯ ವೀಕ್ಷಕರು ತೀವ್ರ ನಿಗಾ ವಹಿಸಿದ್ದರು

ಭಾರತದ ಸಿಇಸಿ ಮತ್ತು ಉಜ್ಬೇಕಿಸ್ತಾನದ ಸಿಇಸಿ ಅಧ್ಯಕ್ಷರಾದ ಶ್ರೀ ಝೈನಿದ್ದೀನ್ ಎಂ. ನಿಜಾಂಕೋಡ್ಜೇವ್ ಅವರು 2021 ಅಕ್ಟೋಬರ್ 21ರಂದು ಚುನಾವಣಾ ಸಹಕಾರದ ಕುರಿತು ದ್ವಿಪಕ್ಷೀಯ ಸಭೆಯನ್ನು ನಡೆಸಿದರು. ಶ್ರೀ ಸತೀಶ್ ಚಂದ್ರ ಅವರು ಆಹ್ವಾನವನ್ನು ಒಪ್ಪಿದ್ದಕ್ಕಾಗಿ ಸಿಇಸಿ ಯು ಅಧ್ಯಕ್ಷರು ಧನ್ಯವಾದಗಳನ್ನು ಹೇಳಿದರು ಮತ್ತು ಏಕರೂಪದ ವಿದ್ಯುನ್ಮಾನ ಮತದಾರರ ಪಟ್ಟಿ ಸಿದ್ಧಪಡಿಸುವುದು, ಮತದಾನದ ದಿನ ಭೌತಿಕವಾಗಿ ಮತದಾನ ಮಾಡಲು ವ್ಯವಸ್ಥೆಗಳನ್ನು ಕಲ್ಪಿಸುವುದು ಹಾಗೂ ಮತದಾನದ ದಿನ ಕೋವಿಡ್ ಸುರಕ್ಷಿತಾ ಕ್ರಮಗಳೂ ಸೇರಿದಂತೆ ಕೈಗೋಂಡಿರುವ ಹಲವು ಕ್ರಮಗಳ ಬಗ್ಗೆ ವಿವರಿಸಲಾಯಿತು. ಶ್ರೀ ಚಂದ್ರ ಅವರು, ಭಾರತದಲ್ಲಿ ಇತ್ತೀಚೆಗೆ ನಡೆಸಿದ ಚುನಾವಣೆಗಳ ಕುರಿತು ಮಾತನಾಡಿದರು ಮತ್ತು ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಚುನಾವಣಾ ಸಹಕಾರ ಮತ್ತು ತರಬೇತಿ ಹಾಗೂ ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳು ಸೇರಿ ಚುನಾವಣಾ ಸಂಬಂಧಗಳ ಮತ್ತಷ್ಟು ಬಲವರ್ಧನೆಗೆ ಹಲವು ಮಾರ್ಗಗಳ ಕುರಿತು ವಿವರಿಸಿದರು. ಉಜ್ಬೇಕಿಸ್ತಾನ ಚುನಾವಣಾ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲು ಸಂತಸವಾಗುತ್ತದೆ ಎಂದರು. ಉಜ್ಬೇಕಿಸ್ತಾನದ ಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಆಯೋಜಿಸಿದ್ದ ಇಸಿಐನ   ಅಂತಾರಾಷ್ಟ್ರೀಯ ಚುನಾವಣಾ ವೀಕ್ಷಕರ ಕಾರ್ಯಕ್ರಮ(ಐಇವಿಪಿ)ದಲ್ಲಿ ಭಾಗವಹಿಸಿದ್ದರು ಮತ್ತು ಐಟಿಇಸಿ ಕಾರ್ಯಕ್ರಮದಡಿ ಇಸಿಐ ತರಬೇತಿ ಕಾರ್ಯಕ್ರಮಗಳಲ್ಲಿ ಉಜ್ಬೇಕಿಸ್ತಾನದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಉಜ್ಬೇಕಿಸ್ತಾನದ ಚುನಾವಣಾ ಕಾನೂನಿನ ಪ್ರಕಾರ ರಾಷ್ಟ್ರವನ್ನು ಒಂದೇ ಮತಕ್ಷೇತ್ರವೆಂದು ಪರಿಗಣಿಸಿ 5 ವರ್ಷಗಳ ಅವಧಿಗೆ ಅಧ್ಯಕ್ಷರನ್ನು ಆಯ್ಕೆಮಾಡಲಾಗುವುದು. ಚುನಾವಣಾ ಆಡಳಿತ ಕೇಂದ್ರೀಯ ಚುನಾವಣಾ ಆಯೋಗ, 14 ಜಿಲ್ಲಾ ಚುನಾವಣಾ ಆಯೋಗಗಳು ಮತ್ತು 10,760 ಪ್ರಾಂತ್ಯ ಚುನಾವಣಾ ಆಯೋಗಗಳನ್ನು ಒಳಗೊಂಡ ಮೂರು ಹಂತದ ಚುನಾವಣಾ ವ್ಯವಸ್ಥೆಯನ್ನು ಒಳಗೊಂಡಿದೆ. ಉಜ್ಬೇಕಿಸ್ತಾನದಲ್ಲಿ ಸುಮಾರು 20 ಮಿಲಿಯನ್ ಮತದಾರರಿದ್ದಾರೆ. ಪ್ರತಿಯೊಂದು ಮತಗಟ್ಟೆಯಲ್ಲೂ ಗರಿಷ್ಠ 3000 ಮತದಾರರಿದ್ದಾರೆ. ಅಕ್ಟೋಬರ್ 14 ರಿಂದ 20 ವರೆಗೆ ಮುಂಚಿನವಾಗಿಯೇ ಮತದಾನ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಮತ್ತು ವಿದೇಶದಲ್ಲಿರುವ 120,524 ಮಂದಿ ಸೇರಿದಂತೆ 421,618 ಮಂದಿ ಮುಂಚಿತವಾಗಿಯೇ ಮತದಾನ ಮಾಡುವ ಸೌಕರ್ಯವನ್ನು ಬಳಸಿಕೊಂಡರು.

ಕೇವಲ ನೋಂದಾಯಿತ ರಾಜಕೀಯ ಪಕ್ಷಗಳು ಮಾತ್ರ ಚುನಾವಣೆಗಳಿಗೆ ತಮ್ಮ ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಬಹುದು. ಉಜ್ಬೇಕಿಸ್ತಾನ ಅಧ್ಯಕ್ಷರ ಚುನಾವಣೆಗೆ ನಾಲ್ವರು ಪುರುಷರು ಮತ್ತು ಓರ್ವ ಮಹಿಳಾ ಅಭ್ಯರ್ಥಿ ಸೇರಿದಂತೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರಕ್ಕಾಗಿ ರಾಷ್ಟ್ರವೇ ಆರ್ಥಿಕ ನೆರವನ್ನು ನೀಡಿತ್ತು. ಉಜ್ಬೇಕಿಸ್ತಾನದ ಪ್ರಮುಖ ಸ್ಥಳಗಳಲ್ಲಿ ಐವರು ಅಭ್ಯರ್ಥಿಗಳ ಭಾವಚಿತ್ರ ಮತ್ತು ಮಾಹಿತಿಯನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸಲಾಗಿತ್ತು.

ಭಾರತೀಯ ನಿಯೋಗ, ಉಜ್ಬೇಕಿಸ್ತಾನದ ಸಿಇಸಿ ಕೈಗೊಂಡಿರುವ ಉಪಕ್ರಮಗಳು, ಪ್ರಕ್ರಿಯೆಗಳು ಹಾಗೂ ಚುನಾವಣಾ ಆಡಳಿತದ ಬಗ್ಗೆ ಸಮಗ್ರ ಅವಲೋಕನಕ್ಕೆ 7ನೇ ಮತ್ತು 14ನೇ ಜಿಲ್ಲಾ ಚುನಾವಣಾ ಆಯೋಗಗಳಿಗೆ ಭೇಟಿ ನೀಡಿತ್ತು. ಆನಂತರ ಚುನಾವಣಾ ಪ್ರಕ್ರಿಯೆ ಕುರಿತು ವಿವರವಾಗಿ ವೀಕ್ಷಿಸಲು ಉಜ್ಬೇಕಿಸ್ತಾನದ ಮತಗಟ್ಟೆಯೊಂದಕ್ಕೆ ನಿಯೋಗ ಭೇಟಿ ನೀಡಿತ್ತು. ಮತದಾರರ ಪಟ್ಟಿ, ಮತದಾರರನ್ನು ಗುರುತಿಸುವುದು, ಮುಂಚಿತವಾಗಿ ಮತದಾನ ಸಲ್ಲಿಸುವ ವಿಧಾನ, ವೃದ್ಧರು ಮತ್ತು ದಿವ್ಯಾಂಗರು ಸೇರಿದಂತೆ ಇತರರ ಮತದಾನಕ್ಕೆ ಕೈಗೊಂಡಿರುವ ವ್ಯವಸ್ಥೆಗಳು, ಕೋವಿಡ್ ಸುರಕ್ಷತಾ ಶಿಷ್ಟಾಚಾರಗಳು, ಮತಗಟ್ಟೆಗಳ ಸಿದ್ಧತೆ, ಮತಪತ್ರಗಳ ಮೂಲಕ ಮತದಾನ ಮಾಡುವ ಅಂಶಗಳನ್ನು ಹಲವು ಮತಗಟ್ಟೆಗಳಲ್ಲಿ ವೀಕ್ಷಿಸಲಾಯಿತು.

ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳ ಪ್ರತಿನಿಧಿಗಳು ಮತ್ತು ಮೊಹಲ್ಲಾ ಕಮಿಟಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದುದು ಕಂಡುಬಂದಿತು. ಮತದಾರರನ್ನು ಪಾಸ್ ಪೋರ್ಟ್ ಅಥವಾ ವಾಹನ ಚಾಲನಾ ಪರವಾನಗಿ ದಾಖಲೆಗಳ ಮೂಲಕ ಗುರುತಿಸಲಾಯಿತು. ಮೊದಲ ಬಾರಿಗೆ ಮತದಾನ ಮಾಡಿದವರು ಸೇರಿದಂತೆ ಮನೆಯಿಂದ ಮತದಾನ ಮಾಡಿದವರ ಮತಗಳನ್ನು ಎಣಿಕೆ ಮಾಡುವ ವ್ಯವಸ್ಥೆ ಕಾಯ್ದುಕೊಳ್ಳಲಾಗಿದೆ. ಮತದಾನದ ಪ್ರತಿ ಗಂಟೆಯ ವಿವರಗಳನ್ನು ಸಿಇಸಿಗೆ ವಿದ್ಯುನ್ಮಾನ ರೂಪದಲ್ಲಿ ಕಳುಹಿಸಲಾಗಿತ್ತು.

ಶ್ರೀ ಸುಶೀಲ್ ಚಂದ್ರ, ಉಜ್ಬೇಕಿಸ್ತಾನದಲ್ಲಿನ ಭಾರತದ ರಾಯಭಾರ ಕಚೇರಿಗೆ ಭೇಟಿ ನೀಡಿ, ಅಲ್ಲಿನ ರಾಯಭಾರಿ ಶ್ರೀ ಮನೀಶ್ ಪ್ರಭಾತ್ ಅವರೊಂದಿಗೆ ಸಮಾಲೋಚನೆ ನಡೆಸಿದರು ಮತ್ತು ಅವರಿಗೆ ಸೇವಾ ಮತದಾರರಿಗೆ ಮತದಾನದ ಸೌಕರ್ಯ ಕಲ್ಪಿಸುವ ವಿದ್ಯುನ್ಮಾನ ರೀತಿಯಲ್ಲಿ ಅಂಚೆ ಮತಪತ್ರ ವರ್ಗಾವಣೆ ವ್ಯವಸ್ಥೆ (ಇಟಿಪಿಬಿಎಸ್) ಕುರಿತು ವಿವರಿಸಿದರು. ಅನಂತರ ತಾಷ್ಕೆಂಟ್ ನಲ್ಲಿ ಅನಿವಾಸಿ ಭಾರತೀಯ ಪ್ರತಿನಿಧಿಗಳ ಜತೆ ಭಾರತದ ಚುನಾವಣೆಗಳ ಕುರಿತು ಸಕ್ರಿಯ ಸಮಾಲೋಚನೆ ನಡೆಸಲಾಯಿತು.

ಮುಖ್ಯ ಚುನಾವಣಾ ಆಯುಕ್ತರು ತಾಷ್ಕೆಂಟ್ ನಲ್ಲಿನ ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುತ್ಥಳಿ ಇರುವ  ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

***



(Release ID: 1767141) Visitor Counter : 736