ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

“ಫಾರ್ಮಸುಟಿಕಲ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ ಸಹಭಾಗಿತ್ವ ಮತ್ತು ಅವಕಾಶಗಳು” ಕುರಿತ ಹೂಡಿಕೆದಾರರ ಶೃಂಗಸಭೆ ಉದ್ಘಾಟಿಸಿ ಮತ್ತು ಉದ್ದೇಶಿಸಿ ಭಾಷಣ ಮಾಡಿದ ಡಾ. ಮನ್ಸುಖ್ ಮಾಂಡವಿಯ


“ಫಾರ್ಮಾ ಉದ್ಯಮ ಭಾರತದಲ್ಲಿ ಕೇವಲ ವ್ಯಾಪಾರವಲ್ಲ; ಅದು ನಮ್ಮನಮ್ಮ ಜನರ ಭಾವನಗಳೊಂದಿಗೆ ಬೆಸೆದಿದೆ ಮತ್ತು ‘ವಸುಧೈವ ಕುಟುಂಬಕಂ’ ಸಿದ್ಧಾಂತದ ಮಾರ್ಗದರ್ಶನ ಹೊಂದಿದೆ”

“ಪಿಎಲ್ ಐ ಯೋಜನೆ ಫಾರ್ಮಾ ವಲಯದ ಉದ್ಯಮಕ್ಕೆ ಉತ್ತೇಜನ ನೀಡುತ್ತದೆ ಮತ್ತು ಭಾರತವನ್ನು ಫಾರ್ಮಾ ತಾಣವನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದೆ”

Posted On: 27 OCT 2021 3:27PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಾ.ಮನ್ಸುಖ್ ಮಾಂಡವಿಯ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕಫಾರ್ಮಸುಟಿಕಲ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ ಸಹಭಾಗಿತ್ವ ಮತ್ತು ಅವಕಾಶಗಳು ಕುರಿತ ಹೂಡಿಕೆದಾರರ ಶೃಂಗಸಭೆ ಉದ್ಘಾಟಿಸಿದರು ಮತ್ತು ಉದ್ದೇಶಿಸಿ ಭಾಷಣ ಮಾಡಿದರು. ಫಾರ್ಮಸುಟಿಕಲ್ಸ್ ಮತ್ತು ವೈದ್ಯಕೀಯ ಸಾಧನಗಳ ವಲಯದಲ್ಲಿ ಜಾಗತಿಕವಾಗಿ ಭಾರತದ ಸ್ಥಿತಿಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ದೂರದೃಷ್ಟಿಯೊಂದಿಗೆ ಇನ್ವೆಸ್ಟ್ ಇಂಡಿಯಾ ಸಹಭಾಗಿತ್ವದಲ್ಲಿ ಫಾರ್ಮಸುಟಿಕಲ್ಸ್ ಇಲಾಖೆ ಶೃಂಗಸಭೆಯಲ್ಲಿ ಆಯೋಜಿಸಿತ್ತು.

ಶೃಂಗಸಭೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಡಾ.ಮನ್ಸುಖ್  ಮಾಂಡವಿಯ ಅವರು, ಭಾರತವನ್ನು ನಿಜವಾಗಿಯೂ ಜಗತ್ತಿನ ಫಾರ್ಮಸಿ ಎಂದು ಕರೆಯಲಾಗುತ್ತಿದೆ. ಇದು ಜನರಿಕ್ ಔಷಧಗಳ ಅತಿದೊಡ್ಡ ಉತ್ಪಾದನಾ ಮತ್ತು ಪೂರೈಕೆ ರಾಷ್ಟ್ರವಾಗಿದೆ. ಕೋವಿಡ್ ಸಂದರ್ಭದಲ್ಲಿ, ಇದು ಜಗತ್ತಿನ 150ಕ್ಕೂ ಅಧಿಕ ರಾಷ್ಟ್ರಗಳಿಗೆ ಔಷಧಗಳನ್ನು ಪೂರೈಕೆ ಮಾಡಿದೆ. ಇದು ಭಾರತದಲ್ಲಿ ಫಾರ್ಮಾ ಉದ್ಯಮ  ಕೇವಲ ವ್ಯಾಪಾರವಲ್ಲ; ಅದು ನಮ್ಮ ಜನರ ಭಾವನೆಗಳೊಂದಿಗೆ ಬೆಸೆದಿದೆ ಎಂಬುದನ್ನು ತೋರಿಸುತ್ತದೆ. ಅಷ್ಟೇ ಅಲ್ಲ, ಇದು ಯಾವುದೇ ಲಾಭದ ಉದ್ದೇಶ ಹೊಂದಿಲ್ಲ, ಅದಕ್ಕೆವಸುದೈವ ಕುಟುಂಬಕಂಭಾರತೀಯ ಸಿದ್ಧಾಂತದ ಮಾರ್ಗದರ್ಶನವಿದೆ ಎಂಬುದನ್ನು ತೋರಿಸುತ್ತದೆ ಎಂದರು.

ಮೇಕ್ ಇನ್ ಇಂಡಿಯಾ ಯೋಜನೆಯಡಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಗತ್ತಿನ ಎಲ್ಲ ಹೂಡಿಕೆದಾರರನ್ನು ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದರು. ಭಾರತದ ಹೂಡಿಕೆದಾರರನ್ನು ಅದರ ದೃಢವಾದ ನಿಯಂತ್ರಕ ಕಾರ್ಯವಿಧಾನ, ಸ್ವತಂತ್ರ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಸ್ವರೂಪದ ಮೂಲಕ ಪರಿಗಣಿಸಲಾಗುವುದೆಂದು ಅವರು ಭರವಸೆ ನೀಡಿದ್ದರು ಎಂದರು. ಪ್ರಧಾನಮಂತ್ರಿಯವರ ಸಮರ್ಥ ನಾಯಕತ್ವದಲ್ಲಿ ಭಾರತವು ಫಾರ್ಮಾ ವಲಯಕ್ಕೆ ವಿಶ್ವದ ಅತ್ಯುತ್ತಮ ಹೂಡಿಕೆಯ ತಾಣವಾಗಲು ಶ್ರಮಿಸುತ್ತಿದೆ ಎಂದು ಅವರು ಹೇಳಿದರು. ವಲಯವು ಹೂಡಿಕೆಯಲ್ಲಿ ಗಣನೀಯ ಹೆಚ್ಚಳವನ್ನು ಕಂಡಿದೆ, 2020ರಲ್ಲಿ ಎಫ್ ಡಿಐ ವರ್ಷದಿಂದ ವರ್ಷಕ್ಕೆ ಶೇ.98ರಷ್ಟು ಹೆಚ್ಚಾಗಿದೆ, ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಫಾರ್ಮಾ ರಫ್ತು ಶೇ.18ರಷ್ಟು ವೃದ್ಧಿಯಾಗಿದೆ ಎಂದರು.

ಫಾರ್ಮಾ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ಹಲವು ನೀತಿಗಳು, ಯೋಜನೆಗಳು ಮತ್ತು ಉಪಕ್ರಮಗಳನ್ನು ವಿವರಿಸಿದ ಸಚಿವ ಡಾ.ಮಾಂಡವಿಯ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್ ) ಯೋಜನೆ ಫಾರ್ಮಾ ವಲಯಕ್ಕೆ ಉತ್ತೇಜನ ನೀಡಲಿದೆ ಮತ್ತು ಭಾರತವನ್ನು ಫಾರ್ಮಾ ತಾಣವನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದರು. ಭಾರತವು ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳ ಬಹುದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಅವರು ಒತ್ತಿ ಹೇಳಿದರು. ಆಯುಷ್ಮಾನ್ ಭಾರತ್-ಪಿಎಂಜೆಎವೈ ಅಡಿ 100 ಕೋಟಿ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ಅವರು ತಿಳಿಸಿದರು. ಇದರಿಂದ ಔಷಧಗಳು ಮತ್ತು ವೈದ್ಯಕೀಯ ಸಾಧನಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಎದುರಾಗಲಿದೆ ಮತ್ತು ಇದು ಭಾರತದಲ್ಲಿ ಫಾರ್ಮಾ ಉದ್ಯಮಗಳಿಗೆ ಅನುಕೂಲವಾಗಲಿದೆ ಎಂದರು.

ಉದ್ಯಮದ ಎಲ್ಲ ನಾಯಕರು ಮತ್ತು ಹೂಡಿಕೆದಾರರನ್ನು ಸ್ವಾಗತಿಸಿ ಫಾರ್ಮಸುಟಿಕಲ್ಸ್ ಇಲಾಖೆಯ ಕಾರ್ಯದರ್ಶಿ, ದೃಢೀಕರಿಸಲ್ಪಟ್ಟಿರುವ ಗುಣಮಟ್ಟದ ಉತ್ಪಾದನಾ ಸಾಮರ್ಥ್ಯಗಳು ಮತ್ತು ಸರ್ಕಾರದ ನಿರಂತರ ಬೆಂಬಲದಿಂದಾಗಿ, ಫಾರ್ಮಾ ವಲಯದಲ್ಲಿ ಭಾರತ ಆತ್ಮನಿರ್ಭರ ಗುರಿಯನ್ನು ಸಾಧಿಸಲು ಸಜ್ಜಾಗಿದೆ ಎಂದರು.

ಫಾರ್ಮಸುಟಿಕಲ್ಸ್ ಇಲಾಖೆ ಮತ್ತು ಇನ್ವೆಸ್ಟ್ ಇಂಡಿಯಾದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

***


(Release ID: 1766942) Visitor Counter : 233