ಉಕ್ಕು ಸಚಿವಾಲಯ
azadi ka amrit mahotsav

ಎನ್ ಎಂಡಿಸಿಯಿಂದ ‘ಸ್ವಯಂ ಪ್ರೇರಿತ ನಿಷ್ಠೆಯೊಂದಿಗೆ’ ವಿಚಕ್ಷಣಾ ಜಾಗೃತ ಸಪ್ತಾಹ ಆಚರಣೆ

Posted On: 27 OCT 2021 12:45PM by PIB Bengaluru

ಭಾರತ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಉಕ್ಕು ಸಚಿವಾಲಯದಡಿ ಬರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ ಎಂಡಿಸಿ) ನಾನಾ ಚಟುವಟಿಕೆಗಳನ್ನು, ಸ್ಪರ್ಧೆಗಳನ್ನು ಆಯೋಜಿಸುತ್ತಿದೆ ಮತ್ತು ವಿಚಕ್ಷಣಾ ಜಾಗೃತ ಸಪ್ತಾಹದ ಆಚರಣೆ ಅಂಗವಾಗಿ ಭಾರತ@75 ಹೆಸರಿನಲ್ಲಿ ಪ್ರಾಮಾಣಿಕತೆ ಬಗ್ಗೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎನ್ ಎಂಡಿಸಿ ಸಿಬ್ಬಂದಿಗೆ ರಸಪ್ರಶ್ನೆ ಸ್ಪರ್ಧೆ ಮೂಲಕ ನಿನ್ನೆ ಕಾರ್ಯ ಚಟುವಟಿಕೆಗಳು ಮತ್ತು ಹಲವು ಕಾರ್ಯಕ್ರಮಗಳು ಆರಂಭವಾದವು, ವಾರದಲ್ಲಿ  ಘೋಷಣೆಗಳನ್ನು ಬರೆಯುವುದು, ಭಾಷಣ, ಪ್ರಬಂಧ ರಚನೆಅತ್ಯುತ್ತಮ ಮನೆಗೆಲಸದ ಚಟುವಟಿಕೆಗಳನ್ನು ನಿಗದಿಪಡಿಸಲಾಗಿದೆ.

ಕೇಂದ್ರ ಜಾಗೃತ ದಳದ ನಿರ್ದೇಶನದಂತೆ ಎನ್ ಎಂಡಿಸಿ ವಿಚಕ್ಷಣಾ ಜಾಗೃತ ಸಪ್ತಾಹ-2021 (ವಿಎಡಬ್ಲೂ 2021) ಅನ್ನುಸ್ವತಂತ್ರ ಭಾರತ@75: ಸ್ವಯಂ ಪ್ರೇರಿತ ನಿಷ್ಠೆಎಂಬ ಘೋಷವಾಕ್ಯದೊಂದಿಗೆ 26.10.2021 ರಿಂದ 01.11.2021ರವರೆಗೆ ಆಚರಿಸುತ್ತಿದೆ.

ಹೈದರಾಬಾದ್ ಎನ್ ಎಂಡಿಸಿ ಕೇಂದ್ರ ಕಚೇರಿಯಲ್ಲಿ ನಡೆದ ವಿಎಡಬ್ಲೂ-2021 ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂಡಿ ಶ್ರೀ ಸುಮಿತ್ ಅವರು ಸಿಬ್ಬಂದಿಗೆ ಪ್ರಾಮಾಣಿಕತೆಯ ಪ್ರತಿಜ್ಞಾ ವಿಧಿ ಬೋದಿಸಿದರು. ಹಣಕಾಸು ವಿಭಾಗದ ನಿರ್ದೇಶಕ ಶ್ರೀ ಅಮಿತ್ವ ಮುಖರ್ಜಿ ಅವರು ಘನತೆವೆತ್ತ ಭಾರತದ ರಾಷ್ಟ್ರಪತಿಗಳ ಸಂದೇಶವನ್ನು ಓದಿದರು. ತಾಂತ್ರಿಕ ವಿಭಾಗದ ನಿರ್ದೇಶಕರಾದ ಶ್ರೀ ಸೋಮನಾಥ್ ನಂದಿ ಅವರು ಗೌರವಾನ್ವಿತ ಭಾರತ ಉಪರಾಷ್ಟ್ರಪತಿಗಳ ಸಂದೇಶವನ್ನು ಮತ್ತು ಉತ್ಪಾದನಾ ವಿಭಾಗದ ನಿರ್ದೇಶಕರಾದ ಶ್ರೀ ಡಿ.ಕೆ.ಮೊಹಂತಿ ಅವರು ಗೌರವಾನ್ವಿತ ಭಾರತದ ಪ್ರಧಾನಮಂತ್ರಿಗಳ ಸಂದೇಶವನ್ನು ಓದಿದರು ಮತ್ತು ವ್ಯವಸ್ಥಾಪಕ ನಿರ್ದೇಶಕ (ಉತ್ಪಾದನೆ ಮತ್ತು ಸುರಕ್ಷತೆ) ಶ್ರೀ ಬಿ.ಸಾಹೂ ಕೇಂದ್ರ ಜಾಗೃತ ಆಯುಕ್ತರ ಸಂದೇಶವನ್ನು ಓದಿದರು. ಎನ್ ಎಂಡಿಸಿ ನಿಯಮಿತದ ಜಾಗೃತ ವಿಭಾಗ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಆಯೋಜಿಸಿತ್ತು.

ಜೊತೆಗೆ ಕಾರ್ಪೋರೇಟ್ ಆಡಳಿತ-ತಂತ್ರಜ್ಞಾನ ಸಮರ್ಪಕ ಬಳಕೆ ಮತ್ತು ವಿಷಲ್ ಬ್ಲೋವರ್ (ಚೊಚ್ಚಲಿಗ) ಕಾರ್ಯತಂತ್ರದ ಕುರಿತು ಗೋಷ್ಠಿಯನ್ನು ಆಯೋಜಿಸಲಾಗಿದ್ದು, ಅದರಲ್ಲಿ ಕೇಂದ್ರ ಜಾಗೃತ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರಿ ಸಿಂಗ್ ನಾಳೆ ಪ್ರಧಾನ ಭಾಷಣ ಮಾಡುವರು. ಸಪ್ತಾಹ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ವಿತರಣೆಯೊಂದಿಗೆ 01.11.2021 ರಂದು ಸಮಾಪನಗೊಳ್ಳಲಿದೆ.

***


(Release ID: 1766905) Visitor Counter : 310