ಪ್ರಧಾನ ಮಂತ್ರಿಯವರ ಕಛೇರಿ

ಏಳು ಹೊಸ ರಕ್ಷಣಾ ಸಂಸ್ಥೆಗಳನ್ನು ರಾಷ್ಟ್ರಕ್ಕೆ ಅರ್ಪಿಸುವ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 15 OCT 2021 1:27PM by PIB Bengaluru

ನಮಸ್ಕಾರ!

ರಾಷ್ಟ್ರೀಯ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಕಾರ್ಯಕ್ರಮದಲ್ಲಿ ಇಂದು ನಮ್ಮೊಂದಿಗೆ ಭಾಗವಹಿಸುತ್ತಿರುವವರು ದೇಶದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಜೀ, ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಜೀ, ಕೇಂದ್ರ ರಕ್ಷಣಾ ಸಚಿವಾಲಯದ ಎಲ್ಲಾ ಅಧಿಕಾರಿಗಳು ಮತ್ತು ದೇಶದ ಎಲ್ಲೆಡೆಯ ನಮ್ಮ ಎಲ್ಲಾ ಸ್ನೇಹಿತರೇ,

ಕೇವಲ ಎರಡು ದಿನಗಳ ಹಿಂದೆ, ನವರಾತ್ರಿಯ ಪವಿತ್ರ ಹಬ್ಬದ ಮಧ್ಯೆ, ಅಷ್ಟಮಿಯ ದಿನದಂದು, ಅತ್ಯಂತ ವಿಸ್ತಾರವಾದ ಯೋಜನೆ 'ಗತಿ ಶಕ್ತಿ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ರಾಷ್ಟ್ರವನ್ನು ಅಜೇಯವಾಗಿಸಲು ಹಾಗು ಮತ್ತಷ್ಟು ಆಧುನೀಕರಣಗೊಳಿಸಲು ಹೊಸ ದಿಕ್ಕಿನಲ್ಲಿ ರಾಷ್ಟ್ರವನ್ನು ಸಬಲೀಕರಣಗೊಳಿಸಲು ಹಗಲಿರುಳು ಕಳೆಯುತ್ತಿರುವವರನ್ನು ಸದೃಢಗೊಳಿಸುವ ಅವಕಾಶದೊಂದಿಗೆ, ಇಂದಿನ ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾವು ನೂತನ ಯೋಜನೆಯನ್ನು ಆರಂಭಿಸುವ ಅವಕಾಶವನ್ನು ಪಡೆದುಕೊಂಡಿದ್ದೆವು. ಭಾರತದ ಶ್ರೇಷ್ಠ ಸಂಪ್ರದಾಯವನ್ನು ಅನುಸರಿಸಿ, ಕಾರ್ಯಕ್ರಮವನ್ನು ಆಯುಧ ಪೂಜೆಯೊಂದಿಗೆ ಆರಂಭಿಸಲಾಗಿದೆ. ನಾವು ಶಕ್ತಿಯನ್ನು ಸೃಷ್ಟಿಯ ಸಾಧನವಾಗಿ ನಂಬುತ್ತೇವೆ. ಮನೋಭಾವದಿಂದ, ಇಂದು ದೇಶವು ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಮತ್ತು ನೀವೆಲ್ಲರೂ ದೇಶದ ಪರಿಹಾರದ ಸಾರಥಿಗಳಾಗಿದ್ದೀರಿ. ವಿಜಯ ದಶಮಿಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತು ಇಡೀ ರಾಷ್ಟ್ರಕ್ಕೆ ಮತ್ತೊಮ್ಮೆ ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ದಿನವು ಮಾಜಿ ರಾಷ್ಟ್ರಪತಿ, ಭಾರತ ರತ್ನ  ಡಾ..ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನವಾಗಿದೆ. ಕಲಾಂ ಅವರು ತನ್ನ ಜೀವನವನ್ನು ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಸಮರ್ಪಿಸಿದ ರೀತಿ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಇಂದು ರಕ್ಷಣಾ ವಲಯಕ್ಕೆ ಪ್ರವೇಶಿಸಲಿರುವ 7 ಹೊಸ ಸಂಸ್ಥೆಗಳು ಸಮರ್ಥ ರಾಷ್ಟ್ರದ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ.

ಸ್ನೇಹಿತರೇ,

ವರ್ಷ ಭಾರತವು ಸ್ವಾತಂತ್ರ್ಯದ 75 ನೇ ವರ್ಷವನ್ನು ಪ್ರವೇಶಿಸಿದೆ. ಸ್ವಾತಂತ್ರ್ಯದ 'ಅಮೃತವರ್ಷದ' ಕಾಲಾವಧಿಯಲ್ಲಿ, ದೇಶವು ಹೊಸ ಭವಿಷ್ಯವನ್ನು ನಿರ್ಮಿಸಲು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ, ಮತ್ತು ದಶಕಗಳಿಂದ ಸ್ಥಗಿತಗೊಂಡಿದ್ದ ಕೆಲಸವೂ ಪೂರ್ಣಗೊಳ್ಳುತ್ತಿದೆ. 41 ಆರ್ಡನೆನ್ಸ್ ಫ್ಯಾಕ್ಟರಿಗಳನ್ನು ಪರಿಷ್ಕರಿಸುವ ನಿರ್ಧಾರ ಮತ್ತು 7 ಹೊಸ ಸಂಸ್ಥೆಗಳ ಆರಂಭವು ದೇಶದ ನಿರ್ಣಯಗಳ ಸಾಧನೆಯ ಒಂದು ಭಾಗವಾಗಿದೆ. ನಿರ್ಧಾರವು ಕಳೆದ 15-20 ವರ್ಷಗಳಿಂದ ಬಾಕಿಯಿತ್ತು. ಎಲ್ಲಾ ಏಳು ಸಂಸ್ಥೆಗಳು ಮುಂದಿನ ದಿನಗಳಲ್ಲಿ ಭಾರತದ ಮಿಲಿಟರಿ ಬಲಕ್ಕೆ ಬಲವಾದ ಅಡಿಪಾಯವಾಗುತ್ತವೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ನಮ್ಮ ಶಸ್ತ್ರಾಸ್ತ್ರ ಕಾರ್ಖಾನೆಗಳು ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಸಂಸ್ಥೆಗಳಾಗಿದ್ದವು. ಕಾರ್ಖಾನೆಗಳು 100-150 ವರ್ಷಗಳ ಅನುಭವವನ್ನು ಹೊಂದಿವೆ. ವಿಶ್ವ ಮಹಾಯುದ್ದ-I ಸಮಯದಲ್ಲಿ ಭಾರತದ ಶಸ್ತ್ರಾಸ್ತ್ರ ಕಾರ್ಖಾನೆಗಳ ಬಲವನ್ನು ಜಗತ್ತು ನೋಡಿದೆ. ನಾವು ಉತ್ತಮ ಸಂಪನ್ಮೂಲಗಳನ್ನು ಮತ್ತು ವಿಶ್ವ ದರ್ಜೆಯ ಕೌಶಲ್ಯಗಳನ್ನು ಹೊಂದಿದ್ದೆವು. ಸ್ವಾತಂತ್ರ್ಯದ ನಂತರ, ನಾವು ಕಾರ್ಖಾನೆಗಳನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಹೊಸ ಯುಗದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು! ಆದರೆ ಅದಕ್ಕೆ ಹೆಚ್ಚಿನ ಗಮನ ನೀಡಲಿಲ್ಲ. ಕಾಲಾನಂತರದಲ್ಲಿ, ಭಾರತವು ತನ್ನ ಕಾರ್ಯತಂತ್ರದ ಅಗತ್ಯಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಯಿತು. ಹೊಸ 7 ರಕ್ಷಣಾ ಸಂಸ್ಥೆಗಳು ಪರಿಸ್ಥಿತಿಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ

ಸ್ನೇಹಿತರೇ,

ಆತ್ಮನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ, ಭಾರತವು ತನ್ನದೇ ಆದ ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯನ್ನಾಗಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತದಲ್ಲಿ ಆಧುನಿಕ ಮಿಲಿಟರಿ ಉದ್ಯಮವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಕಳೆದ ಏಳು ವರ್ಷಗಳಲ್ಲಿ, 'ಮೇಕ್ ಇನ್ ಇಂಡಿಯಾ' ಮಂತ್ರದೊಂದಿಗೆ ಸಂಕಲ್ಪವನ್ನು ಮುಂದುವರಿಸಲು ದೇಶವು ಕೆಲಸ ಮಾಡಿದೆ. ಇಂದು, ದೇಶದ ರಕ್ಷಣಾ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕತೆ, ವಿಶ್ವಾಸ ಮತ್ತು ತಂತ್ರಜ್ಞಾನ ಆಧಾರಿತ ವಿಧಾನವಿದೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ, ನಮ್ಮ ರಕ್ಷಣಾ ವಲಯದಲ್ಲಿ ಹಲವಾರು ಪ್ರಮುಖ ಸುಧಾರಣೆಗಳನ್ನು ತರಲಾಗಿದೆ; ಮತ್ತು ಸುಲಭದಲ್ಲಿ ಕಾರ್ಯಸಾಧಿಸಲು ಸಾಧ್ಯವಾಗುವ ವ್ಯವಸ್ಥೆ(ಬಾಟಲ್-ನೆಕ್ಗಳನ್ನು) ರಚಿಸಲು ಜನವಿರೋಧಿ(ಕುಖ್ಯಾತವಾದ) ನೀತಿಗಳ ಬದಲಿಗೆ, ಏಕದ್ವಾರ ವ್ಯವಸ್ಥೆಯನ್ನು ರಚಿಸಲಾಗಿದೆ. ಇದು ನಮ್ಮ ಉದ್ಯಮದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಭಾರತೀಯ ಸಂಸ್ಥೆಗಳು ರಕ್ಷಣಾ ಉದ್ಯಮದಲ್ಲಿ ತಮ್ಮ ಸಾಧ್ಯತೆಗಳನ್ನು ಅನ್ವೇಷಿಸಲು ಆರಂಭಿಸಿವೆ, ಮತ್ತು ಈಗ ಖಾಸಗಿ ವಲಯ ಮತ್ತು ಸರ್ಕಾರ ಒಟ್ಟಾಗಿ, ರಾಷ್ಟ್ರದ ರಕ್ಷಣೆಯ ಧ್ಯೇಯದೊಂದಿಗೆ ಮುಂದುವರಿಯುತ್ತಿವೆ.

ನಮ್ಮ ಮುಂದೆ ಉತ್ತರ ಪ್ರದೇಶ ಮತ್ತು ತಮಿಳುನಾಡಿನ ರಕ್ಷಣಾ ಕಾರಿಡಾರ್ ಗಳ ಉದಾಹರಣೆಗಳಿವೆ. ಇಷ್ಟು ಕಡಿಮೆ ಅವಧಿಯಲ್ಲಿ, ಪ್ರಮುಖ ಸಂಸ್ಥೆಗಳು 'ಮೇಕ್ ಇನ್ ಇಂಡಿಯಾ'ದಲ್ಲಿ ತಮ್ಮ ಆಸಕ್ತಿಯನ್ನು ತೋರಿಸಿವೆ. ಇದು ದೇಶದಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಪೂರೈಕೆ ಸರಪಳಿಗಳ ರೂಪದಲ್ಲಿ ಹಲವಾರು ಎಂಎಸ್.ಎಂ..ಗಳಿಗೆ ಹೊಸ ಸಾಧ್ಯತೆಗಳನ್ನು ತೆರೆಯುತ್ತಿದೆ. ದೇಶದಲ್ಲಿ ಮಾಡಿದ ನೀತಿ ಬದಲಾವಣೆಗಳ ಪರಿಣಾಮವಾಗಿ, ನಮ್ಮ ರಕ್ಷಣಾ ರಫ್ತುಗಳು ಕಳೆದ 5 ವರ್ಷಗಳಲ್ಲಿ 325 ಶೇಕಡಕ್ಕಿಂತಲೂ ಹೆಚ್ಚಾಗಿದೆ.

ಸ್ನೇಹಿತರೇ,

ಕೆಲವು ಸಮಯದ ಹಿಂದೆ, ರಕ್ಷಣಾ ಸಚಿವಾಲಯವು 100 ಕ್ಕಿಂತಲೂ ಹೆಚ್ಚು ಯುದ್ಧತಂತ್ರದ ಉಪಕರಣಗಳ ಪಟ್ಟಿಯನ್ನು ಬಿಡುಗಡೆ ಮಾಡಿತು, ಅದನ್ನು ಇನ್ನು ಮುಂದೆ ಹೊರಗಿನಿಂದ ಆಮದು ಮಾಡಿಕೊಳ್ಳಲಾಗುವುದಿಲ್ಲ. ಹೊಸ ಸಂಸ್ಥೆಗಳಿಗೂ, ದೇಶವು ಈಗಾಗಲೇ ರೂಪಾಯಿ 65,000 ಕೋಟಿ ಮೌಲ್ಯದ ಉತ್ಪಾದನಾ ಆದೇಶಗಳನ್ನು ನೀಡಿದೆ. ಇದು ನಮ್ಮ ರಕ್ಷಣಾ ಉದ್ಯಮದಲ್ಲಿ ದೇಶದ ನಂಬಿಕೆಯನ್ನು ತೋರಿಸುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಒಂದು ಸಂಸ್ಥೆಯು ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಅವಶ್ಯಕತೆಗಳನ್ನು ಪೂರೈಸುತ್ತದೆ, ಇನ್ನೊಂದು ಸಂಸ್ಥೆಯು ಸೇನಾ ವಾಹನಗಳನ್ನು ತಯಾರಿಸುತ್ತದೆ. ಅಂತೆಯೇ, ಅದು ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು, ಸೈನ್ಯದ ಆರಾಮ ವಸ್ತುಗಳು, ಆಪ್ಟಿಕಲ್ ಎಲೆಕ್ಟ್ರಾನಿಕ್ಸ್ ಅಥವಾ ಪ್ಯಾರಾಚೂಟ್ಗಳು - ನಮ್ಮ ಗುರಿ ಪ್ರತಿ ಭಾರತೀಯ ಸಂಸ್ಥೆಯು ಪ್ರದೇಶಗಳಲ್ಲಿ ಪರಿಣತರನ್ನಾಗಿಸುವುದು ಮಾತ್ರವಲ್ಲ, ಜಾಗತಿಕ ಬ್ರಾಂಡ್ ಆಗಿ ಪರಿವರ್ತಿಸುವುದು. ಸ್ಪರ್ಧಾತ್ಮಕ ವೆಚ್ಚವೇ ನಮ್ಮ ಶಕ್ತಿ. ಆದ್ದರಿಂದ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ನಮ್ಮ ಗುರುತಾಗಿರಬೇಕು

ಸ್ನೇಹಿತರೇ,

ಹೊಸ ವ್ಯವಸ್ಥೆಯ ನಮ್ಮ ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿ, ಪ್ರತಿಭಾವಂತ ಜನರು ಇದ್ದಾರೆ, ಹೊಸತನವನ್ನು ಸದಾ ಬಯಸುವವರು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ. ಅಂತಹ ಪರಿಣಿತರಿಗೆ ಹೊಸತನವನ್ನು ನೀಡಲು ಅವಕಾಶ ಸಿಕ್ಕಾಗ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಾಗ, ಅವರು ಅದ್ಭುತಗಳನ್ನು ಮಾಡುತ್ತಾರೆ. ನಿಮ್ಮ ಪರಿಣತಿಯೊಂದಿಗೆ ನೀವು ರಚಿಸುವ ಉತ್ಪನ್ನಗಳು ಭಾರತದ ರಕ್ಷಣಾ ಕ್ಷೇತ್ರದ ಸಾಮರ್ಥ್ಯ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವುದಲ್ಲದೆ, ಸ್ವಾತಂತ್ರ್ಯದ ನಂತರ ಸೃಷ್ಟಿಯಾಗಿದ್ದ ಅಂತರವನ್ನು ತೆಗೆದುಹಾಕುತ್ತದೆ

ಸ್ನೇಹಿತರೇ,

21 ನೇ ಶತಮಾನದಲ್ಲಿ, ಅದು ದೇಶವೇ ಆಗಿರಲಿ ಅಥವಾ ಸಂಸ್ಥೆಯಾಗಿರಲಿ, ಅದರ ಬೆಳವಣಿಗೆ ಮತ್ತು ಬ್ರಾಂಡ್ ಮೌಲ್ಯವನ್ನು ಅದರ ಸಂಶೋಧನೆ ಮತ್ತು ನಾವೀನ್ಯತೆ ಸಾಮರ್ಥ್ಯಗಳಿಂದ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಭಾರತದ ಬೆಳವಣಿಗೆ ಮತ್ತು ಹೊಸ ಗುರುತನ್ನು ಸಾಫ್ಟ್ ವೇರ್ ನಿಂದ ಬಾಹ್ಯಾಕಾಶ ವಲಯದವರೆಗಿನ ವಲಯಗಳಿಂದ ರಚಿಸಲಾಗಿದೆ. ಆದ್ದರಿಂದ, ಸಂಶೋಧನೆ ಮತ್ತು ನಾವೀನ್ಯತೆ ನಿಮ್ಮ ಕೆಲಸದ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾನು ಎಲ್ಲಾ ಏಳು ಸಂಸ್ಥೆಗಳಿಗೆ ವಿಶೇಷ ವಿನಂತಿಯನ್ನು ಮಾಡುತ್ತೇನೆ. ಇವುಗಳಿಗೆ ಆದ್ಯತೆ ಸಿಗಬೇಕು. ನೀವು ವಿಶ್ವದ ಅತಿದೊಡ್ಡ ಸಂಸ್ಥೆಗಳಿಗೆ ಸರಿಸಮನಾಗಿರಬೇಕಷ್ಟೇ ಅಲ್ಲ, ಭವಿಷ್ಯದ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಬೇಕು. ಆದ್ದರಿಂದ, ನೀವು ಹೊಸ ವಿಧಾನವನ್ನು ಹೊಂದಿರುವುದು, ಹೊಸ ಆಲೋಚನೆಗಳ ಬಗ್ಗೆ ಯೋಚಿಸುವುದು, ಸಂಶೋಧನೆ ಆಧಾರಿತ ಯುವಕರಿಗೆ ಗರಿಷ್ಠ ಅವಕಾಶಗಳನ್ನು ನೀಡುವುದು ಮತ್ತು ಅವರಿಗೆ ಯೋಚಿಸಲು ಮತ್ತು ಹೊಸತನವನ್ನು ನೀಡಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದು ಬಹಳ ಮುಖ್ಯ. 7 ಸಂಸ್ಥೆಗಳ ಮೂಲಕ ತರಲಾಗಿರುವ ಹೊಸ ಆರಂಭದ ಭಾಗವಾಗಿರಲು ದೇಶದ  ಎಲ್ಲಾ ಸ್ಟಾರ್ಟಪ್‌ಗಳಿಗೆ ನಾನು ಹೇಳಲು ಬಯಸುತ್ತೇನೆ. ನಿಮ್ಮ ಸಂಶೋಧನೆ ಮತ್ತು ಉತ್ಪನ್ನಗಳು ಪರಸ್ಪರ ಲಾಭ ಪಡೆಯುವ ವಿಧಾನಗಳ ಬಗ್ಗೆ ಯೋಚಿಸಲು ಪ್ರಯತ್ನಿಸಿ ಮತ್ತು ಸಂಸ್ಥೆಗಳ ಜೊತೆಯಲ್ಲಿ ಪರಸ್ಪರ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಿ.

ಸ್ನೇಹಿತರೇ,

ಎಲ್ಲಾ ಸಂಸ್ಥೆಗಳಿಗೆ ಉತ್ತಮ ಉತ್ಪಾದನಾ ವಾತಾವರಣವನ್ನು ನೀಡುವುದರ ಜೊತೆಗೆ, ಸರ್ಕಾರವು ಸಂಪೂರ್ಣ ಕ್ರಿಯಾತ್ಮಕ ಸ್ವಾಯತ್ತತೆಯನ್ನು ನೀಡಿದೆ. ಇದಲ್ಲದೆ, ಕಾರ್ಖಾನೆಗಳ ಕಾರ್ಮಿಕರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಸಹ ಖಾತ್ರಿಪಡಿಸಲಾಗಿದೆ. ನಿಮ್ಮ ಪರಿಣತಿ ದೇಶಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ, ಮತ್ತು ನಾವು ಒಟ್ಟಾಗಿ ಸ್ವಾವಲಂಬಿ ಭಾರತದ ನಮ್ಮ ಸಂಕಲ್ಪವನ್ನು ಪೂರೈಸುತ್ತೇವೆ.

ಅದೇ ಉತ್ಸಾಹದಿಂದ, ಮತ್ತೊಮ್ಮೆ ನಿಮಗೆಲ್ಲರಿಗೂ ವಿಜಯದಶಮಿಯ ಶುಭಾಶಯಗಳು. ಎಲ್ಲರಿಗೂ ಧನ್ಯವಾದಗಳು!

ಹಕ್ಕುತ್ಯಾಗ: ಇದು ಪ್ರಧಾನಮಂತ್ರಿಯವರ ಹಿಂದಿ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1765028) Visitor Counter : 186