ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಬಿಐಎಸ್ ನಿಂದ ವಿಶ್ವ ಮಾನದಂಡ ದಿನ ಆಚರಣೆ


ಉತ್ತಮ ಜಾಗತಿಕ ಮಾನದಂಡಗಳ ಜಾರಿಯಿಂದ ಎಂಎಸ್ಎಂಇಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಕ್ಕೆ ನೆರವು- ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ

ಪರಿಸರ ಸುಸ್ಥಿರತೆ ಆದ್ಯತೆಯಾಗಬೇಕು: ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ

ಸುಸ್ಥಿರ ಅಭಿವೃದ್ಧಿ ಗುರಿಗಳು ಹಲವು ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ಉತ್ತಮ ಭರವಸೆಯ ನೀಡುತ್ತದೆ: ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ

ಭಾರತೀಯ ತಜ್ಞರಿಗೆ ಸನ್ಮಾನ

Posted On: 14 OCT 2021 2:41PM by PIB Bengaluru

ವಿಶ್ವ ಮಾನದಂಡ ದಿನದ ಅಂಗವಾಗಿ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನವದೆಹಲಿಯ ತನ್ನ ಕೇಂದ್ರ ಕಚೇರಿಯಲ್ಲಿಂದು ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ “ಉತ್ತಮ ಜಗತ್ತಿಗಾಗಿ ಹಂಚಿಕೆಯ ದೃಷ್ಟಿಕೋನ’ ಎಂಬ ಘೋಷವಾಕ್ಯದಲಡಿ ಇಡೀ ದಿನದ ಕಾರ್ಯಕ್ರಮ ಆಯೋಜಿಸಿತ್ತು.

ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಖಾತೆ ರಾಜ್ಯ ಸಚಿವರಾದ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ,  ಮಾನದಂಡ ಪ್ರಮಾಣೀಕರಣದ ಮೂಲಕ ಪರಿಸರ ಸುಸ್ಥಿರತೆಯ ಮಹತ್ವವನ್ನು ಒತ್ತಿ ಹೇಳಿದರು. ಅವರು ಭಾರತದಲ್ಲಿ ಎಂಎಸ್ ಎಂಇ ವಲಯದ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರು ಮತ್ತು ಮಾನದಂಡಗಳ ಜಾರಿಯಿಂದ ಹೇಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಪ್ರವೇಶ ಹೇಗೆ ಸುಲಭಗೊಳಿಸಲಿದೆ ಎಂದರು. ಭವಿಷ್ಯದ ಸ್ಮಾರ್ಟ್ ಸಿಟಿಗಳನ್ನು ಮುನ್ನಡೆಸಲು ಅಗತ್ಯವಾದ ವೈವಿಧ್ಯಯಮ ತಂತ್ರಜ್ಞಾನಗಳ ಏಕೀಕರಣ ಮತ್ತು ನಾವೀನ್ಯತೆಗಳ ಪರಸ್ಪರ ಕಾರ್ಯಾಚರಣೆಯನ್ನು ಖಾತ್ರಿಪಡಿಸುವಲ್ಲಿ ಮಾನದಂಡಗಳು ವಹಿಸುವ ನಿರ್ಣಾಯಕ ಪಾತ್ರದ ಕುರಿತು ಮಾತನಾಡಿದರು. ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಸಾಗುವ ಹಾದಿಯು ಸಂಪೂರ್ಣ ಅಗತ್ಯವಾಗಿದೆ. ಇದಕ್ಕಾಗಿ ಸಂಬಂಧಿಸಿದ ವೇಗದ ಮತ್ತು ಉತ್ತಮ ಮಾನದಂಡಗಳು ಅತ್ಯಗತ್ಯ ಎಂಬುದನ್ನು ಅವರು ಮತ್ತಷ್ಟು ವಿವರಿಸಿದರು.

ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಮತಿ ಲೀಲಾ ನಂದನ್, ವಿಶೇಷ ಉಪನ್ಯಾಸ ನೀಡಿದರು ಮತ್ತು ವಿಶ್ವಸಂಸ್ಥೆಯ ಎಲ್ಲ ಸದಸ್ಯರು ಅಳವಡಿಸಿಕೊಂಡಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ನಿಟ್ಟಿನಲ್ಲಿ ಶ್ರಮಿಸುವ ಅಗತ್ಯತೆ ಇದೆ ಮತ್ತು ಅದಕ್ಕಾಗಿ ಭಾರತ ಬದ್ಧವಿದೆ ಎಂದು ಪ್ರತಿಪಾದಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪರಿಹರಿಸುವ ಮಾನದಂಡಗಳ ಸೂತ್ರೀಕರಣಕ್ಕೆ ಆದ್ಯತೆ ನೀಡುವುದಕ್ಕಾಗಿ ಮತ್ತು ಆರೋಗ್ಯಕರ ಪರಿಸರವನ್ನು ಬೆಂಬಲಿಸುವ ಮಾನದಂಡಗಳ ಅಭಿವೃದ್ಧಿಗೆ ಬಿಐಎಸ್ ಮಾಡಿದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳು ಹಲವು ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ಹೊಸ ಭರವಸೆಯನ್ನು ನೀಡಲಿದೆ ಎಂದು ಪುನರುಚ್ಚರಿಸಿದ ಅವರು, ಆರ್ಥಿಕ ಚಟುವಟಿಕೆಗಳ ಹೊಸ ಮಾದರಿಗಳಿಗೆ ಜನಸಂಖ್ಯಾ ಪರಿವರ್ತನೆಗಳು ಮತ್ತು ಈ ವಿಷಯದಲ್ಲಿ ಮಾನದಂಡಗಳು ನಿರ್ಣಾಯಕ ಪಾತ್ರವನ್ನು ವಹಿಸಲಿವೆ ಎಂದರು.

ಎಲೆಕ್ಟ್ರೋ ಟೆಕ್ನಾಲಜಿ ಕ್ಷೇತ್ರದಲ್ಲಿ ಪ್ರಮಾಣೀಕರಣವನ್ನು ಹೆಚ್ಚಿಸಲು ಅವರ ತಾಂತ್ರಿಕ ಕೊಡುಗೆಗಾಗಿ ಐಇಸಿ ಪ್ರಶಸ್ತಿಗಳನ್ನು ಪಡೆದ ಭಾರತೀಯ ತಜ್ಞರನ್ನು ಅಭಿನಂದಿಸಿದರು.

ಗ್ರಾಹಕ ವ್ಯವಹಾರಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀ ನಿಧಿ ಖರೆ ಅವರು ಆಶಯ ಭಾಷಣ ಮಾಡಿದರು ಮತ್ತು ಮಾನದಂಡಗಳ ಮಹತ್ವವನ್ನು ವಿವರಿಸಿದರು ಮತ್ತು ಅದರಿಂದ ವ್ಯಾಪಾರ, ಸಮಾಜ ಮತ್ತು ಸರ್ಕಾರಕ್ಕೆ ಆಗುತ್ತಿರುವ ಪ್ರಯೋಜನಗಳನ್ನು ತಿಳಿಸಿದರು. ಮಾನದಂಡಗಳು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಭದ್ರ ಅಡಿಪಾಯವನ್ನು ರೂಪಿಸುತ್ತವೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜಾಗತಿಕ ಪಾಲುದಾರಿಕೆಗಳ ಅನುಷ್ಠಾನ ಮತ್ತು ಪುನರುಜ್ಜೀವನದ ಸಾಧನಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಉಲ್ಲೇಖಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಯಶಸ್ವಿಯಾಗಿ ಸಾಧಿಸುವಲ್ಲಿ ಮತ್ತು ನಮ್ಮ ಜಗತ್ತನ್ನು ಬದುಕಲು ಪ್ರಶಸ್ತ ತಾಣವನ್ನಾಗಿ ರೂಪಿಸುವಲ್ಲಿ  ಬಿಐಎಸ್ ಅತ್ಯಂತ ಮುಖ್ಯ ಪಾತ್ರವಹಿಸಲಿದೆ ಎಂದು ಅವರು ಹೇಳಿದರು.

ಬಿಐಎಸ್ ನ ಮಹಾನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ತಿವಾರಿ, ತಮ್ಮ ಸ್ವಾಗತ ಭಾಷಣದಲ್ಲಿ ಬಿಐಎಸ್ ಪ್ರಮಾಣೀಕರಣ ಪಕ್ರಿಯೆಯನ್ನು ಬಲಪಡಿಸಲು ಮತ್ತು ರಾಷ್ಟ್ರೀಯ ಆರ್ಥಿಕತೆಗಳನ್ನು ಮಾನದಂಡಗಳ ಪ್ರಾಮುಖ್ಯತೆಯನ್ನು ಬಲಪಡಿಸಲು ಬಿಐಎಸ್ ಇತ್ತೀಚೆಗೆ ಕೈಗೊಂಡಿರುವ ಉಪಕ್ರಮಗಳನ್ನು ವಿವರಿಸಿದರು. ಗ್ರಾಹಕರ ಅಗತ್ಯತೆಗಳನ್ನು ಆಧರಿಸಿ ಮಾನದಂಡಗಳನ್ನು ರೂಪಿಸಲು ಬಿಐಎಸ್ ಹೇಗೆ ಶ್ರಮಿಸುತ್ತಿದೆ ಎಂಬುದರ ಕುರಿತು ಮಾತನಾಡಿದರು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯಲ್ಲಿ ಜವಾಬ್ದಾರಿಯುತ ಪೂರೈಕೆ ಸರಣಿಯನ್ನು ಉತ್ತೇಜಿಸಲು ದಕ್ಷ ಹಾಗೂ ವಿಶ್ವಾಸಾರ್ಹ ಸರಕುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದರು.

ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀಮತಿ ಮಮತಾ ಉಪಾಧ್ಯಾಯ ಲಾಲ್, ಅವರು ಭಾರತದಾದ್ಯಂತ ಎಲ್ಲ ಬಿಐಎಸ್ ಪ್ರಾದೇಶಿಕ ಮತ್ತು ಶಾಖಾ ಕಚೇರಿಗಳನ್ನು ನಡೆಸುತ್ತಿರುವ ಕಾರ್ಯಕ್ರಮಗಳ ಕುರಿತು ವಿವರ ನೀಡಿದರು. ಅವುಗಳಲ್ಲಿ  ಗ್ರಾಹಕ ಗುಂಪುಗಳು, ರಾಜ್ಯ ಸರ್ಕಾರಗಳು ಮತ್ತು ಉತ್ಪಾದಕರೊಂದಿಗೆ ಕಾರ್ಯಾಗಾರ, ಶಾಲಾ ಮತ್ತು ಕಾಲೇಜುಗಳಲ್ಲಿ ಸ್ಪರ್ಧೆಗಳು ಮತ್ತು ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು ಸೇರಿವೆ.  ಬಿಐಎಸ್ ತನ್ನ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಬಿಐಎಸ್ ನ 75 ವರ್ಷಗಳ ಅಸ್ಥಿತ್ವವನ್ನು ಸ್ಮರಿಸಲು ‘ಆಜಾದಿ ಕಾ ಅಮೃತ ಮಹೋತ್ಸವ- ಇಂಡಿಯಾ@75’ ಪ್ರತಿ ವಾರ ವಿನೂತನ ಚಟುವಟಿಕೆಗಳ ಸರಣಿಯನ್ನು ನಡೆಸಲಾಗುತ್ತಿದೆ (ಉದಾಹರಣೆಗೆ 75 ವಾರಗಳಲ್ಲಿ 75 ಚಟುವಟಿಕೆಗಳು) ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಈ ಚಟುವಟಿಕೆಗಳಲ್ಲಿ ವಿಷಯಾಧಾರಿತ ವಿಚಾರ ಸಂಕಿರಣಗಳು, ಭಾರತದಾದ್ಯಂತ ತನ್ನ ಶಾಖಾ ಕಚೇರಿಗಳು ಮೂಲಕ ಶಾಲಾ/ಕಾಲೇಜುಗಳಲ್ಲಿ ಮಾನದಂಡ ಕ್ಲಬ್ ಚಟುವಟಿಕೆಗಳು, ಶಾಖಾ ಕಚೇರಿಗಳಲ್ಲಿ ಗುಣಮಟ್ಟದಲ್ಲಿ ಸ್ವಾತಂತ್ರ್ಯದಿಂದ ಆತ್ಮನಿರ್ಭರದವರೆಗೆ ಪಯಣದ ಕುರಿತು ಕೈಗಾರಿಕಾ ಮೇಳಗಳು, ‘ದಿಸ್ ವೀಕ್ ದಟ್ ಡೇ’ ಮೌಲ್ಯಮಾಪನ ಚಟುವಟಿಕೆಗಳು, ಬಿಐಎಸ್ ಸಂಸ್ಥಾಪನಾ ದಿನ  ಆಗಸ್ಟ್ 15 ಮತ್ತು ಜನವರಿ 06ರಂಡು ವಿಶೇಷ ಕಾರ್ಯಕ್ರಮಗಳ ಆಯೋಜನೆ ಸೇರಿವೆ.

ಉದ್ಘಾಟನಾ ಗೋಷ್ಠಿಯ ನಂತರ ಸುಸ್ಥಿರ ಸಮುದಾಯಗಳ ಮಾನದಂಡಗಳ ತಾಂತ್ರಿಕ ಗೋಷ್ಠಿ ನಡೆಯಿತು, ಅಲ್ಲಿ ತಜ್ಞರು ಮತ್ತು ಗಣ್ಯ ವ್ಯಕ್ತಿಗಳು ತಮ್ಮ ವಿಷಯ ಪ್ರಸ್ತುತಿ ಪಡಿಸಿದರು. ತಾಂತ್ರಿಕ ಗೋಷ್ಠಿಯಲ್ಲಿ, ಶುದ್ಧ ಇಂಧನ, ಸ್ಮಾರ್ಟ್ ಸಾರಿಗೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಎಲೆಕ್ಟ್ರೋ ಟೆಕ್ನಿಕಲ್ ಮಾನದಂಡ ಮತ್ತು ಸುಸ್ಥಿರ ನಗರಗಳು ವಿಷಯ ಸೇರಿ ಹಲವು ವಿಷಯಗಳ ಬಗ್ಗೆ ಆಸಕ್ತಿಕರ ಮತ್ತು ನಾನಾ ಆಯಾಮಗಳನ್ನು ಪ್ರಸ್ತುತಪಡಿಸಲಾಯಿತು. ಎರಡನೇ ತಾಂತ್ರಿಕ  ಗೋಷ್ಠಿಯ ಯೋಗಕ್ಷೇಮವನ್ನು ಪೋಷಿಸಲು ಸಂಬಂಧಿಸಿದ ಮಾನದಂಡಗಳ ಪ್ರಸ್ತುತಿ ಒಳಗೊಂಡಿತ್ತು. ಅದರಲ್ಲಿ ಪೌಷ್ಟಿಕಾಂಶ, ನೀರಿನ ಪರಿಣಾಮಕಾರಿ ಬಳಕೆ, ಕುಡಿಯುವ ನೀರಿನ ಕೊಳಾಯಿ, ಆಹಾರ ಮತ್ತು ನೀರು ಪ್ರಮಾಣೀಕರಣ ಮತ್ತು ಹಸಿರು ಮೂಲಸೌಕರ್ಯ ವಿಷಯಗಳೂ ಸಹ ಸೇರಿದ್ದವು.  

 

****



(Release ID: 1763991) Visitor Counter : 207