ಗೃಹ ವ್ಯವಹಾರಗಳ ಸಚಿವಾಲಯ

ಗೃಹಖಾತೆ ಮತ್ತು ಸಹಕಾರ ಸಚಿವಾಲಯ, ಅಮಿತ್‌ ಶಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ, ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಿಯಾಗಿ ಎರಡು ದಶಕಗಳನ್ನು ಜನ ಸೇವೆಯಲ್ಲಿ ಕಳೆದಿರುವುದಕ್ಕಾಗಿ ಅಭಿನಂದನೆ ಸಲ್ಲಿಸಿದರು


20 ವರ್ಷಗಳ ಹಿಂದೆ ಇದೇ ದಿವಸ ಶ್ರೀ ನರೇಂದ್ರ ಮೋದಿ ಅವರು ಇದೇ ದಿನ ರಾಜ್ಯದ ಮುಖ್ಯಮಂತ್ರಿಯಾಗಿ ಶಪಥ ಸ್ವೀಕರಿಸಿದರು. ಅಭಿವೃದ್ಧಿಪಥದಲ್ಲಿ ಅವರ ಯಾನ ಆರಂಭಿಸಿದರು. ಈವರೆಗೂ ಈ ನಡೆ ಮುಂದುವರಿದಿದೆ

ಈ ಎರಡು ದಶಕಗಳಲ್ಲಿ ಶ್ರೀ ನರೇಂದ್ರಮೋದಿ ಅವರು ಪ್ರತಿದಿನವೂ ಹಗಲೂರಾತ್ರಿಯೂ ಎಣಿಸದೆ ಜನರ ಮತ್ತು ದೇಶದ ಪ್ರಗತಿಗಾಗಿ ಅಹರ್ನಿಶಿ ಶ್ರಮಿಸಿದ್ದಾರೆ

ಈ ಇಪ್ಪತ್ತು ವರ್ಷಗಳಲ್ಲಿ ಬಡವರ ಅಭಿವೃದ್ಧಿ ಹಾಗೂ ಅಂತ್ಯೋದಯಕ್ಕಾಗಿ ಶ್ರೀ ನರೇಂದ್ರಮೋದಿಯವರು ಅಸಾಧ್ಯವಾಗಿದ್ದನ್ನು ಸಾಧ್ಯವಾಗಿಸಿದ್ದಾರೆ. ಅವರ ದೂರದೃಷ್ಟಿತ್ವ ಹಾಗೂ ಪ್ರಬಲವಾದ ಇಚ್ಛಾಶಕ್ತಿಯಿಂದ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದಾರೆ.

ನರೇಂದ್ರ ಮೋದಿ ಅವರ ಜೊತೆಗೆ ಕೈಗೂಡಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವಾಗಿದೆ. ಮೊದಲು ಗುಜರಾತ್‌ನ ರಾಜ್ಯ ರಾಜಕಾರಣದಲ್ಲಿ ಹಾಗೂ ನಂತರ ರಾಷ್ಟ್ರ ರಾಜಕಾರಣದಲ್ಲಿ ಇವರೊಂದಿಗೆ ಶ್ರಮಿಸುತ್ತಿರುವುದು ನನ್ನ ಸುಕೃತವಾಗಿದೆ.   

ಮೋದಿ ಅವರ ನಾಯಕತ್ವದಲ್ಲಿ ನಾವು ನಮ್ಮದೆಲ್ಲವೂ ಸಮರ್ಪಿಸೋಣ. ಸದೃಢ ದೇಶ, ಸ್ವಾವಲಂಬಿ ದೇಶಕ್ಕಾಗಿ ಸಂಪೂರ್ಣವಾಗಿ ಶ್ರಮಿಸೋಣ

Posted On: 07 OCT 2021 4:10PM by PIB Bengaluru

ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್‌ಶಾ ಇಂದು ರಾಜಕಾರಣದಲ್ಲಿ ಎರಡು ದಶಕಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಮಂತ್ರಿಯಾಗಿ ಎರಡು ದಶಕಗಳನ್ನು ಜನಸೇವೆಯಲ್ಲಿಯೇ ಸವೆಸಿರುವ ಮೋದಿ ಅವರಿಗೆ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಪ್ರಜೆಗಳ ಉದ್ಧಾರಕ್ಕಾಗಿ ಹಗಲೂ ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಈ ಯಾನ ಈಗಲೂ ಮುಂದುವರಿದಿದೆ ಎಂದು ಅವರು ತಮ್ಮ ಸರಣಿ ಟ್ವೀಟ್‌ನಲ್ಲಿ ಶ್ಲಾಘಿಸಿದ್ದಾರೆ.

ಈ ಇಪ್ಪತ್ತು ವರ್ಷಗಳ ಅವಧಿಯನ್ನು ದೇಶದ ಸೇವೆಗಾಗಿ ಮುಡಿಪಾಗಿಟ್ಟ ಶ್ರೀ ನರೇಂದ್ರಮೋದಿ ಅವರನ್ನು ಅಭಿನಂದಿಸುತ್ತೇನೆ. ಬಡವರ ಮತ್ತು ಅಂತ್ಯೋದಯಕ್ಕಾಗಿ ಅವರು ತಮ್ಮನ್ನೇ ಸಮರ್ಪಿಸಿಕೊಂಡರು. ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು. ಅವರ ದೂರದರ್ಶಿತ್ವ ಹಾಗೂ ಸದೃಢವಾದ ಇಚ್ಛಾಶಕ್ತಿಯಿಂದ ಇದೆಲ್ಲವೂ ಸಾಧ್ಯವಾಗಿದೆ.

ಅಮಿತ್‌ ಶಾ ಅವರು,  ಇದು ನನ್ನ ಅದೃಷ್ಟವಾಗಿದೆ. ನಾನು ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸುವಂತಾಯಿತು. ಈ ಹಿಂದೆ ರಾಜ್ಯ ರಾಜಕಾರಣದಲ್ಲಿಯೂ, ಸಂಘಟನೆಯಲ್ಲಿಯೂ, ಸರ್ಕಾರ ರಚನೆಯಲ್ಲಿಯೂ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಒಂದು ಸದೃಢ, ಸ್ವಾವಲಂಬಿ ದೇಶ ನಿರ್ಮಾಣಕ್ಕೆ ನಾವು ನಮ್ಮದೆಲ್ಲವನ್ನೂ ಸಮರ್ಪಿಸೋಣ ಎಂದು ಹೇಳಿದ್ದಾರೆ.

***



(Release ID: 1762575) Visitor Counter : 148