ಇಂಧನ ಸಚಿವಾಲಯ

ಮಾರುಕಟ್ಟೆ ಆಧರಿತ ಆರ್ಥಿಕ ವಿತರಣೆ (ಎಂ.ಬಿ.ಇ.ಡಿ) ಚೌಕಟ್ಟು ಹಂತ-1 ರ ಅನುಷ್ಠಾನ


ಎಂ.ಬಿ.ಇ.ಡಿಯಿಂದ ಗ್ರಾಹಕರಿಗೆ ಸುಮಾರು 5% ರಷ್ಟು ವಿದ್ಯುತ್ ದರ ಕಡಿಮೆಯಾಗುವ ನಿರೀಕ್ಷೆ

Posted On: 08 OCT 2021 12:36PM by PIB Bengaluru

ಇಂಧನ ಕ್ಷೇತ್ರದಲ್ಲಿ ವಿದ್ಯುತ್ ದರದ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಈ ವಲಯದಲ್ಲಿ ಸ್ಪರ್ಧೆ ಹೆಚ್ಚಿಸಲು ಇಂಧನ ಸಚಿವಾಲಯ ಸೂಕ್ತ ಕಾರ್ಯವಿಧಾನಗಳನ್ನು ಪರಿಶೀಲಿಸುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಯಶಸ್ವಿಯಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಮತ್ತು ಉತ್ತಮವಾದ ಸಮಗ್ರ ರಾಷ್ಟ್ರೀಯ ವಿದ್ಯುತ್ ಜಾಲದ ವಿತರಣೆಯನ್ನು ಉಪಯೋಗವಾಗುವಂತೆ ಮಾಡಲು ಉದ್ದೇಶಿಸಲಾಗಿದೆ. ಉತ್ಪಾದನಾ ಘಟಕಗಳ ಕಾರ್ಯಾಚರಣೆಯನ್ನು ಸರಳೀಕರಣಗೊಳಿಸುವ ಕಡೆಗೆ ಸಾಗುವ ಸಮಯ ಇದಾಗಿದೆ. ಸಮರ್ಥ ಮಾರುಕಟ್ಟೆ ಆಧರಿತ ಕಾರ್ಯಾಚರಣೆಗಳಿಗೆ ದೀರ್ಘಾವಧಿಯ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಆಧರಿತವಾದ ಕ್ರಮ ಇದಾಗಿದೆ.  

ಹಾಗಾಗಿ ವಿದ್ಯುತ್ ಮಾರುಕಟ್ಟೆಯ ಕಾರ್ಯಾಚರಣೆಯನ್ನು ಸುಧಾರಿಸುವಲ್ಲಿ “ ಒಂದು ರಾಷ್ಟ್ರ, ಒಂದು ಜಾಲ, ಒಂದು ಆವರ್ತನ, ಒಂದು ಬೆಲೆ” ಚೌಕಟ್ಟಿನಲ್ಲಿ ಮಾರುಕಟ್ಟೆ ಆಧರಿತ ಆರ್ಥಿಕ ವಿತರಣೆ [ಎಂ.ಬಿ.ಇ.ಡಿ] ಯನ್ನು ಕೇಂದ್ರೀಯ ವಿದ್ಯುತ್ ವಿತರಣೆ ನಿಯಂತ್ರಣ ಆಯೋಗದಿಂದ ಪ್ರಾರಂಭಿಸಲಾಗಿದೆ. ಒಟ್ಟಾರೆಯಾಗಿ ಅಗ್ಗದ ವಿದ್ಯುತ್ ಉತ್ಪಾದನಾ ಸಂಪನ್ಮೂಲಗಳ ವ್ಯವಸ್ಥೆಯಲ್ಲಿ ಬೇಡಿಕೆಯನ್ನು ಪೂರೈಸಲು ಮತ್ತು ವಿತರಣಾ ಕಂಪೆನಿಗಳು, ಉತ್ಪಾದಕರು ಮತ್ತು ಅಂತಿಮವಾಗಿ ಗ್ರಾಹಕರಿಗೆ ಇದರಿಂದ ಉಳಿತಾಯವಾಗಲಿದ್ದು, ಅಂತಿಮವಾಗಿ ಗೆಲುವಿನ ಪರಿಸ್ಥಿತಿ ನಿರ್ಮಾಣವಾಗಲಿದೆ.

ಕ್ರಮೇಣ ಹೊಸ ಆಡಳಿತಕ್ಕೆ ಹೊಂದಿಕೊಳ್ಳಲು ಪಾಲುದಾರರು ವಿದ್ಯುತ್ ವಿನಿಯಮಯ ಮತ್ತು ಲೋಡ್ ನಿರ್ವಹಿಸುವ ಕೇಂದ್ರಗಳಿಗೆ ಎಂ.ಬಿ.ಇ.ಡಿ ನೆರವಾಗಲಿದೆ. ಈ ನಿಟ್ಟಿನಲ್ಲಿ 2021 ರ ಜೂನ್ 1 ರಂದು ಇಂಧನ ಸಚಿವಾಲಯ ಪಾಲುದಾರರಿಗೆ ಈ ಕುರಿತಾದ ಚರ್ಚೆಯ ಟಿಪ್ಪಣಿಯನ್ನು ವಿತರಿಸಿದ್ದು, ಸಲಹೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿದೆ. 2021 ರ ಜುಲೈ 6 ರಂದು ಇಂಧನ ಸಚಿವಾಲಯ ರಾಜ್ಯ ಸರ್ಕಾರಗಳಿಗಾಗಿ ಸಮಾಲೋಚನಾ ಕಾರ್ಯಗಾರವನ್ನು ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿದ್ದು, ಬಳಿಕ ಈ ವಿಚಾರದ ಬಗ್ಗೆ ಸಚಿವಾಲಯದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ.  ಇದಕ್ಕೆ ಅನುಗುಣವಾಗಿ ವಿದ್ಯುತ್ ವಿತರಣಾ ಕಂಪೆನಿಗಳು, ನಿಯಂತ್ರಣ ಆಯೋಗಗಳು, ರಾಜ್ಯದ ವಿದ್ಯುತ್ ಉತ್ಪಾದಕ ಸಂಸ್ಥೆಗಳು, ಇತ್ಯಾದಿಗಳೊಂದಿಗೆ 2021 ರ ಆಗಸ್ಟ್ 26 ರಂದು ಎರಡನೇ ಸಲಹೆ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.  

ಇಂಧನ ಸಚಿವಾಲಯ ಎಲ್ಲಾ ಪ್ರಮುಖ ಪಾಲುದಾರರ ನಡುವೆ ಗಣನೀಯ ಪ್ರಮಾಣದ ಬಾಂಧವ್ಯ ಮೂಡಿಸಿದೆ. ಅಂತರ ರಾಜ್ಯ ಉತ್ಪಾದನಾ ಕೇಂದ್ರಗಳ ಕಡ್ಡಾಯ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಗುವ ಹಂತ – 1 ಅನ್ನು ಅಳವಡಿಸಲು ಈ ಪ್ರಕ್ರಿಯೆ ಅನುಸರಿಸಬೇಕು. ಇತರೆ ಉತ್ಪಾದಕ ಸಂಸ್ಥೆಗಳು ಸಹ ಸ್ವಯಂ ಪ್ರೇರಿತವಾಗಿ ಇದರಲ್ಲಿ ಪಾಲ್ಗೊಳ್ಳಬೇಕಾಗಿದೆ.

ಎಂ.ಬಿ.ಇ.ಡಿ-1 ಹಂತ 2022 ರ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ. ಸಿ.ಇ.ಆರ್.ಸಿ ತನ್ನ ನಿಯಮಗಳನ್ನು ಒಗ್ಗೂಡಿಸುವ ಮೊದಲು ಮತ್ತು ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಅಣುಕು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

***



(Release ID: 1762112) Visitor Counter : 225