ಕಲ್ಲಿದ್ದಲು ಸಚಿವಾಲಯ

ಸಾಮಾಜಿಕ, ಆರ್ಥಿಕ ಅಂಶಗಳನ್ನು ಕೇಂದ್ರೀಕರಿಸಿ ಮುಚ್ಚಿದ ಗಣಿ ತಾಣಗಳ ಮರು ಹಂಚಿಕೆಗೆ ಮುಂದಾದ ಕಲ್ಲಿದ್ದಲು ಸಚಿವಾಲಯ


ಎರಡು ಹಂತಗಳಲ್ಲಿ ಗಣಿ ಮುಚ್ಚುವಿಕೆ ಚೌಕಟ್ಟನ್ನು ಅನುಷ್ಠಾನಗೊಳಿಸಲು ಕ್ರಮ

ನೆರವು ಮತ್ತು ಮಾರ್ಗದರ್ಶನಕ್ಕಾಗಿ ವಿಶ್ವ ಬ್ಯಾಂಕ್ ನೊಂದಿಗೆ ಆರಂಭಿಕ ಸಮಾಲೋಚನೆ

Posted On: 06 OCT 2021 3:43PM by PIB Bengaluru

ಜನ ಮತ್ತು ಸಮುದಾಯಗಳು, ಪರಿಸರ ಮತ್ತು ಪುನಶ್ಚೇತನ ಹಾಗೂ ಭೂ ಪರಿವರ್ತನೆಯಂತಹ ಬದಲಾವಣೆ ಕುರಿತಾದ ಮೂರು ಸಾಂಸ್ಥಿಕ ಆಡಳಿತದ ಆಯಾಮಗಳ ಮೂಲಕ ಗಣಿ ಮುಚ್ಚುವ ದೃಢವಾದ ಚೌಕಟ್ಟು ರೂಪಿಸಲು ಗಣಿ ಸಚಿವಾಲಯ ಕಾರ್ಯೋನ್ಮುಖವಾಗಿದೆ. ನೆರವು ಮತ್ತು ಮಾರ್ಗದರ್ಶನಕ್ಕಾಗಿ ಸಚಿವಾಲಯ ವಿಶ್ವಬ್ಯಾಂಕ್ ನೊಂದಿಗೆ ಸಮಾಲೋಚನೆ ನಡೆಸುತ್ತಿದೆ. ವಿವಿಧ ದೇಶಗಳಲ್ಲಿ ಗಣಿ ಮುಚ್ಚುವಿಕೆ ಪ್ರಕರಣಗಳನ್ನು ನಿರ್ವಹಿಸುವಲ್ಲಿ ವಿಶ್ವ ಬ್ಯಾಂಕ್ ನ ವ್ಯಾಪಕ ಅನುಭವ ಹೆಚ್ಚು ಪ್ರಯೋಜನಕಾರಿಯಾಗಿದೆ ಮತ್ತು ಗಣಿ ಮುಚ್ಚುವಿಕೆ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಉತ್ತಮ ಅಭ್ಯಾಸಗಳು ಹಾಗೂ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಇದರಿಂದ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವಿಶ್ವ ಬ್ಯಾಂಕ್ ನೊಂದಿಗೆ ಕಾರ್ಯನಿರ್ವಹಿಸಲು ಸಚಿವಾಲಯ ಪ್ರಾಥಮಿಕ ಯೋಜನಾ ವರದಿ [ಪಿಪಿಆರ್] ಯನ್ನು ಸಿದ್ಧಪಡಿಸಿ ಅಗತ್ಯವಿರುವ ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಈಗಾಗಲೇ ಸಲ್ಲಿಸಿದೆ.

ಕಲ್ಲಿದ್ದಲು ಸಚಿವಾಲಯದ ಸುಸ್ಥಿರ ಅಭಿವೃದ್ದಿ ಕೋಶದಿಂದ ಮುಚ್ಚಿದ ಗಣಿ ಸ್ಥಳಗಳ ಮರು ಹಂಚಿಕೆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಯೋಜನೆಗೆ ಅನುಮತಿ ಕಲ್ಪಿಸುವ ಸಲುವಾಗಿ ಕಲ್ಲಿದ್ದಲು ಕಂಪೆನಿಗಳು ಮತ್ತು ಕಲ್ಲಿದ್ದಲು ನಿಯಂತ್ರಣ ಅಧಿಕಾರಿ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಸಂಬಂಧಿತ ಸಚಿವಾಲಯಗಳು ಮತ್ತು ನೀತಿ ಆಯೋಗೊಂದಿಗೆ ಅವರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆಯಲು ಅಂತರ್ ಸಚಿವಾಲಯಗಳ ಸಮಾಲೋಚನೆಗಳನ್ನು ಸಹ ಕೈಗೊಳ್ಳಲಾಗಿದೆ.

ಪ್ರಸ್ತುತ ಭಾರತೀಯ ಕಲ್ಲಿದ್ದಲು ವಲಯ ದೇಶದ ಕಲ್ಲಿದ್ದಲು ಸಂಗ್ರಹ ಮಾಡಿಕೊಂಡು ದೇಶದ ಇಂಧನ ಬೇಡಿಕೆ ಪೂರೈಸುವ ಅತ್ಯುತ್ತಮ ಕೆಲಸ ಮಾಡುತ್ತಿದೆ ಮತ್ತು ಸುಸ್ಥಿರ ಅಭಿವೃದ್ಧಿ, ಪರಿಸರ ಹಾಗೂ ಆತಿಥೇಯ ಸಮುದಾಯದ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಕ್ರಮಗಳಲ್ಲಿ ನಿರತವಾಗಿದೆ.

ಆದಾಗ್ಯೂ ತುಲನಾತ್ಮಕವಾಗಿ ನೋಡಿದರೆ ಭಾರತೀಯ ಕಲ್ಲಿದ್ದಲು ವಲಯ ವ್ಯವಸ್ಥಿತ ಗಣಿ ಮುಚ್ಚುವಿಕೆ ಪರಿಕಲ್ಪನೆ ವಿಷಯದಲ್ಲಿ ಅಷ್ಟೇನು ಅನುಭವ ಹೊಂದಿಲ್ಲ. 2009 ರಲ್ಲಿ ಮೊದಲ ಬಾರಿಗೆ ಕಲ್ಲಿದ್ದಲು ಮುಚ್ಚುವಿಕೆಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, 2013 ರಲ್ಲಿ ಈ ಕುರಿತು ಮರು ಆದೇಶ ಜಾರಿ ಮಾಡಲಾಗಿದೆ ಮತ್ತು ಈ ನಿಯಮಗಳು ಈಗಲೂ ಪರಿಷ್ಕರಣೆಯಾಗುತ್ತಿವೆ. ದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಬಹು ಹಿಂದಿನಿಂದಲೇ ಆರಂಭವಾಗಿದ್ದು, ನಮ್ಮ ಕಲ್ಲಿದ್ದಲು ಪ್ರದೇಶಗಳು ತನ್ನದೇ ಆದ ಪರಂಪರೆ ಹೊಂದಿವೆ. ಇವುಗಳು ದೀರ್ಘಕಾಲ ಬಳಕೆಯಾಗದೇ ಉಳಿದಿವೆ. ಇದರ ಜತೆಯಲ್ಲಿ ಗಣಿ ಮೀಸಲು ಖಾಲಿಯಾಗುವುದು, ಪ್ರತಿಕೂಲ ಗಣಿಗಾರಿಕೆ ಪರಿಸ್ಥಿತಿಗಳು, ಸುರಕ್ಷತಾ ಸಮಸ್ಯೆಗಳು ಇತ್ಯಾದಿ ಕಾರಣಗಳಿಂದಾಗಿ ಗಣಿಗಳು ಮುಚ್ಚುತ್ತಿವೆ ಹಾಗೂ ಭವಿಷ್ಯದಲ್ಲಿ ಮುಚ್ಚಲ್ಪಡುತ್ತವೆ. ಇಂತಹ ಗಣಿಗಳು ಸುರಕ್ಷಿತವಷ್ಟೇ ಅಲ್ಲದೇ ಪರಿಸರವಾಗಿ ಸ್ಥಿರವಾಗಿಸುವ ಜತೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಗಣಿಗಳನ್ನು ಅವಲಂಬಿಸಿರುವವರಿಗೆ ಜೀವನೋಪಾಯದ ನಿರಂತರತೆಯನ್ನು ಖಾತ್ರಿಪಡಿಸಬೇಕಿದೆ. ಪ್ರವಾಸೋದ್ಯಮ, ಕ್ರೀಡೆ, ಅರಣ್ಯ, ಕೃಷಿ, ತೋಟಗಾರಿಕೆ, ನಗರಗಳು ಒಳಗೊಂಡಂತೆ ರಾಜ್ಯದ ಸಮುದಾಯ ಮತ್ತು ಆರ್ಥಿಕ ಬಳಕೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಮರು ಬಳಕೆ ಮಾಡಿಕೊಳ್ಳಲಾಗುತ್ತಿದೆ.  

ಆದ್ದರಿಂದ ಕಲ್ಲಿದ್ದಲು ಸಚಿವಾಲಯ ತನ್ನ ಪರಂಪರೆಯ ಗಣಿಗಳನ್ನು ಒಳಗೊಳ್ಳುವ ಉದ್ದೇಶದಿಂದ ಇತ್ತೀಚೆಗೆ ಮುಚ್ಚಿದ ಮತ್ತು ಅಲ್ಪಾವಧಿಯಲ್ಲಿ ನಡೆಯಲಿರುವ ಗಣಿಗಳಿಗೆ ಚೌಕಟ್ಟು ನಿರ್ಮಿಸಲು ಯೋಜನೆ ರೂಪಿಸಿದೆ. ಸಂಪೂರ್ಣ ಕಸರತ್ತು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ,

ಹಂತ – 1: ಪ್ರಸ್ತುತ ಮತ್ತು ಬಾಕಿ ಇರುವ ಕಲ್ಲಿದ್ದಲು ಗಣಿಗಳ ಮುಚ್ಚುವಿಕೆಯ ಸಿದ್ಧತೆ ಮತ್ತು ಸಾಮರ್ಥ್ಯಗಳು, ಅಸ್ತಿತ್ವದಲ್ಲಿರುವ ಗಣಿಗಳನ್ನು ಮುಚ್ಚುವ ಪ್ರಕ್ರಿಯೆ, ಕಲ್ಲಿದ್ದಲು ಗಣಿಗಳ ಆಸುಪಾಸಿನ ಸಾಮಾಜಿಕ, ಆರ್ಥಿಕ ಸ್ಥಿತಿ ಗತಿ ಮತ್ತು ಪರಿಸರ ಬೇಸ್ ಲೈನ್ ಸ್ಥಾಪಿಸಲು ಭಾರತೀಯ ಕಲ್ಲಿದ್ದಲು ಪರಿಸರ ವ್ಯವಸ್ಥೆಯ ಸಮಗ್ರ ನಕ್ಷೆಯನ್ನು ಇದು ಒಳಗೊಂಡಿದೆ. ಈ ಕಸರತ್ತಿನಿಂದ ಶಾಸನಾತ್ಮಕವಾಗಿ ಮತ್ತು ಸಾಂಸ್ಥಿಕ ಚೌಕಟ್ಟು ರೂಪಿಸಲು, ಸುಧಾರಣೆಗಳನ್ನು ತರಲು ಸಹಕಾರಿಯಾಗಲಿದೆ ಹಾಗೂ ಹಣಕಾಸಿನ ಸಿದ್ಧತೆಗಳ ಜತೆಗೆ ಮೇಲಿನ ಮೂರು ಆಯಾಮಗಳ ಮೂಲಕ ಕಲ್ಲಿದ್ದಲು ಗಣಿಗಳನ್ನು ಮುಚ್ಚುವ ನೀಲನಕ್ಷೆ ಸಿದ್ಧಪಡಿಸಲು ಅನುಕೂಲವಾಗಲಿದೆ.

ಹಂತ – 2; ನೀಲನಕ್ಷೆ ಸಿದ್ಧಗೊಂಡ ನಂತರ ಅದರ ಆಧಾರದ ಮೇಲೆ ವಾಸ್ತವಿಕವಾಗಿ ಗಣಿಗಳನ್ನು ಮುಚ್ಚುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು ಮತ್ತು ಇದರಲ್ಲಿ ಇವುಗಳು ಒಳಗೊಳ್ಳುತ್ತವೆ 1] ಮುಚ್ಚುವ ಪೂರ್ವ ಯೋಜನೆ, 11] ಮುಚ್ಚುವ ಪೂರ್ವ ಮತ್ತು 111] ಯಾರೂ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಗುರಿಯೊಂದಿಗೆ ಪ್ರಾದೇಶಿಕ ಪರಿವರ್ತನೆಯ ನೀಲ ನಕ್ಷೆ ಸಿದ್ಧಪಡಿಸಲು ತೀರ್ಮಾನ. ಹಂತ – 1 ಪೂರ್ಣಗೊಂಡ ನಂತರ ಎರಡನೇ ಹಂತ ಪ್ರಾರಂಭವಾಗುತ್ತದೆ ಮತ್ತು ದೀರ್ಘಕಾಲ ಮುಂದುವರೆಯುತ್ತದೆ. ಅನುಷ್ಠಾನಗೊಳಿಸುವಾಗ ಕಲಿತ ಪಾಠಗಳ ಆಧಾರದ ಮೇಲೆ ಸೂಕ್ಷ್ಮ ಬದಲಾವಣೆಗಳಿಗೆ ಇದು ಒಳಗಾಗಬಹುದು.  

ಹಂತ - 1 ; ಈ ಕಾರ್ಯಕ್ರಮ 10 ರಿಂದ 12 ತಿಂಗಳ ಕಾಲ ಮುಂದುವರೆಯುವ ಸಾಧ್ಯತೆಯಿದ್ದು, ಇದು ಶೀರ್ಘ ಪ್ರಾರಂಭವಾಗುತ್ತದೆ. ವಿಶೇಷ ಉದ್ದೇಶದ ಪ್ರವೇಶ [ಎಸ್.ಪಿ.ಇ] ಪ್ರಕ್ರಿಯೆಯ ಎರಡೂ ಹಂತದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಲ್ಲಿದ್ದಲು ನಿಯಂತ್ರಣ ಅಧಿಕಾರಿ ಬಳಿ ಆಡಳಿತಾತ್ಮಕ ನಿಯಂತ್ರಣ ಇರುತ್ತದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತರಲು ಕಲ್ಲಿದ್ದಲು ಕಂಪೆನಿಗಳು ಇದಕ್ಕಾಗಿಯೇ ಮೀಸಲಾದ ವಿಶೇಷ ಉದ್ದೇಶದ ಪ್ರವೇಶಕ್ಕಾಗಿ ಬಹು ಹಂತದ ಶಿಸ್ತು ತಂಡಗಳನ್ನು ರಚಿಸಲಿವೆ.  

ಇದು 3 ರಿಂದ 4 ವರ್ಷಗಳ ಅವಧಿ ವರೆಗೆ ನಿರಂತರವಾಗಿ ಮುಂದುವರೆಯುವ ನಿರೀಕ್ಷೆಯಿದ್ದು, ಇದರಡಿ ಗಣಿ ಮುಚ್ಚುವ ಸಮಗ್ರ ಚೌಕಟ್ಟು ರೂಪಿಸಲಾಗುತ್ತದೆ. ಮುಚ್ಚುತ್ತಿರುವ ಗಣಿಗಳಿಗೆ ಸೂಕ್ತ ಬಲ ಒದಗಿಸುವ ಮತ್ತು ಮಧ್ಯಮಾವಧಿಯಿಂದ ದೀರ್ಘಾವಧಿವರೆಗೆ ಗಣಿಗಳನ್ನು ಮುಚ್ಚಲು ಸುಧಾರಿತ ನೀತಿಯ ಬೆಂಬಲವನ್ನು ಸಹ ಒದಗಿಸಲಾಗುತ್ತಿದೆ. ಈ ಕಾರ್ಯಕ್ರಮದ ಪ್ರಮುಖ ಫಲಿತಾಂಶವೆಂದರೆ ಎಲ್ಲಾ ಪರಂಪರೆಯ ಗಣಿ ತಾಣಗಳಿಗೆ ಸುಸ್ಥಿರ ಪರಿಹಾರ ಒದಗಿಸುತ್ತಿದ್ದು, ಬಹು ಸಮಯದಿಂದ ಗಮನಕ್ಕೆ ಬಾರದೇ ಉಳಿದ ಗಣಿಗಳು ಸಹ ಒಳಗೊಳ್ಳುತ್ತವೆ. ಕೇವಲ ಗಣಿ ತಾಣಗಳನ್ನು ಸುಸ್ಥಿರವಾಗಿ ಮರು ಸ್ಥಾಪಿಸಲಾಗುತ್ತಿರುವುದಷ್ಟೇ ಅಲ್ಲದೇ ಕುಟುಂಬಗಳ ಜೀವನೋಪಾಯ, ಗಣಿಗಳ ಮೇಲೆ ಅವಲಂಬಿತವಾಗಿರುವವರನ್ನು ಸಹ ಇದರಡಿ ಪರಿಗಣಿಸಲಾಗುತ್ತಿದೆ.

***



(Release ID: 1761519) Visitor Counter : 272