ಕಲ್ಲಿದ್ದಲು ಸಚಿವಾಲಯ

ಜಲ್ ಜೀವನ್ ಅಭಿಯಾನದಡಿ ಗ್ರಾಮಸ್ಥರ ಜೀವನದಲ್ಲಿ ಪರಿವರ್ತನೆ ತರುತ್ತಿರುವ ಕಲ್ಲಿದ್ದಲು ಕಂಪೆನಿಗಳು


ನಾಗ್ಪುರದ ಪಟನ್ಸೋಂಗಿ ಗ್ರಾಮದಲ್ಲಿ ಪ್ರತಿದಿನ 2.5 ಲಕ್ಷ ಲೀಟರ್ ಸಾಮರ್ಥ್ಯದ ಕಲ್ಲಿದ್ದಲು ನೀರ್ ಸಂಕಿರ್ಣ ಸ್ಥಾಪನೆ 

Posted On: 05 OCT 2021 3:19PM by PIB Bengaluru

ದೂರದ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಿಗಿಸುವಂತೆ ಪ್ರಧಾನಮಂತ್ರಿ ಅವರು ನೀಡಿದ ಸ್ಪಷ್ಟ ಕರೆಯ ಮೇರೆಗೆ ಕೋಲ್ ಇಂಡಿಯಾ ಲಿಮಿಟೆಡ್ [ಸಿಐಎಲ್] ಅಂಗ ಸಂಸ್ಥೆ ವೆಸ್ಟ್ರನ್ ಕೋಲ್ ಫೀಲ್ಡ್ ಲಿಮಿಟೆಡ್ [ಡಬ್ಲ್ಯೂಸಿಎಲ್] ಜನರ ಜೀವನದಲ್ಲಿ ಬದಲಾವಣೆ ತರುತ್ತಿದೆ. ಜತೆಗೆ ಗಣಿ ಪ್ರದೇಶದಿಂದ ಜನರ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸುತ್ತಿರುವುದಲ್ಲದೇ ಸ್ವ ಸಹಾಯ ಗುಂಪು [ಎಸ್.ಎಸ್.ಜಿ] ಕಾರ್ಯಕ್ರಮದಡಿ  ಗ್ರಾಮೀಣ ಮಹಿಳೆಯರಿಗೆ ಆದಾಯವನ್ನು ಸಹ ಒದಗಿಸುತ್ತಿದೆ. ಸಿಐಎಲ್ ಇತರೆ ಕಲ್ಲಿದ್ದಲು ಕಂಪೆನಿಗಳು ಸಮೀಪದ ಹಳ್ಳಿಗಳಿಗೆ ಗಣಿ ಪ್ರದೇಶಗಳಿಂದ ಮಹತ್ವಾಕಾಂಕ್ಷೆಯ ಕುಡಿಯುವ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಂಡಿದೆ.

Mine water supply for irrigation from Saoner to Borgaon, WCL

ಡಬ್ಲ್ಯೂಸಿಎಲ್ ಸಂಸ್ಥೆಯಿಂದ ಸೌನರ್ ನಿಂದ ಬೋರ್ಗಾಂವ್ ಗೆ  ನೀರಾವರಿ ಕಾರ್ಯಕ್ರಮದಡಿ ಗಣಿ ನೀರು ಪೂರೈಕೆ

ನಾಗ್ಪುರದಿಂದ 25 ಕಿಲೋಮೀಟರ್ ದೂರದಲ್ಲಿರುವ ಪಟನ್ಸೋಂಗಿ  ಗ್ರಾಮದಲ್ಲಿ ಡಬ್ಲ್ಯೂಸಿಎಲ್ ಸಮಗ್ರ ನೀರು ಶುದ್ಧೀಕರಣ ಮತ್ತು ಬಾಟೆಲ್ ಗಳ ಮೂಲಕ ನೀರು ಪೂರೈಸುವ ಕಲ್ಲಿದ್ದಲು ನೀರ್ ಸಂಕಿರ್ಣವನ್ನು ನಿರ್ಮಿಸಿದ್ದು, ಇದು ಪ್ರತಿದಿನ 2.5 ಲಕ್ಷ ಲೀಟರ್ ನೀರು ಒದಗಿಸುವ ಸಾಮರ್ಥ್ಯ ಹೊಂದಿದೆ.   ಐದು ಹಂತದಲ್ಲಿ ಆರ್. ತಂತ್ರಜ್ಞಾನದ ನೀರು ಶುದ್ದೀಕರಣ ಘಟಕ ಇದಾಗಿದ್ದು, ಪ್ರತಿಗಂಟೆಗೆ 10,000 ಲೀಟರ್ ನೀರು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರತಿದಿನ 15,000 ಬಾಟೆಲ್ ಗಳಿಗೆ ನೀರು ತುಂಬುವ ಘಟಕವೂ ಸಹ ಇದಾಗಿದೆ. ಪಟನ್ಸೋಂಗಿ ಸಮೀಪದ ಕಲ್ಲಿದ್ದಲು ಗಣಿಯ ಅಂತರ್ಜಲವನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ

ಡಬ್ಲ್ಯೂಸಿಎಲ್ ಪಟನ್ಸೋಂಗಿ ಗ್ರಾಮದ ಮಹಿಳಾ ಸ್ವಸಹಾಯ ಗುಂಪಿನ ಸಹಯೋಗದೊಂದಿಗೆ ಗ್ರಾಮಸ್ಥರ ಮನೆ ಬಾಗಿಲಿಗೆ 20 ಲೀಟರ್ ಶುದ್ಧೀಕರಿಸಿದ  ನೀರನ್ನು ಜಾಡಿಗಳ ಮೂಲಕ ಒದಗಿಸಲಾಗುತ್ತಿದೆ. ಪ್ರತಿ ನೀರಿನ ಜಾರ್ ಗೆ 5 ರೂಪಾಯಿ ದರ ನಿಗದಿಪಡಿಸಿದ್ದು, ಇದರಲ್ಲಿ 3 ರೂ ಎಸ್.ಎಚ್.ಜಿಗೆ ಉಳಿಯಲಿದೆ. ಇದರಿಂದ ಪ್ರತಿಯೊಬ್ಬ ಗ್ರಾಮಸ್ಥರು ಶುದ್ದೀಕರಿಸಿದ ನೀರು ಪಡೆಯುವ ಜತೆಗೆ ಗ್ರಾಮದ ಮಹಿಳೆಯರಿಗೆ ಆದಾಯ ಗಳಿಸುವ ಅವಕಾಶವೂ ಲಭಿಸಿದೆ. ಸಮೀಪದ 8 ಹಳ‍್ಳಿಗಳ ಸುಮಾರು 10,000 ಜನರಿಗೆ ಸೌಲಭ್ಯದಿಂದ ಅನುಕೂಲವಾಗುತ್ತಿದೆ ಮತ್ತು ಇತರೆ ಗ್ರಾಮಗಳ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಡಬ್ಲ್ಯೂಸಿಎಲ್ ನಿಂದ ಬಾಟೆಲ್ ಮೂಲಕ ಕೋಲ್ ನೀರು ಪೂರೈಕೆ

ಇದೇ ಮಾದರಿಯಲ್ಲಿ ಸಿಐಎಲ್ ನೊಂದಿಗೆ ಇತರೆ ಕಂಪೆನಿಗಳಾದ ಎಸ್.ಸಿ.ಸಿ.ಎಲ್ ಮತ್ತು ಎನ್.ಎಲ್.ಸಿ..ಎಲ್ ಗಣಿಯಲ್ಲಿರುವ ಹೆಚ್ಚುವರಿ ನೀರನ್ನು ಹಳ್ಳಿಗಳಿಗೆ ಒದಗಿಸುತ್ತಿದೆ ಮತ್ತು ತಮ್ಮ ಗಣಿ ವ್ಯಾಪ್ತಿಯಲ್ಲಿ ಗೃಹ ಬಳಕೆ ಜತೆಗೆ ನೀರಾವರಿ ಉದ್ದೇಶಕ್ಕೂ  ಸಹ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ಐದು ವರ್ಷಗಳ ಅವಧಿಗೆ 16.5 ಲಕ್ಷ ಜನರಿಗೆ ಕಲ್ಲಿದ್ದಲು ಕಂಪೆನಿಗಳ ಮೂಲಕ ಗೃಹ ಬಳಕೆ ಮತ್ತು ನೀರಾವರಿ ಉದ್ದೇಶಕ್ಕಾಗಿ ಸಮೀಪದ ಹಳ್ಳಿಗಳಿಗೆ 4,600 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ನೀರು ಪೂರೈಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಕಲ್ಲಿದ್ದಲು ಸಚಿವಾಲಯ ರೂಪಿಸಿದೆ.

ಕಲ್ಲಿದ್ದಲು ಹೊರ ತೆಗೆಯುವಾಗ ಭೂಮಿಯ ಮೇಲ್ಮೈನಿಂದ ನೀರು ಹೊರ ಬರಲಿದ್ದು, ಇದನ್ನು ಗಣಿಯಿಂದ ಹೊರ ಬರುವ ನೀರು ಎಂದು ಕರೆಯಲಾಗುತ್ತದೆ. ಇಂತಹ ನೀರನ್ನು ಕಲ್ಲಿದ್ದಲಿಗೆ ಸಿಂಪಡಣೆ ಮಾಡಲು, ತೊಳೆಯಲು, ಧೂಳು ತೆಗೆಯುವುದು ಸೇರಿದಂತೆ ಇತರೆ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ಬಳಕೆ ಮಾಡದ ನೀರನ್ನು ಹತ್ತಿರದ ಹೊಳೆಗಳಿಗೆ ಹರಿಸಲಾಗುತ್ತಿತ್ತು. ಬಳಕೆಯಾಗದ ಹೆಚ್ಚುವರಿ ನೀರನ್ನು ಡಬ್ಲ್ಯೂಸಿಎಲ್ ಮೊದಲ ಬಾರಿಗೆ ಗಣಿ ನೀರನ್ನು ನೀರಾವರಿ ಉದ್ದೇಶಕ್ಕಾಗಿ ಬಳಸುವ ಕಾರ್ಯಕ್ರಮವನ್ನು ಜಾರಿಗೆ ತಂದಿತು  ಮತ್ತು ನಂತರ ಇದನ್ನು ಶುದ್ದೀಕರಿಸಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಕೋಲ್ ನೀರ್ ಯೋಜನೆ ಜಾರಿಗೊಳಿಸಿತು.

ನಾವು ಕಲುಷಿತವಾದ ನೀರನ್ನು ದೂರದ ಊರುಗಳಿಂದ ತಂದು ಕುಡಿಯುವ ಉದ್ದೇಶಕ್ಕಾಗಿ ಬಳಸುತ್ತಿದ್ದೇವು. ಇದೀಗ ನಮ್ಮ ಮನೆ ಬಾಗಿಲಿಗೆ ಶುದ್ದ ಕುಡಿಯುವ ನೀರು ಲಭ್ಯವಿದ್ದು, ಇದು ನಮ್ಮ ಆರೋಗ್ಯ ಸುಧಾರಿಸಲು ಮತ್ತು ನಮ್ಮ ಬದುಕಿಗೆ ಆದಾಯ ಪಡೆಯಲು ಸಹಾಯ ಮಾಡಿದೆಎಂದು ರೋಹ್ನಾ ಗ್ರಾಮದ ಸರಪಂಚ ಉಜ್ವಲಲಾಂಡೆ ಹೇಳುತ್ತಾರೆ.   ಎಸ್.ಎಚ್.ಜಿ ಮೂಲಕ ಡಬ್ಲ್ಯೂ.ಸಿ.ಎಲ್ ನಮಗೆ ಜೀವನೋಪಾಯ ಒದಗಿಸಿದೆ ಎಂದು ಪಿಂಪ್ಲಾ ಗ್ರಾಮದ ರೋಷ್ನಿ ಉಧವ್ ಸಂತಸ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮಹಿಳಾ ಸಂಘ ಇದೀಗ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಸ್ಥಳೀಯ  ಗುಡಿ ಕೈಗಾರಿಕೆಯನ್ನು ಆರಂಭಿಸಿ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ. ಶುದ್ದೀಕರಿಸಿದ ನೀರಿನ ಬಳಕೆಯಿಂದ ಗ್ರಾಮಸ್ಥರ ಒಟ್ಟಾರೆ ಆರೋಗ್ಯ ಸುಧಾರಿಸಿದೆ ಮತ್ತು ಔಷಧದ ಮೇಲಿನ ವೆಚ್ಚ ಗಣನೀಯವಾಗಿ ಕಡಿಮೆ ಮಾಡಿದೆ.

***



(Release ID: 1761457) Visitor Counter : 196