ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
2021ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ಭಾರತ ಸರ್ಕಾರದಲ್ಲಿನ ಹಿಂಬಾಕಿಗಳ ವಿಲೇವಾರಿಗಾಗಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಿರುವ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
ಸಾರ್ವಜನಿಕ ಕುಂದುಕೊರತೆಗಳು, ಸಂಸತ್ ಸದಸ್ಯರುಗಳಿಂದ ಬಂದ ಉಲ್ಲೇಖಗಳು, ರಾಜ್ಯ ಸರ್ಕಾರಗಳು, ಅಂತರ ಸಚಿವಾಲಯ ಸಮಾಲೋಚನೆಗಳು ಮತ್ತು ಸಂಸದೀಯ ಭರವಸೆಗಳ ಸಕಾಲಿಕ ಮತ್ತು ಪರಿಣಾಮಕಾರಿ ವಿಲೇವಾರಿಯನ್ನು ಖಾತ್ರಿಪಡಿಸುವ ಗುರಿಯನ್ನುಈ ಅಭಿಯಾನ ಹೊಂದಿದೆ
Posted On:
30 SEP 2021 5:23PM by PIB Bengaluru
ಬಾಕಿ ಇರುವ ವಿಷಯಗಳ ವಿಲೇವಾರಿಗಾಗಿ ಪ್ರತಿ ಸಚಿವಾಲಯ/ ಇಲಾಖೆ ಮತ್ತು ಭಾರತ ಸರ್ಕಾರದ ಎಲ್ಲ ಸಂಪರ್ಕಿತ/ ಅಧೀನ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ 2021ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ವಿಶೇಷ ಅಭಿಯಾನ ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ನಿರ್ದೇಶನ ನೀಡಿದ್ದಾರೆ. ಪ್ರಧಾನಮಂತ್ರಿಯವರ ಕಚೇರಿ ಮತ್ತು ಸಂಪುಟ ಸಚಿವಾಲಯ ಕೂಡ ವಿಶೇಷ ಅಭಿಯಾನದಲ್ಲಿ ಭಾಗಿಯಾಗಲಿವೆ.
ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ (ಸ್ವ/ನಿ) ರಾಜ್ಯ ಸಚಿವ ಮತ್ತು ಭೂ ವಿಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು; ಪರಮಾಣು ಇಂಧನ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, 2021ರ ಅಕ್ಟೋಬರ್ 1ರಂದು ಅಭಿಯಾನಕ್ಕೆ ಚಾಲನೆ ನೀಡಿ, ಸಮರ್ಪಿತ ಪೋರ್ಟಲ್ ಅನ್ನು ಸಮರ್ಪಿಸಲಿದ್ದಾರೆ.
ಅಭಿಯಾನದ ಮೇಲ್ವಿಚಾರಣೆಗಾಗಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯನ್ನು ನೋಡಲ್ ಇಲಾಖೆ ಎಂದು ಹೆಸರಿಸಲಾಗಿದೆ. ಈ ನಿಟ್ಟಿನಲ್ಲಿ, ಡಿಎಆರ್.ಪಿಜಿ 2021ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ವಿಶೇಷ ಅಭಿಯಾನವನ್ನು ಪ್ರಾರಂಭಿಸುವ ಸಮಾರಂಭವನ್ನು ಆಯೋಜಿಸುತ್ತಿದೆ.
ಸಾರ್ವಜನಿಕ ಕುಂದುಕೊರತೆಗಳು, ಸಂಸತ್ ಸದಸ್ಯರುಗಳ ಉಲ್ಲೇಖಗಳು, ರಾಜ್ಯ ಸರ್ಕಾರಗಳು, ಅಂತರ ಸಚಿವಾಲಯ ಸಮಾಲೋಚನೆಗಳು ಮತ್ತು ಸಂಸದೀಯ ಭರವಸೆಗಳ ಸಕಾಲಿಕ ಮತ್ತು ಪರಿಣಾಮಕಾರಿ ವಿಲೇವಾರಿಯನ್ನು ಖಾತ್ರಿಪಡಿಸುವ ಗುರಿಯನ್ನು ಈ ವಿಶೇಷ ಅಭಿಯಾನ ಹೊಂದಿದೆ. ವಿಶೇಷ ಅಭಿಯಾನದ ಅವಧಿಯಲ್ಲಿ, ಗುರುತಿಸಲಾದ ಬಾಕಿ ಇರುವ ಉಲ್ಲೇಖಗಳನ್ನು ವಿಲೇವಾರಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬಹುದು ಎಂದು ಸರ್ಕಾರ ನಿರ್ದೇಶಿಸಿದೆ. ಅಲ್ಲದೆ, ಅಂತಹ ವಿಲೇವಾರಿಯ ಸಮಯದಲ್ಲಿ, ಅನುಸರಣಾ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಎಲ್ಲಿ ಸಾಧ್ಯವೋ ಅಲ್ಲಿ ಅನಗತ್ಯ ಕಾಗದಪತ್ರಗಳ ವ್ಯವಹಾರವನ್ನು ತೆಗೆದುಹಾಕುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಪ್ರಕ್ರಿಯೆಗಳನ್ನು ಪರಿಶೀಲಿಸಬಹುದು. ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆಯನ್ನು ಖಾತ್ರಿಪಡಿಸಲು ಮತ್ತು ಉತ್ತಮ ಕೆಲಸದ ವಾತಾವರಣವನ್ನು ರೂಪಿಸಲು ಸೂಚನೆಗಳನ್ನು ನೀಡಲಾಗಿದೆ; ದಾಖಲೆಗಳ ನಿರ್ವಹಣೆಯನ್ನು ಸುಧಾರಿಸಲು, ಕಾಗದಪತ್ರಗಳ ವಹಿವಾಟು ತೆಗೆದುಹಾಕಲು ಪರಿಶೀಲಿಸುವುದು. ಈ ವಿಶೇಷ ಅಭಿಯಾನದ ಸಮಯದಲ್ಲಿ, ತಾತ್ಕಾಲಿಕ ಸ್ವರೂಪದ ಕಡತಗಳನ್ನು ಗುರುತಿಸಬೇಕು ಮತ್ತು ಹಿಂದಿನ ಸೂಚನೆಗಳ ಪ್ರಕಾರ ವಿಲೇವಾರಿ ಮಾಡಬೇಕು. ಇದಲ್ಲದೆ, ಕೆಲಸದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಸುಧಾರಿಸಲು ಈ ಅಭಿಯಾನದ ಸಮಯದಲ್ಲಿ ಅನಗತ್ಯ ಸ್ಕ್ರ್ಯಾಪ್ ವಸ್ತು ಮತ್ತು ಹಳೆಯದಾದ ವಸ್ತುಗಳನ್ನು ತೆಗೆದು ಹಾಕಬಹುದು. ವಿಶೇಷ ಅಭಿಯಾನದ ಯಶಸ್ವಿ ನಡವಳಿಕೆಗಾಗಿ ಪ್ರತಿ ಸಚಿವಾಲಯ/ಇಲಾಖೆ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಶ್ರೇಣಿಯ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಪ್ರಗತಿಯನ್ನು ಕಾರ್ಯದರ್ಶಿಗಳು/ಎಚ್.ಒಡಿ ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಾರೆ. ಪ್ರಗತಿಯನ್ನು ನವೀಕರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸರ್ಕಾರದಲ್ಲಿ ಮೀಸಲಾದ ಪೋರ್ಟಲ್ ಅನ್ನೂ ರೂಪಿಸಲಾಗಿದೆ.
ವಿಶೇಷ ಅಭಿಯಾನದ ಪೂರ್ವಸಿದ್ಧತಾ ಹಂತವನ್ನು 2021ರ ಸೆಪ್ಟೆಂಬರ್ 13ರಿಂದ 2021ರ ಸೆಪ್ಟೆಂಬರ್ 30, ರವರೆಗೆ ನಡೆಸಲಾಯಿತು. ಪೂರ್ವಸಿದ್ಧತಾ ಹಂತದಲ್ಲಿ, ಸಚಿವಾಲಯಗಳು ಮತ್ತು ಇಲಾಖೆಗಳು ಬಾಕಿ ಇರುವ ಸ್ಥಿತಿಯನ್ನು ಗುರುತಿಸಿದವು. ಬಾಕಿ ಇರುವ ಸಾರ್ವಜನಿಕ ಕುಂದುಕೊರತೆಗಳ 2 ಲಕ್ಷ ಕ್ಕೂ ಹೆಚ್ಚು ಪ್ರಕರಣಗಳು ಮತ್ತು 2 ಲಕ್ಷ ಭೌತಿಕ ಕಡತಗಳನ್ನು ವಿಲೇವಾರಿ ಮಾಡಲು ಅಭಿಯಾನದಲ್ಲಿ ಗುರುತಿಸಲಾಗಿದೆ. ಸ್ವಚ್ಛತಾ ಅಭಿಯಾನವನ್ನು 1446 ಅಭಿಯಾನದ ತಾಣಗಳಲ್ಲಿ ಕೈಗೊಳ್ಳಲಾಗುವುದು ಮತ್ತು ಸರಳೀಕರಣಕ್ಕಾಗಿ 174 ನಿಯಮಗಳು/ ಪ್ರಕ್ರಿಯೆಗಳನ್ನು ಗುರುತಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳು ಮತ್ತು ಸಂಪರ್ಕಿತ ಅಧೀನ ಮತ್ತು ಸ್ವಾಯತ್ತ ಸಂಸ್ಥೆಗಳ ಹಲವಾರು ಇಲಾಖೆಯ ಮುಖ್ಯಸ್ಥರುಗಳ ಜೊತೆಗೆ ಅಭಿಯಾನದ ನಿಯೋಜಿತ ನೋಡಲ್ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
****
(Release ID: 1760173)
Visitor Counter : 294