ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಾಹಿತಿ ತಂತ್ರಜ್ಞಾನವನ್ನು ಸಕ್ರಿಯವಾಗಿ  ಬಳಸಬೇಕು: ಲೋಕಸಭಾ ಸ್ಪೀಕರ್

ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಹತ್ವಾಕಾಂಕ್ಷೆಯ ಮತ್ತು ನಿರಂತರ ಪ್ರಯತ್ನಗಳ ಅಗತ್ಯವಿದೆ: ಶ್ರೀ ಓಂ ಬಿರ್ಲಾ

"ಲಸಿಕೆ ನೀಡುವಿಕೆಯು  ಪ್ರವಾಸೋದ್ಯಮಕ್ಕೆ ಆತ್ಮವಿಶ್ವಾಸದ ಒಂದು ದೊಡ್ಡ ಚೈತನ್ಯವಾಗಿದೆ": ಪ್ರವಾಸೋದ್ಯಮ ಸಚಿವ, ಶ್ರೀ ಜಿ. ಕಿಶನ್ ರೆಡ್ಡಿ

ಪ್ರವಾಸೋದ್ಯಮವನ್ನು ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಅಭಿವೃದ್ಧಿಯ ಸಾಧನವಾಗಿ ಬಳಸುವುದು ಪ್ರಧಾನ ಮಂತ್ರಿಯವರ ದೂರದೃಷ್ಟಿಯಾಗಿದೆ. ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಪ್ರವಾಸೋದ್ಯಮದ ಸಾಮರ್ಥ್ಯವನ್ನು ಗಮನಿಸಿದರೆ ಕೆವಾಡಿಯಾ ಮಾದರಿಯನ್ನು ದೇಶಾದ್ಯಂತ ಅನುಕರಿಸಬಹುದು: ಶ್ರೀ ಕಿಶನ್ ರೆಡ್ಡಿ

ಪ್ರವಾಸೋದ್ಯಮ ಸಚಿವಾಲಯವು 'ನಿಧಿ 2.0' ಮತ್ತು 'ಭಾರತ ಪ್ರವಾಸೋದ್ಯಮ ಅಂಕಿಅಂಶಗಳು -  2021 ಒಂದು ನೋಟ’ ಅನ್ನು ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಆರಂಭಿಸಿದೆ

Posted On: 27 SEP 2021 5:26PM by PIB Bengaluru

ಮುಖ್ಯಾಂಶಗಳು

  • ಪ್ರವಾಸೋದ್ಯಮದ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸೊ ನಾಯಕ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
  • ಪ್ರವಾಸೋದ್ಯಮ ಸಚಿವಾಲಯ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯು ಎನ್ ಪಿ) ಮತ್ತು ಭಾರತದ ಜವಾಬ್ದಾರಿಯುತ ಪ್ರವಾಸೋದ್ಯಮ ಸಂಘ (ಆರ್ ಟಿ ಎಸ್ ) ಪ್ರವಾಸೋದ್ಯಮ ವಲಯದಲ್ಲಿ 'ಸುಸ್ಥಿರತೆ ಉಪಕ್ರಮ'ಗಳನ್ನು ಸಕ್ರಿಯವಾಗಿ ಉತ್ತೇಜಿಸಲು ಮತ್ತು ಬೆಂಬಲಿಸಲು  ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
  • ಲೋಕಸಭಾ ಸ್ಪೀಕರ್, ಶ್ರೀ ಓಂ ಬಿರ್ಲಾ, ಭಾರತ ಪ್ರವಾಸೋದ್ಯಮ ಸಚಿವಾಲಯವು ಇಂದು ಆಯೋಜಿಸಿದ್ದ "ಪ್ರವಾಸೋದ್ಯಮಕ್ಕಾಗಿ ಅಂತರ್ಗತ ಬೆಳವಣಿಗೆ" ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು, 2021 ವಿಶ್ವ ಪ್ರವಾಸೋದ್ಯಮ ದಿನ, 2021 ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಡೊನೆರ್ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಮತ್ತು ಪ್ರವಾಸೋದ್ಯಮದ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಸಹ ಸಮಾರಂಭದಲ್ಲಿ ಭಾಗವಹಿಸಿದರು ಮತ್ತು ವಿಶ್ವ ವ್ಯಾಪಾರ ಸಂಸ್ಥೆ ಪ್ರಧಾನ ಕಾರ್ಯದರ್ಶಿ, ಶ್ರೀ ಝುರಾಬ್ ಪೊಲೊಲಿಕಾಶ್ವಿಲಿಯವರ ವೀಡಿಯೋ ಸಂದೇಶವನ್ನು ಸಹ ತೋರಿಸಲಾಯಿತು. ಪ್ರವಾಸೋದ್ಯಮ ಸಚಿವ ಶ್ರೀ ಅರವಿಂದ ಸಿಂಗ್;

ಪ್ರವಾಸೋದ್ಯಮ ಮಹಾನಿರ್ದೇಶಕ, ಶ್ರೀ ಕಮಲ ವರ್ಧನ್ ರಾವ್, ಯುಎನ್ಇಪಿ ಮುಖ್ಯಸ್ಥ, ಅತುಲ್ ಬಗೈ, ಪ್ರವಾಸೋದ್ಯಮ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಪ್ರವಾಸ ಮತ್ತು ಆತಿಥ್ಯ ಉದ್ಯಮದ ಪ್ರತಿನಿಧಿಗಳು  ಸಂದರ್ಭದಲ್ಲಿ ಮಾತನಾಡಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಿರ್ಲಾ, ಕೋವಿಡ್ ನಂತರ, ಪ್ರವಾಸೋದ್ಯಮ ಕ್ಷೇತ್ರವು ಭಾರತದಲ್ಲಿ ವೇಗವಾಗಿ ಪುನರುಜ್ಜೀವನಗೊಳ್ಳುತ್ತಿದೆ ಎಂದು ಹೇಳಿದರು. ಬದ್ಧತೆ ಮತ್ತು ಸಾಮೂಹಿಕ ಪ್ರಯತ್ನಗಳು ಭಾರತವು ವಿಶ್ವದ ಅತ್ಯುತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. "ನಾವು ಕೋವಿಡ್-19 ಅನ್ನು ಒಟ್ಟಾಗಿ ಎದುರಿಸಿದ ರೀತಿ, ನಮ್ಮ ಸಾಮೂಹಿಕ ಶಕ್ತಿ ಮತ್ತು ಸಂಘಟಿತ ಪ್ರಯತ್ನಗಳು ನಮ್ಮ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ" ಎಂದು ಶ್ರೀ ಬಿರ್ಲಾ ಹೇಳಿದರು. ಪ್ರವಾಸೋದ್ಯಮವು ಆರ್ಥಿಕತೆ ಮತ್ತು ಉದ್ಯೋಗದ ಬೆಳವಣಿಗೆಯ ಎಂಜಿನ್ ಗಳಲ್ಲಿ ಒಂದಾಗಿದೆ. ಆದ್ದರಿಂದ, ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ವಿಶೇಷ ಗಮನ ಅಗತ್ಯ ಎಂದು ಅವರು ಹೇಳಿದರು.

ಭಾರತದ ವಿಶಾಲ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆ ಹೇಳುತ್ತಾ ಶ್ರೀ ಬಿರ್ಲಾ ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯಮಯ ಭೌಗೋಳಿಕತೆಯು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಹೇಳಿದರು. ಭಾರತದಲ್ಲಿ ಪರಿಸರ, ಆಧ್ಯಾತ್ಮಿಕ, ಶಿಕ್ಷಣ ಮತ್ತು ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪ್ರಚಂಡ ಸಾಮರ್ಥ್ಯವಿದೆ. ಭಾರತದ ದೇಶೀಯ ಮತ್ತು ವಿದೇಶಾಂಗ ನೀತಿಯು ಪ್ರವಾಸೋದ್ಯಮವನ್ನು ಉತ್ತೇಜಿಸಲು ಅನುಕೂಲಕರ ವಾತಾವರಣವನ್ನು ಒದಗಿಸಿದೆ. ಭಾರತವನ್ನು ಪ್ರವಾಸಿ ತಾಣವನ್ನಾಗಿ ಮಾಡುವುದು ನಮ್ಮ ಗುರಿಯಾಗಬೇಕು. ನಿಟ್ಟಿನಲ್ಲಿ, ಪ್ರವಾಸಿ ಸ್ನೇಹಿ ತಾಣಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಹೆಚ್ಚು ಪ್ರಯತ್ನಗಳನ್ನು ಮಾಡಬೇಕು ಎಂದು ಸ್ಪೀಕರ್ ತಿಳಿಸಿದರು. ಶ್ರೀ ಬಿರ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮಾಹಿತಿ ತಂತ್ರಜ್ಞಾನದ  ಬಳಕೆಗೆ ಒತ್ತು ನೀಡಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಮಾರ್ಗಸೂಚಿಯ ಬಗ್ಗೆ   ಮಾತನಾಡಿದ ಶ್ರೀ ಬಿರ್ಲಾ, ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಹತ್ವಾಕಾಂಕ್ಷೆಯ ಮತ್ತು ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ಸಲಹೆ ನೀಡಿದರು. ಇದು ಕರಕುಶಲ ವಸ್ತುಗಳು ಮತ್ತು ಇತರ ಗ್ರಾಮೀಣ ಉತ್ಪನ್ನಗಳಿಗೆ ಬೇಡಿಕೆಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ. ಅಂತೆಯೇ, ಇನ್ನೂ ರಹಸ್ಯವಾಗಿರುವ ಪ್ರವಾಸಿ ತಾಣಗಳನ್ನು ಭಾರತದ ಪ್ರವಾಸೋದ್ಯಮ ಭೂಪಟದಲ್ಲಿ ತರಬೇಕು ಇದರಿಂದ ತಾಣಗಳ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಯುತ್ತದೆ ಎಂದು ಅವರು ಸಲಹೆ ನೀಡಿದರು.

ಸಂದರ್ಭದಲ್ಲಿ, ಶ್ರೀ ಬಿರ್ಲಾ ಅವರು ನಿಧಿ 2.0 (ಆತಿಥ್ಯ  ಉದ್ಯಮಗಳ ಮಾಹಿತಿ) ಕ್ಕೆ ಚಾಲನೆ ನೀಡಿದರು ಮತ್ತು "ಭಾರತ ಪ್ರವಾಸೋದ್ಯಮ ಅಂಕಿಅಂಶಗಳು: 2021 ಒಂದು ನೋಟಪುಸ್ತಕವನ್ನು ಬಿಡುಗಡೆ ಮಾಡಿದರು. ಇಂದು ಬಿಡುಗಡೆಯಾದ ನಿಧಿ 2.0 ದತ್ತಾಂಶ ಸಂಚಯವು ಪ್ರಯತ್ನದಲ್ಲಿ ಒಂದು ಮೈಲಿಗಲ್ಲು ಆಗಲಿದೆ ಎಂದು ಆಶಿಸಿದರು. ಪ್ರವಾಸೋದ್ಯಮ ಸಚಿವಾಲಯ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯು ಎನ್ ಪಿ) ಮತ್ತು ಭಾರತದ ಜವಾಬ್ದಾರಿಯುತ ಪ್ರವಾಸೋದ್ಯಮ ಸಂಘ (ಆರ್ ಟಿ ಎಸ್ ) ಪ್ರವಾಸೋದ್ಯಮ ವಲಯದಲ್ಲಿ 'ಸುಸ್ಥಿರತೆ ಉಪಕ್ರಮಗಳನ್ನು' ಸಕ್ರಿಯವಾಗಿ ಉತ್ತೇಜಿಸಲು ಮತ್ತು ಬೆಂಬಲಿಸಲು ಒಂದು ಒಪ್ಪಂದಕ್ಕೆ ಸಹಿ ಹಾಕಿವೆ, ಇದನ್ನು ಕಾರ್ಯಕ್ರಮದಲ್ಲಿ ವಿನಿಮಯ ಮಾಡಲಾಯಿತು.

ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, " ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸೋದ್ಯಮ ಕ್ಷೇತ್ರವು ಬಹಳಷ್ಟು ನಷ್ಟವನ್ನು ಅನುಭವಿಸಿದೆ ಮತ್ತು ಪ್ರವಾಸೋದ್ಯಮದ ಪುನರಾರಂಭವು ಇದರ ಚೇತರಿಕೆ ಮತ್ತು ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. " ಎಂದು ಹೇಳಿದರು.  "ಇಲ್ಲಿಯವರೆಗೆ, ಭಾರತವು ಈಗಾಗಲೇ ತನ್ನ ನಾಗರಿಕರಿಗೆ 85 ಕೋಟಿಗೂ ಹೆಚ್ಚು ಲಸಿಕೆ ಹಾಕಿದೆಪ್ರಸ್ತುತ ವೇಗವಾಗಿ ಲಸಿಕೆ ನೀಡುವ ತಂತ್ರದೊಂದಿಗೆ, ನಾವು ಈಗ ಹೊಸ ವರ್ಷದ ಆರಂಭದಲ್ಲಿ ದೇಶವನ್ನು ಪ್ರವಾಸೋದ್ಯಮಕ್ಕೆ ಪುನಃ ತೆರೆಯುವ ಹಂತಕ್ಕೆ ಹತ್ತಿರವಾಗಿದ್ದೇವೆ. ಶ್ರೀ ರೆಡ್ಡಿ ಅವರು ಲಸಿಕೆಯ ಮೇಲೆ ನಿರಂತರವಾಗಿ ಗಮನ ಹರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಸಚಿವರು ಸಚಿವಾಲಯದ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು "ಆತಿಥ್ಯ ಉದ್ಯಮದ ರಾಷ್ಟ್ರೀಯ ಸಮಗ್ರ ದತ್ತಾಂಶ ಸಂಚಯ (ನಿಧಿ)"  ವು ದೇಶದಲ್ಲಿ ವಸತಿ ಗೃಹ ಘಟಕಗಳನ್ನು ನೋಂದಾಯಿಸಲು ಇರುವ ಸಚಿವಾಲಯದ ಪೋರ್ಟಲ್ ಆಗಿದ್ದು, ಇದರಲ್ಲಿ  ಇಲ್ಲಿಯವರೆಗೆ 44,024 ಘಟಕಗಳನ್ನು ನೋಂದಾಯಿಸಲಾಗಿದೆ, ಇದನ್ನು 08.06.2020 ರಂದು ಆರಂಭಿಸಲಾಯಿತು.” ಎಂದು ಹೇಳಿದರು.

ಶ್ರೀರೆಡ್ಡಿ ಹೇಳಿದರು, "ಪ್ರಧಾನ ಮಂತ್ರಿಯವರ ದೃಷ್ಟಿಕೋನವು ಪ್ರವಾಸೋದ್ಯಮವನ್ನು ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಅಭಿವೃದ್ಧಿಗೆ ಒಂದು ಸಾಧನವಾಗಿ ಬಳಸುವುದಾಗಿದೆ". ಪ್ರವಾಸೋದ್ಯಮ ವಲಯವು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ವಲಯಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಅದೇ ದಿನ ಇದಕ್ಕೂ ಮೊದಲು ಸಚಿವರು ಒಂದು ಪ್ರಮುಖ ಸುದ್ದಿ ದಿನಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು, ಅದು ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಕ್ಷೇತ್ರದ ಮಹತ್ವವನ್ನು ಎತ್ತಿ ತೋರಿಸಿದೆ. ಸಚಿವರು ಇದನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವರು ತಮ್ಮ ಲೇಖನದಲ್ಲಿ 10 ಲಕ್ಷ ರೂಪಾಯಿಗಳ ಹೂಡಿಕೆಗೆ ಪ್ರವಾಸೋದ್ಯಮವು 78 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ". ಲೇಖನವು ಪ್ರವಾಸೋದ್ಯಮದ ಕೆವಾಡಿಯಾ ಮಾದರಿಯನ್ನು ಎತ್ತಿ ತೋರಿಸಿದೆ. ಏಕತೆಯ ಪ್ರತಿಮೆ ಸ್ಟಾಚೂ ಆಫ್ ಲಿಬರ್ಟಿಯ ನಿರ್ಮಾಣವು ಕೆವಾಡಿಯಾನ್‌ಗೆ ವಿಶ್ವ ಭೂಪಟವನ್ನು ಹೇಗೆ 100 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸ್ಥಳೀಯ ಸಮುದಾಯಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರದೇಶದಲ್ಲಿ ಸಮಗ್ರ ಸುಸ್ಥಿರ ಬೆಳವಣಿಗೆಯನ್ನು ಒದಗಿಸಿತು ಎಂದು ಸಚಿವರು ಬರೆದಿದ್ದಾರೆ. ಭಾರತವು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿವೆಭಾರತದ ಪಶ್ಚಿಮ ತೀರದಲ್ಲಿರುವ ಸೋಮನಾಥದಿಂದ ಪೂರ್ವ ಭಾಗದಲ್ಲಿ ಕಾಜಿರಂಗದವರೆಗೆ, 10 ಪರಿಸರ ಸ್ನೇಹಿ ಬ್ಲೂ ಫ್ಲಾಗ್  ಕಡಲತೀರಗಳು, ಅಪಾರ ನೈಸರ್ಗಿಕ ಸೌಂದರ್ಯ ಮತ್ತು ವನ್ಯಜೀವಿ ಅಭಯಾರಣ್ಯಗಳು, ಅಸಂಖ್ಯಾತ ಅಮೂರ್ತ ಸಾಂಸ್ಕೃತಿಕ ಪರಂಪರೆ ಹಬ್ಬಗಳ ರೂಪ, ಮತ್ತು ಪ್ರದರ್ಶನ ಕಲೆಗಳು ಇವೆ ಇವುಗಳಲ್ಲಿ ಪ್ರತಿಯೊಂದೂ ಪ್ರಪಂಚದಾದ್ಯಂತದ ಜನರು ಸಂತೋಷದಿಂದ ಭೇಟಿ ನೀಡಲು ಮತ್ತು ಅನ್ವೇಷಿಸಲು ಇಷ್ಟಪಡುವ ತಾಣಗಳಾಗಿವೆ. ಆದ್ದರಿಂದ, ಸ್ಥಳಗಳ ಸುತ್ತಲೂ ಪ್ರವಾಸೋದ್ಯಮ ಕ್ಲಸ್ಟರ್‌ಗಳನ್ನು ನಿರ್ಮಿಸಲು ನಮಗೆ ಅವಕಾಶವಿದೆ, ಕೆವಾಡಿಯಾದಲ್ಲಿ ಸಾಧಿಸಿದಂತೆಯೇ, ಸ್ಥಳೀಯ ಸಮುದಾಯಗಳು ಪ್ರಯೋಜನ ಪಡೆಯಬಹುದು.

ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸೊ ನಾಯಕ್ ಅವರು ತಮ್ಮ ಭಾಷಣದಲ್ಲಿ, ಪ್ರವಾಸೋದ್ಯಮದ ಪುನರುಜ್ಜೀವನವು ಜಾಗತಿಕ ಆರ್ಥಿಕತೆಯ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಪರಿಸರ, ಆರ್ಥಿಕತೆ ಮತ್ತು ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ಆರ್ಥಿಕತೆಗಳ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಮೇಲೆ ಅದರ ಪರಿಣಾಮಗಳಿಗಾಗಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪ್ರವಾಸೋದ್ಯಮ ಸಮರ್ಥನೀಯತೆಯು ಪ್ರಸ್ತುತವಾಗಿದೆ. ಜವಾಬ್ದಾರಿಯುತ ಪ್ರವಾಸೋದ್ಯಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಪ್ರವಾಸೋದ್ಯಮವು ಸ್ಥಳೀಯ ಸಮುದಾಯದ ಆತಿಥ್ಯ ಉದ್ಯಮ ಮತ್ತು ಸರ್ಕಾರಿ ಇಲಾಖೆಗಳೊಂದಿಗೆ ಉನ್ನತಿ ಮತ್ತು ಒಳಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉಳಿಸಿಕೊಂಡು ಪ್ರದೇಶದ ಜನರ ಸಬಲೀಕರಣ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಶ್ರೀ ನಾಯಕ್ ಹೇಳಿದರು. ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟವನ್ನು ತುಂಬಲು  ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಚಿವಾಲಯವು ವಿವರವಾದ ಕಾರ್ಯತಂತ್ರವನ್ನು ಯೋಜಿಸಿದೆ ಎಂದು ಅವರು ಮಾಹಿತಿ ನೀಡಿದರು.

ಯುಎನ್.ಡಬ್ಲ್ಯುಟಿಒನ ಪ್ರಧಾನ ಕಾರ್ಯದರ್ಶಿ ಝರಾಬ್ ಪೊಲೊಲಿಕಾಶ್ವಿಲಿ ತಮ್ಮ ವಿಡಿಯೋ ಸಂದೇಶದಲ್ಲಿ, ಪ್ರವಾಸೋದ್ಯಮವು ನಮ್ಮ ಸಮಾಜವು ಸಾಂಕ್ರಾಮಿಕದ ಪರಿಣಾಮದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದು ಹೆಚ್ಚು ಅಗತ್ಯವಿರುವವರಿಗೆ ಭರವಸೆಯನ್ನು ನೀಡುತ್ತದೆ ಎಂದು ಹೇಳಿದರು. ಪ್ರಪಂಚದ ಅನೇಕ ಭಾಗಗಳಲ್ಲಿ, ಪ್ರವಾಸೋದ್ಯಮವು ನಿಧಾನವಾಗಿ ಆರಂಭವಾಗಿದೆ ಮತ್ತು ಪ್ರವಾಸೋದ್ಯಮದ ಬೆಳವಣಿಗೆಯು ದೊಡ್ಡ ವಿಮಾನಯಾನ ಸಂಸ್ಥೆಗಳಿಂದ ಸಣ್ಣ ಕುಟುಂಬದ ವ್ಯವಹಾರಗಳವರೆಗೆ ಮತ್ತು ದೊಡ್ಡ ನಗರಗಳಿಂದ ಬಡ ಸಮುದಾಯದವರೆಗಿನ ಪ್ರತಿಯೊಂದು ವಲಯಕ್ಕೂ ಪ್ರಯೋಜನವನ್ನು ನೀಡಬೇಕು. ನಮ್ಮ ಮಾತಿನ ಅರ್ಥವೆಂದರೆನಾವು ಯಾರನ್ನೂ ಹಿಂದೆ ಬಿಡುವುದಿಲ್ಲ ಎಂದು    "ಭವಿಷ್ಯದಲ್ಲಿ ಮುಂದುವರೆಯುವುದು, ಒಳಗೊಳ್ಳುವ ನಿರ್ಧಾರಗಳು ನಮ್ಮ ಕ್ಷೇತ್ರದ ಬೆಳವಣಿಗೆಗೆ ಪ್ರಮುಖವಾಗಿರುತ್ತದೆ" ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಕಾರ್ಯದರ್ಶಿ   ಅರವಿಂದ್ ಸಿಂಗ್ ಅವರು, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸೋದ್ಯಮ ಸಚಿವಾಲಯವು ಪುನರುಜ್ಜೀವನಗೊಳಿಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ವಿಶೇಷವಾಗಿ ದೇಶೀಯ ಪ್ರವಾಸೋದ್ಯಮದ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ತ್ವರಿತವಾಗಿ ಪುನರುಜ್ಜೀವನಗೊಳಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮದ ಪಾಲುದಾರರು ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು, ಬೆಂಬಲಿಸಲು ಮತ್ತು ಪರಿಹಾರಗಳನ್ನು ರೂಪಿಸಲು  ಸಚಿವಾಲಯವು ರಾಜ್ಯಗಳೊಂದಿಗೆ ನಿಯಮಿತವಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.

ಭಾರತೀಯ ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಘದ ಒಕ್ಕೂಟದ ಶ್ರೀಮತಿ ಜ್ಯೋತಿ ಮೇಯಲ್; (ಆರ್ ಟಿ ಎಸ್ ) ಸ್ಥಾಪಕ ಸದಸ್ಯ ಮತ್ತು ಗೌರವಾಧ್ಯಕ್ಷರಾದ ಶ್ರೀ ರಾಕೇಶ್ ಮಾಥುರ್ ಮತ್ತು ಯು ಎನ್ ಪಿ, ಭಾರತದ  ಮುಖ್ಯಸ್ಥರಾದ ಶ್ರೀ ಅತುಲ್ ಬಗೈ ಅವರು ಸಹ ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಹೇಗೆ ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಕಟ್ಟ ಕಡೆಯ ವ್ಯಕ್ತಿಗೆ ಲಾಭದಾಯಕವಾದ ಜವಾಬ್ದಾರಿಯುತ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು

***(Release ID: 1758996) Visitor Counter : 123