ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ಆಜಾ಼ದಿ@75: ಸ್ವಚ್ಚ ಸರ್ವೇಕ್ಷಣ್ 2022 ಅನಾವರಣ: “ಪೀಪಲ್ ಫಸ್ಟ್ “ ಮೂಲ ಆಶಯದೊಂದಿಗೆ ಪ್ರಾರಂಭ


ವಿಶ್ವದ ಅತಿದೊಡ್ಡ ನಗರ ಸ್ವಚ್ಛತೆಯ ಸಮೀಕ್ಷೆಯ ಆವೃತ್ತಿ ನೃರ್ಮಲ್ಯ ಕಾರ್ಮಿಕರ ಕಲ್ಯಾಣದ ಮೇಲೆ ಕೇಂದ್ರೀಕೃತ

ನಗರ ಮೌಲ್ಯಮಾಪನದಲ್ಲಿ ಯುವ ಸಮುದಾಯ ಮತ್ತು ಹಿರಿಯ ನಾಗರಿಕರ ಧ್ವನಿಗಳು ನಿರ್ಧಾರಿತ ಅಂಶಗಳು

Posted On: 27 SEP 2021 3:48PM by PIB Bengaluru

ಜಗತ್ತಿನ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆಯನ್ನು ಸ್ವಚ್ಛ ಭಾರತ ಅಭಿಯಾನ ನಗರ [ಎಸ್.ಬಿ.ಎಂ-ಯು] ವಿಭಾಗದಿಂದ ಕೈಗೊಳ್ಳುತ್ತಿದ್ದು, ಸತತ ಏಳನೇ ಸ್ವಚ್ಛ ಸರ್ವೇಕ್ಷಣೆ[ಎಸ್.ಎಸ್.] ಆವೃತ್ತಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ [ಎಂ..ಎಚ್.ಯು.] ಶ್ರೀ ಹರ್ದೀಪ್ ಸಿಂಗ್ ಪುರಿ ಇಂದು ಆರಂಭಿಸಿದರು.

ಸ್ವಚ್ಛ ಸರ್ವೇಕ್ಷಣ್ 2022 ರಲ್ಲಿಪೀಪಲ್ಸ್ ಫಸ್ಟ್ಅನ್ನು ಅದರ ಚಲನಶೀಲ ತತ್ವದಂತೆ ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ ಮಂಚೂಣಿಯ ನೈರ್ಮಲ್ಯ ಕಾರ್ಮಿಕರ ಒಟ್ಟಾರೆ ಕಲ್ಯಾಣ ಮತ್ತು ಯೋಗ ಕ್ಷೇಮಕ್ಕೆ ಒತ್ತು ನೀಡಲಾಗಿದೆಆಜಾ಼ದಿ@75 ಸ್ಫೂರ್ತಿಯ ಪರಿಮಳದೊಂದಿಗೆ ಸಮೀಕ್ಷೆಯು ಹಿರಿಯ ನಾಗರಿಕರು ಯುವ ಸಮುದಾಯದ ಧ್ವನಿಗಳಿಗೆ ಆದ್ಯತೆ ನೀಡಲಿದೆ. ಭಾರತದ ನಗರ ಸ್ವಚ್ಛತೆಯನ್ನು ಎತ್ತಿ ಹಿಡಿಯುವ ಮತ್ತು ಪಾಲ್ಗೊಳ್ಳುವಿಕೆಯನ್ನು ಇದು ಬಲಪಡಿಸುತ್ತದೆ.  

ಹಠಾತ್ ಎದುರಾದ ಸಾಂಕ್ರಾಮಿಕದ ಆಕ್ರಮಣದಿಂದ ಸಾರ್ವಜನಿಕ ಆರೋಗ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಕ್ಷೇತ್ರಗಳಲ್ಲಿ ಅಭೂತಪೂರ್ವ ಸವಾಲುಗಳನ್ನು ತಂದೊಡ್ಡಿದೆ. ಆದಾಗ್ಯೂ ಸಮಯದಲ್ಲಿ ಭಾರತದ ನಗರ ಪ್ರದೇಶವನ್ನು ಸುರಕ್ಷಿತವಾಗಿಡಲು ನೈರ್ಮಲ್ಯ ಕಾರ್ಮಿಕರು ಅವಿರತವಾಗಿ ಕರ್ತವ್ಯ ಪ್ರಜ್ಞೆ ಮೆರೆದಿದ್ದು ಎದ್ದು ಕಾಣುತ್ತದೆ. ನೈರ್ಮಲ್ಯ ಕಾರ್ಮಿಕರ ಮೌನ ಸೇನೆ ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸುವ ಮತ್ತು ಗೌರವಿಸುವ ಹಾಗೂ ಅವರ ಸಮಗ್ರ ಕಲ್ಯಾಣದ ಮೇಲೆ ಸರ್ಕಾರ ಮತ್ತೊಮ್ಮೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುವಂತಾಗಿದೆ. ನಗರ ಭಾರತದ ನೈರ್ಮಲ್ಯ ಪಯಣದಲ್ಲಿ ಮಂಚೂಣಿ ಸೇನಾನಿಗಳ ಜೀವನೋಪಾಯ ಮತ್ತು ಕೆಲಸದ ವಾತಾವರಣವನ್ನು ಸುಧಾರಿಸಲು ನಗರಗಳನ್ನು ಪ್ರರೇಪಿಸುವ ನಿರ್ದಿಷ್ಟ ಸೂಚಕಗಳು ಎಸ್ಎಸ್ 2022 ವರದಿಯಲ್ಲಿದೆ.

ಭಾರತ ಸ್ವಾತಂತ್ರ್ಯ ಪಡೆದ 75 ನೇ ವರ್ಷದ ಸಂಭ್ರಮಾಚರಣೆಯ ಪ್ರಾರಂಭದೊಂದಿಗೆ ವಿಶ‍್ವದ ಅತಿದೊಡ್ಡ ನಗರ ನೈರ್ಮಲ್ಯ ಸಮೀಕ್ಷೆಯ ಏಳನೇ ಆವೃತ್ತಿ ಸಾಂಕೇತಿಕವಾಗಿದೆ. ಆಜಾ಼ದಿ@75 ವಿಷಯಕ್ಕೆ ಅನುಗುಣವಾಗಿ ಮತ್ತು ಹಿರಿಯ ನಾಗರಿಕರಿಂದ ಪ್ರತಿಕ್ರಿಯೆ ಪಡೆದುಕೊಳ್ಳುವ ಗುರಿಯನ್ನು ಇದು ಹೊಂದಿದೆಧ್ವನಿಗಳ ವೈವಿದ್ಯತೆಯನ್ನು ಖಚಿತಪಡಿಸಿಕೊಂಡು ಎಸ್ಎಸ್ 2022 ವರದಿ ದೇಶದ ಭವಿಷ್ಯದ ನಾಯಕರು ಮತ್ತು ಸ್ವಚ್ಛತಾ ಚಳವಳಿಯ ಯುವ ಸಮೂಹವನ್ನು ತಲುಪುತ್ತದೆ. ಹೆಚ್ಚುವರಿಯಾಗಿ ಸಮೀಕ್ಷೆ ಭಾರತದ ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯ ರಕ್ಷಣೆಯ ಉದ್ದೇಶ ಹೊಂದಿದ್ದು, ನಾಗರಿಕರು ನಗರ ಭಾರತದ ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳನ್ನು ಸ್ವಚ್ಛಗೊಳಿಸುವಂತೆ ಸಮೀಕ್ಷೆ ಸಲಹೆ ಮಾಡಿದೆ.

ಪೀಪಲ್ಸ್ ಫಸ್ಟ್, ಎಸ್.ಬಿ.ಎಂ-ಯು ಅಡಿ ಜನ ಕೇಂದ್ರೀತ ಚಟುವಟಿಕೆ ಭಾಗವಾಗಿ  ವಾರಪೂರ್ತಿ ಆಜಾ಼ದಿ ಕಾ ಅಮೃತ್ ಮಹೋತ್ಸವ್ ನಡಿಜನ್ ಭಾಗೀದಾರಿದ್ಯೇಯದೊಂದಿಗೆ ಸಾಪ್ತಾಹ ಆಚರಿಸಲಾಗುತ್ತಿದೆ. ಸಪ್ತಾಹದಲ್ಲಿ ಭಾರತದ ನಗರ ಭಾಗದ ನಾಗರಿಕರೊಂದಿಗೆ ಸ್ವಚ್ಛತೆ ಕುರಿತಾದ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಕಾರಗೊಳಿಸಲು ಆದ್ಯತೆ ನೀಡಲಾಗುತ್ತಿದೆ.  “ ತ್ಯಾಜ್ಯವನ್ನು ಪ್ರತ್ಯೇಕಿಸಿಎಂಬ ಉದ್ದೇಶದಿಂದ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಯ ಅಭ್ಯಾಸ ಬಲಪಡಿಸುವ ಗುರಿಯನ್ನು ಅಭಿಯಾನ ಹೊಂದಿದೆ. ಇದರ ಜತೆಗೆ ನಗರ ಪ್ರದೇಶಗಳಲ್ಲಿತ್ಯಾಜ್ಯದಿಂದ ಸಂಪತ್ತುಎಂಬ ಘೋಷಣೆಯಡಿ ನಗರ ಕೇಂದ್ರಿತ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳು [ಯು.ಎಲ್.ಬಿಗಳು] ಮತ್ತು ಸಮುದಾಯ ಸಂಘಟನೆಗಳು ಹಾಗೂ ನಗರದ ನಾಗರಿಕರು, ತ್ಯಾಜ್ಯ ನಿರ್ವಹಣೆ ಮಾಡುವ ಉದ್ದಿಮೆದಾರರು, ವಸತಿ ಕ್ಷೇಮಾಭಿವೃದ್ಧಿ ಸಂಘಟನೆಗಳು [ಆರ್.ಡಬ್ಲ್ಯೂ.ಎಗಳು], ಸರ್ಕಾರೇತರ ಸಂಘಟನೆಗಳ[ಎನ್.ಜಿ.ಒಗಳು]ನ್ನು ಗೌರವಿಸುವ ಕಾರ್ಯ ಸಾಪ್ತಾಹದಲ್ಲಿ ನಡೆಯಲಿದೆ. ಕೋವಿಡ್ 19 ವಿರುದ್ಧ ಮಂಚೂಣಿಯಲ್ಲಿ ನಿಂತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ನೈರ್ಮಲ್ಯ ಕಾರ್ಯಕರ್ತರಿಗೆ ವಂದನೆ ಸಲ್ಲಿಸುವ ವಿಶೇಷ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನೈರ್ಮಲ್ಯ ವಲಯದಲ್ಲಿ ಸಾರ್ವತ್ರಿಕ ಮೂಲ ಸೌಕರ್ಯ ಮತ್ತು ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ಜತೆಗೆ ನಾಗರಿಕ ಕೇಂದ್ರೀತವಾಗಿ ನಿರಂತರ ಅಭಿಯಾನಗಳನ್ನು ನಡೆಸುವುದು ಇದರ ಉದ್ದೇಶವಾಗಿದೆ ನಿಟ್ಟಿನಲ್ಲಿಸಾರ್ವಜನಿಕ ಶೌಚಾಲಯಸಫಾಯಿ ಕರ್ಮಚಾರಿಗಳ ಜನ ಭಾಗೀದಾರಿ ಉತ್ಸವವನ್ನು ಆಚರಿಸುತ್ತಿದ್ದು, ಇದರ ಮೂಲಕ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಗುಣಮಟ್ಟ ಕಾಪಾಡುವ ಹಾಗೂ ಭವಿಷ್ಯದಲ್ಲಿ ಸುಧಾರಣೆ  ತರುವ ಕುರಿತು ನಾಗರಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.   

2016 ರಲ್ಲಿ ಎಂ.ಎಚ್.ಯು. ಸಚಿವಾಲಯ 73 ನಗರಗಳಿಗೆ ಸ್ವಚ್ಛತಾ ಮಾನದಂಡಗಳ ಆಧಾರದ ಮೇಲೆ ಶ್ರೇಯಾಂಕ ನೀಡುವ ಮೂಲಕ ಸ್ವಚ್ಛತಾ ಸರ್ವೇಕ್ಷಣ್ ಆರಂಭಿಸಿತ್ತು. ಇಂದು 4,000ಕ್ಕೂ ಹೆಚ್ಚು ನಗರಗಳಲ್ಲಿ ಜಗತ್ತಿನ ಅತಿ ದೊಡ್ಡ ಸ್ವಚ್ಛತಾ ಸಮೀಕ್ಷೆ ನಡೆಸುತ್ತಿದೆ. ವರ್ಷಗಳು ಕಳೆದಂತೆ ಸರ್ವೇಕ್ಷಣಾ ಚೌಕಟ್ಟು ವಿಕಸನಗೊಂಡಿದ್ದು, ಇದು ನೈರ್ಮಲ್ಯ ಫಲಿತಾಂಶಗಳನ್ನು ಸಾಧಿಸಲು, ತಳಮಟ್ಟದ ಅನುಷ್ಠಾನವನ್ನು ವೇಗಗೊಳಿಸುವ ಅನನ್ಯ ನಿರ್ವಹಣಾ ಸಾಧನವಾಗಿ ಮಾರ್ಪಟ್ಟಿದೆ. ವಾಸ್ತವವಾಗಿ ಸಾಂಕ್ರಾಮಿಕದ ಸವಾಲುಗಳ ನಡುವೆಯೂ 2021 ಎಸ್.ಎಸ್. ಸಮೀಕ್ಷೆ ದಾಖಲೆ ಸಮಯದಲ್ಲಿ ಮಾಡಲಾಗಿದೆ ಮತ್ತು ಮತ್ತೊಮ್ಮೆ  “ಸಂಪೂರ್ಣ ಸ್ವಚ್ಛತಾಮಾಲೀಕರಾದ ಐದು ಕೋಟಿ ನಾಗರಿಕರಿಂದ ದಾಖಲೆ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ನಗರಗಳು ಈಗ ಉತ್ಸುಕತೆಯಿಂದ ಫಲಿತಾಂಶಗಳಿಗಾಗಿ ಕಾಯುತ್ತಿವೆ ಮತ್ತು ಇದನ್ನು ಸಚಿವಾಲಯ ಶೀಘ್ರದಲ್ಲೇ ಪ್ರಕಟಿಸಲಿದೆ.

ವರ್ಷದ ಸರ್ವೇಕ್ಷಣೆ 15 ಸಾವಿರ ಮತ್ತು 15 ರಿಂದ 25 ಸಾವಿರ ನಡುವೆ ಎರಡು ಜನಸಂಖ್ಯೆ ವರ್ಗಗಳನ್ನು ಪರಿಚಯಿಸುವ ಮೂಲಕ ಸಣ‍್ಣ ನಗರಗಳಿಗೆ ಒಂದು ಸಣ್ಣ ಸಮತಟ್ಟಾದ ವೇದಿಕೆ ಸೃಷ್ಟಿಸಲು ಬದ್ಧವಾಗಿದೆ. ಸರ್ವೇಕ್ಷಣದ ಹೆಜ್ಜೆ ಗುರುತುಗಳ ವಲಯದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಶ್ರೇಯಾಂಕ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಸಮೀಕ್ಷೆಯ ವ್ಯಾಪ್ತಿಯನ್ನು ಈಗ 100 ವಾರ್ಡ್ ಗಳಿಗೆ ವಿಸ್ತರಣೆ ಮಾಡಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಾರಿ ವ್ಯಾಪ್ತಿ ಶೇ 40 ರಷ್ಟು ಹೆಚ್ಚಾಗಿದೆ. ಮುಂದುವರಿದಂತೆ ಮಹತ್ವಾಕಾಂಕ್ಷೆಯ ಕಸರತ್ತಿನಲ್ಲಿ 2022 ಎಸ್ಎಸ್ ನಲ್ಲಿ ಎರಡು ಪಟ್ಟು ಮೌಲ್ಯಮಾಪಕರನ್ನು ತಳಮಟ್ಟದಲ್ಲಿ ನಿಯೋಜಿಸಲಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿಯವರ ಡಿಜಿಟಲ್ ಇಂಡಿಯಾ ದೃಷ್ಟಿಕೋನದಂತೆ ಮುಂಬರುವ ಸಮೀಕ್ಷೆಯ ಆವೃತ್ತಿಗಳು ಡಿಜಿಟಲ್ ಮೂಲಕ ದಾಖಲೆಗಳ ಜಾಡು ಪತ್ತೆ ಮಾಡಲಿದೆ. ನೈರ್ಮಲ್ಯದ ಜಿಯೋ ಟ್ಯಾಗಿಂಗ್ ಮತ್ತು ಕ್ಯೂ ಆರ್ ಕೋಡ್ ಆಧಾರಿತ ನಾಗರಿಕರ ಪ್ರತಿಕ್ರಿಯೆ ಪಡೆಯುವ ಜತೆಗೆ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ. ಬಹುಮುಖಿ ಉಪಕ್ರಮಗಳ ಮೂಲಕ ಎಸ್ಎಸ್ 2022 ಚೌಕಟ್ಟು ಅತ್ಯುತ್ತಮ ಸಂಪನ್ಮೂಲ ಸಂಗ್ರಹದ ಮೂಲಕ ವೃತ್ತಾಕಾರದ ಕಡೆಗೆ ಅಭಿಯಾನವನ್ನು ಕೊಂಡೊಯ್ಯಲಾಗುತ್ತಿದೆ.

ಸಮಾರಂಭದಲ್ಲಿ ಮಾತನಾಡಿದ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಸ್ವಚ್ಛ ಬಾರತ ಅಭಿಯಾನ ಮಹತ್ವದ್ದು ಮತ್ತು ದೇಶವನ್ನು ಪರಿವರ್ತನೆಯತ್ತ ಕೊಂಡೊಯ್ಯುತ್ತಿದೆ. ತಳಮಟ್ಟದ ಎಲ್ಲಾ ಪಾಲುದಾರರು ಪಾಲ್ಗೊಳ್ಳುವ ಮೂಲಕ ಯಶಸ್ಸು ಸಾಧಿಸಿದೆ. ಗೌರವಾನ್ವಿತ ಪ್ರಧಾನಮಂತ್ರಿ ಅವರು ಮಹಾತ್ಮಾ ಗಾಂಧಿ ಅವರ ದೃಷ್ಟಿಕೋನವನ್ನು ವಾಸ್ತವದಿಂದ ಪರಿವರ್ತಿಸುವ ವೇಗವರ್ಧಿತ ಅಭಿಯಾನ ಇದಾಗಿದೆ. ಯಶಸ್ಸಿನ ಪಥ ಸುಲಭವಾಗಿಲ್ಲ ಎಂದು ಹೇಳಿದ ಸಚಿವರು, ನಾವೀಗ ಬಯಲು ಶೌಚಮುಕ್ತವಷ್ಟೇ ಅಲ್ಲದೇ ಘನ ತ್ಯಾಜ್ಯ ನಿರ್ವಹಣೆ ವಲಯದಲ್ಲೂ ಯಶಸ್ಸು ಕಂಡಿದ್ದೇವೆ. ಭಾರತದಾದ್ಯಂತ ನಾಗರಿಕರು ಆಂದೋಲನದಲ್ಲಿ ಭಾಗಿಯಾಗಿದ್ದಾರೆ  ಮತ್ತು ಇದು ಬಲಿಷ್ಠದಿಂದ ಬಲಿಷ್ಠವಾಗುತ್ತಿದೆ. ಅಕ್ಟೋಬರ್ 1 ರಂದು ಪ್ರಧಾನಮಂತ್ರಿ ಅವರು ಸ್ವಚ್ಛ ಭಾರತ ಅಭಿಯಾನ 2.0 ಮತ್ತು ಅಮೃತ್ 2.0 ಆರಂಭಿಸಲಿದ್ದಾರೆ ಎಂದು ಸಚಿವರು ಹೇಳಿದರು. ಎಸ್.ಬಿ.ಎಂ 2.0 ದಿಂದ ನಮ್ಮ ನಗರಗಳು ಜಗತ್ತಿನಲ್ಲೇ ಅತ್ಯುತ್ತಮ ನಗರಗಳಾಗಿ ಹೊರ ಹೊಮ್ಮಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂ..ಎಚ್.ಯು. ರಾಜ್ಯ ಸಚಿವ ಶ್ರೀ ಕೌಶಲ್ ಕಿಶೋರ್ ಮಾತನಾಡಿ, ಸ್ವಚ್ಛ ಭಾರತ ಅಭಿಯಾನಕ್ಕೆ ಜನರ ಬೆಂಬಲ ದೊರೆತಿದೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದೆ. ಅಭಿಯಾನದಿಂದ ಸ್ವಚ್ಛತೆಯ ಜಾಗೃತಿ ಮೂಡಿದ ಪರಿಣಾಮ ಎದುರಾದ ಸಾಂಕ್ರಾಮಿಕವನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಲು ಸಹಾಯವಾಗಿದೆ ಎಂದು ಹೇಳಿದರು.

ಸಫಾಯಿ ಕರ್ಮಚಾರಿಗಳು ಕೊರೋನಾ ಸೇನಾನಿಗಳಾಗಿದ್ದಾರೆ ಮತ್ತು ಸರ್ಕಾರ ಅವರ ಹಿತಾಸಕ್ತಿಯ ಕಡೆ ಗಮನಕೊಟ್ಟಿದೆ. ಎಲ್ಲಾ ಉಪಕ್ರಮಗಳಲ್ಲಿ ನಾಗರಿಕರು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು ಮತ್ತು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

2022 ಎಸ್ಎಸ್ ಜತೆಗೆ ಎಂ.ಎಚ್.ಯು. ಚೇಂಜ್ ಆಫ‍್ ಹಾರ್ಟ್ಎಂಬ ಹೆಸರಿನ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕದಲ್ಲಿ ವ್ಯಕ್ತಿಗಳು, ಸಮುದಾಯಗಳ ಯಶೋಗಾಥೆಗಳು, ಭಾರತದ ನಗರ ಭಾಗದ ಸ್ವಚ್ಛತಾ ಅಧ್ಯಾಯದಲ್ಲಿ ಬದಲಾವಣೆಗೆ ಚಾಲನೆ ನೀಡುವ ಜನರ ಆಸಕ್ತಿ ಮತ್ತು ಬದ್ಧತೆಯನ್ನು ಅನಾವರಣಗೊಳಿಸಿದೆ.   ಸ್ವಚ್ಛ ಭಾರತದ ಅಭಿಯಾನದಲ್ಲಿ ಕಳೆದ ಏಳು ವರ್ಷಗಳಲ್ಲಿನ ಸ್ವಚ್ಛತಾ ಯಾನವನ್ನು ಪ್ರತಿಬಿಂಬಿಸುವಸ್ವಚ್ಛತಾ ಸೆ ಸಮೃದ್ಧಿಎಂಬ ಹೆಸರಿನ ಕಿರು ಚಿತ್ರವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ಎಸ್ಎಸ್ 2022 ಜತೆಗೆ ಎಂ..ಎಚ್.ಯು. ನಿಂದ ಸಫಾಯಿ ಕರ್ಮಚಾರಿಗಳ ಸುರಕ್ಷತೆ ಕುರಿತ ಕ್ಷೇತ್ರ ಮೌಲ್ಯಮಾಪನದ ಸವಾಲು ಕುರಿತ ಅಭಿಯಾನ ಒಂದು ವರ್ಷದ ಹಿಂದೆ ಆರಂಭಿಸಲಾಗಿತ್ತು. ಎಂ..ಎಚ್.ಯು. ಸವಾಲು ಮತ್ತೊಂದು ಉಪಕ್ರಮವಾಗಿದ್ದು, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ವಲಯದಲ್ಲಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸಾಗದೆ. ಅವರ ಕೆಲಸ ಪ್ರತಿನಿತ್ಯ ಸುರಕ್ಷತಾ ಕಾಳಜಿ ವಿರುದ್ಧ ಹೋರಾಟ ಮಾಡುವುದನ್ನು ಒಳಗೊಂಡಿದೆ. ಸವಾಲು ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ನಲ್ಲಿನ ಕಾರ್ಯಾಚರಣೆಯನ್ನು ಯಾಂತ್ರೀಕರಣಗೊಳಿಸುವ ಮತ್ತು ಕಾರ್ಮಿಕರಿಗೆ ವೈಯಕ್ತಿಕ ರಕ್ಷಣಾ ಸಾಧನ [ಪಿಪಿಇ] ಮತ್ತು ಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ಒದಗಿಸುವ ಜೊತೆಗೆ ಅನಿವಾರ್ಯ ಸಂದರ್ಭಗಳಲ್ಲಿ ಸುರಕ್ಷತೆಯೊಂದಿಗೆ ಯಂತ್ರಗಳಿಲ್ಲದೇ ಕಾರ್ಯನಿರ್ವಹಿಸುವ ಪರಿಸರವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಒಂದು ವರ್ಷದ ಕಸರತ್ತಿನಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ, ಹಸಿರು ಉದ್ಯೋಗಗಳಿಗಾಗಿ ವಲಯ ಕೌಶಲ್ಯ ಮಂಡಳಿಯ ಸಹಭಾಗಿತ್ವದಡಿ 8,500 ಕ್ಕೂ ಹೆಚ್ಚು ಸಾಮರ್ಥ್ಯ ವೃದ್ಧಿಗೆ ಇದು ನೆರವಾಗಿದೆ ಮತ್ತು ಸ್ವಚ್ಛಗೊಳಿಸುವ ಸಲಕರಣೆಗಳ ಖರೀದಿ, ಸಫಾಯಿ ಮಿತ್ರರ ಸಾಲ ಸೌಲಭ್ಯ ವಲಯದಲ್ಲಿ 8.51 ಕೋಟಿ ರೂಪಾಯಿ ವಿತರಿಸುವ ಮೂಲಕ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ಇದು ಸಹಕಾರಿಯಾಗಿದೆ.

2016 ರಲ್ಲಿ ಎಂ..ಎಚ್.ಯು. ಪರಿಚಯಿಸಿದ ಡಿಜಿಟಲ್ ನೈರ್ಮಲ್ಯ ಕುಂದುಕೊರತೆ ಪರಿಹಾರ ವೇದಿಕೆಯಾದ ಸ್ವಚ್ಛತಾ ಆ್ಯಪ್ ಪರಿಷ್ಕೃತ ಆವೃತ್ತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಆ್ಯಪ್ ಮೂಲಕ 2 ಕೋಟಿಗೂ ಹೆಚ್ಚು ಕುಂದುಕೊರತೆ ದೂರುಗಳನ್ನು ಬಗೆಹರಿಸಲಾಗಿದೆ. ಹೊಸ ಆವೃತ್ತಿಯ ಆ್ಯಪ್ ಮೂಲಕ ಸಾರ್ವಜನಿಕ ಮೂತ್ರಾಲಯಗಳನ್ನು ಪತ್ತೆ ಮಾಡಲು ಸಹಕಾರಿಯಾಗಿದೆ. ಆ್ಯಪ್ ಮೂಲಕ ಸಾರ್ವಜನಿಕ ಶೌಚಾಲಯದ ಶ್ರೇಯಾಂಕವನ್ನು ಸಹ ನೋಡಬಹುದಾಗಿದೆಕಸ ಮತ್ತು ಸಾರ್ವಜನಿಕ ನೈರ್ಮಲ್ಯ ಪ್ರಗತಿ ಮೌಲ್ಯ ಮಾಪನ ಮಾಡಲು ಇದರಿಂದ ಸಹಕಾರಿಯಾಗಲಿದೆ

ಕಾರ್ಯಕ್ರಮವನ್ನು ವೆಬ್ ಕಾಸ್ಟ್ ಮಾಡಲಾಗಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ರಾಜ್ಯ, ನಗರ ಮತ್ತು ವಲಯ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಎಂ..ಎಚ್.ಯು. ರಾಜ್ಯ ಸಚಿವ ಶ‍್ರೀ ಕೌಶಲ್ ಕಿಶೋರ್ಎಂ..ಎಚ್.ಯು. ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ಮತ್ತಿತರ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಹಾಗೂ ಇತರೆ ಪಾಲುದಾರರು ಪಾಲ್ಗೊಂಡಿದ್ದರು.

ಕಳೆದ ಏಳು ವರ್ಷಗಳಲ್ಲಿ ಅಭಿಯಾನ ದೇಶದ ಎಲ್ಲಾ ಮೂಲೆಗಳಿಗೆ ತಲುಪಿದೆ ಮತ್ತುಪೀಪಲ್ ಫಸ್ಟ್ಉದ್ದೇಶದೊಂದಿಗೆ ಅಸಂಖ್ಯಾತ ನಾಗರಿಕರ ಬದುಕಿನಲ್ಲಿ ಬದಲಾವಣೆ ತಂದಿದೆ. ಭಾರತದ ನಗರ ಭಾಗದಲ್ಲಿ ನೈರ್ಮಲ್ಯ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದು, 70 ಲಕ್ಷಕ್ಕೂ ಹೆಚ್ಚು ಸಮುದಾಯ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಿಳೆಯರು, ಲಿಂಗತ್ವ ಅಲ್ಪ ಸಂಖ್ಯಾತರು, ವಿಶೇಷ ಚೇತನರ [ದಿವ್ಯಾಂಗರು] ಬದುಕಿನ ಆದ್ಯತೆಗಳಲ್ಲಿ ಬದಲಾವಣೆ ತಂದಿದೆ.

ಯಾನವನ್ನು ಮುಂದುವರೆಸುತ್ತಾ ನೈರ್ಮಲ್ಯ ಅಭಿಯಾನ ಸುಸ್ಥಿರ ಹಾದಿಯಲ್ಲಿ ಸಾಗಿದ್ದು, ಕ್ರಮವಾಗಿ 3,000 ನಗರಗಳು ಮತ್ತು 750 ನಗರಗಳು .ಡಿ.ಎಫ್+ ಹಾಗೂ  .ಡಿ.ಎಫ‍್ ++ ಸಾಧಿಸಿದೆ. ನಗರಗಳ  ನೀರು + ಪ್ರಾಮಾಣೀಕರಣದ ಕಡೆಗೆ ಸಾಗುತ್ತಿದೆ. ಇದು ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಅದರ ಅತ್ಯುತ್ತಮ ಮರು ಬಳಕೆಯನ್ನು ಇದು ಒಳಗೊಂಡಿದೆ.

ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಮೇಲಿನ ಒತ್ತಡ ಭಾರತದಲ್ಲಿ ತ್ಯಾಜ್ಯ ಸಂಸ್ಕರಣೆಯ ಪ್ರಮಾಣ 2014 ರಲ್ಲಿ ಶೇ 18 ರಷ್ಟು ಇತ್ತು. ಇದೀಗ ಶೇ 70ಕ್ಕೆ ಏರಿಕೆಯಾಗಿದೆ. ಶೇ 97 ರಷ್ಟು ವಾರ್ಡ್ ಗಳಲ್ಲಿ ಶೇ 100 ರಷ್ಟು ಮನೆ ಮನೆಗಳಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಶೇ 85 ರಷ್ಟು ವಾರ್ಡ್ ಗಳಲ್ಲಿ ನಾಗರಿಕರ ಪರಿಶ್ರಮದಿಂದ ಶೇ 85 ರಷ್ಟು ತ್ಯಾಜ್ಯ ಬೇರ್ಪಡಿಸುವ ಅಭ್ಯಾಸ ರೂಢಿಸಿಕೊಳ್ಳಲಾಗಿದೆ. ಹೆಚ್ಚು ಮುಖ್ಯವಾಗಿ ಅಭಿಯಾನ ಕಾರ್ಮಿಕರು ಮತ್ತು ಅನೌಪಚಾರಿಕ ತ್ಯಾಜ್ಯ ಕಾರ್ಮಿಕರ ಜೀವನದಲ್ಲಿ ಗಮನಾರ್ಹ ಬದಲಾವಣೆ ತರಲು ಸಹಕಾರಿಯಾಗಿದೆ. 20 ಕೋಟಿ ನಾಗರಿಕರು [ ಭಾರತದ ನಗರ ಪ್ರದೇಶಗಳ ಜನಸಂಖ್ಯೆಯಲ್ಲಿ ಶೇ 50 ರಷ್ಟು] ಸಕ್ರಿಯವಾಗಿ ಅಭಿಯಾನದಲ್ಲಿ ಪಾಲ್ಗೊಳ‍್ಳುತ್ತಿದ್ದು, ಇದರ ಪ್ರಗತಿಯಿಂದ ಜನರ ನಿಜವಾದ ಆಂದೋಲನದಲ್ಲಿ ಯಶಸ್ವಿಯಾದ ಪರಿವರ್ತನೆ ತರಲಾಗಿದೆ. ಎಸ್ಎಸ್ 2022 ಪ್ರಾರಂಭ ಮಿಷನ್ ಮುಂದಿನ ಹಂತವನ್ನು ಆರಂಭಿಸಲು ವೇದಿಕೆಯನ್ನು ನಿರ್ಮಿಸಿದ್ದು, ಇದರ ಮೂಲ ತತ್ವವೆಂದರೆ ಪೀಪಲ್ ಫಸ್ಟ್ ಆಗಿದೆ.

ಇಂದು ಬಿಡುಗಡೆ ಮಾಡಿದ ಎಲ್ಲಾ ದಾಖಲೆಗಳು ಜಾಲತಾಣದಲ್ಲಿ ಲಭ್ಯವಿದೆwww.swachhbharaturban.gov.in

ನಿರಂತರ ಪರಿಷ್ಕೃತ ಮಾಹಿತಿಗಾಗಿ ಸ್ವಚ್ಛ ಭಾರತ ಅಭಿಯಾನದ ಸಾಮಾಜಿಕ ಜಾಲತಾಣ ವೀಕ್ಷಿಸುವಂತೆ ಕೋರಲಾಗಿದೆ.

Facebook Swachh Bharat Mission - Urban | Twitter - @SwachhBharatGov ನಿರ್ಮಿಸಿದ್ದು, ಇದರ ಮೂಲ ತತ್ವವೆಂದರೆ ಪೀಪಲ್ ಫಸ್ಟ್ ಆಗಿದೆ.

ಇಂದು ಬಿಡುಗಡೆ ಮಾಡಿದ ಎಲ್ಲಾ ದಾಖಲೆಗಳು ಜಾಲತಾಣದಲ್ಲಿ ಲಭ್ಯವಿದೆwww.swachhbharaturban.gov.in

ನಿರಂತರ ಪರಿಷ್ಕೃತ ಮಾಹಿತಿಗಾಗಿ ಸ್ವಚ್ಛ ಭಾರತ ಅಭಿಯಾನದ ಸಾಮಾಜಿಕ ಜಾಲತಾಣ ವೀಕ್ಷಿಸುವಂತೆ ಕೋರಲಾಗಿದೆ.

Facebook Swachh Bharat Mission - Urban | Twitter - @SwachhBharatGov

***


(Release ID: 1758994) Visitor Counter : 536