ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಛರಾರ್-ಎ-ಷರೀಫ್ ನಲ್ಲಿ 11.30 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಸ್ಥಾಪಿಸಲಾದ ಉಪ ಜಿಲ್ಲಾ ಆಸ್ಪತ್ರೆಯನ್ನು ಉದ್ಘಾಟಿಸಿದ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್


ಛರಾರ್-ಎ-ಷರೀಫ್ ನಿಂದ ಬಾಟಪೋರಾ ಹಪ್ರೋವರೆಗೆ ಸ್ಥಳೀಯ ಸಂಪರ್ಕವನ್ನು ಸುಧಾರಿಸಲು ರಸ್ತೆಯ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ ನೆರವೇರಿಸಿದ ಶ್ರೀ ರಾಜೀವ್ ಚಂದ್ರಶೇಖರ್

ಬುದ್ಗಾಂ ಜಿಲ್ಲೆಯಲ್ಲಿ ನಡೆದಿರುವ ಮತ್ತು ಯೋಜಿತ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಚಿವರು

‘ದಿಲ್ ಕಿ ದೂರಿ ಮತ್ತು ದಿಲ್ಲಿ ಕಿ ದೂರಿ’ ನಿವಾರಿಸುವ ಪ್ರಧಾನಮಂತ್ರಿಯವರ ಕರೆಯಂತೆ ಜೆ ಮತ್ತು ಕೆ ಜನರೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಲಾಗಿದೆ’’:ಶ್ರೀ ರಾಜೀವ್ ಚಂದ್ರಶೇಖರ್

Posted On: 27 SEP 2021 5:41PM by PIB Bengaluru

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಜಮ್ಮು ಕಾಶ್ಮೀರದ 2 ದಿನಗಳ ಅಧಿಕೃತ ಪ್ರವಾಸದ ವೇಳೆ ಶ್ರೀನಗರ, ಬುದ್ಗಾಂ ಮತ್ತು ಬಾರಾಮುಲ್ಲಾಗಳಿಗೆ ಭೇಟಿ ನೀಡಿದ್ದರು. ಈ ಭೇಟಿ ಭಾರತ ಸರ್ಕಾರ ಆರಂಭಿಸಿರುವ ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿದ್ದು, ಇದರಲ್ಲಿ ಬಹುತೇಕ 70 ಕೇಂದ್ರ ಸಚಿವರು ಕೇಂದ್ರಾಡಳಿತ ಪ್ರದೇಸ ಜಮ್ಮು ಮತ್ತು ಕಾಶ್ಮೀರಕ್ಕೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಭೇಟಿ ನೀಡುತ್ತಿದ್ದಾರೆ. ಇದು ತಳಮಟ್ಟದಲ್ಲಿ ಜನರನ್ನು ಸಂಪರ್ಕಿಸುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಕೇಂದ್ರ ಸರ್ಕಾರಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯ ಗುರಿಯನ್ನು ಹೊಂದಿದೆ.

ಈ ಭೇಟಿಯ ವೇಳೆ ಶ್ರೀ ಚಂದ್ರಶೇಖರ್ ಬುದ್ಗಾಮ್ ಜಿಲ್ಲೆಯಲ್ಲಿ ಮೂಲಸೌಕರ್ಯ ಯೋಜನೆಯನ್ನು ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳು, ಬುಡಕಟ್ಟು ಜನರು, ಪಿ.ಆರ್.ಐಗಳು ಮತ್ತು ಇತರರನ್ನು ಭೇಟಿ ಮಾಡಿದರು ಹಾಗೂ ಬುದ್ಗಾಂ ಜಿಲ್ಲಾಡಳಿತದೊಂದಿಗೆ ಪ್ರಸ್ತುತ ನಡೆಯುತ್ತಿರುವ 790 ಕೋಟಿ ರೂಪಾಯಿಗಳ ಮೌಲ್ಯದ ಅಭಿವೃದ್ಧಿ ಕಾರ್ಯಕ್ರಮಗಳ ವೇಗದ ಬಗ್ಗೆ ತಿಳಿಯಲು ಪ್ರಗತಿ ಪರಿಶೀಲನೆ ನಡೆಸಿದರು. ಅವರು ವಿವಿಧ ವರ್ಗದ ಅದರೆ ವಿದ್ಯಾರ್ಥಿಗಳು,ರೈತರು, ತೋಟದ ಬೆಳೆಗಾರರು, ಬುಡಕಟ್ಟು ಜನರು, ಪಿಆರ್.ಐ.ಗಳು, ಕೌಶಲ್ಯತರಬೇತಿ ಪಡೆಯುತ್ತಿರುವವರು, ವ್ಯಾಪಾರಿಗಳ ಒಕ್ಕೂಟ ಮತ್ತು ಹಣ್ಣು ಬೆಳೆಗಾರರ ಸಂಘದ ಸದಸ್ಯರು, ಯುವ ಕ್ಲಬ್ ಗಳ ಸದಸ್ಯರು ಮತ್ತಿತರರನ್ನು ಬುದ್ಗಾಂ ಜಿಲ್ಲೆಯಲ್ಲಿ ಭೇಟಿ ಮಾಡಿದರು. ಅವರೆಲ್ಲರ ಆಕಾಂಕ್ಷೆ ಮತ್ತು ನಿರೀಕ್ಷೆಗಳ ಬಗ್ಗೆ ತಿಳಿಯಲು ಜಿಲ್ಲಾಡಳಿತದ ಅಧಿಕಾರಗಳ ಸಮ್ಮುಖದಲ್ಲಿ ಸಂವಾದ ನಡೆಸಿದರು. 

ಸಂವಾದದ ಬಳಿಕ, ಶ್ರೀ ಚಂದ್ರಶೇಖರ್, ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದ ಬಗ್ಗೆ ಮಾತನಾಡಿ, “ದಿಲ್ ಕಿ ದೂರಿ ಮತ್ತು ದಿಲ್ಲಿ ಕಿ ದೂರಿ’ ನಿವಾರಿಸುವ ಪ್ರಧಾನಮಂತ್ರಿಯವರ ಕರೆಯಂತೆ ಜೆ ಮತ್ತು ಕೆ ಜನರೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಇದು ಜಮ್ಮು ಕಾಶ್ಮೀರದ ಇತಿಹಾಸದಲ್ಲಿ ಅಭೂತಪೂರ್ವ ಪ್ರಮಾಣದಲ್ಲಿ ಸರ್ಕಾರದ ಬೃಹತ್ ಜನಸಂಪರ್ಕ ಕಾರ್ಯಕ್ರಮಕ್ಕೆ ಕಾರಣವಾಗಿದೆ” ಎಂದರು. 2019ರ ಅಕ್ಟೋಬರ್ ಗೆ ಮುನ್ನ ಜಮ್ಮು ಮತ್ತು ಕಾಶ್ಮೀರಕ್ಕೆ ಒಬ್ಬ ಸಚಿವರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಈಗ 7 ಸಚಿವರು ಹಗಲಿರುಳು ಜಮ್ಮು ಮತ್ತು ಕಾಶ್ಮೀರದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ” ಎಂದರು. 

ಶ್ರೀ ಚಂದ್ರಶೇಖರ್ ಅವರು ಬಾರಾಮುಲ್ಲಾದ ಮಿರ್ಗುಂದ್ ಪಟ್ಟಣದಲ್ಲಿರುವ ಸಾಂಪ್ರದಾಯಿಕ ಕರಕುಶಲ ಗುಚ್ಛಕ್ಕೆ ಭೇಟಿ ನೀಡಿದರು, ಅಲ್ಲಿ ಅವರಿಗೆ ಕರಕುಶಲ ಮತ್ತು ಕಾರ್ಪೆಟ್ ವಲಯದ ಕೌಶಲ ಮಂಡಳಿಯ ಸಿಇಒ ವಲಯದ ಬೆಳವಣಿಗೆ ಮತ್ತು ಭವಿಷ್ಯದ ಬಗ್ಗೆ ವಿವರಿಸಿದರು. ಅವರು ನಡೆಯುತ್ತಿರುವ ತರಬೇತಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು ಮತ್ತು ಸಾಂಪ್ರದಾಯಿಕ ಕೌಶಲ್ಯ ಮತ್ತು ಕರಕುಶಲವನ್ನು ಬೆಂಬಲಿಸಲು ನರೇಂದ್ರ ಮೋದಿ ಸರ್ಕಾರದ ಬದ್ಧತೆಯ ಬಗ್ಗೆ ಪ್ರತಿಯೊಬ್ಬರನ್ನು ಪ್ರಶಂಸಿಸಿದರು. ಅವರು ಬುದ್ಗಾಂ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮತ್ತು ಪಾರಂಪರಿಕ ಕರಕುಶಲ ವಸ್ತು ಉತ್ತೇಜಿಸುವ ಗುರಿ ಹೊಂದಿರುವ ಮತ್ತು ಅವರ ಉತ್ತಮ ಉದ್ಯೋಗಾವಕಾಶಗಳಿಗಾಗಿ ಕೈಗಾರಿಕೆಯೊಂದಿಗೆ ಸಂಪರ್ಕಿಸುವ ಕೌಶಲ್ಯಾಭಿವೃದ್ಧಿ ಕುರಿತ ನೂತನ ಪ್ರಾಯೋಗಿಕ ಕಾರ್ಯಕ್ರಮವನ್ನೂ ಪ್ರಕಟಿಸಿದರು. ತರಬೇತಿ ನಿರತರು ಮತ್ತು ಕೌಶಲ್ಯ ಮಂಡಳಿಯ ಇತರ ಬಾಧ್ಯಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, “ಈ ಕರಕುಶಲ ವಸ್ತುಗಳ ರಫ್ತನ್ನು ಪ್ರಸಕ್ತ ಇರುವ ಮೌಲ್ಯಕ್ಕಿಂತ 10ಪಟ್ಟು ಹೆಚ್ಚಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಮತ್ತು ಇಲ್ಲಿರುವ ಸ್ಥಳೀಯ ಯುವಜನರ ಅಪಾರ ಪ್ರತಿಭೆ ಮತ್ತು ಕೌಶಲ್ಯ ನೋಡುತ್ತಿದ್ದರೆ, ಇದನ್ನು ಸಾಧಿಸಲು ಸಾಧ್ಯ ಎಂದರು.

ಸಚಿವರು ತಮ್ಮ 2 ದಿನಗಳ ಪ್ರವಾಸವನ್ನು ಪವಿತ್ರ ಸ್ಥಳ ಹಜರತ್ ಶೇಕ್ ಉಲ್ ಅಲಂಗೆ ಭೇಟಿ ನೀಡುವುದರೊಂದಿಗೆ ಆರಂಭಿಸಿದರು. ಅವರು ಛರಾರ್-ಎ-ಷರೀಫ್ ನಲ್ಲಿ 11.30 ಕೋಟಿ ರೂ. ಯೋಜನಾ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಉಪ ಜಿಲ್ಲಾ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಆಸ್ಪತ್ರೆಯು ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಛರಾರ್-ಎ-ಷರೀಫ್ ಮತ್ತು ಹತ್ತಿರದ ಹಳ್ಳಿಗಳು ಮತ್ತು ಪಟ್ಟಣದ ಜನರಿಗೆ ಒದಗಿಸಲಿದೆ. ಇದೇ ವೇಳೆ ಅವರು ಸ್ಥಳೀಯ ಸಂಪರ್ಕದ ಸುಧಾರಣೆಗಾಗಿ ಛರಾರ್-ಎ-ಷರೀಫ್ ನಿಂದ ಬಾಟಾ ಪೋರಾ ಹಪ್ರೋವರೆಗಿನ ರಸ್ತೆಯ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. 

ಶ್ರೀ ಚಂದ್ರಶೇಖರ್ ಅವರು ಬುದ್ಗಾಮ್ ಜಿಲ್ಲೆಗಾಗಿ ಯೋಜಿತ ಯೋಜನೆಗಳು ಮತ್ತು ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಲು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. "ಜಿಲ್ಲೆಗಾಗಿ ಯೋಜಿತವಾಗಿರುವ 790 ಕೋಟಿ ರೂಪಾಯಿಗಳ ಯೋಜನೆಗಳಿವೆ" ಎಂದೂ ಅವರು ಹೇಳಿದರು. ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದಂತೆ, ಕೇಂದ್ರಾಡಳಿತ ಪ್ರದೇಶಕ್ಕಾಗಿ ಘೋಷಿಸಲಾಗಿರುವ ಹೊಸ ಕೈಗಾರಿಕಾ ನೀತಿ 2021-30 ರ ಅಡಿಯಲ್ಲಿ 3 ವರ್ಷಗಳಲ್ಲಿ ಸುಮಾರು 50,000 ಕೋಟಿ ರೂಪಾಯಿಗಳ ಹೊಸ ಹೂಡಿಕೆಯನ್ನು ಸರ್ಕಾರವು ನಿರೀಕ್ಷಿಸುತ್ತಿದೆ ಎಂದರು. ಮಾಹಿತಿ ಮತ್ತು ತಂತ್ರಜ್ಞಾನ ಬಳಸಿಕೊಂಡು ದೂರ ದೂರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ನಾಗರಿಕ ಆಧಾರಿತ ಸೇವೆಗಳ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸಲು, ಜಿಲ್ಲಾಡಳಿತ ಎನ್.ಐ.ಸಿ.ಯ ಸಹಯೋಗದಲ್ಲಿ ಕೆಲವು ಮೊಬೈಲ್ ಆಪ್ ಗಳನ್ನು ಅಂದರೆ ಜಿಯೋ ಟ್ಯಾಗ್ ಆಗಿರುವ ಆರೋಗ್ಯ ಆರೈಕೆ ಕೇಂದ್ರಗಳು ಮತ್ತು ಆರೋಗ್ಯ ಇಸೇವೆಗಳ ಮಾಹಿತಿ ನೀಡುವ ‘AurZuv’, ಬುದ್ಗಾಂ ಜಿಲ್ಲೆಯಲ್ಲಿ ಜಲಕಾಯಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕಾಗಿ ಜಲ ಕಾಯಗಳ ವಿವಾದ ಪರಿಹರಿಸುವ ಆನ್ ಲೈನ್ ಪೋರ್ಟಲ್ Meri-Awaaz, ವಿಭಾಗ ಮಟ್ಟದಲ್ಲಿ ರೋಗಿಗಳ ನಿಗಾಕ್ಕಾಗಿ ‘COVID Care’, ಆನ್ ಲೈನ್ ಮೂಲಕ ಸರ್ಕಾರಿ ಸೇವೆಗಳನ್ನು ಒದಗಿಸುವ ಆಪ್ ಅನ್ನು ವಿನ್ಯಾಸಗೊಳಿಸಿದೆ. ಈ ಆಪ್ ಗಳಿಗೆ ರಾಜ್ಯ ಸಚಿವರು ಚಾಲನೆ ನೀಡಿದರು.

“ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದ ಪ್ರಗತಿ ಮತ್ತು ಸಮೃದ್ಧಿಯ ಕನಸು ಕಂಡಿದ್ದು, ಮುಂದಿನ 2-3 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರು ವಿಸ್ತೃತ ಶ್ರೇಣಿಯ ಅಭಿವೃದ್ಧಿಯ ನೂತನ ಮಾರ್ಗಸೂಚಿಯ ಫಲಿತಾಂಶಗಳಿಗೆ ಸಾಕ್ಷಿಯಾಗಲಿದ್ದಾರೆ” ಎಂಬ ಸಂದೇಶದೊಂದಿಗೆ ಶ್ರೀ ಚಂದ್ರಶೇಖರ್ ತಮ್ಮ ಭೇಟಿಯನ್ನು ಮುಗಿಸಿದರು. ಜೊತೆಗೆ ಅವರು ತಮ್ಮ 2 ದಿನಗಳ ಭೇಟಿಯ ವೇಳೆ ತಮಗೆ ಆತಿಥ್ಯ ನೀಡಿದ ಜಮ್ಮು ಮತ್ತು ಕಾಶ್ಮೀರದ ಜನತೆಗೆ, ಜಿಲ್ಲಾಡಳಿತದ ಅಧಿಕಾರಿಗಳಿಗೆ ಮತ್ತು ಇತರರಿಗೆ ಕೃತಜ್ಞತೆ ಸಲ್ಲಿಸಿದರು. 

***



(Release ID: 1758741) Visitor Counter : 153