ಪ್ರವಾಸೋದ್ಯಮ ಸಚಿವಾಲಯ

ನಾಳೆ  ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವಾಲಯದಿಂದ 'ನಿಧಿ 2.0' ಮತ್ತು 'ಭಾರತ ಪ್ರವಾಸೋದ್ಯಮ ಅಂಕಿಅಂಶಗಳು - ಒಂದು ನೋಟ 2021' ಕ್ಕೆ ಚಾಲನೆ


ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಲೋಕಸಭಾ ಸ್ಪೀಕರ್ ಶ್ರೀ ಓಂಬಿರ್ಲಾ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಷನ್ ರೆಡ್ಡಿ

Posted On: 26 SEP 2021 3:41PM by PIB Bengaluru

ಪ್ರಮುಖ ಮುಖ್ಯಾಂಶಗಳು

  • ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಶ್ರೀಪಾದ ಯಸ್ಸೋ ನಾಯಕ್ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
  • ಪ್ರವಾಸೋದ್ಯಮ ಸಚಿವಾಲಯ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯು.ಎನ್.ಇ.ಪಿ.) ಮತ್ತು ಭಾರತೀಯ ಜವಾಬ್ದಾರಿಯುತ ಪ್ರವಾಸೋದ್ಯಮ ಸೊಸೈಟಿ (ಆರ್.ಟಿ.ಎಸ್.ಓ.ಐ.) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು “ವಿಶ್ವ ಪ್ರವಾಸೋದ್ಯಮ ದಿನ 2021” ಆಚರಣೆ ಹಿನ್ನೆಲೆಯಲ್ಲಿ 2021ರ ಸೆಪ್ಟೆಂಬರ್ 27ರಂದು ನವದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಿದೆ, ಇದನ್ನು ಯು.ಎನ್.ಡಬ್ಲ್ಯೂ.ಟಿ.ಒ "ಸಮಗ್ರ ಬೆಳವಣಿಗೆಗಾಗಿ ಪ್ರವಾಸೋದ್ಯಮ"ದ ಮೇಲೆ ಗಮನ ಕೇಂದ್ರೀಕರಿಸುವ ಒಂದು ದಿನವೆಂದು ಘೋಷಿಸಿದೆ. ಲೋಕಸಭೆಯ ಸ್ಪೀಕರ್, ಶ್ರೀ ಓಂ ಬಿರ್ಲಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ರಾಜ್ಯ ಅಭಿವೃದ್ಧಿ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ, ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀ ಅರವಿಂದ ಸಿಂಗ್ ಮತ್ತು ಸಚಿವಾಲಯದ ಇತರ ಅಧಿಕಾರಿಗಳು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ಪ್ರವಾಸೋದ್ಯಮ ಮತ್ತು ಮಾಧ್ಯಮದ ಪ್ರಮುಖ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಭಾರತ ಈಗ ಅನ್ ಲಾಕ್ ಹಂತದಲ್ಲಿದ್ದು, ದೇಶೀಯ ಪ್ರವಾಸೋದ್ಯಮ ನಿಧಾನವಾಗಿ ಮತ್ತು ಸ್ಥಿರವಾಗಿ ಪುನಾರಂಭವಾಗುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ವಿಶ್ವಾದ್ಯಂತ ಸಾಮಾಜಿಕ- ಆರ್ಥಿಕ ರಂಗದ ಮೇಲೆ ತೀವ್ರ ಪ್ರಭಾವ ಬೀರಿತ್ತು, ಈಗ ಕ್ರಮೇಣ ದೇಶೀಯ ಪ್ರವಾಸೋದ್ಯಮ ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಹಲವು ಪಟ್ಟು ಚೇತರಿಕೆ ಮತ್ತು ಪ್ರಗತಿಗೆ ನೆರವಾಗಲಿದೆ. ಪ್ರವಾಸೋದ್ಯಮವು ಎಲ್ಲಾ ವಿಭಿನ್ನ ಗುಂಪುಗಳು, ಜನಾಂಗ, ಧರ್ಮ ಮತ್ತು ಕೃಷಿ, ಕಲೆ ಮತ್ತು ಕರಕುಶಲ ಇತ್ಯಾದಿ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಆರ್ಥಿಕ ಬೆಳವಣಿಗೆಯಿಂದ ಲಾಭವನ್ನು ಪಡೆದು ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವದಾದ್ಯಂತ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತದೆ. ಪ್ರವಾಸೋದ್ಯಮದ ಮಹತ್ವ ಮತ್ತು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಪ್ರವಾಸೋದ್ಯಮ ದಿನದ (ಡಬ್ಲ್ಯುಟಿಡಿ) ಉದ್ದೇಶವಾಗಿದೆ.

ನಾಳೆಯ ಕಾರ್ಯಕ್ರಮದ ವೇಳೆ ನಿಧಿ 2.0 (ಆತಿಥ್ಯ ಉದ್ದಿಮೆಯ ರಾಷ್ಟ್ರೀಯ ಸಮಗ್ರ ದತ್ತಾಂಶ) ಮತ್ತು  ಭಾರತ ಪ್ರವಾಸೋದ್ಯಮ ಅಂಕಿ ಅಂಶ – ಒಂದು ನೋಟ, 2021ಕ್ಕೆ ಚಾಲನೆ ನೀಡಲಾಗುತ್ತದೆ.

ಪರಸ್ಪರ ಪ್ರವಾಸೋದ್ಯಮ ವಲಯದಲ್ಲಿ 'ಸುಸ್ಥಿರತೆ ಉಪಕ್ರಮಗಳನ್ನು' ಸಕ್ರಿಯವಾಗಿ ಉತ್ತೇಜಿಸಲು ಮತ್ತು ಬೆಂಬಲಿಸಲು. ಪ್ರವಾಸೋದ್ಯಮ ಸಚಿವಾಲಯ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯು.ಎನ್.ಇ.ಪಿ.) ಮತ್ತು ಭಾರತೀಯ ಜವಾಬ್ದಾರಿಯುತ ಪ್ರವಾಸೋದ್ಯಮ ಸೊಸೈಟಿ (ಆರ್.ಟಿ.ಎಸ್.ಓ.ಐ.) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.

***



(Release ID: 1758311) Visitor Counter : 284