ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ದೆಹಲಿಯ ಏಮ್ಸ್ ನ ವೈದ್ಯರ ಸಾಮೂಹಿಕ ವರ್ಗಾವಣೆ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಗಳು ತಪ್ಪು ಹಾಗೂ ಗೊಂದಲಕಾರಿ

प्रविष्टि तिथि: 26 SEP 2021 1:41PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವೀಯ ನಿನ್ನೆ ಏಮ್ಸ್ 66ನೇ ಸಂಸ್ಥಾಪನಾ ದಿನವನ್ನು ಉದ್ದೇಶಿಸಿ ಮಾತನಾಡಿ, ಏಮ್ಸ್ ವೈದ್ಯರ ಸಾಮೂಹಿಕ ವರ್ಗಾವಣೆ ಇರಲಿದೆ ಎಂದು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕೆಲವು ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿವೆ. ಅಲ್ಲದೆ ಆ ವರದಿಯಲ್ಲಿ ದೇಶಾದ್ಯಂತ ಎಲ್ಲಾ ಏಮ್ಸ್ ಗಳಲ್ಲಿ ಏಕರೂಪದ ವೈದ್ಯಕೀಯ ಮಾನದಂಡವನ್ನು ಪರಿಚಯಿಸಲು ಸರ್ಕಾರ ಸದ್ಯದಲ್ಲೇ ವರ್ಗಾವಣೆ ನೀತಿಯನ್ನು ಜಾರಿಗೊಳಿಸಲಿದೆ ಎಂದು ಹೇಳಲಾಗಿದೆ. ಆ ನೀತಿಯಿಂದಾಗಿ ದೆಹಲಿ ಏಮ್ಸ್ ನಲ್ಲಿರುವ ವೈದ್ಯರನ್ನು ಸಾಮೂಹಿಕವಾಗಿ ಹೊಸ ಏಮ್ಸ್ ಗಳಿಗೆ ವರ್ಗಾಯಿಸಲಾಗುವುದು ಮತ್ತು ಏಮ್ಸ್ ದೆಹಲಿಗೆ ಹೊಸ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ. 

ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ, ಕೇಂದ್ರ ಆರೋಗ್ಯ ಸಚಿವರನ್ನು ಉಲ್ಲೇಖಿಸಿ ನಿನ್ನೆ ನಡೆದ ದೆಹಲಿ ಏಮ್ಸ್ ನ 66ನೇ ಸಂಸ್ಥಾಪನಾ ದಿನ ಕಾರ್ಯಕ್ರಮದ ಕುರಿತು ಮಾಡಿರುವ ವರದಿಗಳು ಸುಳ್ಳಿನಿಂದ ಕೂಡಿದೆ ಮತ್ತು ಗೊಂದಲಕಾರಿ. ಕೇಂದ್ರ ಸಚಿವರು ನಿನ್ನೆ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಆ ವರದಿಗಳು ದುರುದ್ದೇಶ ಪೂರಿತ, ಸುಳ್ಳಿನಿಂದ ಕೂಡಿವೆ ಮತ್ತು ವಾಸ್ತವ ಮಾಹಿತಿಗಳನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ಅರ್ಥೈಸಲಾಗಿದೆ.

ಈ ಏಮ್ಸ್ ನಿಂದ ಉತ್ತೀರ್ಣರಾಗಿ ಹೊರಹೋಗುವ ವಿದ್ಯಾರ್ಥಿಗಳು ದೇಶಾದ್ಯಂತ ಹೊಸದಾಗಿ ಸ್ಥಾಪಿಸಿರುವ ಏಮ್ಸ್ ಗಳನ್ನು ಶ್ರೀಮಂತಗೊಳಿಸಲಿದ್ದಾರೆ ಎಂದು ಶ್ರೀ ಮಾಂಡವೀಯ ಭರವಸೆ ನೀಡಿದ್ದರು.  ಹಾಲಿ ಇರುವ ಅಧ್ಯಾಪಕರು ತಮ್ಮ ಶ್ರೀಮಂತ ಅನುಭವದೊಂದಿಗೆ ಈ ಸಂಸ್ಥೆಗಳಿಗೆ ದಾರಿ ದೀಪವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದಾರೆ.

ಆ ವಿಷಯದ ಕುರಿತು ಕೇಂದ್ರ ಸಚಿವರು ಮಾತನಾಡಿದ ಭಾಷಣವನ್ನು ಇಲ್ಲಿ ಪಡೆಯಬಹುದು.

***


(रिलीज़ आईडी: 1758282) आगंतुक पटल : 314
इस विज्ञप्ति को इन भाषाओं में पढ़ें: English , Urdu , हिन्दी , Bengali , Tamil , Telugu