ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ನಾಳೆ 2019-20ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ


ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಸಹಾಯಕ ಸಚಿವ ಶ್ರೀ  ನಿಸಿತ್  ಪ್ರಮಾಣಿಕ್ ಅವರು ಕೂಡಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ

Posted On: 23 SEP 2021 5:17PM by PIB Bengaluru

ಪ್ರಮುಖಾಂಶಗಳು

  • 2019-20ನೇ ಸಾಲಿನ ʻರಾಷ್ಟ್ರೀಯ ಸೇವಾ ಯೋಜನೆʼ (ಎನ್‌ಎಸ್‌ಎಸ್) ಪ್ರಶಸ್ತಿಗಳನ್ನು ವಿಶ್ವವಿದ್ಯಾಲಯ/ +2  ಮಂಡಳಿಗಳು, ಎನ್‌ಎಸ್‌ಎಸ್ ಘಟಕಗಳು ಮತ್ತು ಅವುಗಳ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಎನ್‌ಎಸ್‌ಎಸ್‌ ಸ್ವಯಂಸೇವಕರು ಹೀಗೆ 3 ವಿಭಿನ್ನ ವಿಭಾಗಗಳಲ್ಲಿ 42 ಪ್ರಶಸ್ತಿ ವಿಜೇತರಿಗೆ ನೀಡಲಾಗುವುದು

ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು 2019-20ನೇ ಸಾಲಿನ ʻರಾಷ್ಟ್ರೀಯ ಸೇವಾ ಯೋಜನೆʼ (ಎನ್‌ಎಸ್‌ಎಸ್) ಪ್ರಶಸ್ತಿಗಳನ್ನು 2021 ಸೆಪ್ಟೆಂಬರ್ 24ರಂದು ನವದೆಹಲಿಯ ರಾಷ್ಟ್ರಪತಿ  ಭವನದಲ್ಲಿ ವರ್ಚ್ಯುಯಲ್‌ ಕಾರ್ಯಕ್ರಮದ ಮುಖಾಂತರ ಪ್ರದಾನ ಮಾಡಲಿದ್ದಾರೆ. ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಯುವ ವ್ಯವಹಾರಗಳ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ  ನಿಸಿತ್  ಪ್ರಮಾಣಿಕ್ ಅವರು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಿಂದ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.   2019-20ನೇ ಸಾಲಿನ  ʻರಾಷ್ಟ್ರೀಯ ಸೇವಾ ಯೋಜನೆʼ (ಎನ್‌ಎಸ್‌ಎಸ್) ಪ್ರಶಸ್ತಿಗಳನ್ನು  ವಿಶ್ವವಿದ್ಯಾಲಯ/+2 ಮಂಡಳಿಗಳು, ಎನ್‌ಎಸ್‌ಎಸ್ ಘಟಕಗಳು ಮತ್ತು ಅವುಗಳ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಹೀಗೆ 3 ವಿಭಿನ್ನ ವಿಭಾಗಗಳಲ್ಲಿ 42 ಪ್ರಶಸ್ತಿ ವಿಜೇತರಿಗೆ ನೀಡಲಾಗುವುದು.

ಯುವಜನ ವ್ಯವಹಾರಗಳ ಸಚಿವಾಲಯ ಮತ್ತು ಕ್ರೀಡಾ ಇಲಾಖೆ, ಯುವ ವ್ಯವಹಾರಗಳ ಇಲಾಖೆಯು ವಿಶ್ವವಿದ್ಯಾಲಯಗಳು/ ಕಾಲೇಜುಗಳು, (+2) ಮಂಡಳಿಗಳು, ಎಸ್‌ಎಸ್‌ಎಲ್‌ಸಿ, ಎನ್‌ಎಸ್‌ಎಸ್ ಘಟಕಗಳ/ ಕಾರ್ಯಕ್ರಮದ  ಅಧಿಕಾರಿಗಳು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಸಲ್ಲಿಸಿದ ಸಮುದಾಯ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ಮತ್ತು ಸತ್ಕರಿಸಲು ʻರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿʼಗಳನ್ನು ಪ್ರತಿ ವರ್ಷ ನೀಡುತ್ತದೆ. ದೇಶದಲ್ಲಿ ʻಎನ್‌ಎಸ್‌ಎಸ್ʼ ಅನ್ನು ಮತ್ತಷ್ಟು ಉತ್ತೇಜಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ.

ʻಎನ್ಎಸ್ಎಸ್ʼ ಒಂದು ಕೇಂದ್ರ ವಲಯದ ಯೋಜನೆಯಾಗಿದ್ದು, ಸ್ವಯಂ ಪ್ರೇರಿತ ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿ ಯುವಕರ ವ್ಯಕ್ತಿತ್ವ ಹಾಗೂ ಗುಣಗಳನ್ನು ಅಭಿವೃದ್ಧಿಪಡಿಸುವ ಪ್ರಾಥಮಿಕ ಉದ್ದೇಶದೊಂದಿಗೆ 1969ರಲ್ಲಿ ಇದನ್ನು ಪ್ರಾರಂಭಿಸಲಾಯಿತು. ʻಎನ್‌ಎಸ್ಎಸ್ʼ ಸೈದ್ಧಾಂತಿಕ ದೃಷ್ಟಿಕೋನವು ಮಹಾತ್ಮಾ ಗಾಂಧಿಯವರ ಆದರ್ಶಗಳಿಂದ ಪ್ರೇರಿತವಾಗಿದೆ.   ಹಿನ್ನೆಲೆಯಲ್ಲಿ "ನಾನಲ್ಲ, ನನಗಿಂತ ಮೊದಲು ನೀವುʼ (स्वयं  से पहले आप' ) ಎಂಬ ʻಎನ್‌ಎಸ್‌ಎಸ್‌ʼ ಧ್ಯೇಯವಾಕ್ಯವು ಅತ್ಯಂತ ಸೂಕ್ತವಾದುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ʻಎನ್ಎಸ್ಎಸ್ʼ ಸ್ವಯಂಸೇವಕರು ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಯಗಳ ಮೇಲೆ ಕೆಲಸ ನೀಡುತ್ತಾರೆ. ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಸೇವೆಯು ವಿಕಸನಗೊಳ್ಳುತ್ತಿರುತ್ತದೆ. ತಮ್ಮ ನಿಯಮಿತ ಮತ್ತು ವಿಶೇಷ ಕ್ಯಾಂಪಿಂಗ್ ಚಟುವಟಿಕೆಗಳ ಮೂಲಕ ಸೇವೆ ಮಾಡಲಾಗುತ್ತದೆ. ಎನ್‌ಎಸ್‌ಎಸ್‌ ಸೇವೆ ಒದಗಿಸುವ ಅಂತಹ ವಿಷಯಗಳಲ್ಲಿ(1)ಸಾಕ್ಷರತೆ ಮತ್ತು ಶಿಕ್ಷಣ, (2) ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಪೌಷ್ಟಿಕತೆ, (3) ಪರಿಸರ ಸಂರಕ್ಷಣೆ, (4) ಸಾಮಾಜಿಕ ಸೇವಾ  ಕಾರ್ಯಕ್ರಮಗಳು, (5) ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳು, (6) ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದ   ಕಾರ್ಯಕ್ರಮಗಳು,  (7) ವಿಪತ್ತುಗಳ ಸಮಯದಲ್ಲಿ ರಕ್ಷಣೆ ಮತ್ತು ಪರಿಹಾರ ಇತ್ಯಾದಿ ಸೇರಿವೆ.

***



(Release ID: 1757721) Visitor Counter : 164