ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಭಾರತೀಯ ತೈಲ ನಿಗಮದ ಕಾರ್ಯಕ್ಷೇತ್ರಕ್ಕೆ ವಿದ್ಯಾರ್ಥಿಗಳ ಭೇಟಿ

Posted On: 21 SEP 2021 4:08PM by PIB Bengaluru

ಭಾರತೀಯ ತೈಲ ನಿಗಮವು ವಿದ್ಯಾರ್ಥಿಗಳಿಗಾಗಿ ಭೂಮಿಯಾಳದಿಂದ ತೈಲ ತೆಗೆಯುವ ಬಗೆಯನ್ನು ತೋರಲು ಶಾಲಾ ವಿದ್ಯಾರ್ಥಿಗಳಿಗೆ ಅವಕಾಶ

ಭಾರತೀಯ ತೈಲ ನಿಗಮವು ಭಾರತೀಯ ಭಾರತೀಯ ಪರಿಶೋಧನೆ ಮತ್ತು ಉತ್ಪಾದನಾ ಕಂಪೆನಿಯಾಗಿದೆ. ಇದು ವಿದ್ಯಾರ್ಥಿಗಳಿಗೆ ಭೂಮಿಯಾಳದಿಂದ ಮೇಲ್ಮಟ್ಟಕ್ಕೆ ತೈಲ ತರುವ ಸಕ್ಕರ್‌ ರಾಡ್‌ಪಂಪ್‌ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಡುಲಿಯಾಜನ್‌ನಲ್ಲಿ ಸಕ್ಕರ್‌ ರಾಡ್‌ಪಂಪ್‌ ಅಳವಡಿಕೆ ಹಾಗೂ ಕಾರ್ಯನಿರ್ವಹಣೆಯನ್ನು ನೋಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

 ಭಾರತೀಯ ತೈಲ ನಿಗಮದ ಉತ್ಪಾದನಾ ಎಂಜಿನಿಯರ್‌ಗಳು, ವಿದ್ಯಾರ್ಥಿಗಳಿಗೆ ಸಕ್ಕರ್‌ ರಾಡ್‌ ಪಂಪ್‌ನ ಕಾರ್ಯನಿರ್ವಹಣೆಯ ಕುರಿತು ವಿವರಿಸಿದರು. ಕೃತಕವಾಗಿ ತೈಲ ಮೇಲೆತ್ತುವ ತಂತ್ರಗಾರಿಕೆಯ ಕುರಿತೂ ವಿದ್ಯಾರ್ಥಿಗಳಿಗೆ ವಿವರಿಸಿದರು. ಭೂಮಿಯ ಅಂತರಾಳದಿಂದ ಮೇಲ್ಮಟ್ಟದಲ್ಲಿರುವ ರಂಧ್ರಕ್ಕೆ ತೈಲವನ್ನು ಎತ್ತುವ, ಸಾಗಣೆಯಾಗುವ ವಿಧಾನವನ್ನು ವಿವರಿಸಿದರು. ವಿಧಾನವು ಅದೆಷ್ಟು ಸರಳವಾಗಿದೆ ಹಾಗೂ ತಂತ್ರಗಾರಿಕೆಯಿಂದ ಕೂಡಿದೆ ಎಂಬುದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ತೀರ ತಳಮಟ್ಟದಲ್ಲಿ ರಂಧ್ರ ಕೊರೆದು, ಅಲ್ಲಿಂದ ತೈಲವನ್ನೆತ್ತಲು ತಂತ್ರಗಾರಿಕೆಯನ್ನು ಹೇಗೆ ಬಳಸಲಾಗುತ್ತದೆ ಮತ್ತು ವೆಚ್ಚವನ್ನು ತಗ್ಗಿಸುವ ಬಗೆಯನ್ನೂ ವಿವರಿಸಲಾಯಿತು

ಸಮೀಪದ 25 ವಿದ್ಯಾರ್ಥಿಗಳು  ಸಕ್ಕರ್‌ ರಾಡ್‌ಪಂಪ್‌ ಇದ್ದಲ್ಲಿಗೆ ಭೇಟಿ ನೀಡಿದರು. ರಾಡ್‌ ಪಂಪ್‌ ಅಳವಡಿಕೆ, ಕಾರ್ಯಾನುಷ್ಠಾನ, ಎಂಜಿನಿಯರ್‌ಗಳು ಹಾಗೂ ಕಾರ್ಮಿಕರು ಅಲ್ಲಿ ಕಾರ್ಯ ನಿರ್ವಹಿಸುವ ಬಗೆ ಹಾಗೂ ಹೈಡ್ರೊ ಕಾರ್ಬನ್‌ ಉತ್ಪಾದನಾ ಪ್ರಕ್ರಿಯೆಯನ್ನು ನೇರವಾಗಿ ನೋಡಿ, ವಿಷಯ ತಿಳಿದು ಸಂತಸ ಪಟ್ಟರು.

***



(Release ID: 1756739) Visitor Counter : 205