ಗೃಹ ವ್ಯವಹಾರಗಳ ಸಚಿವಾಲಯ

ʻಪದ್ಮ ಪ್ರಶಸ್ತಿ-2022ʼ ನಾಮನಿರ್ದೇಶನಗಳಿಗೆ ನಾಳೆ ಕೊನೆಯ ದಿನಾಂಕ

Posted On: 14 SEP 2021 5:28PM by PIB Bengaluru

2022ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವ ಪದ್ಮ ಪ್ರಶಸ್ತಿಗಳಿಗೆ (ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ) ಆನ್ಲೈನ್ ನಾಮನಿರ್ದೇಶನಗಳು/ಶಿಫಾರಸುಗಳು ನಡೆಯುತ್ತಿವೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳಿಗೆ ಕೊನೆಯ ದಿನಾಂಕ 15 ಸೆಪ್ಟೆಂಬರ್, 2021. ಪದ್ಮ ಪ್ರಶಸ್ತಿಗಳ ನಾಮನಿರ್ದೇಶನಗಳು/ಶಿಫಾರಸುಗಳನ್ನು ಪದ್ಮ ಪ್ರಶಸ್ತಿ ಪೋರ್ಟಲ್ https://padmaawards.gov.in ನಲ್ಲಿ ಆನ್ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುವುದು.

ಪದ್ಮ ಪ್ರಶಸ್ತಿಗಳನ್ನು "ಜನತಾ ಪದ್ಮʼʼ ಆಗಿ ಪರಿವರ್ತಿಸಲು ಸರಕಾರ ಬದ್ಧವಾಗಿದೆ. ಆದ್ದರಿಂದ ಮಹಿಳೆಯರು, ಎಸ್ಸಿ/ ಎಸ್ಟಿಗಳು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುತ್ತಿರುವ ನೈಜ ಅರ್ಹತೆಯುಳ್ಳ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಿ ನಾಮನಿರ್ದೇಶನ/ಶಿಫಾರಸು ಮಾಡಲು ಎಲ್ಲಾ ನಾಗರಿಕರನ್ನು ಕೋರಲಾಗಿದೆ.

ನಾಮನಿರ್ದೇಶನಗಳು/ ಶಿಫಾರಸುಗಳು ಮೇಲಿನ ಪದ್ಮ ಪೋರ್ಟಲ್ನಲ್ಲಿ ಸೂಚಿಸಲಾದ ಸ್ವರೂಪದಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು. ವಿವರಣಾತ್ಮಕವಾದ ಬರಹ (ಗರಿಷ್ಠ 800 ಪದಗಳು), ಶಿಫಾರಸು ಮಾಡಲಾದ ವ್ಯಕ್ತಿಯು ಸಂಬಂಧ ಪಟ್ಟ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ ಸೇವೆಯ ವಿವರವನ್ನು ಸ್ಪಷ್ಟವಾಗಿ ನಮೂದಿಸಬೇಕು. ಈ ಕುರಿತಾದ ಹೆಚ್ಚಿನ ವಿವರಗಳು ಗೃಹ ವ್ಯವಹಾರಗಳ ಸಚಿವಾಲಯದ ವೆಬ್ ಸೈಟ್ನಲ್ಲಿ (www.mha.gov.in) 'ಪ್ರಶಸ್ತಿಗಳು ಮತ್ತು ಪದಕಗಳು' ಶೀರ್ಷಿಕೆಯಡಿಯೂ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಾಸನಗಳು ಮತ್ತು ನಿಯಮಗಳು ಈ ವೆಬ್ಸೈಟ್ ನಲ್ಲಿ ಲಿಂಕ್ನಲ್ಲಿ ಲಭ್ಯವಿವೆ: https://padmaawards.gov.in/AboutAwards.aspx.

ಯಾವುದೇ ವಿಚಾರಣೆ/ ಸಹಾಯಕ್ಕಾಗಿ, ದಯವಿಟ್ಟು ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ:

011-23092421, +91 9971376539, +91 9968276366, +91 9711662129, +91 7827785786.

***



(Release ID: 1754958) Visitor Counter : 228