ಉಕ್ಕು ಸಚಿವಾಲಯ

ಕೇಂದ್ರ ಉಕ್ಕು ಸಚಿವರಿಂದ ಉಕ್ಕು ಸಿ.ಪಿ.ಎಸ್.ಇ. ಸಂಸ್ಥೆಗಳ ಬಂಡವಾಳ ವೆಚ್ಚ (ಸಿ.ಎ.ಪಿ.ಇ.ಎಕ್ಸ್) ಪರಾಮರ್ಶನ

Posted On: 14 SEP 2021 3:05PM by PIB Bengaluru

ಕೇಂದ್ರ ಉಕ್ಕು ಸಚಿವ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸ್ಟೀಲ್ ಸಿ.ಪಿ.ಎಸ್‌.ಇ.ಗಳ ಬಂಡವಾಳ ವೆಚ್ಚದ (ಸಿ.ಎ.ಪಿ.ಎಕ್ಸ್.) ಪ್ರಗತಿಯನ್ನು ಪರಿಶೀಲಿಸಲು ಇಂದು ಸಭೆ ಜರುಗಿತು. ಕೇಂದ್ರ ಉಕ್ಕು ರಾಜ್ಯ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ, ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ತ್ರಿಪಾಠಿ ಮತ್ತು ಸ್ಟೀಲ್ ಸಿ.ಪಿ.ಎಸ್‌.ಇ.ಗಳಾಧ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಸೈಲ್), ರಾಷ್ಟ್ರೀಯ ಖನಿಜ ಅಭಿವೃದ್ಧಿ ಲಿಮಿಟೆಡ್ (ಎನ್.ಎಂ.ಡಿ.ಸಿ.), ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ ಇವುಗಳ ಅಧ್ಯಕ್ಷರು ಮತ್ತು ಆಡಳತ ನಿರ್ದೇಶಕರು, ಉಕ್ಕು ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅನುಷ್ಠಾನದಲ್ಲಿರುವ ಯೋಜನೆಗಳ ವಿವರವಾದ ಪರಿಶೀಲನೆಯ ಸಮಯದಲ್ಲಿ, ಉಕ್ಕಿನ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಬಂಡವಾಳದ ವೆಚ್ಚದ ಮಹತ್ವವನ್ನು ಕೋವಿಡ್ ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಹೆಚ್ಚಿನ ಮತ್ತು ಸುಸ್ಥಿರ ಬೆಳವಣಿಗೆಯನ್ನುಕೇಂದ್ರ ಸಚಿವರು ಉತ್ತೇಜಿಸಿದರು. ಉಕ್ಕು ಸಿ.ಪಿ.ಎಸ್‌.ಇ. ಸಂಸ್ಥೆಗಳು ತಮ್ಮ ವ್ಯವಹಾರಿಕ ಬಂಡವಾಳ ಹೆಚ್ಚಿಸಲು ಮತ್ತು ಯೋಜನೆಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸಲು ಅಗತ್ಯ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ನಿರ್ದೇಶಿಸಲಾಯಿತು.

***(Release ID: 1754777) Visitor Counter : 17