ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಬಯೋಲಾಜಿಕಲ್ ಇ ಲಿಮಿಟೆಡ್ ನ ನೊವೆಲ್ ಕೋವಿಡ್ – 19 ಲಸಿಕೆ – ಕೊರ್ಬೆವಾಕ್ಸ್ ನ II ಕ್ಲಿನಿಕಲ್ ಪ್ರಯೋಗಗಳಿಗೆ ಡಿ.ಸಿ.ಜಿ.ಐ ಅನುಮೋದನೆ ವಯಸ್ಕರ ಮೇಲೆ III ಹಂತದ ಸಕ್ರಿಯ ಕ್ಲಿನಿಕಲ್ ಪ್ರಯೋಗ


ಮಕ್ಕಳು ಮತ್ತು ಹದಿ ಹರೆಯದವರ ಮೇಲೆ [5 ವರ್ಷ ಮತ್ತು ಮೇಲ್ಪಟ್ಟು] II/III ಹಂತದ ಪ್ರಯೋಗ

Posted On: 03 SEP 2021 1:25PM by PIB Bengaluru

ಜೈವಿಕ ತಂತ್ರಜ್ಞಾನ [ಡಿಬಿಟಿ] ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ [ಜಿಒಐ] ಕೋವಿಡ್ – 19 ಲಸಿಕೆಯ ಸಂಶೋಧನೆ, ಅಭಿವೃದ್ಧಿ [ಆರ್ ಎಂಡ್ ಡಿ] ಮತ್ತು ಉತ್ಪಾದನೆಗಾಗಿ ಹೂಡಿಕೆಗಳನ್ನು ಹೆಚ್ಚಿಸಲು ಹಲವಾರು ಉಪ ಕ್ರಮಗಳನ್ನು ಕೈಗೊಂಡಿದೆ.  ಕೋವಿಡ್ – 19 ಲಸಿಕೆಯ ಅಭಿವೃದ್ಧಿಯನ್ನು ಬಲಪಡಿಸಲು ಮಿಷನ್ ಕೋವಿಡ್ ಸುರಕ್ಷಾ ಕಾರ್ಯಕ್ರಮ ಇದರ ಒಂದು ಭಾಗವಾಗಿದೆ. ಲಸಿಕೆ ಅಭಿವೃದ್ಧಿಗೆ ಲಭ್ಯವಿರುವ ಸಂಪನ್ಮೂಲವನ್ನು ಸಮರೋಪಾದಿಯಲ್ಲಿ ಬಳಸಿಕೊಂಡು, ಸುರಕ್ಷಿತ, ಪರಿಣಾಮಕಾರಿ, ಸುಲಭ ದರದಲ್ಲಿ ಕೈಗೆಟುಕುವಂತೆ ಎಲ್ಲಾ ನಾಗರಿಕರಿಗೆ ಆತ್ಮನಿರ್ಭರ್ ಗುರಿಯನ್ವಯ ಆದಷ್ಟು ಬೇಗ ಕೋವಿಡ್ – 19 ಲಸಿಕೆ ಅಭಿವೃದ್ಧಿಪಡಿಸುವ ಉದ್ದೇಶವನ್ನು ಇದು ಹೊಂದಿದೆ.   

ಜೈವಿಕ ತಂತ್ರಜ್ಞಾನ ಇಲಾಖೆ [ಡಿಬಿಟಿ] ಮತ್ತು ಇದರ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಯೋಟೆಕ್ನಾಲಜಿ ಇಂಡಸ್ಟ್ರೀ ರೀಸರ್ಚ್ ಅಸೋಸಿಯೇಷನ್ ಕೌನ್ಸಿಲ್ [ಬಿ.ಐ.ಆರ್.ಎ.ಸಿ] ಜೈವಿಕ ಇ ಕೋವಿಡ್ – 19 ಲಸಿಕೆಗೆ ಬೆಂಬಲ ನೀಡಿದ್ದು, III ನೇ ಹಂತದ ಕ್ಲಿನಿಕಲ್ ಪೂರ್ವ ಪ್ರಯೋಗಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಈ  ಉದ್ದೇಶಕ್ಕೆ ಮಿಷನ್ ಕೋವಿಡ್ ಸುರಕ್ಷಾ ಅಡಿ ಹಣಕಾಸಿನ ನೆರವು ಪಡೆದಿರುವುದಲ್ಲದೇ ಕೋವಿಡ್ – 19 ಬಿ.ಐ.ಆರ್.ಎ.ಸಿ ಅಭಿಯಾನದ ನ್ಯಾಷನಲ್ ಬಯೋಫಾರ್ಮ್ ಮಿಷನ್ ನಡಿ ಸಂಶೋಧನೆಗಾಗಿ ಆರ್ಥಿಕ ಬೆಂಬಲ ಪಡೆದುಕೊಂಡಿದೆ.

ಹಂತ I ಮತ್ತು II ರ ಕ್ಲಿನಿಕಲ್ ಟ್ರಯಲ್ ನ ದತ್ತಾಂಶದ ಆಧಾರದ ಮೇಲೆ ವಿಷಯ ತಜ್ಞರ ಸಮಿತಿ [ಎಸ್.ಇ.ಸಿ] ಪರಿಶೀಲನೆ ಬಳಿಕ ವಯಸ್ಕರಲ್ಲಿ ಹಂತ III ರ ಸಂದರ್ಭದಲ್ಲಿ ಹೋಲಿಕೆ, ಸುರಕ್ಷತೆ, ತಾಳಿಕೆ ಹಾಗು ರೋಗನಿರೋಧಕ ಪ್ರಯೋಗವನ್ನು ನಡೆಸಲು ಬಯೋಲಾಜಿಕಲ್ ಇ ಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕರು ಅನುಮೋದನೆ ನೀಡಿದ್ದಾರೆ. 01.09.2021 ರಂದು ಕೊರ್ಬೆವಾಕ್ಸ್ ಟಿಎಂ ನ II/III ರ ಹಂತದ ಪ್ರಯೋಗಕ್ಕೆ ಬಯೋಲಾಜಿಕಲ್ ಇ ಗೆ ಅನುಮೋದನೆ ದೊರೆತಿದೆ. ಮಕ್ಕಳು ಮತ್ತು ಹದಿಹರಯದವರಲ್ಲಿ ಕೂಡ ಸುರಕ್ಷತೆ, ಪ್ರತಿಕ್ರಿಯೆ ಹಾಗು ರೋಗ ನಿರೋಧಕತೆ ಕುರಿತು ಮೌಲ್ಯಮಾಪನ ಮಾಡಲು ಅನುಮತಿ ದೊರೆತಿದೆ. ಇದು ಆರ್.ಬಿ.ಡಿ ಪ್ರೋಟಿನ್ ಉಪ ಘಟಕದ ಲಸಿಕೆ ಇದಾಗಿದೆ.

ಡಿಬಿಟಿಯ ಕಾರ್ಯದರ್ಶಿ ಮತ್ತು ಬಿ.ಐ.ಆರ್.ಎ.ಸಿ ಅಧ್ಯಕ್ಷ ಡಾಕ್ಟರ್ ರೇಣು ಸ್ವರೂಪ್ ಈ ವಿಷಯದ ಬಗ್ಗೆ ಮಾತನಾಡಿ, “ಇಲಾಖೆಯಿಂದ ಮಿಷನ್ ಕೋವಿಡ್ ಸುರಕ್ಷಾ ಕಾರ್ಯಕ್ರಮವನ್ನು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ 3.0 ಅಡಿ ಜಾರಿಗೊಳಿಸಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದ್ದೇವೆ. ಮಕ್ಕಳು ಮತ್ತು ಹದಿಹರೆಯದವರಿಗಾಗಿ   ಕೊರ್ಬೆವಾಕ್ಸ್ ಟಿಎಂ ನ ಕ್ಲಿನಿಕಲ್ ಅಭಿವೃದ್ದಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.

ಬಯೋಲಾಜಿಕಲ್ ಇ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ  ಮಹಿಮಾ ಡಲ್ಟಾ “ ಡಿ.ಸಿ.ಜಿ.ಐ ನಿಂದ ಮಹತ್ವದ ಅನುಮೋದನೆಯನ್ನು ಸ್ವೀಕರಿಸಲು ನಮಗೆ ಸಂತೋಷವಾಗಿದೆ. ನಮಗೆ ಅಗತ್ಯವಾಗಿರುವ ಕೋವಿಡ್ – 19 ಲಸಿಕೆಯನ್ನು ಯಶಸ್ವಿಯಾಗಿ ಉತ್ಪಾದಿಸಲು ನಾವು ಮುಂದಾಗಿದ್ದೇವೆ” ಎಂದರು.

“ಬಿ.ಐ.ಆರ್.ಎ.ಸಿ ಬೆಂಬಲಕ್ಕೆ ನಾವು ಆಭಾರಿಯಾಗಿದ್ದೇವೆ. ಈ ಅನುಮೋದನೆಗಳು ಡಬ್ಲ್ಯೂ.ಎಚ್.ಒ ನೊಂದಿಗೆ ನಮ್ಮ ಪ್ರಯತ್ನಗಳಿಗೆ  ಬೆಂಬಲ ದೊರೆಯುವ ಉತ್ಸಾಹದಲ್ಲಿದ್ದೇವೆ. ಈ ಪ್ರಯತ್ನದಲ್ಲಿ ನಿರಂತರ ಬೆಂಬಲಕ್ಕಾಗಿ ನಮ್ಮ ಎಲ್ಲಾ ಸಹಯೋಗಿಗಳ ಕೊಡುಗೆಯನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಅಂಗೀಕರಿಸುತ್ತೇವೆ “ ಎಂದು ಹೇಳಿದರು.

 

ಡಿಬಿಟಿ ಕುರಿತು  

ಜೈವಿಕ ತಂತ್ರಜ್ಞಾನ ಇಲಾಖೆ [ಡಿಬಿಟಿ] ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಬರಲಿದ್ದು, ಭಾರತದಲ್ಲಿ ಜೈವಿಕ ತಂತ್ರಜ್ಞಾನವನ್ನು ತ್ವರಿತವಾಗಿ ಅಭಿವೃದ‍್ಧಿಪಡಿಸಲು ಮತ್ತು ಉತ್ತೇಜಿಸುವ ಕೆಲಸ ಮಾಡಲಿದೆ. ಜತೆಗೆ ಕೃಷಿ, ಆರೋಗ್ಯ ವಲಯ, ಪಶು ವಿಜ್ಞಾನ, ಪರಿಸರ  ಮತ್ತು ಕೈಗಾರಿಕೆಯಲ್ಲಿ ಜೈವಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಿದೆ.

 

ಬಿ.ಐ.ಆರ್.ಎ.ಸಿ ಕುರಿತು:

ಜೈವಿಕ ತಂತ್ರಜ್ಞಾನ ಸಂಶೋಧನೆ ನೆರವು ಮಂಡಳಿ [ಬಿ.ಐ.ಆರ್.ಎ.ಸಿ] ಸಕ್ಷನ್ 8 ರ ಪರಿಚ್ಚೇದ ಬಿ ನಡಿ ಲಾಭದಾಯಕವಲ್ಲದ ಸಾರ್ವಜನಿಕ ಉದ್ದಿಮೆಯಾಗಿದೆ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಇದು ಸ್ಥಾಪನೆಗೊಂಡಿದೆ. ರಾಷ್ಟ್ರೀಯವಾಗಿ ಉತ್ಪನ್ನಗಳ ಅಗತ್ಯಗಳನ್ನು ಪರಿಹರಿಸುವ ಮೂಲಕ ಕಾರ್ಯತಂತ್ರದ ಸಂಶೋಧನೆ ಮತ್ತು ಅನುಶೋಧನೆಯನ್ನು ಕೈಗೊಳ್ಳಲು ಪ್ರವರ್ಧಮಾನಕ್ಕೆ  ಬರುತ್ತಿರುವ ಜೈವಿಕ ಕ್ಷೇತ್ರದ ಉದ್ಯಮವನ್ನು ಬಲಪಡಿಸಲು ಹಾಗೂ ಸಶಕ್ತಗೊಳಿಸುವ ಸಂಬಂಧಿತ ಸಂಸ್ಥೆಯಾಗಿದೆ.  

 

ಬಯೋಲಾಜಿಕಲ್ ಇ. ಲಿಮಿಟೆಡ್ ಕುರಿತು:

ಬಯೋಲಾಜಿಕಲ್ ಇ. ಲಿಮಿಟೆಡ್ [ಬಿಇ] ಹೈದರಾಬಾದ್ ಮೂಲದ ಔಷಧ ಮತ್ತು ಜೀವಶಾಸ್ತ್ರ ವಲಯದ ಕಂಪೆನಿಯಾಗಿದ್ದು, 1953 ರಲ್ಲಿ ಇದು ಸ್ಥಾಪನೆಯಾಗಿದೆ. ಇದು ಬಾರತದ ಮೊದಲ ಜೈವಿಕ ಉತ್ಪನ್ನಗಳನ್ನು ಉತ್ಪಾದಿಸುವ ಖಾಸಗಿ ವಲಯದ ಕಂಪೆನಿಯಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಕಂಪೆನಿಯಾಗಿದೆ. ಬಿಇ ಸಂಸ್ಥೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವ, ಉತ್ಪಾದಿಸುವ, ಚಿಕಿತ್ಸಾ ವಲಯ ಮತ್ತು ಪೂರೈಸುವ  ಕಾರ್ಯದಲ್ಲಿ ನಿರತವಾಗಿದೆ. 100 ಕ್ಕೂ ಹೆಚ್ಚು ದೇಶಗಳಿಗೆ ಬಿಇ ಸಂಸ್ಥೆ ಲಸಿಕೆಗಳನ್ನು ಪೂರೈಸುತ್ತದೆ ಮತ್ತು ಭಾರತ ಮತ್ತು ಅಮೆರಿಕದಲ್ಲಿ ಚಿಕಿತ್ಸೆ ನೀಡುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಪ್ರಸ್ತುತ ಡಬ್ಲ್ಯೂ.ಎಚ್.ಒ ನ 8 ಅರ್ಹತಾಪೂರ್ವ ಲಸಿಕೆಗಳು  ಬಿಇ ನ ಕಾರ್ಯಕ್ರಮ ಪಟ್ಟಿಯಲ್ಲಿವೆ.

ಇತ್ತೀಚಿನ ವರ್ಷಗಳಲ್ಲಿ ಬಿಇ ಸಾಂಸ್ಥಿಕ ವಿಸ್ತರಣೆಗಾಗಿ ಹೊಸ ಉಪಕ್ರಮಗಳನ್ನು ಪ್ರಾರಂಭಿಸಿದೆ. ಉದಾಹರಣೆಗೆ ನಿಯಂತ್ರಿತ   ಮಾರುಕಟ್ಟೆಗಳಿಗೆ ಜನರಿಕ್ ಚುಚ್ಚು ಮದ್ದು ಅಭಿವೃದ್ಧಿಪಡಿಸುವ,  ಎಪಿಐಗಳನ್ನು ಸಮರ್ಥವಾಗಿ ತಯಾರಿಸಲು ಹಾಗೂ ಜಾಗತಿಕ ಮಾರುಕಟ್ಟೆಗೆ ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ವಿಧಾನದಲ್ಲಿ ಸಿಂಥೆಟಿಕ್ ಜೈವಿಕ ಶಾಸ್ತ್ರ ಮತ್ತು ಮೆಟಬಾಲಿಕ್ ಎಂಜಿನಿಯರಿಂಗ್ ಅನ್ನು ಅನ್ವೇಷಣೆ ಮಾಡುವ ಕಾರ್ಯವನ್ನು ನಿರ್ವಹಿಸಲಿದೆ.

 

ಹೆಚ್ಚಿನ ಮಾಹಿತಿಗಾಗಿ ಡಿಬಿಟಿ/ಬಿಐಆರ್ ಎಸಿ ಸಂಪರ್ಕ ಘಟಕವನ್ನು ಸಂಪರ್ಕಿಸಿ  

 

          @DBTIndia@BIRAC_2012

 

www.dbtindia.gov.in

 

www.birac.nic.in

 



(Release ID: 1751783) Visitor Counter : 313