ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ನೂತನ ಶಿಕ್ಷಣ ನೀತಿ -2020 ಭಾರತವನ್ನು ಜಾಗತಿಕವಾಗಿ ಜ್ಞಾನದ ಮಹಾನ್ ಶಕ್ತಿಕೇಂದ್ರವಾಗಿ ಪರಿವರ್ತಿಸಲಿದೆ – ಕೇಂದ್ರ ಶಿಕ್ಷಣ ಸಚಿವರು


ಎನ್.ಸಿ.ಇ.ಆರ್.ಟಿ.ಯ 61ನೇ ಸ್ಥಾಪನಾ ದಿನ ಉದ್ದೇಶಿಸಿ ವರ್ಚುವಲ್ ಮೂಲಕ ಭಾಷಣ ಮಾಡಿದ ಶ್ರೀ ಧರ್ಮೇಂದ್ರ ಪ್ರಧಾನ್

Posted On: 01 SEP 2021 5:07PM by PIB Bengaluru

ಎನ್.ಸಿ.ಇ.ಆರ್.ಟಿ.ಯ 61ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಖಾತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ನೂತನ ಶಿಕ್ಷಣ ನೀತಿ -2020 ಭಾರತವನ್ನು ಜಾಗತಿಕವಾಗಿ ಜ್ಞಾನದ ಮಹಾನ್ ಶಕ್ತಿಕೇಂದ್ರವಾಗಿ ಪರಿವರ್ತಿಸಲಿದೆ ಎಂದು ತಿಳಿದ್ದಾರೆ. ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸುಭಾಷ್ ಸರ್ಕಾರ್, ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ರಾಜ್ ಕುಮಾರ್ ಸಿಂಗ್ ಮತ್ತು ಸಚಿವಾಲಯದ ಮತ್ತು ಎನ್.ಸಿ.ಇ.ಆರ್.ಟಿ.ಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಾಲ್ಗೊಂಡಿದ್ದವರನ್ನುದ್ದೇಶಿಸಿ ಮಾತನಾಡಿದ ಶ್ರೀ ಪ್ರಧಾನ್, ಈ ಸಂದರ್ಭದಲ್ಲಿ ಎನ್.ಸಿ.ಇ.ಆರ್.ಟಿಯನ್ನು ಅಭಿನಂದಿಸಿದರು ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಎನ್.ಸಿ.ಇ.ಆರ್.ಟಿ. ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಂಕ್ರಾಮಿಕದ ಸಮಯದಲ್ಲೂ ಕಲಿಕೆಗೆ ಅನುಕೂಲವಾಗುವಂತೆ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟುಗಳನ್ನು ತರಲು ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿದ ಎನ್‌.ಸಿ.ಇ.ಆರ್‌.ಟಿ.ಯ ಮೈಲಿಗಲ್ಲುಗಳನ್ನು ಗುರುತಿಸಿದ ಅವರು, ಎನ್‌.ಸಿ.ಇ.ಆರ್‌.ಟಿ. ಎನ್.ಇ.ಪಿ. -2020ರಲ್ಲಿ ರೂಪಿಸಿರುವಂತೆ ಶಿಕ್ಷಣದಲ್ಲಿ ಬೃಹತ್ ಪರಿವರ್ತನೆ ತರಲು ಎನ್‌.ಸಿ.ಇ.ಆರ್‌.ಟಿ.ಸಜ್ಜಾಗಬೇಕು ಎಂದು ಅವರು ಹೇಳಿದರು.

ಶ್ರೀ ಸುಭಾಷ್ ಸರ್ಕಾರ್, ಈ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಮೂರು ಹಂಸಗಳ ಲಾಂಛನದ ಮಹತ್ವವನ್ನು ಮತ್ತು ಉದ್ದೇಶವನ್ನು ಒತ್ತಿ ಹೇಳಿದ ಅವರು, 'ಕಲಿಕೆಯ ಮೂಲಕ ಶಾಶ್ವತ ಜೀವನ' ಎಂದು ಅದನ್ನು ಅರ್ಥೈಸಿದರು. ಸಂಶೋಧನೆ, ಅಭಿವೃದ್ಧಿ ಮತ್ತು ತರಬೇತಿಯ ಸಂಪನ್ಮೂಲ ಕೇಂದ್ರವಾಗಿ ಎನ್‌.ಸಿ.ಇ.ಆರ್‌.ಟಿ.ಯ ಭವ್ಯವಾದ ಸ್ಮರಣೀಯ ಸೇವೆಯನ್ನು ಶ್ಲಾಘಿಸಿದ ಅವರು, ನಿಷ್ಠಾ ಉಪಕ್ರಮದ ಅಡಿಯಲ್ಲಿ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಉಲ್ಲೇಖಿಸಿದರು. ಆತ್ಮನಿರ್ಭರ ಭಾರತ ಮತ್ತು ಕೌಶಲ್ಯ ಭಾರತದ ಉದ್ದೇಶಗಳ ಸಾಧನೆಗಾಗಿ ವೃತ್ತಿಪರ ಮತ್ತು ಶೈಕ್ಷಣಿಕ ಕಲಿಕೆಯ ಏಕೀಕರಣದ ಪಾತ್ರವನ್ನು ಅವರು ಒತ್ತಿ ಹೇಳಿದರು. ಎನ್.ಇ.ಪಿ. ನವ ಭಾರತಕ್ಕೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿರುವುದನ್ನು ಅವರು ಸ್ಮರಿಸಿದರು. ಈ ನಿಟ್ಟಿನಲ್ಲಿ ಎನ್‌.ಸಿ.ಇ.ಆರ್‌.ಟಿ.ಯ ಪಾತ್ರ ಅನಿವಾರ್ಯವಾಗಿದೆ ಎಂದರು.

ಡಾ. ರಾಜ್ ಕುಮಾರ್ ರಂಜನ್ ಸಿಂಗ್ ಮಾತನಾಡಿ, ಸಂಸ್ಥಾಪನಾ ದಿನವು ಗತವನ್ನು ಆನಂದಿಸುವ, ಆತ್ಮಾವಲೋಕನ ಮಾಡುವ ಮತ್ತು ಭವಿಷ್ಯದ ಯೋಜನೆ ರೂಪಿಸುವ ಒಂದು ಸಂದರ್ಭವಾಗಿದೆ ಎಂದು ಹೇಳಿದರು. ಎನ್‌.ಸಿ.ಇ.ಆರ್‌.ಟಿ.ಯಲ್ಲಿ ಮನರಂಜಿಸುವ ನೀತಿಕಥೆಗಳ ಮೂಲಕ, ವಸ್ತುಗಳ ನಿಯಮಿತ ವಿಮರ್ಶೆ ಮತ್ತು ಕಲಿಕೆಯ ಆನಂದಕ್ಕೆ ಕೊಡುಗೆ ನೀಡುವುದಕ್ಕಾಗಿ ಅಳವಡಿಸಿಕೊಳ್ಳುವ/ ಹೊಂದಿಕೊಳ್ಳುವ ನಮ್ಯತೆಯನ್ನು ಅವರು ಶ್ಲಾಘಿಸಿದರು. ತಮ್ಮ ಶಾಲಾ ದಿನಗಳಲ್ಲಿ ಶಾಲೆಯ ಆವರಣವನ್ನು ಸಾಮೂಹಿಕವಾಗಿ ಸ್ವಚ್ಛಗೊಳಿಸುತ್ತಿದ್ದುದನ್ನು ಸ್ಮರಿಸಿದ ಅವರು, ನೂತನ ಪಠ್ಯಕ್ರಮದ ಮೂಲಕ ಕಲಿಯುವವರಲ್ಲಿ ಶಾಲೆಗಳಿಗೆ ಸೇರುವ ಭಾವನೆಯನ್ನು ನೀಡಬೇಕೆಂದು ಆಶಿಸಿದರು. ಇದು ಸ್ವಸ್ಥ ಭಾರತ ಕಾರ್ಯಕ್ರಮದ ಪರಿಕಲ್ಪನೆಯನ್ನು ಬಲಪಡಿಸುತ್ತದೆ ಎಂದರು.

ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕ (ಸ್ವತಂತ್ರ ನಿರ್ವಹಣೆ) ಪ್ರೊ. ಶ್ರೀಧರ್ ಶ್ರೀವಾಸ್ತವ, ಘಟಕಗಳಾದ- ಅಜ್ಮೇರ್, ಭೋಪಾಲ್, ಭುವನೇಶ್ವರ, ಶಿಲ್ಲಾಂಗ್ ಮತ್ತು ಮೈಸೂರಿನಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು, ಸಿಐಇಟಿ, ನವದೆಹಲಿ ಮತ್ತು ಪಿ.ಎಸ್.ಎಸ್.ಸಿ.ಐ.ವಿ.ಇ. ಭೋಪಾಲ್ ಒಳಗೊಂಡಂತೆ ಮಂಡಳಿಯ ಕಳೆದ ಆರು ದಶಕಗಳ ಸಾಧನೆಯ ಪಕ್ಷಿನೋಟವನ್ನು ಪ್ರಸ್ತುತಪಡಿಸಿದರು. ಅತ್ಯುನ್ನತ ರಾಷ್ಟ್ರೀಯ ಸಂಸ್ಥೆಯಾಗಿ, ಮಂಡಳಿ ಶಾಲಾ ಶಿಕ್ಷಣದಲ್ಲಿ ಶ್ರೇಷ್ಠತೆ, ಸಮಾನತೆ, ಸಮಗ್ರತೆ ಮತ್ತು ಗುಣಮಟ್ಟವನ್ನು ಉತ್ತೇಜಿಸಲು ಬದ್ಧವಾಗಿದೆ. ಎನ್‌.ಸಿ.ಇ.ಆರ್‌.ಟಿ. ಸಂಶೋಧನೆ, ಪಠ್ಯಕ್ರಮದ ಅಭಿವೃದ್ಧಿ, ಪಠ್ಯಕ್ರಮ, ಪಠ್ಯ ಮತ್ತು ತರಬೇತಿ ಸಾಮಗ್ರಿಗಳ ಮುಖಾಮುಖಿ ಮತ್ತು ಆನ್‌ ಲೈನ್ ವಿಧಾನಗಳಲ್ಲಿ ಕೆಲಸ ಮಾಡುತ್ತಿದೆ. ಇತ್ತೀಚಿನ ಮಹತ್ವದ ಉಪಕ್ರಮಗಳು ರಾಷ್ಟ್ರೀಯ ಸಾಧನೆ ಸಮೀಕ್ಷೆ (ಎನ್.ಎ.ಎಸ್.) ಮೂಲಕ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಒಳಗೊಂಡಿವೆ. ಕಲಿಕೆಯ ಫಲಶ್ರುತಿಯ ಅಭಿವೃದ್ಧಿ, ಶಾಲಾ ಶಿಕ್ಷಣದ ಎಲ್ಲ ಹಂತದ ಎಲ್ಲ ವಿಷಯಗಳ ಕ್ಷೇತ್ರದಲ್ಲಿ ಇ- ವಸ್ತು ವಿಷಯದ ಸಿದ್ಧತೆ ಸೇರಿದೆ. ಮತ್ತೊಂದು ಮೈಲಿಗಲ್ಲಿನ ಸಾಧನೆ ಇಸಿಸಿಇ ಪಠ್ಯಕ್ರಮ ಮತ್ತು ಮಾರ್ಗಸೂಚಿಗಳ ಅಭಿವೃದ್ಧಿಯನ್ನು ಸೇರಿಸಿರುವುದಾಗಿದೆ.  

ಈ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಎಲ್ಲ ಬೋಧಕ ಸದಸ್ಯರು, ಸಿಬ್ಬಂದಿ ಮತ್ತು ಎನ್.ಸಿ.ಇ.ಆರ್.ಟಿ. ಘಟಕಗಳ ಇತರ ಆಹ್ವಾನಿತರು ಅಧಿಕೃತ ಯೂಟ್ಯೂಬ್ ವಾಹಿನಿಯ ಮೂಲಕ ಭಾಗವಹಿಸಿದ್ದರು. ಇಡೀ ಕಾರ್ಯಕ್ರಮವನ್ನು ಕೋವಿಡ್ ಸೂಕ್ತ ಶಿಷ್ಟಾಚಾರದೊಂದಿಗೆ ಆಯೋಜಿಸಲಾಗಿತ್ತು.  

ಸಮಾಜ ಶಾಸ್ತ್ರ (Sociology)ದ ನಿಯಮಗಳನ್ನು ವಿವರಿಸುವ ಮೂರು ಭಾಷೆಗಳಲ್ಲಿ ಅಂದರೆ ಇಂಗ್ಲಿಷ್, ಹಿಂದಿ ಮತ್ತು ಉರ್ದುವಿನಲ್ಲಿ 'ಸಮಾಜಶಾಸ್ತ್ರದ ನಿಘಂಟು' ಎಂಬ ಶೀರ್ಷಿಕೆಯ ಎನ್.ಸಿ.ಇ.ಆರ್.ಟಿ.ಯ ಪ್ರಕಟಣೆಯನ್ನು ವೇದಿಕೆಯಲ್ಲಿದ್ದ ಗಣ್ಯರು ವಿಧ್ಯುಕ್ತವಾಗಿ ಬಿಡುಗಡೆ ಮಾಡಿದರು.

***



(Release ID: 1751186) Visitor Counter : 192