ಗಣಿ ಸಚಿವಾಲಯ
azadi ka amrit mahotsav

ಆಕಾಂಕ್ಷಾ ಕುಮಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಂದ ಅಭಿನಂದನೆಗಳು


ಭೂಗತ ಗಣಿಗಾರಿಕೆಯಲ್ಲಿ ಕಾರ್ಯನಿರ್ವಹಿಸುವ ಮೊದಲ ಮಹಿಳಾ ಎಂಜಿನಿಯರ್‌ ಎಂಬ ಹೆಗ್ಗಳಿಕೆ ಆಕಾಂಕ್ಷಾ ಕುಮಾರಿ ಅವರದ್ದು

ಲಿಂಗ ಸಮಾನತೆಯ ಆಡಳಿತಕ್ಕೆ ಆಕಾಂಕ್ಷಾ ಕುಮಾರಿಯವರ ಸಾಧನೆ ನಿಜದ ಉದಾಹರಣೆಯಾಗಿದೆ: ಪ್ರಲ್ಹಾದ್‌ ಜೋಶಿ

Posted On: 31 AUG 2021 4:43PM by PIB Bengaluru

ಕಲ್ಲಿದ್ದಲ್ಲು ಮತ್ತು ಗಣಿಗಾರಿಕೆ ಹಾಗೂ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಅವರು ಆಕಾಂಕ್ಷಾ ಕುಮಾರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಲ್ಲಿದ್ದಲು ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಸೆಂಟ್ರಲ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌,ನಲ್ಲಿ ಮೊದಲ ಮಹಿಳಾ ಗಣಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಲು ಆಕಾಂಕ್ಷಾ ಕುಮಾರಿ ಅವರ ನೇಮಕವಾಗಿದೆ. ಉತ್ತರ ಕರಣಪುರದ ಛುರಿ ಭೂಗತ ಗಣಿಯಲ್ಲಿ ಕಾರ್ಯನಿರ್ವಹಿಸುವ ಮೊದಲ ಎಂಜಿನಿಯರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 

ಲಿಂಗ ಸಮಾನತೆಯನ್ನು ಕಾರ್ಯಾನುಷ್ಠಾನಕ್ಕೆ ತರುವ ಮತ್ತು ಪ್ರೋತ್ಸಾಹಿಸುವ ಪ್ರಗತಿಪರ ಆಡಳಿತಕ್ಕೆ ಈ ನೇಮಕಾತಿ ಹಾಗೂ ಅಕಾಂಕ್ಷಾ ಕುಮಾರಿ ಅವರ ಸಾಧನೆ ನಿಜದ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ. ಲಿಂಗ ಸಮಾನತೆಯನ್ನು ಪ್ರೋತ್ಸಾಹಿಸಲು ಹಾಗೂ ಸಮಾನ ಅವಕಾಶಗಳನ್ನು ಸೃಷ್ಟಿಸಲು ಮೋದಿ ಸರ್ಕಾರವು ಮಹಿಳೆಯನ್ನು ಭೂಗತ ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ಅವಕಾಶ ಸೃಷ್ಟಿಸಿದೆ ಎಂದು ಹೇಳಿದ್ದಾರೆ.

ಆಕಾಂಕ್ಷಾ ಕುಮಾರಿ, ಗಣಿಗಾರಿಕೆಯಲ್ಲಿ ಪದವೀಧರೆ. ಸೆಂಟ್ರಲ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ನ ಉತ್ತರ ಕರಣಪುರ ಪ್ರದೇಶದ ಛುರಿ ಭೂಗತ ಗಣಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಸಿಸಿಎಲ್‌ನಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.ಸಿಸಿಎಲ್‌ನಲ್ಲಿ ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯುರ ಪುರುಷರ ಸರಿಸಮನಾಗಿ ಶ್ರಮಿಸುತ್ತಿದ್ದಾರೆ. ವೈದ್ಯರಾಗಿ, ಅಧಿಕಾರಿಯಾಗಿ, ಸೆಕ್ಯುರಿಟಿ ಗಾರ್ಡ್‌ ಆಗಿ ಅಷ್ಟೇ ಅಲ್ಲ, ಭಾರದ ಕೆಲಸಗಳೆಂದೇ ಪರಿಗಣಿಸಲಾಗಿರುವ ಡಂಪರ್‌ ಹಾಗೂ ಶೊವೆಲ್‌ನಂಥ ಯಂತ್ರಗಳ ಚಾಲನೆಯಲ್ಲಿಯೂ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಪ್ರತಿ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿಯೂ ಸಮರ್ಥರಾಗಿ ಶ್ರಮಿಸಿದ್ದಾರೆ. 

ಇದೇ ಮೊದಲ ಸಲ ಗಣಿಗಾರಿಕೆಯ ಚಟುವಟಿಕೆಗಳಲ್ಲಿಯೇ ಅತಿ ಬೃಹತ್‌ ಕಂಪನಿಯಾಗಿರುವ ಸಿಸಿಎಲ್‌ ಜಾಗತಿಕವಾಗಿಯೂ ಒಂದು ಮೈಲಿಗಲ್ಲನ್ನು ಸೃಷ್ಟಿಸಿರುವುದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ. ಈ ಇಡೀ ಸಾಧನೆಯ ಇನ್ನೊಂದು ಮಗ್ಗುಲು ಏನೆಂದರೆ ಗಣಿಗಾರಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿರುವ ಎರಡನೆಯ ಎಂಜಿನಿಯರ್‌ ಆಕಾಂಕ್ಷಾ ಆಗಿದ್ದಾರೆ. ಇನ್ನೊಬ್ಬರು ಮಹಾರತ್ನ ಕೋಲ್ ಇಂಡಿಯಾ ಸಮೂಹ ಸಂಸ್ಥೆಯಲ್ಲಿ ಒಬ್ಬರು ಮಹಿಳಾ ಗಣಿಗಾರಿಕೆಯ ಕ್ಷೇತ್ರದಲ್ಲಿ ಎಂಜಿನಿಯರ್‌ ಇದ್ದಾರೆ. ಆದರೆ ಭೂಗತ 

ಜಾರ್ಖಂಡ್‌ ರಾಜ್ಯದ ಹಜಾರಿಬಾಗ್‌ ಜಿಲ್ಲೆಯ ಬರ್ಕಾಗಾಂವ್‌ ಮೂಲದವರು ಆಕಾಂಕ್ಷಾ ಕುಮಾರಿ. ನವೋದಯ ವಿದ್ಯಾಲಯದ ವಿದ್ಯಾರ್ಥಿನಿ. ಗಣಿಗಾರಿಕೆಯ ಪ್ರದೇಶದಿಂದಲೇ ಬಂದಿರುವ ಆಕಾಂಕ್ಷಾ, ಬಾಲ್ಯದಿಂದಲೇ ಈ ಕ್ಷೇತ್ರದಲ್ಲಿ ಶ್ರಮಿಸುವ ಕನಸು ಕಂಡವರು. ಈ ಕನಸು ಧನಬಾದ್‌ನ ಸಿಂದ್ರಿ ಸಂಸ್ಥೆಯಲ್ಲಿ ಬಿಐಟಿ ಮೈನಿಂಗ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆಯಲು ಪ್ರೇರಣೆ ನೀಡಿತು. 

ಸಿಸಿಎಲ್‌ನಲ್ಲಿ ಸೇವೆಗೆ ಸೇರುವ ಮುನ್ನ ಅವರು ರಾಜಸ್ಥಾನದ ಬಲಾರಿಯಾ ಗಣಿಪ್ರದೇಶದಲ್ಲಿ ಹಿಂದುಸ್ತಾನ್‌ ಜಿಂಕ್‌ ಲಿಮಿಟೆಡ್‌ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿರುವ ಅನುಭವ ಇದೆ. ತಮ್ಮ ಕನಸುಗಳ ಬೆನ್ನಟ್ಟಲು ಕುಟುಂಬ ನೀಡಿರುವ ಅದಮ್ಯ ಬೆಂಬಲವೇ ಈ ಸಾಧನೆಗೆ ಮೂಲ ಕಾರಣವೆಂದು ಆಕಾಂಕ್ಷಾ ಕುಮಾರಿ ಹೇಳಿಕೊಳ್ಳುತ್ತಾರೆ. ಕೋಲ್‌ ಇಂಡಿಯಾ ಲಿಮಿಟೆಡ್‌ಗೆ ಸೇವೆ ಸಲ್ಲಿಸಲು ಸೇರುವುದು ತಮ್ಮ ಬಾಲ್ಯದ ಕನಸಾಗಿತ್ತು. ಸಾಮರ್ಥ್ಯಮೀರಿ ಶ್ರಮಿಸಿ, ತಮ್ಮಿಂದ ಉತ್ತಮವಾದುದನ್ನೇ ನೀಡುವುದಾಗಿ ಅವರು ಹೇಳುತ್ತಾರೆ.

***


(Release ID: 1750822) Visitor Counter : 219