ಹಣಕಾಸು ಸಚಿವಾಲಯ
2021-22ರ ಆರ್ಥಿಕ ವರ್ಷಕ್ಕೆ ಜುಲೈ 2021 ರವರೆಗಿನ ಭಾರತದ ಕೇಂದ್ರ ಸರ್ಕಾರದ ಖಾತೆಗಳ ಮಾಸಿಕ ಪರಿಶೀಲನೆ
Posted On:
31 AUG 2021 4:18PM by PIB Bengaluru
ಜುಲೈ 2021 ರವರೆಗಿನ ಭಾರತದ ಕೇಂದ್ರ ಸರ್ಕಾರದ ಮಾಸಿಕ ಖಾತೆಯನ್ನು ಕ್ರೋಡೀಕರಿಸಲಾಗಿದ್ದು ವರದಿಗಳನ್ನು ಪ್ರಕಟಿಸಲಾಗಿದೆ. ಮುಖ್ಯಾಂಶಗಳು ಈ ಕೆಳಗಿನಂತಿವೆ :-
ಜುಲೈ, 2021 ರ ವರೆಗೆ ಭಾರತ ಸರ್ಕಾರವು ರೂ.6,83,297 ಕೋಟಿಗಳನ್ನು (ಬಜೆಟ್ ಅಂದಾಜು (ಬಿಇ) 2021-22 ರ ಅನುಗುಣವಾಗಿ ಒಟ್ಟು ಸ್ವೀಕೃತಿಗಳು 34.6%) ಪಡೆದಿದ್ದು ಇದು ರೂ.5,29,189 ಕೋಟಿ ತೆರಿಗೆ ಆದಾಯ (ನೆಟ್ ಟು ಸೆಂಟರ್ – ಕೇಂದ್ರಕ್ಕೆ ನಿವ್ವಳ), ರೂ .1,39,960 ಕೋಟಿ ತೆರಿಗೆ ರಹಿತ ಆದಾಯ ಮತ್ತು ರೂ.14,148 ಕೋಟಿ ಸಾಲ ರಹಿತ ಬಂಡವಾಳದ ಸ್ವೀಕೃತಿಗಳನ್ನು ಒಳಗೊಂಡಿದೆ. ಸಾಲ ರಹಿತ ಬಂಡವಾಳ ಸ್ವೀಕೃತಿಗಳು ರೂ.5,777 ಕೋಟಿ ಮರುಪಾವತಿ ಮತ್ತು ಮರುಹೂಡಿಕೆ ಆದಾಯ ರೂ .8,371 ಕೋಟಿ ಒಳಗೊಂಡಿದೆ. ರೂ .1,65,064 ಕೋಟಿಯನ್ನು ರಾಜ್ಯ ಸರ್ಕಾರಗಳಿಗೆ ಜುಲೈ 2021 ರ ವರೆಗೆ ಭಾರತ ಸರ್ಕಾರವು ತೆರಿಗೆ ಹಂಚಿಕೆಯ ಭಾಗವಾಗಿ ವರ್ಗಾಯಿಸಿದೆ.
ಭಾರತ ಸರ್ಕಾರವು ಮಾಡಿದ ಒಟ್ಟು ವೆಚ್ಚವು ರೂ .10,04,440 ಕೋಟಿ (ಬಜೆಟ್ ಅಂದಾಜು (ಬಿಇ) 2021-22 ರ ಅನುಗುಣವಾಗಿ 28.8%), ಅದರಲ್ಲಿ ರೂ.8,76,012 ಕೋಟಿ ಆದಾಯದ ಖಾತೆಗೆ ಮತ್ತು ರೂ.1,28,428 ಕೋಟಿ ಬಂಡವಾಳ ಖಾತೆಗೆ ಸೇರಿವೆ. ಒಟ್ಟು ರಾಜಸ್ವ ವೆಚ್ಚದಲ್ಲಿ ರೂ.2,25,817 ಕೋಟಿ ಬಡ್ಡಿ ಪಾವತಿ ಮತ್ತು ರೂ.1,20,069 ಕೋಟಿ ಪ್ರಮುಖ ಸಬ್ಸಿಡಿಗಳಾಗಿವೆ.
***
(Release ID: 1750769)
Visitor Counter : 215