ಗಣಿ ಸಚಿವಾಲಯ

ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಕೇಂದ್ರ ಗಣಿ ಸಚಿವಾಲಯದ ಜೆ.ಎನ್.ಎ.ಆರ್.ಡಿ.ಡಿ.ಸಿ. ಯಿಂದ ಹಾಕಿ ದಿಗ್ಗಜ, ಮೇಜರ್ ಧ್ಯಾನ್ ಚಂದ್ ಅವರ ಕುರಿತು ಉಪನ್ಯಾಸ ಆಯೋಜನೆ.

Posted On: 30 AUG 2021 4:21PM by PIB Bengaluru

"ಆಜಾದಿ ಕಾ ಅಮೃತ್ ಮಹೋತ್ಸವ" ಆಚರಣೆಯ ಭಾಗವಾಗಿ, ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಕೇಂದ್ರ ಸ್ವಾಯತ್ತ ಸಂಶೋಧನಾ ಸಂಸ್ಥೆ ಹಾಗೂ ಎನ್.ಎ.ಬಿ.ಎಲ್. ಮಾನ್ಯತೆ ಪಡೆದ ಪ್ರಯೋಗಾಲಯ ಎಂಬ ಹೆಗ್ಗಳಿಕೆಯ, ಜವಾಹರಲಾಲ್ ನೆಹರು ಅಲ್ಯೂಮಿನಿಯಂ ಸಂಶೋಧನೆ ಅಭಿವೃದ್ಧಿ ಮತ್ತು ವಿನ್ಯಾಸ ಕೇಂದ್ರ (ಜೆ.ಎನ್.ಎ.ಆರ್.ಡಿ.ಡಿ.ಸಿ.), ನಾಗಪುರ್, ಹಾಕಿ ಕ್ರೀಡೆಗೆ ಅವರ ಅಮೂಲ್ಯ ಕೊಡುಗೆಗಳನ್ನು ನೀಡಿದ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರನ್ನು ಗೌರವಿಸಲೋಸುಗ, ಅವರ ಕುರಿತು ಸಂಕ್ಷಿಪ್ತ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತು. ನಾಗ್ಪುರದ ಕ್ರೀಡಾ ಪ್ರೇಮಿಗಳು ಮತ್ತು ಜೆ.ಎನ್.ಎ.ಆರ್.ಡಿ.ಡಿ.ಸಿ.ಯ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಕಳೆದ ವರ್ಷದ ವಿಜೇತರು ಮತ್ತು ರನ್ನರ್ಸ್ ಅಪ್ ನಡುವೆ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಪ್ರದರ್ಶನ ಪಂದ್ಯಗಳು ನಡೆದವು. ನಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಕ್ರೀಡೆಯ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸುವ ದೃಷ್ಟಿಯಿಂದ ಈ ಸಾಂಕೇತಿಕ ಕ್ರೀಡಾ ಸ್ಪರ್ಧೆ ನಡೆಯಿತು. ನಮ್ಮ ದಿನನಿತ್ಯದ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ಸಾದರ ಪಡಿಸಲು ಜೆ.ಎನ್.ಎ.ಆರ್.ಡಿ.ಡಿ.ಸಿ. ಬಹಳ ಸಂಭ್ರಮ ಮತ್ತು ಉತ್ಸಾಹದಿಂದ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಿದೆ.

***



(Release ID: 1750572) Visitor Counter : 189