ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಭಾವಿನ ಪಟೇಲ್: ಟೇಬಲ್ ಟೆನಿಸ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ


ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಮತ್ತು ಭಾವಿನ ಸಿಂಗ್ ಅವರ 2010 ರ ಸ್ಮರಣೀಯ ಛಾಯಾಚಿತ್ರ ಹಂಚಿಕೊಂಡ ಶ್ರೀ ಅನುರಾಗ್ ಠಾಕೂರ್

Posted On: 29 AUG 2021 5:54PM by PIB Bengaluru

ಪ್ರಮುಖ ಅಂಶಗಳು

ಭಾನುವಾರ ಬೆಳಗ್ಗೆ ಝೊಯು ಯಿಂಗ್ ವಿರುದ್ಧದ ಪೈನಲ್ ಪಂದ್ಯ ನಂತರ ಭಾವಿನ ಅವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿ  ಮತ್ತು ಬೆಳ್ಳಿ ಪದಕ ಗೆದ್ದ ಹಿನ್ನೆಲೆಯಲ್ಲಿ ಆಕೆಯನ್ನು ಅಭಿನಂದಿಸಿದರು.


ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಮಹಿಳೆಯರ ಕ್ಲಾಸ್ 4 ಟೇಬಲ್ ಟೆನಿಸ್ ನಲ್ಲಿ ಇಂದು ಮೊಟ್ಟ ಮೊದಲ ಬೆಳ್ಳಿ ಪದಕ ಗೆದ್ದ ಭಾರತದ ಭಾವಿನಬೆನ್ ಪಟೇಲ್ ಇತಿಹಾಸ ಸೃಷ್ಟಿಸಿದ್ದಾರೆ. 2021 ರ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಬೆಳ್ಳಿ ಗೆದ್ದಿರುವುದು ಅಚ್ಚರಿಯೇನಲ್ಲ. ಜತೆಗೆ  ರಾಷ್ಟ್ರಕ್ಕೆ ಸ್ಮರಣೀಯ ಕೊಡುಗೆಯಾಗಿದೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ‍್ರೀ ಅನುರಾಗ್ ಠಾಕೂರ್ ಇತಿಹಾಸದತ್ತ ಹೋಗಿದ್ದರು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾವಿನ ಅವರೊಂದಿಗೆ ಇದ್ದ ಅಮೂಲ್ಯ ಕ್ಷಣವನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವರು 2010 ರಲ್ಲಿ ಭಾವಿನ ಮತ್ತು ಸೊನಲ್ ಬೆನ್ ಪಟೇಲ್ ಅವರನ್ನು ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಶ‍್ರೀ ನರೇಂದ್ರ ಮೋದಿ ಅವರು ಸನ್ಮಾನಿಸಿದ್ದರು. “ ಸೊನಲ್ ಮತ್ತು ಭಾವಿನ ಅವರು 2010 ರ ದೆಹಲಿ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದರು. ಮುಖ್ಯಮಂತ್ರಿ ಅವರು ಇವರನ್ನು ಭೇಟಿ ಮಾಡಿ ಅತ್ಯುತ್ತಮವಾದ್ದದನ್ನು ನೀಡುವಂತೆ ಪ್ರೋತ್ಸಾಹಿಸಿದ್ದರು ಎಂದು ಶ‍್ರೀ ಠಾಕೂರ್ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.  

 


 

“ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸುವ, ಪ್ರತಿಯೊಂದು ಕ್ರೀಡೆಯನ್ನು ಬೆಂಬಲಿಸುವ ಮತ್ತು ಕ್ರೀಡಾಪಟುಗಳ ಜೀವಮಾನದ ಶ್ರೇಷ್ಠ ಪ್ರಯತ್ನಗಳು ಮುಂದುವರಿಯುತ್ತದೆ ಮತ್ತು ಇಂದು ಅದರ ಫಲ ನೀಡುತ್ತಿದೆ. ಕ್ರೀಡಾಪಟುಗಳ ಪ್ರಧಾನಮಂತ್ರಿ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, “ಭಾನುವಾರ ಬೆಳಗ್ಗೆ ಝೊಯು ಯಿಂಗ್ ವಿರುದ್ಧದ ಪೈನಲ್ ಪಂದ್ಯ ನಂತರ ಭಾವಿನ ಅವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಬೆಳ್ಳಿ ಪದಕ ಗೆದ್ದ ಹಿನ್ನೆಲೆಯಲ್ಲಿ ಆಕೆಯನ್ನು ಅಭಿನಂದಿಸಿದ್ದರು” ಎಂದು ತಿಳಿಸಿದ್ದಾರೆ.

34 ವರ್ಷದ ಭಾರತೀಯ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನ ಕ್ಲಾಸ್ 4 ಕ್ಯಾಟಗೆರಿಯಲ್ಲಿ ವಿಶ್ವ ಶ್ರೇಯಾಂಕದಲ್ಲಿ 12 ನೇ ಸ್ಥಾನದಲ್ಲಿರುವ ಅವರಿಗೆ ಯಿಂಗ್ ವಿರುದ್ಧದ ಪೈನಲ್ ಪಂದ್ಯದವರೆಗೆ ಏರಿದ್ದು ಅತ್ಯಂತ ದೊಡ್ಡ ಕ್ಷಣಗಳಾಗಿವೆ.  ವಿಶ್ವದ ನಂಬರ್ ಒನ್ ಆಟಗಾರ್ತಿ ವಿರುದ್ಧ ಅವರು 0-3 ರ ಅಂತರದಲ್ಲಿ ಪರಾಭವಗೊಂಡರು. ಪ್ಯಾರ ಒಲಿಂಪಿಕ್ಸ್ ನಲ್ಲಿ ಆರು ಚಿನ್ನದ ಪದಕಗಳನ್ನು  ಇವರು ಗಳಿಸಿದ್ದಾರೆ. ಭಾವಿನ ತನ್ನ ಆರಂಭಿಕ ಪಂದ್ಯದಲ್ಲೂ ಚೀನಿಯರ ವಿರುದ್ಧ ಕಡಿಮೆ ಪ್ರದರ್ಶನ ನೀಡಿದ್ದರು. ಆದರೆ ಪ್ರೀ ಕ್ವಾರ್ಟರ್ ಹಂತದಿಂದ ಮೇಲೇರಿದ ಬೆಳವಣಿಗೆ ಗಮನಾರ್ಹವಾದ್ದದ್ದು

ಭಾವಿನ ಅವರಿಗೆ ಇದು ಅವರ ಮೊದಲ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಇವರು 16 ನೇ ಸುತ್ತಿನಲ್ಲಿ ಬ್ರಿಜಿ಼ಲ್ ನ ಜೋಯ್ಸಿ ಡಿ ಒಲಿವೈರ ವಿರುದ್ಧ 3-0 ಅಂತರದಿಂದ ನೇರ ಸೆಟ್ ಗಳಿಂದ ಗೆದ್ದಿದ್ದರು. ಕ್ವಾರ್ಟರ್ ಪೈನಲ್ಸ್ ನಲ್ಲಿ ಭಾವಿನ ಸೆರ್ಬಿಯಾದ ಬೊರಿಸ್ಲೆವ ಪೆರಿಕ್ ವಿರುದ್ಧ ಗದ್ದರು. ಸೆರ್ಬಿಯಾ ಆಟಗಾರ್ತಿ 2016 ರ ರಿಯೋ ಪ್ಯಾರಾಲಿಂಪಿಕ್ಸ್ ಚಿನ್ನ ಹಾಗೂ  ಬೆಳ್ಳಿ ಗೆದ್ದಿದ್ದರು. ಭಾರತದ ಆಟಗಾರ್ತಿ ಪ್ರಭುತ್ವ ಸಾಧಿಸಿ 3-0 ಅಂತರದಿಂದ ಗೆಲುವು ಸಾಧಿಸಿದರು. 2012 ರ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಮತ್ತು 2016 ರ ಪ್ಯಾರಾಲಿಂಪಿಕ್ಸ್ ನ ಬೆಳ್ಳಿ ಪದಕ ವಿಜೇತರನ್ನು ಭಾವಿನ ಪರಾಭವಗೊಳಿಸಿದರು ಮತ್ತು ಬೆಳ್ಳಿ ಪದಕ ಗೆದ್ದಿದ್ದ ಝಂಗ್ ಮಿಯೊ ವಿರುದ್ಧ 3-2 ರ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದರು.   

ಭಾವಿನ ಅವರಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಭಾರತ ಸರ್ಕಾರ ಪರಮೋಚ್ಚ ಬೆಂಬಲ ನೀಡಿತ್ತು.  ಟೇಬಲ್ ಟೆನಿಸ್ ನ ಟೇಬಲ್, ಟಿ.ಟಿ. ರೊಬೊಟ್, ಬಟ್ಟರ್ ಪ್ಲೈ – ಅಮಿಕಸ್ ಪ್ರೈಮ್, ಗಳನ್ನು ಖರೀದಿಸಲು 2.85 ಲಕ್ಷ ರೂ, ಒಟ್ಟೆಬೊಕ್ ವೀಲ್ ಚೇರ್ ಖರೀದಿಸಲು 2.74 ಲಕ್ಷ ರೂ ನೀಡಲಾಗಿತ್ತು.

****
 



(Release ID: 1750373) Visitor Counter : 210