ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಪತ್ರಿಕಾ ಪ್ರಕಟಣೆ

Posted On: 26 AUG 2021 7:35PM by PIB Bengaluru

ಭಾರತದ ಸಂವಿಧಾನದ ಅನುಚ್ಛೇದ 124ರ ಖಂಡ (2) ನೀಡಿದ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿಗಳು ಶ್ರೀಮತಿ/ಶ್ರೀಯುತ ನ್ಯಾಯಮೂರ್ತಿಗಳಾದ (1) ಅಭಯ್ ಶ್ರೀನಿವಾಸ್ ಓಕಾ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ; (2) ವಿಕ್ರಮ್ ನಾಥ್, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, (3) ಜಿತೇಂದ್ರ ಕುಮಾರ್ ಮಹೇಶ್ವರಿ, ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (4) ಕುಮಾರಿ ಹಿಮಾ ಕೊಹ್ಲಿ, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, (5) ಶ್ರೀಮತಿ ವೆಂಕಟರಾಮಯ್ಯ ನಾಗರತ್ನ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ, (6) ಚೂಡಾಲೈಲ್ ತೆವನ್ ರವಿಕುಮಾರ್, ಕೇರಳ ಹೈಕೋರ್ಟ್ ನ್ಯಾಯಮೂರ್ತಿ, (7) ಎಂ.ಎಂ. ಸುಂದ್ರೇಶ್, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ(8) ಕುಮಾರಿ ಬೇಲಾ ಮಧುರಯ್ಯ ತ್ರಿವೇದಿ, ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಮತ್ತು (9) ಶ್ರೀ ಪಮಿದಿಘಂಟಮ್ ಶ್ರೀ ನರಸಿಂಹ, ಭಾರತದ ಸರ್ವೋಚ್ಚ ನ್ಯಾಯಾಲಯದ ವಕೀಲರು – ಇವರನ್ನು ಸೇವಾ ಹಿರಿತನದ ಕ್ರಮದಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಿಸಲು ಹರ್ಷಿಸುತ್ತಾರೆ.  ನೇಮಿತರು ತಮ್ಮ ಕಚೇರಿಯ ಹೊಣೆಗಾರಿಕೆ ವಹಿಸಿಕೊಂಡ ದಿನದಿಂದ ಈ ಆದೇಶ ಜಾರಿಗೆ ಬರಲಿದೆ.

***


(Release ID: 1749406) Visitor Counter : 203


Read this release in: English , Urdu , Hindi , Tamil , Telugu