ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ: ಭಾರತದ ಜಲ ಕ್ರೀಡಾಪಟುಗಳು


ಈ ಮೂರೂ ಕ್ರೀಡಾಪಟುಗಳು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿ ಒ ಪಿ ಎಸ್) ನ ಭಾಗವಾಗಿದ್ದಾರೆ

Posted On: 23 AUG 2021 5:49PM by PIB Bengaluru

ಪ್ರಮುಖ ಅಂಶಗಳು:

  • ಭಾರತದ ಮೂರು ಸದಸ್ಯರ ಜಲ ಕ್ರೀಡೆ ನಿಯೋಗವು ಇಬ್ಬರು ಪುರುಷ ಈಜುಗಾರರು ಮತ್ತು ಮಹಿಳಾ ಕೆನೊ ಸ್ಪ್ರಿಂಟ್ ಕ್ರೀಡಾಪಟುವನ್ನು ಒಳಗೊಂಡಿದೆ.
  • ಸಯಾಶ್ ಜಾಧವ್‌ಗೆ, ಇದು ಅವರ ಎರಡನೇ ಪ್ಯಾರಾಲಿಂಪಿಕ್ ಕ್ರೀಡಾಕೂಟವಾಗಿದ್ದು, ನಿರಂಜನ್ ಮುಕುಂದನ್ ಮತ್ತು ಪ್ರಾಚಿ ಯಾದವ್ ಮೊದಲ ಬಾರಿಗೆ ಟೋಕಿಯೊದಲ್ಲಿ ಅತಿದೊಡ್ಡ ವೇದಿಕೆಯಲ್ಲಿ ಭಾಗವಹಿಸುತ್ತಿದ್ದಾರೆ.
  • ವಿದೇಶದಲ್ಲಿ ಆಡುವ ಅವಕಾಶಕ್ಕಾಗಿ ಭಾರತ ಸರ್ಕಾರವು ಸುಯಾಶ್‌ಗೆ ನೆರವು ನೀಡಿದೆ.  
  • ನಿರಂಜನ್ 60ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ ಮತ್ತು 50ಕ್ಕೂ ಹೆಚ್ಚು ಪದಕಗಳನ್ನು ಹೊಂದಿದ ಏಕೈಕ ಪ್ಯಾರಾ ಈಜುಗಾರರಾಗಿದ್ದಾರೆ.
  • 26 ವರ್ಷದ ಪ್ರಾಚಿ ಯಾದವ್ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ಯಾರಾ ಕ್ಯಾನೋಯಿಂಗ್ ಸ್ಪರ್ಧೆಯಲ್ಲಿ ಪ್ರವೇಶ ಪಡೆದ ಮೊದಲ ಭಾರತೀಯರಾದರು.

ಭಾರತದ ಮೂವರು ಸದಸ್ಯರ ಜಲ ಕ್ರೀಡಾ ನಿಯೋಗವು ಇಬ್ಬರು ಪುರುಷ ಈಜುಗಾರರು ಮತ್ತು ಒಬ್ಬ ಮಹಿಳಾ ಕೆನೊ ಸ್ಪ್ರಿಂಟ್ ಕ್ರೀಡಾಪಟುಗಳನ್ನು ಒಳಗೊಂಡಿದ್ದು, ಟೋಕಿಯೊದಲ್ಲಿ ನಡೆಯುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನಗಳನ್ನು ನೀಡುವರು ಎಂಬ ವಿಶ್ವಾಸ ಅವರಿಗಿದೆ. ಸಯಾಶ್ ಜಾಧವ್‌ಗೆ ಇದು ಅವರ 2 ನೇ ಪ್ಯಾರಾಲಿಂಪಿಕ್ ಕ್ರೀಡಾಕೂಟವಾಗಿದ್ದು, ನಿರಂಜನ್ ಮುಕುಂದನ್ ಮತ್ತು ಪ್ರಾಚಿ ಯಾದವ್ ಮೊದಲ ಬಾರಿಗೆ ಟೋಕಿಯೊದಲ್ಲಿ ಅತಿದೊಡ್ಡ ವೇದಿಕೆಯಲ್ಲಿ ಭಾಗವಹಿಸುತ್ತಿದ್ದಾರೆ ಮೂವರು ಕ್ರೀಡಾಪಟುಗಳು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿ ಪಿ ಎಸ್) ಭಾಗವಾಗಿದ್ದಾರೆ

2018 ಜಕಾರ್ತದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ 50 ಮೀಟರ್ ಬಟರ್‌ಫ್ಲೈ ಎಸ್7 (32.71 ಸೆಕೆಂಡುಗಳು)ರಲ್ಲಿ ಸಯಾಶ್ ಜಾಧವ್ ಗೆಲುವು ಅವರಿಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಪ್ರವೇಶದ ಭರವಸೆ ನೀಡಿತು. ವಾಸ್ತವವಾಗಿ, ಪುರುಷರ 200 ಮೀ ವೈಯಕ್ತಿಕ ಮೆಡ್ಲೆ ಎಸ್‌ಎಂ 7 (2: 51.39) ರಲ್ಲಿ ಅವರ ಕಂಚಿನ ಪದಕ ಕೂಡ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ  ಅವರಿಗೆ ಸ್ಥಾನವನ್ನು ದೊರಕಿಸಿತು.

ಚಿತ್ರ: ಸಯಾಶ್ ಜಾಧವ್

ಪುಣೆಯ ಕ್ರೀಡಾ ಮತ್ತು ಯುವ ವ್ಯವಹಾರ ನಿರ್ದೇಶನಾಲಯದಲ್ಲಿ  ಈಗ ಈಜು ತರಬೇತುದಾರರಾಗಿರುವ , ಮಹಾರಾಷ್ಟ್ರದ , ಸುಯಾಶ್ ರವರು ಬಾಲೆವಾಡಿ ಕ್ರೀಡಾಂಗಣದಲ್ಲಿ ತರಬೇತುದಾರರಾದ ತಪನ್ ಪಾಣಿಗ್ರಹಿಯವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರಿಗೆ ವಿದೇಶದ ಅವಕಾಶಕ್ಕಾಗಿ ಭಾರತ ಸರ್ಕಾರದಿಂದ ನೆರವು ನೀಡಲಾಗಿದೆ, ಇದರಲ್ಲಿ ಅವರು ಐದಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆಕ್ರೀಡಾ ವಿಜ್ಞಾನದ ಬೆಂಬಲ ಹಾಗೂ ಕ್ರೀಡಾ ತರಬೇತಿ ಬೆಂಬಲದೊಂದಿಗೆ  ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 11ನೇ ವಯಸ್ಸಿನಲ್ಲಿ ವಿದ್ಯುತ್ ಸ್ಪರ್ಶದಿಂದಾಗಿ ಸುಯಾಶ್ ತಮ್ಮ ಕೈಗಳನ್ನು ಕಳೆದುಕೊಳ್ಳಬೇಕಾಯಿತು.

ಸುಯಾಶ್ ಅವರ 200 ಮೀ ವೈಯಕ್ತಿಕ ಮೆಡ್ಲೆ ಎಸ್‌ಎಂ 7 ಈವೆಂಟ್ ಆಗಸ್ಟ್ 27 ಕ್ಕೆ ನಿಗದಿಯಾಗಿದ್ದರೆ, ಅವರು ಸೆಪ್ಟೆಂಬರ್ 3 ರಂದು ಪುರುಷರ 50 ಮೀಟರ್ ಬಟರ್‌ಫ್ಲೈ ಎಸ್ 7 ಸ್ಪರ್ಧೆಗಳಲ್ಲಿ ನಿರಂಜನ್ ಮುಕುಂದನ್ ಅವರೊಂದಿಗೆ  ಭಾಗವಹಿಸಲಿದ್ದಾರೆಮುರಳಿಕಾಂತ್ ಪೆಟ್ಕರ್ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟುವಾಗಿದ್ದಾರೆ. ಅವರು ಜರ್ಮನಿಯ ಹೈಡೆಲ್‌ಬರ್ಗ್‌ನಲ್ಲಿ 50 ಮೀ ಫ್ರೀಸ್ಟೈಲ್ ನಲ್ಲಿ ಚಿನ್ನವನ್ನು ಪಡೆದಿದ್ದರು.

ತಿಂಗಳ ಆರಂಭದಲ್ಲಿ, 26 ವರ್ಷದ ಬ್ಯಾಂಕ್ ವೃತ್ತಿಯಲ್ಲಿರುವ ನಿರಂಜನ್‌ಗೆ ಅಂತರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯು ಕ್ರೀಡಾಕೂಟದಲ್ಲಿ ದ್ವಿಪಕ್ಷೀಯ ಸ್ಥಾನವನ್ನು ನೀಡಿತು. ಅವರು 60 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ ಮತ್ತು 50 ಪದಕಗಳ ಗಡಿ ದಾಟಿದ ಏಕೈಕ ಪ್ಯಾರಾ ಈಜುಗಾರರಾಗಿದ್ದಾರೆ. ನಿರಂಜನ್ ಕ್ರೀಡಾ ವಿಜ್ಞಾನದ ಬೆಂಬಲ ಮತ್ತು ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಭಾಗವಹಿಸುವಿಕೆಯೊಂದಿಗೆ ವಿದೇಶದಿಂದ ಪೂರ್ವಸಿದ್ಧತಾ ಪ್ರವಾಸದ ರೂಪದಲ್ಲಿ ಸರ್ಕಾರದಿಂದ ಸಹಾಯವನ್ನು ಪಡೆದಿದ್ದಾರೆ.

ಚಿತ್ರ: ನಿರಂಜನ್

ಸ್ಪೈನಲ್ ಬೈಫಿಡಾ ಮತ್ತು ಕ್ಲಬ್ಡ್ ಪಾದಗಳೊಂದಿಗೆ ಜನಿಸಿದ ನಿರಂಜನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಒಂದು ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ. ತಮ್ಮ ಅಜ್ಜಿಯನ್ನು ಕಳೆದುಕೊಂಡ ಕೆಲವು ತಿಂಗಳುಗಳಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದರೂ ಸಹ, ಸಾಂಕ್ರಾಮಿಕದ ಸಮಯದಲ್ಲಿ ಅವರು ಬೆಂಗಳೂರಿನಲ್ಲಿ ಜಾನ್ ಕ್ರಿಸ್ಟೋಫರ್ ಅಡಿಯಲ್ಲಿ ತರಬೇತಿ ಪಡೆದರು.

26 ವರ್ಷದ ಪ್ರಾಚಿ ಯಾದವ್ ಪ್ಯಾರಾಲಿಂಪಿಕ್ಸ್ ಪ್ಯಾರಾ ಕ್ಯಾನೋಯಿಂಗ್ ಪ್ರವೇಶ ಪಡೆದ ಮೊದಲ ಭಾರತೀಯರಾದರು. ಅವರು ಸೆಪ್ಟೆಂಬರ್ 2 ರಂದು ಮಹಿಳೆಯರ ವಿಎಲ್ 2  200 ಮೀ ಹೀಟ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ, ನಂತರ ಮರುದಿನ ಸೆಮಿಫೈನಲ್ ಮತ್ತು ಫೈನಲ್‌ಗಳು ನಡೆಯಲಿವೆಮೇ 2019 ರಲ್ಲಿ ಪೋಲೆಂಡ್‌ನ ಪೋಜ್ನಾನ್ ನಲ್ಲಿ ನಡೆದ ಐಸಿಎಫ್ ಪ್ಯಾರಾ ಕ್ಯಾನೋ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ ಅವರು, ಮೊದಲ ಸುತ್ತು ಮತ್ತು ಸೆಮಿಫೈನಲ್‌ಗಳ ನಂತರ  ಎಂಟನೇ ಸ್ಥಾನವನ್ನು ಗಳಿಸಿದರು. ನಂತರ, ಅವರು 2019 ಆಗಸ್ಟ್‌ನಲ್ಲಿ ಹಂಗೇರಿಯ ಸೆಜೆಡ್ ನಲ್ಲಿ ನಡೆದ ಐಸಿಎಫ್ ಪ್ಯಾರಾ ಕ್ಯಾನೋ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದರು.

ಚಿತ್ರ: ಪ್ರಾಚಿ ಯಾದವ್

ಪ್ರಾಚಿ, ಭೋಪಾಲ್‌ನ ಲೋ ಲೇಕ್‌ನಲ್ಲಿ ಮಯಾಂಕ್ ಸಿಂಗ್ ಠಾಕೂರ್ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ನಡುವಿನ ಕೆಳಗೆ ಅಂಗವೈಕಲ್ಯ ಹೊಂದಿದ್ದಾರೆ. ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮತ್ತು ಕ್ರೀಡಾ ವಿಜ್ಞಾನ ಬೆಂಬಲ ಮತ್ತು ಕಿಟ್‌ಗಳೊಂದಿಗೆ ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಭಾರತ ಸರ್ಕಾರದಿಂದ ಬೆಂಬಲವನ್ನು ಪಡೆದಿದ್ದಾರೆ.

***


(Release ID: 1748784) Visitor Counter : 222