ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
54 ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಾರೆ ಮತ್ತು ಆಗಸ್ಟ್ 25 ರಂದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕಕ್ಕಾಗಿ ತಮ್ಮ ಪ್ರಯಾಣವನ್ನು ಆರಂಭಿಸುತ್ತಾರೆ
ಎಲ್ಲಾ 54 ಕ್ರೀಡಾಪಟುಗಳು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್)ನ ಭಾಗವಾಗಿದ್ದಾರೆ
Posted On:
22 AUG 2021 4:12PM by PIB Bengaluru
ಪ್ರಮುಖಾಂಶಗಳು:
• ಇದು 54 ಕ್ರೀಡಾಪಟುಗಳನ್ನು ಹೊಂದಿರುವ ಯಾವುದೇ ಪ್ಯಾರಾಲಿಂಪಿಕ್ಸ್‌ಗೆ ಭಾರತ ಕಳುಹಿಸಿದ ಅತಿ ದೊಡ್ಡ ತಂಡವಾಗಿದೆ.
• ಭಾವಿನಾ ಮತ್ತು ಸೋನಾಲ್ ಬೆನ್ ತಮ್ಮ ಅರ್ಹತಾ ಸುತ್ತುಗಳನ್ನು ಆರಂಭದ ದಿನ ಅಂದರೆ ಆಗಸ್ಟ್ 25 ರಂದು ಆರಂಭಿಸುತ್ತಾರೆ. ಅವರು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್) ಕೋರ್ ಗುಂಪಿನ ಭಾಗವಾಗಿದ್ದಾರೆ.
• ಅರುಣಾ 49 ಕೆಜಿ ಕೆ 44 ವಿಭಾಗದಲ್ಲಿ ಮಹಿಳೆಯರ ಭಾಗವಹಿಸಲಿದ್ದಾರೆ. ಅವರು ಸೆಪ್ಟೆಂಬರ್ 2 ರಂದು 16 ರೌಂಡ್-ಆಫ್ ಸುತ್ತುಗಳಿಂದ ಆರಂಭಿಸುತ್ತಾರೆ. ಅವರು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್) ನ ಒಂದು ಭಾಗವಾಗಿದ್ದಾರೆ.
• 50 ಕೆಜಿ ವರೆಗಿನ ಮಹಿಳೆಯರ ವಿಭಾಗದಲ್ಲಿ ಭಾಗವಹಿಸುವ ಸಕಿನಾ, ಕಾಮನ್ ವೆಲ್ತ್ ಗೇಮ್ಸ್ ಪದಕ ಗೆದ್ದ ಏಕೈಕ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಆಗಿದ್ದಾರೆ.
ಭಾರತದ 54 ಕ್ರೀಡಾಪಟುಗಳು ಬಿಲ್ಲುಗಾರಿಕೆ, ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್), ಬ್ಯಾಡ್ಮಿಂಟನ್, ಈಜು, ವೇಟ್ ಲಿಫ್ಟಿಂಗ್ ಸೇರಿದಂತೆ 9 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದು ಭಾರತವು ಯಾವುದೇ ಪ್ಯಾರಾಲಿಂಪಿಕ್ಸ್‌ಗೆ ಕಳುಹಿಸಿದ ಅತಿದೊಡ್ಡ ತಂಡವಾಗಿದೆ. ಎಲ್ಲಾ 54 ಕ್ರೀಡಾಪಟುಗಳು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್) ಯೋಜನೆಯ ಭಾಗವಾಗಿದ್ದಾರೆ.
ಗುಜರಾತಿನ ಭಾವಿನಾ ಪಟೇಲ್ ಮತ್ತು ಸೋನಾಲ್ ಬೆನ್ ಪಟೇಲ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ತಮ್ಮ ಅತ್ಯುತ್ತಮ ತಮ್ಮ ಅತ್ಯುತ್ತಮ ಪ್ರದರ್ಶನ ತೋರಿಸಲು ಉತ್ಸುಕರಾಗಿದ್ದಾರೆ. ಈ ಜೋಡಿಯು ಪ್ಯಾರಾ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ವ್ಹೀಲ್ ಚೇರ್ ಕ್ಲಾಸ್ 4 ವಿಭಾಗದಲ್ಲಿ ಮತ್ತು ಮಹಿಳಾ ಸಿಂಗಲ್ಸ್ ವ್ಹೀಲ್ ಚೇರ್ ಕ್ಲಾಸ್ 3 ವಿಭಾಗದಲ್ಲಿ ಕ್ರಮವಾಗಿ ಭಾಗವಹಿಸುತ್ತಿದೆ. ಅವರು ಮಹಿಳಾ ಡಬಲ್ಸ್ ಈವೆಂಟ್‌ಗೆ ಕೂಡ ಜೊತೆಯಾಗುತ್ತಿದ್ದಾರೆ.
(ಚಿತ್ರ: ಸೋನಾಲ್ ಬೆನ್ ಪಟೆಲ್)
ಭಾವಿನಾ ಮತ್ತು ಸೋನಾಲ್ ಬೆನ್ ತಮ್ಮ ಅರ್ಹತಾ ಸುತ್ತುಗಳನ್ನು ಆರಂಭದ ದಿನ ಆಗಸ್ಟ್ 25 ರಂದು ಆರಂಭಿಸುತ್ತಾರೆ. ಅರ್ಹತಾ ಸುತ್ತುಗಳನ್ನು ಆಗಸ್ಟ್ 25, 26 ಮತ್ತು 27 ರಂದು ನಿಗದಿಪಡಿಸಲಾಗಿದೆ, ಸೆಮಿಫೈನಲ್ ಮತ್ತು ಫೈನಲ್ ಕ್ರಮವಾಗಿ ಆಗಸ್ಟ್ 28 ಮತ್ತು 29 ಕ್ಕೆ ನಿಗದಿಯಾಗಿದೆ.
(ಚಿತ್ರ: ಭಾವಿನ)
ಇವರಿಬ್ಬರು ತರಬೇತುದಾರರಾದ ಲಾಲನ್ ದೋಶಿ ಅವರ ಕೆಳಗೆ ಅಹ್ಮದಾಬಾದ್‌ನಲ್ಲಿರುವ ಬ್ಲೈಂಡ್ ಪೀಪಲ್ಸ್ ಅಸೋಸಿಯೇಶನ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಾವಿನಾ ಪ್ರಸ್ತುತ ತಮ್ಮ ವಿಭಾಗದಲ್ಲಿ 8ನೇ ಸ್ಥಾನದಲ್ಲಿದ್ದರೆ, ಸೋನಾಲ್ ಬೆನ್ 19ನೇ ಸ್ಥಾನದಲ್ಲಿದ್ದಾರೆ. ಇಬ್ಬರೂ ಸರ್ದಾರ್ ಪಟೇಲ್ ಪ್ರಶಸ್ತಿ ಮತ್ತು ಏಕಲವ್ಯ ಪ್ರಶಸ್ತಿಗಳನ್ನು ಪಡೆದವರಾಗಿದ್ದು ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಾಗಿದ್ದಾರೆ.
ಇಬ್ಬರೂ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್) ಕೋರ್ ಗುಂಪಿನ ಭಾಗವಾಗಿದ್ದು, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಭಾರತ ಸರ್ಕಾರದಿಂದ ಇಬ್ಬರೂ ಸಹಾಯ ಪಡೆದಿದ್ದಾರೆ. ಭಾವಿನಾ ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಅಣಿಯಾಗಲು ಟಿ.ಟಿ. ಟೇಬಲ್ ಗಳು, ರೋಬೋಟ್ ಮತ್ತು ವೈಯಕ್ತಿಕ ತರಬೇತಿಗಾಗಿ ಟಿ.ಟಿ. ಗಾಲಿಕುರ್ಚಿಗಳನ್ನು, ಫಿಸಿಯೋಥೆರಪಿ, ಡಯಟೀಶಿಯನ್, ಮನಶ್ಶಾಸ್ತ್ರಜ್ಞರು, ತರಬೇತಿಗಾಗಿ ಟಿಟಿ ಬಾಲ್, ರಬ್ಬರ್, ಗ್ಲೂ ಇತ್ಯಾದಿ, ತರಬೇತಿ ಶುಲ್ಕ ಮತ್ತು ಹಣಕಾಸಿನ ನೆರವನ್ನು ಪಡೆದಿದ್ದಾರೆ.
21 ವರ್ಷದ ಅರುಣಾ ತನ್ವಾರ್, ಪ್ಯಾರಾ ಟಿಟಿಯಲ್ಲಿರುವ ಆಕೆಯ ಹಿರಿಯ ಸಹೋದರಿಯನ್ನನುಸರಿಸಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದಿಂದ ಇರುವ ಏಕೈಕ ಪ್ಯಾರಾ ಟೇಕ್ವಾಂಡೋ ಪ್ರತಿನಿಧಿಯಾಗಿದ್ದಾರೆ. ಹರಿಯಾಣ ಮೂಲದ ಅರುಣಾ 49 ಕೆಜಿ ಕೆ44 ವಿಭಾಗದಲ್ಲಿ ಮಹಿಳೆಯರ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಸೆಪ್ಟೆಂಬರ್ 2 ರಂದು 16 ರೌಂಡ್-ಆಫ್ ಸುತ್ತುಗಳಿಂದ ಭಾಗವಹಿಸಲಿದ್ದಾರೆ.
(ಚಿತ್ರ: ಅರುಣಾ ತನ್ವರ್)
ಪ್ರಸ್ತುತ ಕೆ44 ವಿಭಾಗದಲ್ಲಿ 30 ನೇ ಸ್ಥಾನದಲ್ಲಿರುವ ಅರುಣಾ, 2018 ರಲ್ಲಿ ವಿಯೆಟ್ನಾಂನಲ್ಲಿ ನಡೆದ ಏಷ್ಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆಯಾಗಿರುವರು ಹಾಗೂ 2019 ರಲ್ಲಿ ಟರ್ಕಿಯಲ್ಲಿ ನಡೆದ ವಿಶ್ವ ಪ್ಯಾರಾ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆಯಾಗಿರುವರು. ಅವರು ಟಾರ್ಗೆಟ್ ಒಲಿಂಪಿಕ್ ಪೋಡಿಯಂನ ಸ್ಕೀಮ್ (ಟಿಒಪಿಎಸ್) ಭಾಗವಾಗಿದ್ದು ಮತ್ತು ಕ್ರೀಡಾ ಸಲಕರಣೆಗಳ ಖರೀದಿಯಲ್ಲಿ ಹಣಕಾಸಿನ ನೆರವು ಕೂಡ ದೊರಕಿದೆ.
(ಚಿತ್ರ: ಅರುಣಾ ತನ್ವರ್)
ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ, ಭಾರತವು ಜೈ ದೀಪ್ ಮತ್ತು ಸಕಿನಾ ಖಾತುನ್ ನಂತಹ ಇಬ್ಬರು ಅತ್ಯುತ್ತಮ ಕ್ರೀಡಾಪಟುಗಳನ್ನು ಕಳುಹಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಜನಿಸಿದ ಸಕಿನಾ ಬೆಂಗಳೂರಿನ ಎಸ್‌ಎಐ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದರೆ, ಹರಿಯಾಣ ಮೂಲದ ಜೈ ದೀಪ್ ರೋಹ್ಟಕ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಬ್ಬರೂ ಟಿಒಪಿಎಸ್ ಕೋರ್ ತಂಡದ ಭಾಗವಾಗಿದ್ದಾರೆ.
50 ಕೆಜಿ ವರೆಗಿನ ಮಹಿಳೆಯರ ವಿಭಾಗದಲ್ಲಿ ಭಾಗವಹಿಸಲಿರುವ ಸಕಿನಾ, 2014 ರಲ್ಲಿ ಗ್ಲಾಸ್ಗೋದಲ್ಲಿ ಮತ್ತೆ ಗೆದ್ದಾಗ ಕಾಮನ್ವೆಲ್ತ್ ಗೇಮ್ಸ್ ಪದಕ ಗೆದ್ದ ಏಕೈಕ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಆಗಿದ್ದಾರೆ. ಅವರು ಪ್ಯಾರಾ ಏಶಿಯನ್ ಗೇಮ್ಸ್ 2018 ಬೆಳ್ಳಿ ಪದಕ ವಿಜೇತೆ ಕೂಡ. ಮಗುವಿದ್ದಾಗ ಪೋಲಿಯೊ ಸೋಂಕಿನ ಪರಿಣಾಮವಾಗಿ ಸಕೀನಾ ಪೋಲಿಯೋ ಪೀಡಿತರಾದರು. ತನ್ನ ಮೆಟ್ರಿಕ್ಯುಲೇಷನ್ ನಂತರ, ಅವರು 2010 ರಲ್ಲಿ ದಿಲೀಪ್ ಮಜುಂದಾರ್ ಮತ್ತು ಅವಳ ಪ್ರಸ್ತುತ ತರಬೇತುದಾರರಾದ ಫಾರ್ಮಾನ್ ಬಾಷಾ ಅವರ ಆರ್ಥಿಕ ಬೆಂಬಲದೊಂದಿಗೆ ಪವರ್ ಲಿಫ್ಟಿಂಗ್ ತರಬೇತಿಯನ್ನು ಆರಂಭಿಸಿದರು.
(ಚಿತ್ರ: ಸಕಿನ ಖಾತುನ್)
65 ಕೆಜಿ ವರೆಗಿನ ಪುರುಷರ ವಿಭಾಗದಲ್ಲಿ ಭಾಗವಹಿಸುತ್ತಿರುವ ಜೈ ದೀಪ್, ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹಾಯಕ ತರಬೇತುದಾರರಾಗಿದ್ದಾರೆ. ಇಬ್ಬರಿಗೂ ಮೂರು ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಮತ್ತು ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಕ್ರೀಡಾ ವಿಜ್ಞಾನದ ಬೆಂಬಲದೊಂದಿಗೆ ಕ್ರೀಡಾ ಕಿಟ್‌ನೊಂದಿಗೆ ಭಾಗವಹಿಸಲು ಭಾರತ ಸರ್ಕಾರದ ಮುಖ್ಯ ಸಹಾಯವನ್ನು ದೊರಕಿದೆ. ಅವರಿಬ್ಬರೂ ಆಗಸ್ಟ್ 27 ರಂದು ತಮ್ಮ ಅಂತಿಮ ಸುತ್ತುಗಳಲ್ಲಿ ಟೋಕಿಯೊದಲ್ಲಿ ಭಾಗವಹಿಸಲಿದ್ದಾರೆ.
(ಚಿತ್ರ: ಜೈದೀಪ್)
***
(Release ID: 1748122)
Visitor Counter : 304