ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ತಾಜಾ ಮಾಹಿತಿ

Posted On: 21 AUG 2021 9:57AM by PIB Bengaluru

ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ ಈವರೆಗೆ 57.61 ಕೋಟಿ ಲಸಿಕೆ ನೀಡಿಕೆ

ಕಳೆದ 24 ಗಂಟೆಗಳಲ್ಲಿ 34,457 ಹೊಸ ಕೋವಿಡ್ ಪ್ರಕರಣ ದೃಢ

ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1.12ರಷ್ಟು ಮಾತ್ರ; ಕಳೆದ ಮಾರ್ಚ್ 2020ರಿಂದೀಚೆಗೆ ಅತಿ ಕಡಿಮೆ

ಭಾರತದ ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 3,61,340, ಕಳೆದ 151 ದಿನಗಳಲ್ಲೇ ಅತಿ ಕಡಿಮೆ

ಚೇತರಿಕೆ ಪ್ರಮಾಣ ಶೇ.97.54ಕ್ಕೆ ಏರಿಕೆ; ಕಳೆದ ಮಾರ್ಚ್ 2020ರಿಂದೀಚೆಗೆ ಅತ್ಯಧಿಕ

ಕಳೆದ 24ಗಂಟೆಗಳಲ್ಲಿ 36,347 ಸೋಂಕಿತರು ಚೇತರಿಕೆಯಾಗುವುದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 3,15,97,982ಕ್ಕೆ ಏರಿಕೆ

ವಾರದ ಪಾಸಿಟಿವಿಟಿ ದರ (ಶೇ.1.98) ಕಳೆದ 57 ದಿನಗಳಿಂದ ಶೇ.3ಕ್ಕಿಂತ ಕಡಿಮೆ ಇದೆ

ದಿನದ ಪಾಸಿಟಿವಿಟಿ ದರ  (ಶೇ.2.00) ಕಳೆದ 26 ದಿನಗಳಿಂದ ಶೇ.3ಕ್ಕಿಂತ ಕಡಿಮೆ

ಈವರೆಗೆ ಒಟ್ಟು 50.45 ಕೋಟಿ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ

***



(Release ID: 1747794) Visitor Counter : 219