ಇಂಧನ ಸಚಿವಾಲಯ
azadi ka amrit mahotsav

ವಿದ್ಯುತ್‌ ವಿತರಣಾ ಪರವಾನಗಿಗಾಗಿ ಪಾವತಿಗೆ ಸಂಬಂಧಿಸಿದಂತೆ ʻಮೊದಲು ಆಗಮನ, ಮೊದಲು ನಿರ್ಗಮನʼ ನೀತಿಯನ್ನು ಅನುಸರಿಸುವ ಮೂಲಕ ಪಾರದರ್ಶಕತೆಯನ್ನು ತರಲು ಮತ್ತು ವಿತರಣಾ ಪರವಾನಗಿದಾರನ ಹೊರೆಯನ್ನು ಇಳಿಸಲು ಇಂಧನ ಸಚಿವಾಲಯದ ಪ್ರಸ್ತಾಪ


ವಿದ್ಯುತ್ (ವಿಳಂಬಿತ ಪಾವತಿ ಸರ್ಚಾರ್ಜ್) ನಿಯಮಗಳಿಗೆ ತಿದ್ದುಪಡಿ ಪ್ರಸ್ತಾಪಿಸಿರುವ ಸರಕಾರ ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ (ಪಬ್ಲಿಕ್‌ ಡೊಮೇನ್‌) ಪ್ರತಿಕ್ರಿಯೆಗಳಿಗೆ ಆಹ್ವಾನ ನೀಡಿದೆ

Posted On: 19 AUG 2021 2:56PM by PIB Bengaluru

ಇಂಧನ ಸಚಿವಾಲಯವು ಇಂದು ಕರಡು ʻವಿದ್ಯುತ್ (ವಿಳಂಬಿತ ಪಾವತಿ ಸರ್ಚ್‌ಚಾರ್ಜ್) ತಿದ್ದುಪಡಿ ನಿಯಮಗಳು, 2021ʼ ಪ್ರಕಟಣೆ ಹೊರಡಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಕೋರಿದೆ. ಕರಡು ತಿದ್ದುಪಡಿ ನಿಯಮಗಳನ್ನು ಇಂಧನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವಿದ್ಯುತ್ ಗ್ರಾಹಕರಿಗೆ ಚಿಲ್ಲರೆ ದರವನ್ನು ಕಡಿಮೆ ಮಾಡುವ ಸಲುವಾಗಿ ವಿತರಣಾ ಪರವಾನಗಿದಾರರ ಹೊರೆಯನ್ನು ಇಳಿಸುವ ನಿಟ್ಟಿನಲ್ಲಿ ಇಂಧನ ಸಚಿವಾಲಯ ಮತ್ತೊಂದು ಹೆಜ್ಜೆ ಇರಿಸಲು ಪ್ರಸ್ತಾಪಿಸಿದೆ. ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ಮೂರನೇ ವ್ಯಕ್ತಿ/ಸಂಸ್ಥೆಗೆ ವಿದ್ಯುತ್ ಮಾರಾಟ ಮಾಡುವ ಮೂಲಕ ಅವುಗಳ ವೆಚ್ಚವನ್ನು ಸರಿದೂಗಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತಿದೆ. ಆ ಮಟ್ಟಿಗೆ ವಿತರಣಾ ಪರವಾನಗಿದಾರನ ನಿಗದಿತ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರಸ್ತಾಪಗಳನ್ನು ಮುಂದಿಡಲಾಗಿದೆ.

"ಸದರಿ ನಿಯಮಗಳಲ್ಲಿ, ನಿಯಮ 5ರ ನಂತರ, ಈ ಕೆಳಗಿನ ಹೊಸ ನಿಯಮವನ್ನು ಸೇರಿಸಲಾಗುವುದು, ಅವುಗಳೆಂದರೆ:-

6. ʻವಿದ್ಯುತ್‌ ಖರೀದಿ ಒಪ್ಪಂದದಲ್ಲಿ ಸೂಚಿಸಿದಂತೆ ಪಾವತಿಯ ನಿಗದಿತ ಗುಡುವಿನ ದಿನಾಂಕ ಕಳೆದು ಏಳು ತಿಂಗಳಾದರೂ ವಿಳಂಬಿತ ಪಾವತಿ ಸರ್ಚ್‌ಜಾರ್ಜ್‌ ಸೇರಿದಂತೆ ಯಾವುದೇ ರೀತಿಯ ಪಾವತಿ ಬಾಕಿಯನ್ನು ವಿತರಣಾ ಪರವಾನಗಿದಾರ ಹೊಂದಿದ್ದರೆ; ಅಂತಹ ಸಮಯದಲ್ಲಿ ವಿದ್ಯುತ್ ಖರೀದಿ ಒಪ್ಪಂದ ಅಥವಾ ವಿದ್ಯುತ್ ಸರಬರಾಜು ಒಪ್ಪಂದದಲ್ಲಿ ಯಾವುದೇ ಷರತ್ತು ಇಲ್ಲದಿದ್ದರೂ ಉತ್ಪಾದನಾ ಕಂಪನಿಯು ಯಾವುದೇ ಗ್ರಾಹಕ ಅಥವಾ ಇತರ ಯಾವುದೇ ಪರವಾನಗಿದಾರರು ಅಥವಾ ವಿದ್ಯುತ್ ವಿನಿಮಯ ಸಂಸ್ಥೆಗಳಿಗೆ, ಅಂತಹ ಸುಸ್ತಿ ಅವಧಿಗೆ ವಿದ್ಯುತ್ ಮಾರಾಟ ಮಾಡಬಹುದು. ಜೊತೆಗೆ ವಿತರಣಾ ಪರವಾನಗಿದಾರರಿಂದ ಸ್ಥಿರ ಶುಲ್ಕಗಳು ಅಥವಾ ಸಾಮರ್ಥ್ಯ ಶುಲ್ಕಗಳನ್ನು ಪಡೆಯುವ ವಿಚಾರದಲ್ಲಿ ತನ್ನ ಕ್ಲೇಮ್‌ ಅಥವಾ ಹಕ್ಕನ್ನುಉಳಿಸಿಕೊಂಡು, ವಿತರಣಾ ಪರವಾನಗಿದಾರನಿಗೆ ಕನಿಷ್ಠ ಹದಿನೈದು ದಿನಗಳ ಒಳಗೆ ಪಾವತಿಸುವಂತೆ ನೋಟಿಸ್‌ ಜಾರಿಗೊಳಿಸಬಹುದು. ಅಂತಹ ಕ್ಲೇಮ್‌ ಯಾವುದಾದರೂ ಇದ್ದರೆ, ವಾರ್ಷಿಕ ಆಧಾರದ ಮೇಲೆ ಹೊಂದಾಣಿಕೆ ಮಾಡಬೇಕು ಮತ್ತು ನಿಗದಿತ ಶುಲ್ಕಗಳು ಅಥವಾ ಸಾಮರ್ಥ್ಯ ಶುಲ್ಕಗಳ ವಸೂಲಾತಿಗೆ ಮಾತ್ರ ಅದು ಸೀಮಿತವಾಗಿರುತ್ತದೆ."

ಇದಲ್ಲದೆ, ಪಾವತಿ ಬಾಕಿಗಳ ಹಿನ್ನೆಲೆಯಲ್ಲಿ ವಿತರಣಾ ಪರವಾನಗಿದಾರರ ಮೇಲೆ ವಿಳಂಬಿತ ಪಾವತಿ ಸರ್ಚಾರ್ಜ್ ವಿಧಿಸುತ್ತಿರುವುದರಿಂದ ಅದು ಅವರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ. ವಿದ್ಯುತ್‌ ಉತ್ಪಾದನಾ ಯೋಜನೆಗಳಲ್ಲಿ ಹೂಡಿಕೆದಾರರು ಮತ್ತು ಉತ್ಪಾದನಾ ಯೋಜನೆ ನಿರ್ಮಾತೃಗಳ ವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಹಾಗೂ ವಿತರಣಾ ಪರವಾನಗಿದಾರನ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕೆಳಗಿನ ನಿಯಮದ ಮೂಲಕ ಬಿಲ್‌ಗಳ ಪಾವತಿಗೆ ಮೊದಲು ಆಗಮನ ಮತ್ತು ಮೊದಲು ನಿರ್ಗಮನ ತತ್ವವನ್ನು ಪ್ರಸ್ತಾಪಿಸಲಾಗಿದೆ.

"ಸದರಿ ನಿಯಮಗಳಲ್ಲಿ ನಿಯಮ 5ಕ್ಕೆ ಈ ಕೆಳಗಿನವುಗಳನ್ನು ಬದಲಿಯಾಗಿ ಸೇರಿಸಬೇಕು, ಅವುಗಳೆಂದರೆ:-

5. ವಿಳಂಬಿತ ಪಾವತಿ ಸರ್ಚಾರ್ಜ್ಗೆ ಪಾವತಿ ಆದೇಶ ಮತ್ತು ಹೊಂದಾಣಿಕೆ:-

 i ಉತ್ಪಾದನಾ ಕಂಪನಿಗೆ ಮಾಡುವ ಪಾವತಿ ಅಥವಾ ಟ್ರೇಡಿಂಗ್ ಪರವಾನಗಿದಾರರಿಗೆ ಅವರಿಂದ ಖರೀದಿಸಿದ ವಿದ್ಯುತ್‌ಗಾಗಿ ಮಾಡುವ ಪಾವತಿ ಅಥವಾ ಸರಬರಾಜು ಪರವಾನಗಿದಾರರಿಗೆ ಮಾಡುವ ಪಾವತಿ ಸೇರಿದಂತೆ ವಿತರಣಾ ಪರವಾನಗಿದಾರರು ಮಾಡಬೇಕಾದ ಎಲ್ಲಾ ಬಿಲ್‌ಗಳಿಗೆ ಸಮಯದ ಗಡುವು ಹಾಕಲಾಗುವುದು. ವಿದ್ಯುತ್ ಖರೀದಿ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಲಾದ ಪಾವತಿಯ ನಿಗದಿತ ದಿನಾಂಕಕ್ಕೆ ಸಂಬಂಧಿಸಿದಂತೆ ಸಮಯದ ಗಡುವು ವಿಧಿಸಲಾಗುವುದು. ವಿತರಣಾ ಪರವಾನಗಿದಾರರು ಮೊದಲು ಖರೀದಿಸಿದ ವಿದ್ಯುತ್ ಖರೀದಿಗೆ ಮೊದಲ ಪಾವತಿಯನ್ನು ಮಾಡಬೇಕು ಮತ್ತು ತದನಂತರ ಖರೀದಿಸಿದ ವಿದ್ಯುತ್‌ಗೆ ಕ್ರಮವಾಗಿ ನಂತರದ ಪಾವತಿ ಮಾಡಬೇಕು. ಹಳೆಯ ಖರೀದಿಗೆ ಪಾವತಿ ಮಾಡದ ಹೊರತು ಹೊಸ ಖರೀದಿಗೆ ಪಾವತಿ ಸಾಧ್ಯವಿಲ್ಲ.

ii ಉತ್ಪಾದನಾ ಕಂಪನಿಗೆ ಮಾಡಿದ ಪಾವತಿ ಅಥವಾ ಟ್ರೇಡಿಂಗ್ ಪರವಾನಗಿದಾರರಿಗೆ ಅವರಿಂದ ಖರೀದಿಸಿದ ವಿದ್ಯುತ್‌ಗಾಗಿ ಮಾಡುವ ಮಾಡಿದ ಅಥವಾ ಸರಬರಾಜು ಪರವಾನಗಿದಾರರಿಗೆ ಮಾಡಿದ ಪಾವತಿಯನ್ನು ಮೊದಲು ವಿಳಂಬಿತ ಪಾವತಿ ಸರ್ಚಾರ್ಜ್‌ಗೆ ಹೊಂದಾಣಿಕೆ ಮಾಡಲಾಗುವುದು ಮತ್ತು ನಂತರ ಮಾಸಿಕ ಶುಲ್ಕಗಳಿಗೆ ಸರಿಹೊಂದಿಸಲಾಗುತ್ತದೆ, ಅದರಲ್ಲೂ ದೀರ್ಘ ಬಾಕಿ ತಿಂಗಳಿಗೆ ಮೊದಲು ಸರಿಹೊಂದಿಸಲಾಗುತ್ತದೆ."

ಹೀಗಾಗಿ, ಉದ್ದೇಶಿತ ತಿದ್ದುಪಡಿಗಳು ವಿದ್ಯುತ್ ಗ್ರಾಹಕರು ಮತ್ತು ಒಟ್ಟಾರೆ ವಿದ್ಯುತ್ ವಲಯದ ಹಿತಾಸಕ್ತಿಗೆ ಅನುಕೂಲಕರವಾಗಿವೆ.

ಉದ್ದೇಶಿತ ಕರಡು ನಿಯಮಗಳನ್ನು ಪರಾಮರ್ಶೆಗಾಗಿ ಅನುಬಂಧ ದಲ್ಲಿ ನೀಡಲಾಗಿದೆ.

***

 


(Release ID: 1747402) Visitor Counter : 212