ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ಲಸಿಕೆ ತಾಜಾ ಮಾಹಿತಿ


ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 58.31 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಒದಗಿಸಲಾಗಿದೆ

ಉಳಿಕೆಯಾದ ಮತ್ತು ಬಳಕೆಯಾಗದ 38 ಲಕ್ಷ ಡೋಸ್ಗಳು

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಲಭ್ಯವಿವೆ

Posted On: 19 AUG 2021 10:18AM by PIB Bengaluru

ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21 ರಿಂದ ಪ್ರಾರಂಭವಾಗಿದೆ. ಹೆಚ್ಚಿನ ಲಸಿಕೆಗಳ ಲಭ್ಯತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಗಡವಾಗಿಯೇ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ಇತ್ಯಾದಿ ಕ್ರಮಗಳ ಮೂಲಕ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲಾಗಿದೆ. ಇದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉತ್ತಮ ಯೋಜನೆಯನ್ನು ರೂಪಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸಲು ಅನುವಾಗಿದೆ.

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಕೋವಿಡ್-19 ಲಸಿಕೆ ಅಭಿಯಾನದ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುತ್ತಿರುವ ಲಸಿಕೆಗಳಲ್ಲಿ ಶೇ.75ರಷ್ಟನ್ನು ಕೇಂದ್ರ ಸರಕಾರವೇ ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಉಚಿತವಾಗಿ) ಪೂರೈಕೆ ಮಾಡುತ್ತಿದೆ.

ಲಸಿಕೆ ಡೋಸ್‌ಗಳು

(19 ಆಗಸ್ಟ್ 2021ರಂದು ಇದ್ದಂತೆ)

ಸರಬರಾಜು ಮಾಡಿರುವುದು

                         58,31,73,780

ಸರಬರಾಜು ಹಂತದಲ್ಲಿರುವುದು

                            81,10,780

ಬಳಕೆಯಾಗಿರುವುದು

                          56,29,35,938

             ಉಳಿಕೆ ಲಭ್ಯತೆ

                          38,00,030

ಇಲ್ಲಿಯವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮೂಲಗಳ 58.31 ಕೋಟಿಗಿಂತಲೂ ಅಧಿಕ (58,31,73,780) ಲಸಿಕೆ ಡೋಸ್‌ಗಳನ್ನು ಒದಗಿಸಲಾಗಿದೆ ಮತ್ತು ಇನ್ನೂ 81,10,780 ಡೋಸ್‌ಗಳು ಪೂರೈಕೆ ಹಂತದಲ್ಲಿವೆ.

ಈ ಪೈಕಿ ವ್ಯರ್ಥವಾದ ಲಸಿಕೆಗಳೂ ಸೇರಿದಂತೆ ಒಟ್ಟು 56,29,35,938 ಡೋಸ್‌ಗಳು ಬಳಕೆಯಾಗಿವೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ದತ್ತಾಂಶದ ಪ್ರಕಾರ).

ಉಳಿಕೆಯಾದ ಮತ್ತು ಬಳಕೆಯಾಗದ 38 ಲಕ್ಷಕ್ಕಿಂತಲೂ ಅಧಿಕ (38,00,030) ಕೋವಿಡ್ ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿವೆ.

***


(Release ID: 1747357) Visitor Counter : 321