ಕಲ್ಲಿದ್ದಲು ಸಚಿವಾಲಯ

ಆಜಾ಼ದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಕಲ್ಲಿದ್ದಲು ಸಚಿವಾಲಯದ "ವೃಕ್ಷಾರೋಪನ ಅಭಿಯಾನ-2021" ಕ್ಕೆ ಆಗಸ್ಟ್ 19 ರಂದು ಚಾಲನೆ


ಕಲ್ಲಿದ್ದಲು ನಿಕ್ಷೇಪಗಳ ಸುತ್ತಮುತ್ತಲಿನ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಗಣಿಗಾರಿಕೆಯಲ್ಲಿ ಪರಿಸರ ಸುಸ್ಥಿರತೆಗೆ ಮಹತ್ವದ ಕ್ರಮ

Posted On: 17 AUG 2021 2:39PM by PIB Bengaluru

ಕಲ್ಲಿದ್ದಲು ಸಚಿವಾಲಯದ ಕಲ್ಲಿದ್ದಲು/ ಲಿಗ್ನೈಟ್ ಸಾರ್ವಜನಿಕ ಉದ್ಯಮಗಳು "ಗೋ ಗ್ರೀನಿಂಗ್" (ಹಸಿರೀಕರಣ) ಅಭಿಯಾನದ ಅಡಿಯಲ್ಲಿ ಈ ವರ್ಷ 2,385 ಹೆಕ್ಟೇರ್ ಪ್ರದೇಶವನ್ನು ಜೈವಿಕ ಪುನಶ್ಚೇತನ/ ನೆಡುತೋಪು ವ್ಯಾಪ್ತಿಗೆ ಒಳಪಡಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿವೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ದನ್ವೆ ಅವರ ಉಪಸ್ಥಿತಿಯಲ್ಲಿ ಆಗಸ್ಟ್ 19 ರಂದು "ವೃಕ್ಷಾರೋಪನ ಅಭಿಯಾನ 2021" ಕ್ಕೆ ಚಾಲನೆ ನೀಡಲಿದ್ದು, ಈ ಮೂಲಕ "ಗೋ ಗ್ರೀನಿಂಗ್" ಅಭಿಯಾನಕ್ಕೆ ಸೂಕ್ತ ಉತ್ತೇಜನ ನೀಡಲಾಗುವುದು. ದೇಶದಾದ್ಯಂತ ಇರುವ ಕಲ್ಲಿದ್ದಲು ನಿಕ್ಷೇಪಗಳು ಮತ್ತು ಸುತ್ತಮುತ್ತಲಿನ 300 ಕ್ಕೂ ಹೆಚ್ಚು ನೆಡುತೋಪು ತಾಣಗಳನ್ನು 19 ರಂದು ನಡೆಯುವ ಅಭಿಯಾನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸುವ ನಿರೀಕ್ಷೆಯಿದೆ.

ಕಲ್ಲಿದ್ದಲು ವಲಯದ ಆಜಾ಼ದಿ ಕಾ ಅಮೃತ್ ಮಹೋತ್ಸವ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲೊಂದಾದ ವೃಕ್ಷಾರೋಪನ ಅಭಿಯಾನ 2021, ಗಣಿಗಾರಿಕೆ ಕಾರ್ಯಾಚರಣೆಗಳಲ್ಲಿ ಪರಿಸರ ಸುಸ್ಥಿರತೆಯನ್ನು ತರುತ್ತದೆ ಮತ್ತು ಕಲ್ಲಿದ್ದಲು ವಲಯವು ಸಾಮಾಜಿಕ ಮತ್ತು ಪರಿಸರ ಪರವಾನಗಿಯನ್ನು ಪಡೆಯಲು ಸಹಾಯ ಮಾಡುತ್ತದೆ, ಇದು ಮುಂದಿನ ದಿನಗಳಲ್ಲಿ ಹೆಚ್ಚು ಗಣಿಗಳನ್ನು ಹೊಸ ಉದ್ಯಮಗಳಿಗೆ ಮುಕ್ತಗೊಳಿಸುವುದರಿಂದ ಬಹಳ ಮಹತ್ವದ್ದಾಗಿದೆ. ಅಲ್ಲದೆ, ಈ ಅಭಿಯಾನವು ಸಮಾಜ ಮತ್ತು ಜನಸಾಮಾನ್ಯರನ್ನು ತಮ್ಮ ನೆರೆಹೊರೆಯ ಪ್ರದೇಶಗಳಲ್ಲಿ ಹೆಚ್ಚು ಅರಣ್ಯೀಕರಣ ಉಪಕ್ರಮಗಳನ್ನು ಕೈಗೊಳ್ಳಲು ಜಾಗೃತಗೊಳಿಸುವ ಮತ್ತು ಪ್ರೇರೇಪಿಸುವ ನಿರೀಕ್ಷೆಯಿದೆ.

https://static.pib.gov.in/WriteReadData/userfiles/image/image001KHP7.jpg

ಎಸ್ ಸಿ ಸಿ ಎಲ್ ನ JVR OC-II ನ ಒಬಿ ರಾಶಿಯ ಮೇಲಿನ ಹಸಿರು ಹೊದಿಕೆ

https://static.pib.gov.in/WriteReadData/userfiles/image/image002YH17.jpg

ಎನ್ ಸಿ ಎಲ್ ನ ನಿಗಾಹಿ ಒಸಿ ಗಣಿ ಮೂಲಸೌಕರ್ಯ ಪ್ರದೇಶಗಳ ಸುತ್ತಲಿನ ಹಸಿರು ಹೊದಿಕೆ

https://static.pib.gov.in/WriteReadData/userfiles/image/image0037RBP.jpg

ರಾಮಗುಂಡಂ ಒಸಿಯಲ್ಲಿ ಖಾಲಿ ಪ್ರದೇಶಗಳಲ್ಲಿನ ನೆಡುತೋಪು

ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ, ಒಂದೆಡೆ ಇಂಧನ ವಲಯವನ್ನು ಇಂಗಾಲ ಮುಕ್ತ ಮಾಡುವ ಬದ್ಧತೆ ಮತ್ತು ಮತ್ತೊಂದೆಡೆ, ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಕೈಗೆಟುಕುವ ಮತ್ತು ಅಪಾರ ಲಭ್ಯತೆಯಿರುವ ಕಲ್ಲಿದ್ದಲನ್ನು ಅವಲಂಬಿಸಿ ಪೂರೈಸುವ ಅವಳಿ ಸವಾಲುಗಳನ್ನು ಎದುರಿಸುತ್ತಿದೆ.. ಹೀಗಾಗಿ, ನಮ್ಮ ಕಲ್ಲಿದ್ದಲು ವಲಯವು ಭವಿಷ್ಯದಲ್ಲಿ ದೇಶದ ವಿವಿಧ ಅಭಿವೃದ್ಧಿ ಅಗತ್ಯಗಳಿಗೆ ಇಂಧನ ಬೇಡಿಕೆಯನ್ನು ಪೂರೈಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಬೇಕಾಗಿದೆ, ಅದೇ ಸಮಯದಲ್ಲಿ ಪರಿಸರ ಮತ್ತು ಸಮಾಜಕ್ಕೂ ಹೊಣೆಗಾರನಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಭಾರತದ ಕಲ್ಲಿದ್ದಲು ವಲಯವು ಸುಸ್ಥಿರ ಗಣಿಗಾರಿಕೆಯನ್ನು ಉತ್ತೇಜಿಸಲು ಹಲವಾರು ವಿನೂತನ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇವುಗಳಲ್ಲಿ ಗಣಿಗಾರಿಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ "ಗೋ ಗ್ರೀನಿಂಗ್" ಅಭಿಯಾನ ಒಂದು ಪ್ರಮುಖ ಉಪಕ್ರಮವಾಗಿದೆ. ಇದು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ ಹವಾಮಾನ ಬದಲಾವಣೆಯ ಕಾರಣಗಳನ್ನು ತಗ್ಗಿಸಲು ಹೆಚ್ಚುವರಿ ಇಂಗಾಲ ಹೀರುವ ಪ್ರದೇಶಗಳನ್ನು ಸೃಷ್ಟಿಸಲಾಗಿದೆ. ಇದಲ್ಲದೆ, ನಮ್ಮ ಕಲ್ಲಿದ್ದಲು ಕಂಪನಿಗಳು ವ್ಯಾಪಕವಾದ ನೆಡುತೋಪು ಮತ್ತು ಸ್ವಚ್ಛ ಕಲ್ಲಿದ್ದಲು ತಂತ್ರಜ್ಞಾನಗಳ ಅಳವಡಿಕೆಯಂತಹ ವಿವಿಧ ಪರಿಸರ ಸ್ನೇಹಿ ಕ್ರಮಗಳ ಮೂಲಕ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಗುರಿಯನ್ನು ಹೊಂದಿವೆ.

***



(Release ID: 1746684) Visitor Counter : 300


Read this release in: English , Urdu , Hindi , Tamil , Telugu