ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
54 ಕೋಟಿ ಮೈಲುಗಲ್ಲು ದಾಟಿದ ಭಾರತದ ಒಟ್ಟಾರೆ ಕೋವಿಡ್-19 ಲಸಿಕೀಕರಣ ವ್ಯಾಪ್ತಿ
ಕಳೆದ 24 ಗಂಟೆಗಳಲ್ಲಿ 73 ಲಕ್ಷ ಡೋಸ್ ಗೂ ಅಧಿಕ ಲಸಿಕೆ ನೀಡಿಕೆ
ಚೇತರಿಕೆ ಪ್ರಮಾಣ ಸದ್ಯ ಶೇ.97.46ಕ್ಕೆ ಏರಿಕೆ
ಕಳೆದ 24 ಗಂಟೆಗಳಲ್ಲಿ ಹೊಸದಾಗಿ 36.083 ಕೋವಿಡ್ ಪ್ರಕರಣಗಳು ಪತ್ತೆ
ಸದ್ಯ ಭಾರತದ ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.1.20ರಷ್ಟು ಅಂದರೆ 3,85,336 ಮಾತ್ರ
ಕಳೆದ 20 ದಿನಗಳಿಂದೀಚೆಗೆ ಪ್ರತಿದಿನದ ಪಾಸಿಟಿವಿಟಿ ದರ (ಶೇ.1.88) ಶೇಕಡ 3ಕ್ಕಿಂತಲೂ ಕಡಿಮೆ
प्रविष्टि तिथि:
15 AUG 2021 10:08AM by PIB Bengaluru
ಭಾರತದಲ್ಲಿ ಒಟ್ಟು ಕೋವಿಡ್-19 ಲಸಿಕೀಕರಣ ವ್ಯಾಪ್ತಿ 54 ಕೋಟಿ ಮೈಲುಗಲ್ಲು ದಾಟಿದೆ. ಇಂದು ಬೆಳಿಗ್ಗೆ 7ಗಂಟೆವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ 61,35,193 ಸೆಷನ್ಸ್ ಗಳಲ್ಲಿ ಒಟ್ಟು 54,38,46,290 ಡೋಸ್ ಲಸಿಕೆ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 73,50,553 ಡೋಸ್ ಲಸಿಕೆಯನ್ನು ನೀಡಲಾಗಿದೆ. ಅವರಲ್ಲಿ ಈ ಕೆಳಗಿನವರು ಸೇರಿದ್ದಾರೆ.
|
ಎಚ್ ಸಿಡಬ್ಲೂ
|
1ನೇ ಡೋಸ್
|
1,03,49,901
|
|
2ನೇ ಡೋಸ್
|
80,93,907
|
|
ಎಫ್ ಎಲ್ ಡಬ್ಲೂ ಎಸ್
|
1ನೇ ಡೋಸ್
|
1,82,76,459
|
|
2ನೇ ಡೋಸ್
|
1,21,45,936
|
|
18-44 ವರ್ಷ ವಯೋಮಾನದವರು
|
1ನೇ ಡೋಸ್
|
19,58,22,860
|
|
2ನೇ ಡೋಸ್
|
1,52,60,695
|
|
45-59 ವರ್ಷ ವಯೋಮಾನದವರು
|
1ನೇ ಡೋಸ್
|
11,70,84,332
|
|
2ನೇ ಡೋಸ್
|
4,55,80,689
|
|
60 ವರ್ಷ ಮೇಲ್ಪಟ್ಟವರು
|
1ನೇ ಡೋಸ್
|
8,10,41,849
|
|
2ನೇ ಡೋಸ್
|
4,01,89,662
|
|
ಒಟ್ಟು
|
54,38,46,290
|
2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೀಕರಣ ವ್ಯಾಪ್ತಿ ಮತ್ತು ವೇಗವನ್ನು ವೃದ್ಧಿಸಲು ಬದ್ಧವಾಗಿದೆ.
ಭಾರತದ ಚೇತರಿಕೆ ಪ್ರಮಾಣ ಶೇ. 97.46% ತಲುಪಿದೆ.
ಸಾಂಕ್ರಾಮಿಕ ಆರಂಭವಾದ ನಂತರ ಒಟ್ಟು ಸೋಂಕಿತರ ಪೈಕಿ ಈಗಾಗಲೇ 3,13,76,015 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 37,927 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 36,083 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಸತತ 49 ದಿನಗಳಿಂದ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ.
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 3,85,336.ರಲ್ಲಿದೆ ಮತ್ತು ಇದು ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಶೇ. 1.20 ರಷ್ಟಾಗುತ್ತದೆ.
ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕು ಪರೀಕ್ಷೆಗಳ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,23,863 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತ ಈವರೆಗೆ 49.36 crore (49,36,24,440)ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗುತ್ತಿದೆ. ಮತ್ತೊಂದೆಡೆ ವಾರದ ಪಾಸಿಟಿವಿಟ ದರ ಇಳಿಕೆಯಾಗುತ್ತಿರುವುದು ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.2.00ರಷ್ಟಿದ್ದು, ದಿನದ ಪಾಸಿಟಿವಿಟಿ ದರ ಇಂದು 1.88ರಷ್ಟಿದೆ. ದಿನದ ಪಾಸಿಟಿವಿಟಿ ದರ ಕಳೆದ 20 ದಿನಗಳಿಂದ ನಿರಂತರವಾಗಿ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಕಳೆದ 69 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.
***
(रिलीज़ आईडी: 1746654)
आगंतुक पटल : 317
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam