ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದೂರದರ್ಶನ 2 ನೇ ಆವೃತ್ತಿಯ ಪ್ರವಾಸ ಕಥನ ಕಾರ್ಯಕ್ರಮ "ರಾಗ್ ರಾಗ್ ಮೇ ಗಂಗಾ" ಆರಂಭ
ಇನ್ನು ನಾಲ್ಕು ವರ್ಷಗಳಲ್ಲಿ ದೂರದರ್ಶನ ಅತಿ ಹೆಚ್ಚು ವೀಕ್ಷಣೆಯ ವಾಹಿನಿ ಆಗಲಿದೆ – ಶ್ರೀ ಅನುರಾಗ್ ಠಾಕೂರ್
ರಾಗ್ ರಾಗ್ ಮೆ ಗಂಗಾ ಪ್ರಥಮ ಋತುವಿನಲ್ಲಿ 1.75 ಕೋಟಿ ಜನರು ವೀಕ್ಷಿಸಿದ್ದರು
ಉದ್ದದ ನದಿಗಳ ಪೈಕಿ ವಿಶ್ವದ ಅಗ್ರ 10 ಸ್ವಚ್ಛ ನದಿಗಳಲ್ಲಿ ಗಂಗಾ ನದಿ ಒಂದಾಗಿದೆ – ಶ್ರೀ ಗಜೇಂದ್ರ ಸಿಂಗ್ ಶೇಖಾವತ್
Posted On:
16 AUG 2021 6:32PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದು ಯಶಸ್ವಿ ಪ್ರವಾಸ ಕಥನ ರಾಗ್ ರಾಗ್ ಮೇ ಗಂಗಾದ ಎರಡನೇ ಋತುವಿಗೆ (ಆವೃತ್ತಿಗೆ) ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಜಲಶಕ್ತಿ ಮತ್ತು ಆಹಾರ ಸಂಸ್ಕರಣಾ ಕೈಗಾರಿಕಾ ಖಾತೆ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರೊಂದಿಗೆ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಎರಡನೇ ಋತುವಿನ ಆರಂಭವೇ ಇದರ ಯಶಸ್ಸಿನ ಮಾನದಂಡವಾಗಿದೆ, ಮೊದಲ ಋತುವಿನ ಸಂಚಿಕೆಗಳನ್ನು 1.75 ಕೋಟಿ ಜನರು ವೀಕ್ಷಿಸಿದ್ದರು ಎಂದರು. ಕಾರ್ಯಕ್ರಮದ ಹಿಂದಿರುವ ತಂಡವನ್ನು ಅಭಿನಂದಿಸಿದ ಸಚಿವರು, ಎರಡನೇ ಋತುವಿನ ನಿರೀಕ್ಷೆಗಳು ಹೆಚ್ಚಿವೆ ಮತ್ತು ಇದು ಕೇವಲ ಕಾರ್ಯಕ್ರಮವಲ್ಲ ಜನರ ಪಾಲ್ಗೊಳ್ಳುವಿಕೆಯಿಂದ ಜನಾಂದೋಲನದತ್ತ ಒಂದು ಪ್ರಯತ್ನ ಎಂದು ಹೇಳಿದರು.
ಗಂಗಾ ಪುನಶ್ಚೇತನಕ್ಕೆ ಕೊಡುಗೆ ನೀಡುವಂತೆ ಜನರನ್ನು ಆಹ್ವಾನಿಸಿದ ಸಚಿವರು, ಗಂಗೆಯೊಂದಿಗೆ ಎಲ್ಲ ಭಾರತೀಯರಿಗೂ ಭಾವನಾತ್ಮಕ ಸಂಬಂಧವಿದೆ ಮತ್ತು ಭಾರತೀಯರಿಗೆ ಇದರೊಂದಿಗೆ ಆಧ್ಯಾತ್ಮಿಕ ಬಾಂಧವ್ಯವಿದೆ, ಇದಕ್ಕೆ ದೊಡ್ಡ ಆರ್ಥಿಕ ಮಹತ್ವವೂ ಇದೆ ಎಂದು ತಿಳಿಸಿದರು. ಜಾಗತಿಕ ತಾಪಮಾನ ಏರಿಕೆಯ ಪರಿಣಾಮವನ್ನು ಎತ್ತಿ ತೋರಿಸಲು ವೇದಿಕೆಯನ್ನು ಬಳಸಿಕೊಂಡ ಸಚಿವರು, ಇಂದಿನ ಹವಾಮಾನದ ಸವಾಲುಗಳನ್ನು ಎದುರಿಸುವ ಪ್ರಯತ್ನಗಳಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ದೂರದರ್ಶನವು ಹೆಚ್ಚು ವೀಕ್ಷಣೆಯ ವಾಹಿನಿ ಆಗಲಿದೆ ಎಂದು ಸಚಿವರು ಹೇಳಿದರು. ವೀಕ್ಷಕರನ್ನು ದೂರದರ್ಶನಕ್ಕೆ ಸೆಳೆಯಲು ಚಾನೆಲ್ ವೇದಿಕೆಗೆ ಸೂಕ್ತವಾದ ವಸ್ತು ವಿಷಯವನ್ನು ರೂಪಿಸುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯಾಸ (ಪ್ರಯತ್ನ)ವನ್ನು ಪುನರುಚ್ಚರಿಸಿದ ಶ್ರೀ ಠಾಕೂರ್, ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಶತಮಾನೋತ್ಸವದವರೆಗೆ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಅವರು ಜನರಿಗೆ ಆಹ್ವಾನ ನೀಡಿದರು.
ರಾಗ್ ರಾಗ್ ಮೇ ಗಂಗಾ ಪ್ರವಾಸ ಕಥನದ 2ನೇ ಋತುವು ಈ ಮಹಾನ್ ನದಿಯ ಸಾಂಸ್ಕೃತಿಕ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ- ಆರ್ಥಿಕ ವಿವರಗಳನ್ನು ಒಳಗೊಂಡಿರುತ್ತದೆ ಮತ್ತು ಅದರ ನೈರ್ಮಲ್ಯ ಮತ್ತು ಪಾವಿತ್ರ್ಯದ ವಿಷಯಗಳ ಮೇಲೂ ಗಮನ ಹರಿಸಲಾಗುತ್ತದೆ. ಎನ್.ಎಂ.ಸಿ.ಜಿ ಸಹಯೋಗದೊಂದಿಗೆ ದೂರದರ್ಶನಕ್ಕಾಗಿ ಅದನ್ನು ಮರಳಿ ತರಲು ಎನ್.ಎಂ.ಸಿ.ಜಿ ಅದನ್ನು ಉಳಿಸಲು ಮಾಡುತ್ತಿರುವ ಕಾರ್ಯವನ್ನೂ ಪ್ರವಾಸ ಕಥನದಲ್ಲಿ ಅಳವಡಿಸಲಾಗಿದೆ, 'ರಾಗ್ ರಾಗ್ ಮೇ ಗಂಗಾ' ಸೀಸನ್ 2ರ ಪ್ರವಾಸ ಕಥನ ಸರಣಿಯನ್ನು ತರುತ್ತಿದೆ, ಈ ಕಾರ್ಯಕ್ರಮವು ಗಂಗಾ ನದಿಯ ಭವ್ಯತೆ ಮತ್ತು ಅದರ ಸಂರಕ್ಷಣೆಯ ಅಗತ್ಯದ ಬಗ್ಗೆಯೂ ಗಮನ ಸೆಳೆಯುವ ಗುರಿಯನ್ನು ಹೊಂದಿದೆ ಎಂದರು. ಕಾವ್ಯಾತ್ಮಕವಾಗಿ ಚಿತ್ರೀಕರಿಸಲಾದ ಈ ಸರಣಿಯು ಗಂಗಾ ನದಿಯ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆರ್ಥಿಕ ಪರಂಪರೆ ಮತ್ತು ಅದರ ಪ್ರಸ್ತುತ ಪರಿಸರ ಸ್ಥಿತಿಯ ಬಗ್ಗೆ ನದಿ ಮತ್ತು ಅದರ ಭೂರಮೆಯ ಸೌಂದರ್ಯವನ್ನು ಹೊರತರುತ್ತದೆ. 26 ಕಂತುಗಳನ್ನು ಒಳಗೊಂಡ ಈ ಪ್ರವಾಸ ಕಥನವನ್ನು ಪ್ರಸಿದ್ಧ ನಟ ರಾಜೀವ್ ಖಂಡೇಲ್ವಾಲ್ ಅವರು ಆಂಕರ್ (ನಿರೂಪಣೆ) ಮಾಡುತ್ತಿದ್ದು, 2021ರ ಆಗಸ್ಟ್ 21ರಿಂದ ಡಿಡಿ ನ್ಯಾಷನಲ್ ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8:3೦ಕ್ಕೆ ಪ್ರಸಾರವಾಗಲಿದೆ.
ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಮೂರು ವರ್ಷಗಳ ಅಲ್ಪಾವಧಿಯಲ್ಲಿ ಇಷ್ಟು ಉದ್ದದ ನದಿಯನ್ನು ಸ್ವಚ್ಛತೆಯಲ್ಲಿ ಮೊದಲ ಹತ್ತರಲ್ಲಿ ಒಂದನ್ನಾಗಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು. ಸರ್ಕಾರ ಪ್ರಾರಂಭಿಸಿದ ಕಾರ್ಯಕ್ರಮಗಳು ತಮ್ಮ ಗುರಿಗಳನ್ನು ಗಡುವಿನ ಕಾಲಮಿತಿಗೆ ಮೊದಲೇ ಸಾಧಿಸಿವೆ ಮತ್ತು ಇದು ಪ್ರಧಾನಮಂತ್ರಿ ಮೋದಿ ಅವರ 4 “ಪಿ’ಗಳ ಮಂತ್ರದ - Political will ರಾಜಕೀಯ ಇಚ್ಛಾಶಕ್ತಿ, Public Spending ಸಾರ್ವಜನಿಕ ವೆಚ್ಚ, Partnership with stakeholders ಬಾಧ್ಯಸ್ಥರೊಂದಿಗೆ ಪಾಲುದಾರಿಕೆ ಮತ್ತು peoples’ Participation ಜನರ ಪಾಲ್ಗೊಳ್ಳುವಿಕೆ ಫಲಶ್ರುತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ರಾಗ್ ರಾಗ್ ಮೇ ಗಂಗಾದ ಸೀಸನ್-2 ಅನ್ನು ನಮ್ಮ ನಾಗರಿಕತೆಯ ವಿಸ್ತರಣೆಗೆ ಅಡಿಪಾಯ ಹಾಕಿದ ಆರ್ಥ-ಗಂಗಾ ನದಿಗೆ ಸಮರ್ಪಿಸಲಾಗುವುದು ಎಂದು ಹೇಳಿದರು. ಅಮೃತ ಮಹೋತ್ಸವದ ಈ ಅವಧಿಯಲ್ಲಿ ಗಂಗಾ ನದಿಯ ವಿಚಾರದಲ್ಲಿ ಹಿಂದೆ ಆಗಿರುವ ಲೋಪಗಳಿಗಾಗಿ ನಮ್ಮನ್ನು ನಾವು ವಿಮೋಚನೆ ಮಾಡಿಕೊಳ್ಳುವ ಪ್ರಯತ್ನಗಳಿಗೆ ಕೊಡುಗೆ ನೀಡಲು ಸಂಕಲ್ಪ ಮಾಡುವಂತೆ ಅವರು ಜನರನ್ನು ಆಹ್ವಾನಿಸಿದರು.
ಹಿನ್ನೆಲೆ:
ಗಂಗಾ ನದಿಯ ಸ್ವಚ್ಛತೆಯ ರಾಷ್ಟ್ರೀಯ ಅಭಿಯಾನ (ಎನ್.ಎಂ.ಸಿ.ಜಿ) ಮತ್ತು ದೂರದರ್ಶನಗಳು ಗಂಗಾ ನದಿಯ ಪ್ರಸ್ತುತ ಸ್ಥಿತಿ ಮತ್ತು ಗಂಗೆಗೆ ಅದರ ಗತವೈಭವ ತಂದುಕೊಡಲು ಪುನಶ್ಚೇತನಗೊಳಿಸುವ ಅಗತ್ಯದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಪಾಲುದಾರಿಕೆ ಹೊಂದಿವೆ.
ಫೆಬ್ರವರಿ, 2019ರಲ್ಲಿ ಭಾರತದ ಪವಿತ್ರ ನದಿಯ ಪ್ರವಾಸ ಕಥನ - 'ರಾಗ್ ರಾಗ್ ಮೇ ಗಂಗಾ' ವನ್ನು ರಾಷ್ಟ್ರೀಯ ಪ್ರಸಾರ ಸೇವೆಯ ದೂರದರ್ಶನ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಮುಖ ಕಾರ್ಯಕ್ರಮವಾಗಿ ಪ್ರಾರಂಭಿಸಲಾಯಿತು. ಸ್ವಚ್ಛ ಗಂಗಾ ರಾಷ್ಟ್ರೀಯ ಅಭಿಯಾನ (ಎನ್.ಎಂಸಿಜಿ) ದಿಂದ ನಿಯೋಜಿಸಲ್ಪಟ್ಟ ಈ 21 ಭಾಗಗಳ ಸರಣಿಯು ಗಂಗಾನದಿಯ ಮೂಲ ಗೋಮುಖ್ ನೀರ್ಗಲ್ಲಿನಿಂದ ಬಂಗಾಳಕೊಲ್ಲಿಯಲ್ಲಿ ಸೇರುವ ಗಂಗಾಸಾಗರವರೆಗಿನ 2525 ಕಿ.ಮೀ ಉದ್ದದ ಪ್ರಯಾಣವನ್ನು ಒಳಗೊಂಡಿತ್ತು. ಪ್ರಸಿದ್ಧ ನಟ ರಾಜೀವ್ ಖಂಡೇಲ್ವಾಲ್ ಅವರು ನಿರೂಪಣೆ (ಆಂಕರ್) ಮಾಡಿದ ಈ ಪ್ರವಾಸ ಕಥನವು ಗಂಗಾ ನದಿಯ ದಡದಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ-ಆರ್ಥಿಕ ಪ್ರಾಮುಖ್ಯದ 2೦ ನಗರಗಳನ್ನು ಒಳಗೊಂಡಿತ್ತು. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಸಂದೇಶ, ನದಿಯನ್ನು ಸ್ವಚ್ಛವಾಗಿಡುವಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮತ್ತು ನದಿಯನ್ನು ಸ್ವಚ್ಛಗೊಳಿಸಲು ಮತ್ತು ಪುನಶ್ಚೇತನಗೊಳಿಸಲು ಎನ್.ಎಂ.ಸಿ.ಜಿ ಮಾಡುತ್ತಿರುವ ಕಾರ್ಯವನ್ನು ಪ್ರವಾಸ ಕಥನದ ವಸ್ತುವಿಷಯ ಮತ್ತು ಸ್ವರೂಪದಲ್ಲಿ ಹೆಣೆದುಕೊಂಡಿದೆ, ಅದೇ ಸಮಯದಲ್ಲಿ ನದಿಯ ಬಗ್ಗೆ ಮತ್ತು ಅದರ ದಡದಲ್ಲಿ ವಾಸಿಸುವ ಜನರ ಬಗ್ಗೆ ಸಾಂಸ್ಕೃತಿಕ, ಪೌರಾಣಿಕ ಮತ್ತು ಐತಿಹಾಸಿಕ ವಿವರಗಳನ್ನೂ ಒಳಗೊಂಡಿದೆ.
ಹಿಂದಿನ ಸರಣಿಯು ಗಂಗೆ ಬಂಗಾಳ ಕೊಲ್ಲಿಯಲ್ಲಿ ಗಂಗಾಸಾಗರ್ ನಲ್ಲಿ ಸಮುದ್ರದಲ್ಲಿ ವಿಲೀನಗೊಳ್ಳುವುದರೊಂದಿಗೆ ಕೊನೆಗೊಂಡಿತ್ತು. ಭಾಗ ಎರಡು, ಗಂಗಾ ನದಿ ಭಾರತವನ್ನು ಬಿಟ್ಟು ಬಾಂಗ್ಲಾದೇಶವನ್ನು ಪ್ರವೇಶಿಸಿ ಪದ್ಮಾ ನದಿಯಾಗುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕೊನೆಗೊಳ್ಳಬಹುದು. 26ಕಂತುಗಳ ಸರಣಿಯು ಗಂಗಾವನ್ನು ಪುನಶ್ಚೇತನಗೊಳಿಸುವ ಅಗತ್ಯದ ಬಗ್ಗೆ ವೀಕ್ಷಕರಿಗೆ ಅನೇಕ ಸಂದೇಶಗಳನ್ನು ಒಳಗೊಂಡಿದ್ದು, ಅವರನ್ನು ಗಂಗೆ ಶತಮಾನಗಳ ಕಾಲ ಅವರ ಜೀವನ-ಸಮೃದ್ಧಗೊಳಿಸಲು ನೀಡಿದ ಉಡುಗೊರೆಗಳಿಗಾಗಿ ಅವರು ಹೊಂದಿರುವ ಋಣವನ್ನು ಅರಿಯುವಂತೆ ಮಾಡಲಿದೆ. ಹೇರಳವಾದ ಸಂಶೋಧನಾ ಮಾಹಿತಿಗಳೊಂದಿಗೆ, ಈ ಕಾರ್ಯಕ್ರಮವು ಜನರಿಗೆ ಕ್ರಮ ತೆಗೆದುಕೊಳ್ಳುವ ಕರೆಯೊಂದಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಜೊತೆಗೆ ಸ್ವಚ್ಛತೆಯ ದೃಷ್ಟಿಯಿಂದ ಗಂಗಾದ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಪಾದಿಸುತ್ತದೆ.
'ರಾಗ್ ರಾಗ್ ಮೇ ಗಂಗಾ-2' ಗಂಭೀರತೆ ಮತ್ತು ಮನರಂಜನೆಯ ನ್ಯಾಯಯುತ ಮಿಶ್ರಣವಾಗಿದೆ. ಈ ಸರಣಿಯು ನಗರ ಮತ್ತು ಗ್ರಾಮೀಣ ಪ್ರೇಕ್ಷಕರನ್ನು ಗಂಗಾ ನೀಡಬೇಕಾದ ಅನೇಕ ಶ್ರೀಮಂತ ಪರಂಪರೆಯ ನದಿಯನ್ನು ಸವಿಯುವಂತೆ ಮಾಡುತ್ತದೆ. 'ರಾಗ್ ರಾಗ್ ಮೇ ಗಂಗಾ-1' ರ ದೊಡ್ಡ ಜನಪ್ರಿಯತೆಯನ್ನು ಗಮನಿಸಿದರೆ, ಈ ಪ್ರವರ್ತಕ, ಉತ್ತಮ ಗುಣಮಟ್ಟದ ಸರಣಿಯು ಮತ್ತೊಮ್ಮೆ ಪ್ರೇಕ್ಷಕರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಕಂಡುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರವಾಸ ಪ್ರಾಮುಖ್ಯದ ಸರಣಿಯು ಜಲ ಸಂರಕ್ಷಣೆ ಮತ್ತು ಜಲ ಸ್ವಚ್ಛತೆಯ(ಪಾವಿತ್ರ್ಯ ಮತ್ತು ನೈರ್ಮಲ್ಯ) ಸಂದೇಶವನ್ನು ಹರಡಲು ಸಹಾಯಮಾಡುತ್ತದೆ, ಇದು ಈ ಹೊತ್ತಿನ ಅಗತ್ಯವಾಗಿದೆ.
ಕಾರ್ಯಕ್ರಮ ಪ್ರಸಾರದ ವಿವರ:
***
(Release ID: 1746568)
Visitor Counter : 296