ಪರಿಸರ ಮತ್ತು ಅರಣ್ಯ ಸಚಿವಾಲಯ

2022ರೊಳಗೆ ಒಮ್ಮೆಲೆ ಬಳಸಿ ಬಿಸಾಡುವ ನಿರ್ದಿಷ್ಟ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮ 2021 ಕುರಿತು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ


2021ರ ಸೆಪ್ಟೆಂಬರ್ 30ರಿಂದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳ ದಪ್ಪ 50 ರಿಂದ 75 ಮೈಕ್ರಾನ್ ಗೆ ಹೆಚ್ಚಳ ಮತ್ತು 2022ರ ಡಿಸೆಂಬರ್ ನಿಂದ ಜಾರಿಗೆ ಬರುವಂತೆ 120 ಮೈಕ್ರಾನ್ ಗೆ ಹೆಚ್ಚಳ

ವಿಸ್ತೃತ ಉತ್ಪಾದಕರ ಜವಾಬ್ದಾರಿಗೆ ಕಾನೂನಿನ ಬೆಂಬಲ ನೀಡುವ ಮಾರ್ಗಸೂಚಿ

Posted On: 13 AUG 2021 3:38PM by PIB Bengaluru

2022 ವೇಳೆಗೆ ಹಂತ ಹಂತವಾಗಿ ಒಮ್ಮೆಲೆ ಬಳಸಿ ಬಿಸಾಡುವ ಪ್ಲಾಸ್ಟಿಕ್(ಸಿಂಗಲ್ ಯೂಸ್ ಪ್ಲಾಸ್ಟಿಕ್) ಕೊನೆಗಾಣಿಸಬೇಕೆಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆಗೆ ಅನುಗುಣವಾಗಿ ಹಾಗೂ ಸಾಗರ ಜೈವಿಕ ವ್ಯವಸ್ಥೆ ಮತ್ತು ಭೌಗೋಳಿಕ ವ್ಯವಸ್ಥೆ ಎರಡರ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಪ್ರತಿಕೂಲ ಪರಿಣಾಮಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ 2021 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ಅದರಲ್ಲಿ 2022 ವೇಳೆಗೆ ಕಡಿಮೆ ಬಳಕೆಯಲ್ಲಿರುವ ಮತ್ತು ಹೆಚ್ಚು ತ್ಯಾಜ್ಯ ಉತ್ಪತ್ತಿ ಸಂಭವನೀಯತೆ ಇರುವ ಒಮ್ಮೆಲೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗುವುದು.

ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಉಂಟುಮಾಡುತ್ತಿರುವ ಮಾಲಿನ್ಯ ಎಲ್ಲ ದೇಶಗಳಲ್ಲೂ ಅತ್ಯಂತ ಪ್ರಮುಖ ಪರಿಸರಾತ್ಮಕ ಸವಾಲನ್ನು ತಂದೊಡ್ಡಿದೆ. ಭಾರತ ಒಮ್ಮೆಲೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ಕ್ರಮ ಕೈಗೊಳ್ಳಲು ಬದ್ಧವಾಗಿದೆ. 2019ರಲ್ಲಿ ನಡೆದ ವಿಶ್ವ ಸಂಸ್ಥೆಯ ನಾಲ್ಕನೇ ಪರಿಸರ ಅಧಿವೇಶನದಲ್ಲಿ ಭಾರತ ಒಮ್ಮೆಲೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಉತ್ಪನ್ನಗಳ ಮಾಲಿನ್ಯವನ್ನು ಎದುರಿಸಲು ನಿರ್ಣಯವನ್ನು ಅಂಗೀಕರಿಸಬೇಕೆಂದು ಪ್ರಸ್ತಾವ ಮಂಡಿಸಿತ್ತು ಮತ್ತು ಇದು ಅತ್ಯಂತ ಪ್ರಮುಖ ವಿಷಯವಾಗಿದ್ದು, ಬಗ್ಗೆ ಜಾಗತಿಕ ಸಮುದಾಯ ಗಮನಹರಿಸುವ ತುರ್ತು ಅಗತ್ಯತೆಯನ್ನು ಪ್ರತಿಪಾದಿಸಿತ್ತು. ಕುರಿತಂತೆ ಯುಎನ್ಇಎ 4 ನಿರ್ಣಯ ಅಂಗೀಕರಿಸಿದ್ದು, ಮಹತ್ವದ ಹೆಜ್ಜೆಯಾಗಿದೆ.

2022 ಜುಲೈ 1 ರಿಂದ ಜಾರಿಗೆ ಬರುವಂತೆ ಪಾಲಿಸ್ಟೈರೀನ್ ಮತ್ತು ಪಾಲಿಸ್ಟೈರೀನ್ ನಿಂದ ತಯಾರಿಸಿದ ಉತ್ಪನ್ನಗಳು ಮತ್ತು ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುವುದು.

. ಪ್ಲಾಸ್ಟಿಕ್ ಕಡ್ಡಿಗಳು ಒಳಗೊಂಡಿರುವ ಕಿವಿಯ ಕೊಳೆ ತೆಗೆಯುವ ಇಯರ್ ಬಡ್ಸ್, ಬಲೂನ್ ಗಳಲ್ಲಿನ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್ಕ್ರೀಮ್ ಕಡ್ಡಿಗಳು, ಅಲಂಕಾರಕ್ಕೆ ಬಳಸುವ ಪಾಲಿಸ್ಟೈರೀನ್(ಥರ್ಮಕೋಲ್)

ಬಿ. ಪ್ಲೇಟ್ ಗಳು, ಕಪ್ ಗಳು, ಗ್ಲಾಸ್ ಗಳು, ಕಟ್ಲರಿ ಚಮಚ, ಚಾಕು, ಸ್ಟ್ರಾ, ಟ್ರೇಗಳು, ಸಿಹಿ ತಿನಿಸುಗಳ ಬಾಕ್ಸ್ ಗಳ ಮೇಲಿನ ಹೊದಿಕೆ, ಆಹ್ವಾನ ಪತ್ರಿಕೆ ಮತ್ತು ಸಿಗರೇಟು ಪ್ಯಾಕೆಟ್, 100 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಗಳು, ಸ್ಟಿರ್ರೆಸ್

ಕಡಿಮೆ ತೂಕದ ಪ್ಲಾಸ್ಟಿಕ್ ಕೈಚೀಲಗಳಿಂದ ಆಗುತ್ತಿರುವ ತ್ಯಾಜ್ಯವನ್ನು ತಡೆಯುವ ಉದ್ದೇಶದಿಂದ 2021 ಸೆಪ್ಟೆಂಬರ್ 30ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್ ಕೈಚೀಲಗಳ ದಪ್ಪ (ಥಿಕ್ ನೆಸ್) ಅನ್ನು 50 ಮೈಕ್ರಾನ್ ನಿಂದ 75 ಮೈಕ್ರಾನ್ ಗೆ ಹಾಗೂ 2022 ಡಿಸೆಂಬರ್ 31ರಿಂದ ಜಾರಿಗೆ ಬರುವಂತೆ 120 ಮೈಕ್ರಾನ್ ಗೆ ಹೆಚ್ಚಿಸಲಾಗುವುದು. ಇದರಿಂದಾಗಿ ಪ್ಲಾಸ್ಟಿಕ್ ಕೈಚೀಲಗಳು ದಪ್ಪ ಇರುವುದರಿಂದ ಅವುಗಳನ್ನು ಮರುಬಳಕೆ ಮಾಡಬಹುದಾಗಿದೆ.

ಹಂತ ಹಂತವಾಗಿ ಕೊನೆಗಾಣಿಸಲು ನಿರ್ಧರಿಸಿರುವ ಗುರುತಿಸಲಾದ ಬಿಡಿ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ವ್ಯಾಪ್ತಿಯಲ್ಲಿ ಸೇರದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯವನ್ನು ಸಂಗ್ರಹ ಮಾಡಿ, ಅದನ್ನು ಪರಿಸರಾತ್ಮಕವಾಗಿ ಸುಸ್ಥಿರ ರೀತಿಯಲ್ಲಿ ವಿಸ್ತೃತ ಉತ್ಪಾದಕರ ಹೊಣೆಗಾರಿಕೆ, ಆಮದುದಾರರು ಮತ್ತು ಬ್ರಾಂಡ್ ಓನರ್(ಪಿಐಬಿಒ), ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ 2016 ಅಡಿ ಮಾಡಬೇಕಾಗಿದೆ. ವಿಸ್ತರಿತ ಉತ್ಪಾದಕ ಹೊಣೆಗಾರಿಕೆಯ ಮಾರ್ಗಸೂಚಿಗಳ ಪರಿಣಾಮಕಾರಿ ಜಾರಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮ 2021 ನಲ್ಲಿ ಕಾನೂನಿನ ಶಕ್ತಿಯನ್ನು ತುಂಬಲಾಗಿದೆ.

ಸ್ವಚ್ಛಭಾರತ್ ಮಿಷನ್ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯವನ್ನು ಬಲವರ್ಧನೆಗೊಳಿಸಲಾಗಿದೆ. 2016 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಜಾರಿ ಬಲವರ್ಧನೆಗೆ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಇದು ಗುರುತಿಸಲಾದ ಬಿಡಿ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ತಗ್ಗಿಸಲಿದೆ. (i) 2016 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಪರಿಣಾಮಕಾರಿ ಜಾರಿಗೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ವಿಶೇಷ ಕಾರ್ಯಪಡೆಗಳನ್ನು ರಚಿಸಲು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ. ಸಚಿವಾಲಯ ರಾಷ್ಟ್ರ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದು, ಬಿಡಿ ಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡಲು ಸಮನ್ವಯದ ಪ್ರಯತ್ನಗಳನ್ನು ನಡೆಸುತ್ತಿದೆ ಮತ್ತು 2016 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಂಡಿದೆ.

2016 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಅದನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ಮತ್ತು ಬಿಡಿ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ಸಮಗ್ರ ಕ್ರಿಯಾ ಯೋಜನಗಳನ್ನು ರೂಪಿಸುವಂತೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಸರ್ಕಾರಗಳು ಮತ್ತು ಸಂಬಂಧಿಸಿದ ಎಲ್ಲ ಕೇಂದ್ರ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಮನವಿ ಮಾಡಲಾಗಿದೆ. 1986 ಪರಿಸರ(ಸಂರಕ್ಷಣೆ) ಕಾಯ್ದೆ ಸೆಕ್ಷನ್ 5 ಪ್ರಕಾರ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ(ಪಿಡಬ್ಲ್ಯೂಎಂ) ನಿಯಮ ಜಾರಿ ಬಲವರ್ಧನೆಗೆ ಸಾಂಸ್ಥಿಕ ಕಾರ್ಯತಂತ್ರವನ್ನು ರೂಪಿಸುವಂತೆ ನಿರ್ದೇಶನ ನೀಡಲಾಗಿದೆ.

2016 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಪರಿಣಾಮಕಾರಿ ಜಾರಿ ಮತ್ತು ಬಿಡಿ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. 2021ರಲ್ಲಿ ಬಿಡಿ ಬಳಕೆಯ ಪ್ಲಾಸ್ಟಿಕ್ ಕುರಿತು ಸುದೀರ್ಘ ಎರಡು ತಿಂಗಳ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ದೇಶದ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಷಯದ ಕುರಿತು ದೇಶಾದ್ಯಂತ ಪ್ರಬಂಧ ಸ್ಪರ್ಧೆಯನ್ನು ಸಚಿವಾಲಯ ಆಯೋಜಿಸಿತ್ತು.

ಗುರುತಿಸಲ್ಪಟ್ಟ ಬಿಡಿ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯಗಳ ಅಭಿವೃದ್ಧಿ ಮತ್ತು ಆವಿಷ್ಕಾರ ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಡಿಜಿಟಲ್ ಪರಿಹಾರಗಳನ್ನು ಕಂಡುಕೊಳ್ಳಲು ಉನ್ನತ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮದಡಿ ಮಾನ್ಯತೆ ಪಡೆದ ನವೋದ್ಯಮಗಳಿಗೆ ಇಂಡಿಯಾ ಪ್ಲಾಸ್ಟಿಕ್ ಚಾಲೆಂಜ್ಹ್ಯಾಕಥಾನ್ 2021 ಆಯೋಜಿಸಲಾಗಿತ್ತು.

ಗೆಜೆಟ್ ಅಧಿಸೂಚನೆ

***



(Release ID: 1745518) Visitor Counter : 1200