ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಲಸಿಕೆ ನೀಡಿಕೆಯಲ್ಲಿನ ಲಿಂಗ ಅಂತರ ಹೋಗಲಾಡಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ಕರೆ


ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ಹೆಚ್ಚು ಹೆಚ್ಚು ಮಹಿಳೆಯರು ಆದ್ಯತೆ ಮೇಲೆ ಲಸಿಕೆ  ಹಾಕಿಸಿಕೊಳ್ಳುವಂತಾಗಬೇಕು: ಎನ್ ಸಿಡಬ್ಲೂ ಮುಖ್ಯಸ್ಥರು

ದೇಶದ ಮೂಲೆ ಮೂಲೆಗಳನ್ನು ತಲುಪಲು ತೀವ್ರತರನಾದ ಲಸಿಕೆ ಆಂದೋಲನ ನಡೆಸುತ್ತಿರುವ ಕೇಂದ್ರ ಸರ್ಕಾರ

Posted On: 13 AUG 2021 2:08PM by PIB Bengaluru

ಕಡಿಮೆ ಸಂಖ್ಯೆಯ ಮಹಿಳೆಯರು ಕೋವಿಡ್-19 ಲಸಿಕೆ ಪಡೆದಿದ್ದಾರೆಂಬ ಮಾಧ್ಯಮ ವರದಿಯನ್ನು ಪರಿಗಣಿಸಿ, ರಾಷ್ಟ್ರೀಯ ಮಹಿಳಾ ಆಯೋಗ, ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಲಸಿಕೆ ಪಡೆಯುವಿಕೆಯಲ್ಲಿನ ಲಿಂಗ ಅಂತರ ನಿವಾರಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವೊಬ್ಬ ಮಹಿಳೆಯೂ ಲಸಿಕಾ ಆಂದೋಲನದಿಂದ ಹೊರಗುಳಿಯದಂತೆ  ಖಾತ್ರಿಪಡಿಸಬೇಕೆಂದು ಆಗ್ರಹಿಸಿದ್ದಾರೆಲಸಿಕೆ ಪಡೆದಿರುವ ಪುರುಷರು ಮತ್ತು‌ ಮಹಿಳೆಯ ನಡುವಿನ ಅಂತರ ಆಯೋಗಕ್ಕೆ ಹೆಚ್ಚಿನ ಕಳವಳ ಉಂಟು ಮಾಡಿದೆ ಎಂದು ಅಧ್ಯಕ್ಷೆ ಶ್ರೀಮತಿ ರೇಖಾ ಶರ್ಮಾ ತಮ್ಮ ಪತ್ರದಲ್ಲಿ ಲಸಿಕಾ ಕಾರ್ಯಕ್ರಮದ ವ್ಯಾಪ್ತಿಯಲ್ಲಿನ ಅಂತರವನ್ನು ನಿವಾರಿಸಲು ಹೆಚ್ಚಿನ ಸಂಖ್ಯೆಯ ಮಹಿಳೆಯರು ಲಸಿಕಾಕೇಂದ್ರಗಳಿಗೆ ಬರುವಂತೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.

ಹೆಚ್ಚು ಹೆಚ್ಚು ಮಹಿಳೆಯರಿಗೆ ಆದ್ಯತೆಯ ಮೇಲೆ ಲಸಿಕೆ ಹಾಕುವಂತೆ ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸುವ ಅಗತ್ಯವೂ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪತ್ರದ ಪ್ರತಿಯನ್ನು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ. ಲಸಿಕೆ ಪಡೆಯುವಿಕೆಯಲ್ಲಿ ಸದ್ಯ ಲಿಂಗ ಅಂತರವು ಯುವ ಮಹಿಳೆಯರಿಗಿಂತ ವಯಸ್ಸಾದವರಲ್ಲಿ ಗಮನಾರ್ಹವಾಗಿದೆ ಎಂದು ಮಾಧ್ಯಮ ವರದಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆಇದು ಸಮಾಜದಲ್ಲಿರುವ ಲಿಂಗ ತಾರತಮ್ಯ ಕುರಿತ ಭಾವನೆಯನ್ನು  ಎತ್ತಿತೋರಿಸುತ್ತದೆ ಇದು ಮಹಿಳೆಯರು ಹಿಂದೆ ಉಳಿದಿದ್ದಾರೆ ಎಂಬುದನ್ನಷ್ಟೆ ಅಲ್ಲದೆ  ಎರಡೂ ಲಿಂಗದವರ ನಡುಬೆ ಸಂಪನ್ಮೂಲ ಮತ್ತು ತಂತ್ರಜ್ಞಾನದ ಅಸಮಾನತೆ ಇರುವುದನ್ನು ಪ್ರತಿಬಿಂಬಿಸುತ್ತದೆ

ರಾಷ್ಟ್ರೀಯ ಮಹಿಳಾ ಆಯೋಗ ತನ್ನ ಪತ್ರದಲ್ಲಿ ಹಲವು ಕುಟುಂಬಗಳು ಪುರುಷರಿಗೆ ಹೋಲಿಸಿದರೆ ಮಹಿಳೆಯರ ಆರೋಗ್ಯವನ್ನು ಹೆಚ್ಚಿನ ಆದ್ಯತೆಯಾಗಿ ಪರಿಗಣಿಸಿಲ್ಲ, ಏಕೆಂದರೆ ಮಹಿಳೆಯರು ಮನೆಯಿಂದ ಹೊರಗೆ ಕೆಲಸ ಮಾಡುವುದಿಲ್ಲ ಹಾಗು  ಇದೇ ಕಾರಣಕ್ಕಾಗಿಯೇ ಲಸಿಕೆ ಪಡೆಯುವಿಕೆಯಲ್ಲಿ ಅವರು ಕಡಿಮೆ ಆದ್ಯತೆ ಪಡೆಯುತ್ತಾರೆ. ಆದರೂ ಕುಟುಂಬದ ಯಾವುದೇ ಸದಸ್ಯರು‌ ಅನಾರೋಗ್ಯಕ್ಕೆ ಒಳಗಾದಾಗ ಅಂತಹ  ಸದಸ್ಯಿಗೆ ಪ್ರಾಥಮಿಕ ಆರೈಕೆ ನೀಡುವ  ಮಹಿಳೆಯರು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ.

ಲಸಿಕೆಯ ಯಾವುದೇ ಅಡ್ಡ ಪರಿಣಾಮಗಳ ತಪ್ಪು ಮಾಹಿತಿ ಹಾಗೂ ವದಂತಿಗಳನ್ನು ಹೋಗಲಾಡಿಸಲು ನಿರ್ದಿಷ್ಠ ಅಭಿಯಾನಗಳ ಜೊತೆಗೆ ದೇಶದ ಮೂಲೆ ಮೂಲೆಗಳಲ್ಲೂ ಲಸಿಕಾ ನೀಡುವುದನ್ನು ತೀವ್ರಗೊಳಿಸಲು ಕೇಂದ್ರ ಸರ್ಕಾರ ಲಸಿಕಾ ಆಂದೋಲನಗಳನ್ನು ತೀವ್ರಗೊಳಿಸುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

ರಾಜ್ಯ ಸರ್ಕಾರಗಳು ಅಭಿಯಾನಗಳನ್ನು ಮುಂದುವರಿಸಬೇಕು, ಇದರಿಂದ ಸರಿಯಾದ ಮಾಹಿತಿಯು ಭಾರತದ ಕುಗ್ರಾಮಗಳಿಗೂ ತಲುಪುತ್ತದೆ.

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಡಿ ಬರುವ ರಾಷ್ಟ್ರೀಯ ಮಹಿಳಾ ಆಯೋಗ, ಮಹಿಳೆಯರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಆಶಯ ಹೊಂದಿರುವ ರಾಷ್ಟ್ರಮಟ್ಟದ ಅತ್ಯುನ್ನತ ಸಂಸ್ಥೆಯಾಗಿದೆ

***



(Release ID: 1745450) Visitor Counter : 238