ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದ ಒಟ್ಟು ಕೋವಿಡ್-19 ಲಸಿಕೆ ವ್ಯಾಪ್ತಿ 52 ಕೋಟಿ ಕೋಟಿ ಹೆಗ್ಗುರುತು ದಾಟಿದೆ
ಕಳೆದ 24 ಗಂಟೆಗಳಲ್ಲಿ 44 ಲಕ್ಷಕ್ಕಿಂತಲೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ
ಭಾರತವು ಇದುವರೆಗಿನ ಅತಿ ಹೆಚ್ಚಿನ ಚೇತರಿಕೆ ದರವನ್ನು (97.45%) ಸಾಧಿಸಿದೆ
ಕಳೆದ 24 ಗಂಟೆಗಳಲ್ಲಿ 41,195 ಹೊಸ ಪ್ರಕರಣಗಳು ಪತ್ತೆಯಾಗಿವೆ
ಭಾರತದ ಸಕ್ರಿಯ ಪ್ರಕರಣಗಳ ಹೊರೆಯು (3,87,987)ಪ್ರಸ್ತುತ ಒಟ್ಟು ಪ್ರಕರಣಗಳಲ್ಲಿ ಶೇ. 1.21ರಷ್ಟಿದೆ
ದೈನಂದಿನ ಪಾಸಿಟಿವಿಟಿ ದರವು (1.94%) ಕಳೆದ 17 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ
Posted On:
12 AUG 2021 10:11AM by PIB Bengaluru
ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ 52 ಕೋಟಿಯ ಹೆಗ್ಗುರುತನ್ನು ದಾಟಿದೆ. ಒಟ್ಟಾರೆಯಾಗಿ,ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ 59,97,068 ಸೆಷನ್‌ಗಳ ಮೂಲಕ 52,36,71,019 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 44,19,627 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಇದರಲ್ಲಿ ಇವು ಸೇರಿವೆ:
ಆರೋಗ್ಯ ಕಾರ್ಯಕರ್ತರು
|
1ನೇ ಡೋಸ್
|
1,03,41,119
|
2ನೇ ಡೋಸ್
|
80,34,194
|
ಮುಂಚೂಣಿ ಕಾರ್ಯಕರ್ತರು
|
1ನೇ ಡೋಸ್
|
1,82,48,485
|
2ನೇ ಡೋಸ್
|
1,19,35,584
|
18-44 ವರ್ಷ ವಯೋಮಾನದವರು
|
1ನೇ ಡೋಸ್
|
18,47,82,179
|
2ನೇ ಡೋಸ್
|
1,34,26,569
|
45-59 ವರ್ಷ ವಯೋಮಾನದವರು
|
1ನೇ ಡೋಸ್
|
11,40,17,033
|
2ನೇ ಡೋಸ್
|
4,40,01,065
|
60 ವರ್ಷ ಮೀರಿದವರು
|
1ನೇ ಡೋಸ್
|
7,95,91,513
|
2ನೇ ಡೋಸ್
|
3,92,93,278
|
ಒಟ್ಟು
|
52,36,71,019
|
ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21ರಿಂದ ಪ್ರಾರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.
ಪ್ರಸ್ತುತ ಭಾರತದ ಚೇತರಿಕೆ ದರ ಶೇ.97.45ರಷ್ಟಿದೆ. ಸಾಂಕ್ರಾಮಿಕ ಪ್ರಾರಂಭವಾದ ನಂತರ ಇದುವರೆಗೂ ಭಾರತ ಸಾಧಿಸಿದ ಗರಿಷ್ಠ ಚೇತರಿಕೆ ದರ ಇದಾಗಿದೆ.
ಸಾಂಕ್ರಾಮಿಕ ರೋಗದ ಆರಂಭದಿಂದ ಸೋಂಕಿಗೆ ಒಳಗಾದ ಜನರಲ್ಲಿ, ಈಗಾಗಲೇ 3,12,60,050 ಜನರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 39,069 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 41,195 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.
ಸತತ 46 ದಿನಗಳಿಂದ 50,000ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲವಾಗಿದೆ.
ಭಾರತದ ಸಕ್ರಿಯ ಪ್ರಕರಣಗಳ ಹೊರೆಯು ಇಂದು 3,87,987 ರಷ್ಟಿದೆ. ಈಗ ಸಕ್ರಿಯ ಪ್ರಕರಣಗಳು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಶೇ 1.21ರಷ್ಟಿವೆ. ಇದು ಮಾರ್ಚ್ 2020ರ ನಂತರ ಅತ್ಯಂತ ಕಡಿಮೆ ಎನಿಸಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 21,24,953 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ, ಭಾರತವು ಇಲ್ಲಿಯವರೆಗೆ 48.73 ಕೋಟಿ (48,73,70,196)ಪರೀಕ್ಷೆಗಳನ್ನು ನಡೆಸಿದೆ.
ಒಂದೆಡೆ ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ಹೆಚ್ಚಿಸಲಾಗಿದ್ದರೂ, ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 2.23% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರವು ಇಂದು 1.94% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಕಳೆದ 17 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ ಮತ್ತು ಈಗ ಸತತ 66 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.
***
(Release ID: 1745079)
Visitor Counter : 263