ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕುಸ್ತಿಪಟು ಭಜರಂಗ್ ಪುನಿಯಾಗೆ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ಪದಕ

Posted On: 07 AUG 2021 5:19PM by PIB Bengaluru

ಪ್ರಮುಖ ಮುಖ್ಯಾಂಶಗಳು :

  • ಕಂಚಿನ ಪದಕದ ಪಂದ್ಯದಲ್ಲಿ ಕಜಕಿಸ್ತಾನದ ಡೌಲೆಟ್ ನಿಯಾಜ್‌ಬೆಕೋವ್ ಅವರನ್ನು 8-0 ಯಿಂದ ಪುನಿಯಾ ಸೋಲಿಸಿದರು. 
  • ಅದ್ಭುತ ಸಾಧನೆಗಾಗಿ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್  ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು  ಭಜರಂಗ್ ಅವರನ್ನು ಅಭಿನಂದಿಸಿದರು. 
  • ಭಜರಂಗ್ ಅವರನ್ನು ಅಭಿನಂದಿಸುತ್ತಾ  ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ “ನಾನು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ, ನಿಮ್ಮ ಪ್ರಬಲ ಪ್ರದರ್ಶನ ಮತ್ತು ಅದ್ಭುತ ಫಿನಿಶ್ ಅನ್ನು ನೋಡಿದೆ, ಬಹಳ ಇಷ್ಟವಾಯಿತು.” ಎಂದು ಹೇಳಿದ್ದಾರೆ.

ಇಂದು ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಕುಸ್ತಿಪಟು ಭಜರಂಗ್ ಪುನಿಯಾ  ಕಂಚಿನ ಪದಕ ಗೆದ್ದಿದ್ದಾರೆ.  ಕಂಚಿನ ಪದಕದ ಪಂದ್ಯದಲ್ಲಿ ಅವರು ಕಜಕಿಸ್ತಾನದ ಡೌಲೆಟ್ ನಿಯಾಜ್‌ಬೆಕೋವ್ ಅವರನ್ನು 8-0 ಯಿಂದ  ಸೋಲಿಸಿದರು.  ಇದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಆರನೇ ಪದಕವಾಗಿದ್ದು, ಲಂಡನ್ ಒಲಿಂಪಿಕ್ ದಾಖಲೆಯನ್ನು ಆರು ಪದಕಗಳೊಂದಿಗೆ ಸರಿಗಟ್ಟಿತು. ಭಜರಂಗ್ ಪುನಿಯಾ ಅವರ ಸಾಧನೆಗೆ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್, ಪ್ರಧಾನಿ ಶ್ರೀ ನರೇಂದ್ರ ಮೋದಿ, ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ದೇಶದ ಮೂಲೆ ಮೂಲೆಗಳಿಂದ ಭಾರತೀಯರು  ಅಭಿನಂದಿಸಿದರು.

 



 ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಕುಸ್ತಿಪಟುವನ್ನು ಅಭಿನಂದಿಸಿದರು ಮತ್ತು ಪ್ರತಿಯೊಬ್ಬ ಭಾರತೀಯರು ಅವರ ಯಶಸ್ಸಿನ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿದರು. "ಭಾರತೀಯ ಕುಸ್ತಿಗೆ ಒಂದು ವಿಶೇಷ ಕ್ಷಣ! #ಟೋಕಿಯೋ2020 ರಲ್ಲಿ ಕಂಚು ಗೆದ್ದ ಭಜರಂಗ್ ಪುನಿಯಾ ಅವರಿಗೆ ಅಭಿನಂದನೆಗಳು. ನೀವು ವರ್ಷಗಳಿಂದ ಅವಿರತ ಪ್ರಯತ್ನಗಳು, ಸ್ಥಿರತೆ ಮತ್ತು ದೃಢತೆಯೊಂದಿಗೆ ಅತ್ಯುತ್ತಮ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದೀರಿ. ಪ್ರತಿಯೊಬ್ಬ ಭಾರತೀಯನೂ ನಿಮ್ಮ ಯಶಸ್ಸಿನ ಸಂತೋಷವನ್ನು ಹಂಚಿಕೊಳ್ಳುತ್ತಾನೆ! “ ಎಂದು  ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.

 


  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಜರಂಗ್ ಅವರ  ಪ್ರದರ್ಶನಕ್ಕೆ  ಅಭಿನಂದಿಸಿದರು ಮತ್ತು ಟ್ವೀಟ್ ಮಾಡಿದರು, " #Tokyo2020  ರ ಸಂತೋಷದ ಸುದ್ದಿ! ಅದ್ಭುತವಾಗಿ ಹೋರಾಡಿದ @BajrangPunia . ನಿಮ್ಮ ಸಾಧನೆಗಾಗಿ ನಿಮಗೆ ಅಭಿನಂದನೆಗಳು, ಇದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ಮತ್ತು ಸಂತೋಷವನ್ನು ನೀಡುತ್ತದೆ. ”

 



 ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಟ್ವಿಟ್ಟರ್ ನಲ್ಲಿ ಅಭಿನಂದನೆಯ ಸಂದೇಶದೊಂದಿಗೆ ಗೆಲುವಿನ ಕ್ಷಣವನ್ನು ನೋಡುತ್ತಿರುವ  ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. “ಭಜರಂಗ ರವರಿಗೆ ಕಂಚು !!! ನೀವು ಸಾಧಿಸಿದಿರಿ! ಭಾರತವು ಪದಗಳಲ್ಲಿ ಹೇಳಲಾಗದಷ್ಟು  ರೋಮಾಂಚನಗೊಂಡಿದೆ! ನಾನು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ, ನಿಮ್ಮ ಪ್ರಬಲ ಪ್ರದರ್ಶನ ಮತ್ತು ಅದ್ಭುತ ಫಿನಿಶ್ ಅನ್ನು ನೋಡಿದೆ, ಬಹಳ ಇಷ್ಟವಾಯಿತು.”  #Tokyo2020  "  ಎಂದು ಕ್ರೀಡಾ ಸಚಿವರು ಟ್ವೀಟ್ ಮಾಡಿದ್ದಾರೆ.

ಭಜರಂಗಪುನಿಯಾ - ಭಜರಂಗಪುನಿಯಾ 7 ನೇ ವಯಸ್ಸಿನಲ್ಲಿ ಕುಸ್ತಿ ಆಡಲು ಆರಂಭಿಸಿದರು. ಅವರು ಹರಿಯಾಣ ರಾಜ್ಯದ ಝಜ್ಜರ್ ಜಿಲ್ಲೆಯ ಖುದಾನ್ ಗ್ರಾಮದಲ್ಲಿ ಗ್ರಾಮೀಣ ಹಿನ್ನೆಲೆಯ ಕುಟುಂಬಕ್ಕೆ ಸೇರಿದವರು.  
ಭಜರಂಗ್ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದರಿಂದ, ಅವರು ತಮ್ಮ ಆರಂಭಿಕ ದಿನಗಳಲ್ಲಿ ಅನೇಕ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಯಿತು. ಆದರೆ, ಅವರ ಸ್ನೇಹಿತ ಮತ್ತು ಗುರುವಾದ ಪ್ರಸಿದ್ಧ ಕುಸ್ತಿಪಟು ಯೋಗೇಶ್ವರ್ ದತ್ ಅವರನ್ನು ಯಾವಾಗಲೂ ಬೆಂಬಲಿಸುತ್ತಿದ್ದರು.

ವೈಯಕ್ತಿಕ ವಿವರಗಳು:

ಹುಟ್ಟಿದ ದಿನಾಂಕ: ಫೆಬ್ರವರಿ 26, 1994

ಮನೆ ಇರುವ ಸ್ಥಳ: ಸೋನಿಪತ್, ಹರಿಯಾಣ

ಕ್ರೀಡೆ: ಕುಸ್ತಿ

ತರಬೇತಿ ಶಿಬಿರ : ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ, ಎನ್ ಆರ್ ಸಿ  ಸೋನಿಪತ್

ವೈಯಕ್ತಿಕ ತರಬೇತುದಾರರು: ಎಮ್ಜಾರಿಯೋಸ್ ಬೆಂಟಿನಿಡಿಸ್

ರಾಷ್ಟ್ರೀಯ ತರಬೇತುದಾರರು: ಜಗಮಂದರ್ ಸಿಂಗ್

ಸಾಧನೆಗಳು

ವಿಶ್ವ ಚಾಂಪಿಯನ್‌ಶಿಪ್ -1 ಬೆಳ್ಳಿ ಮತ್ತು 2 ಕಂಚು
 ಏಷ್ಯನ್ ಚಾಂಪಿಯನ್‌ಶಿಪ್ - 2 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕಗಳು 
ಏಷ್ಯನ್ ಗೇಮ್ಸ್ - 1 ಚಿನ್ನ ಮತ್ತು 1 ಬೆಳ್ಳಿ 
ಕಾಮನ್ ವೆಲ್ತ್ ಗೇಮ್ಸ್  - 1 ಚಿನ್ನ ಮತ್ತು 1 ಬೆಳ್ಳಿ

ಸರ್ಕಾರದ ಪ್ರಮುಖ ಸಹಾಯಗಳು

ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ರಷ್ಯಾದಲ್ಲಿ ಪೂರ್ವಸಿದ್ಧತಾ ತರಬೇತಿ ಶಿಬಿರ 
ಅಮೆರಿಕದ ಮಿಚಿಗನ್‌ನಲ್ಲಿ ಎರಡು ತಿಂಗಳ ಕಾಲ ತನ್ನ ಸಹಾಯಕ ಸಿಬ್ಬಂದಿಯೊಂದಿಗೆ ಪೂರ್ವಸಿದ್ಧತಾ ತರಬೇತಿ ಶಿಬಿರ 
ಹಿರಿಯ ವಿಶ್ವ ಚಾಂಪಿಯನ್‌ಶಿಪ್ 2019 ಕ್ಕಿಂತ  ಮೊದಲು (ಅರ್ಹತಾ ಕಾರ್ಯಕ್ರಮ) ಮತ್ತು ಅಮೆರಿಕ, ರಷ್ಯಾ ಮತ್ತು ಜಾರ್ಜಿಯಾದಲ್ಲಿ ಪೂರ್ವಭಾವಿ ತರಬೇತಿ ಶಿಬಿರ.   
ಅಲಿ ಅಲೀವ್, ಟಿಬಿಲಿಸಿ ಜಿಪಿ, ಏಷ್ಯನ್ ಚಾಂಪಿಯನ್‌ಶಿಪ್‌ಗಳು, ಯಾರ್‌ಡೋಗು ಮತ್ತು ಮ್ಯಾಟಿಯೊ ಪೆಲಿಕೋನ್  ರ‍್ಯಾಂಕಿಂಗ್  ಪಂದ್ಯಾವಳಿಗಳಲ್ಲಿ ಭಾಗವಹಿಸುವಿಕೆ, ಇದನ್ನು ಟಿಒಪಿಎಸ್  ಮತ್ತು  ಎ ಸಿ ಟಿ ಸಿ ಒದಗಿಸಿವೆ. 
ಲಾಕ್‌ಡೌನ್ ಸಮಯದಲ್ಲಿ ಪೂರಕ ವಸ್ತುಗಳು ಮತ್ತು ಮ್ಯಾಟ್ಸ್ ( ಕೋವಿಡ್) 
ಕ್ರೀಡಾ ಎಸ್ & ಸಿ ಸಲಕರಣೆಗಳು 
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸ್ಪರ್ಧೆಯ ಪಾಲುದಾರರಾಗಿದ್ದ ಅಂತಾರಾಷ್ಟ್ರೀಯ ಆಟಗಾರರಿಗೆ ವೀಸಾ ನೆರವು
ಭಜರಂಗರವರಿಗೆ ವೀಸಾ ಸೌಲಭ್ಯ ಮತ್ತು ಒಲಿಂಪಿಕ್  ತಯಾರಿಗಾಗಿ ರಷ್ಯಾಕ್ಕೆ ಬೆಂಬಲ ತಂಡ 
 ರಾಷ್ಟ್ರೀಯ ಶಿಬಿರಗಳಲ್ಲಿ ವೈಯಕ್ತಿಕ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳ ಸೇರ್ಪಡೆ

 ಟಿ ಒ ಪಿ ಎಸ್ : ರೂ. 1,47,40,348
ಎ ಸಿ ಟಿ ಸಿ:   ರೂ. 59,07,151
ಒಟ್ಟು: ರೂ. 2,06,47,499

ತರಬೇತುದಾರರ ವಿವರಗಳು:

ಗ್ರಾಸ್ ರೂಟ್  ಮಟ್ಟ:  ವೀರೇಂದ್ರ
ಡೆವೆಲಪ್ ಮೆಂಡ್   ಮಟ್ಟ: ರಾಮ್ ಪಾಲ್
ಎಲೈಟ್ ಮಟ್ಟ: ಜಗ್ಮಂದರ್ ಸಿಂಗ್ / ಎಮ್ಜಾರಿಯೋಸ್ ಬೆಂಟಿನಿಡಿಸ್

****



(Release ID: 1743730) Visitor Counter : 193