ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದ ಒಟ್ಟು ಕೋವಿಡ್-19 ಲಸಿಕಾಕರಣ ವ್ಯಾಪ್ತಿ 49 ಕೋಟಿಯ ಮೈಲಿಗಲ್ಲನ್ನು ದಾಟಿದೆ
ಕಳೆದ 24 ಗಂಟೆಗಳಲ್ಲಿ ಸುಮಾರು 58 ಲಕ್ಷ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ
ಪ್ರಸ್ತುತ ಚೇತರಿಕೆ ದರ 97.36%
ಕಳೆದ 24 ಗಂಟೆಗಳಲ್ಲಿ ದೈನಿಕ 44,643 ಹೊಸ ಪ್ರಕರಣಗಳು ವರದಿಯಾಗಿವೆ
ಭಾರತದ ಸಕ್ರಿಯ ಪ್ರಕರಣಗಳ ಹೊರೆ (4,14,159) ಪ್ರಸ್ತುತ ಒಟ್ಟು ಪ್ರಕರಣಗಳ ಸಂಖ್ಯೆಗೆ ಹೋಲಿಸಿದಾಗ 1.30%
ದೈನಿಕ ಪಾಸಿಟಿವಿಟಿ ದರ (2.72%) ಕಳೆದೆರಡು ತಿಂಗಳಿಂದ 5%ಗಿಂತ ಕಡಿಮೆ ಇದೆ
Posted On:
06 AUG 2021 9:29AM by PIB Bengaluru
ಭಾರತದ ಕೋವಿಡ್ -19 ಲಸಿಕಾಕರಣದ ವ್ಯಾಪ್ತಿ ನಿನ್ನೆ 49 ಕೋಟಿಯ ಗಡಿ ದಾಟಿದೆ. ಒಟ್ಟು 49,53,27,595 ಲಸಿಕಾ ಡೋಸ್ ಗಳನ್ನು 57,64,712ಅಧಿವೇಶನಗಳ ಮೂಲಕ ನೀಡಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 57,97,808 ಲಸಿಕಾ ಡೋಸ್ ಗಳನ್ನು ನೀಡಲಾಗಿದೆ.
ವಿವರಗಳು ಈ ಕೆಳಗಿನಂತಿವೆ:
ಎಚ್.ಸಿ.ಡಬ್ಲ್ಯು
|
1ನೇ ಡೋಸ್
|
1,03,24,101
|
2ನೇ ಡೋಸ್
|
79,35,738
|
ಎಫ್.ಎಲ್.ಡಬ್ಲ್ಯು
|
1ನೇ ಡೋಸ್
|
1,80,22,988
|
2ನೇ ಡೋಸ್
|
1,15,97,454
|
18-44 ವರ್ಷ ವಯೋಮಿತಿಯ ಗುಂಪು
|
1ನೇ ಡೋಸ್
|
16,97,29,527
|
2ನೇ ಡೋಸ್
|
1,08,07,866
|
45-59ವರ್ಷ ವಯೋಮಿತಿಯ ಗುಂಪು
|
1ನೇ ಡೋಸ್
|
10,99,20,377
|
2ನೇ ಡೋಸ್
|
4,15,01,902
|
60ವರ್ಷಕ್ಕಿಂತ ಮೇಲ್ಪಟ್ಟವರು
|
1ನೇ ಡೋಸ್
|
7,76,34,057
|
2ನೇ ಡೋಸ್
|
3,78,53,585
|
ಒಟ್ಟು
|
49,53,27,595
|
ಸಾರ್ವತ್ರಿಕ ಕೋವಿಡ್ -19 ಲಸಿಕಾಕರಣದ ಹೊಸ ಹಂತ 2021 ರ ಜೂನ್ 21 ರಿಂದ ಆರಂಭವಾಗಿದೆ. ಕೇಂದ್ರ ಸರಕಾರವು ಈ ಹಂತವನ್ನು ಇನ್ನಷ್ಟು ತ್ವರಿತಗೊಳಿಸಲು ಮತ್ತು ಇಡೀ ದೇಶಾದ್ಯಂತ ಕೋವಿಡ್ -19 ಲಸಿಕಾಕರಣದ ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ.
ಜಾಗತಿಕ ಸಾಂಕ್ರಾಮಿಕ ಆರಂಭವಾದಂದಿನಿಂದ ಸೋಂಕಿತರಾದವರ ಪೈಕಿ 3,10,15,844 ಮಂದಿ ಈಗಾಗಲೇ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ ಮತ್ತು 41,096 ರೋಗಿಗಳು ಕಳೆದ 24 ತಾಸುಗಳಲ್ಲಿ ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖ ದರ 97.36%. ಆಗಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೈನಿಕ 44,643ಹೊಸ ಪ್ರಕರಣಗಳು ವರದಿಯಾಗುತ್ತಿವೆ.
ಕಳೆದ ಸತತ ನಲವತ್ತು ದಿನಗಳಿಂದ ದೈನಿಕ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ 50,000 ಕ್ಕಿಂತ ಕಡಿಮೆ ಇದೆ. ಕೇಂದ್ರ ಮತ್ತು ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳ ಸಂಘಟಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ.
ಇಂದು ಭಾರತದ ಸಕ್ರಿಯ ಪ್ರಕರಣಗಳ ಹೊರೆ 4,14,159 ರಷ್ಟಿದೆ ಮತ್ತು ಸಕ್ರಿಯ ಪ್ರಕರಣಗಳ ಪ್ರಮಾಣ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳ 1.30% ದಷ್ಟಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ನಿರಂತರ ಹೆಚ್ಚಿಸಿದುದರಿಂದಾಗಿ ಕಳೆದ 24 ಗಂಟೆಗಳಲ್ಲಿ ಒಟ್ಟು 16,40,287 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತವು ಇದುವರೆಗೆ ಒಟ್ಟು 47.65 ಕೋಟಿಗೂ ಅಧಿಕ (47,65,33,650) ಪರೀಕ್ಷೆಗಳನ್ನು ನಡೆಸಿದೆ.
ಒಂದೆಡೆ ದೇಶಾದ್ಯಂತ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದ್ದರೆ, ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 2.41% ರಲ್ಲಿದೆ ಮತ್ತು ದೈನಿಕ ಪಾಸಿಟಿವಿಟಿ ದರ 2.72% ನಷ್ಟಿದೆ. ದೈನಿಕ ಪಾಸಿಟಿವಿಟಿ ದರ ಈಗ ಸತತ 60 ದಿನಗಳಿಂದ 5% ಗಿಂತ ಕೆಳಗಿದೆ.
***
(Release ID: 1743243)
Visitor Counter : 278