ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೊ ಒಲಿಂಪಿಕ್ಸ್ನಲ್ಲಿ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕವನ್ನು ಗೆದ್ದರು

Posted On: 04 AUG 2021 6:07PM by PIB Bengaluru

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಪತಿ  ಶ್ರೀ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲವ್ಲಿನಾ ಬೊರ್ಗೊಹೈನ್ ಅವರ  ಸಾಧನೆಗಾಗಿ  ಅಭಿನಂದಿಸಿದರು.
  • ಲವ್ಲಿನಾ ಅವರನ್ನು ಅಭಿನಂದಿಸಿದ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು.

ಇಂದು ಸೆಮಿಫೈನಲ್ನಲ್ಲಿ ಟರ್ಕಿಯ ವಿಶ್ವ ಚಾಂಪಿಯನ್ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೋತ ನಂತರ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ 69 ಕಿಲೋಗ್ರಾಂ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆಇದು ದೇಶಕ್ಕೆ ಬಂದ ಮೂರನೇ ಪದಕವಾಗಿದೆ. ಹಿಂದೆ ಪಿವಿ ಸಿಂಧು ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದರೆ, ಮೀರಾ ಬಾಯಿ ಚಾನು ವೇಯ್ಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದರು. ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್, ಪ್ರಧಾನಿ ಶ್ರೀ ನರೇಂದ್ರ ಮೋದಿ, ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ದೇಶದ ಮೂಲೆ ಮೂಲೆಗಳಿಂದ ಭಾರತೀಯರು ಲವ್ಲಿನಾ ಬೊರ್ಗೊಹಾಯ್ ಅವರ ಸಾಧನೆಗಾಗಿ ಅಭಿನಂದಿಸಿದರು.

 

ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಲೊವ್ಲಿನಾ ಬೊರ್ಗೊಹೈನ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದಿಸಿದ್ದಾರೆಲವ್ಲಿನಾ ಬೊರ್ಗೊಹೈನ್ ಅವರಿಗೆ ಅಭಿನಂದನೆಗಳು! ನಿಮ್ಮ ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದಿಂದ, ನೀವು ರಾಷ್ಟ್ರ ಹೆಮ್ಮೆಪಡುವಂತೆ ಮಾಡಿದ್ದೀರಿ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್ನಲ್ಲಿ ನಿಮ್ಮ ಕಂಚಿನ ಪದಕವು ಯುವಕರಿಗೆ, ವಿಶೇಷವಾಗಿ ಯುವತಿಯರಿಗೆ ಸವಾಲುಗಳೊಂದಿಗೆ ಹೋರಾಡಲು ಮತ್ತು ಅವರ ಕನಸುಗಳನ್ನು ನನಸಾಗಿಸಲು  ಪ್ರೇರೇಪಿಸುತ್ತದೆ.ಎಂದು ಶ್ರೀ ಕೋವಿಂದ್ ಟ್ವೀಟ್ ಮಾಡಿದ್ದಾರೆ.

 

ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದಕ್ಕಾಗಿ ಬಾಕ್ಸರ್ ಲೊವ್ಲಿನಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು, "ಚೆನ್ನಾಗಿ ಹೋರಾಡಿದ್ದೀರಿ ಲವ್ಲಿನಾ  ಬೊರ್ಗೊಹೈನ್@LovlinaBorgohai ! ಬಾಕ್ಸಿಂಗ್  ರಿಂಗ್ನಲ್ಲಿ ಆಕೆಯ ಯಶಸ್ಸು ಹಲವಾರು ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ. ಅವರ ಕಠಿಣ ಪರಿಶ್ರಮ ಮತ್ತು ದೃಢ ನಿಶ್ಚಯವು  ಶ್ಲಾಘನೀಯವಾಗಿದೆಕಂಚು ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು."  #Tokyo2020  ಎಂದು ಶ್ರೀ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

 

ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರನ್ನು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅಭಿನಂದಿಸಿದ್ದಾರೆ., "ಲವ್ಲಿನಾ, ತಮ್ಮ ಅತ್ಯುತ್ತಮ ಪಂಚ್ ಅನ್ನು  ನೀಡಿದರು ಮತ್ತು ಅವರ ಸಾಧನೆಗೆ ಭಾರತವು ಅತ್ಯಂತ ಹೆಮ್ಮೆಪಡುತ್ತದೆ." "ಅವರು ತಮ್ಮ ಮೊದಲ ಒಲಿಂಪಿಕ್ಸ್ ನಲ್ಲಿಯೇ  ಕಂಚಿನ ಪದಕವನ್ನು ಗೆದ್ದಿದ್ದಾರೆ ಮತ್ತು ಅವರ ಕ್ರೀಡಾ ಪಯಣ ಈಗಷ್ಟೇ ಆರಂಭವಾಗಿದೆ" ಎಂದು ಶ್ರೀ ಠಾಕೂರ್ ಟ್ವೀಟ್ ಮಾಡಿದ್ದಾರೆ

ಲವ್ಲಿನಾ 2 ಅಕ್ಟೋಬರ್ 1997 ರಂದು ಜನಿಸಿದರು ಮತ್ತು  ಇವರು ಅಸ್ಸಾಂನ ಗೋಲಘಾಟ್ ಜಿಲ್ಲೆಯವರು. ಇವರ  ತಂದೆ ಟಿಕೆನ್ ಸಣ್ಣ ವ್ಯಾಪಾರಿಯಾಗಿದ್ದು  ಮಗಳ ಮಹತ್ವಾಕಾಂಕ್ಷೆಯನ್ನು ಬೆಂಬಲಿಸಲು ಹಣಕಾಸಿನ ತೊಂದರೆಗಳನ್ನು ಹೊಂದಿದ್ದರು. ಆಕೆಯ ಅವಳಿ ಸಹೋದರಿಯರಾದ ಲಿಚಾ ಮತ್ತು ಲಿಮಾ ಅವರಂತೆ, ಮೊದಲು ಕಿಕ್ ಬಾಕ್ಸಿಂಗ್ ಅನ್ನು ಆರಿಸಿಕೊಂಡರುತನ್ನ ಮೊದಲ ತರಬೇತುದಾರ ಪಡುಂ ಬೋರೊ ಅವರನ್ನು ಭೇಟಿಯಾದ ನಂತರ, ಆಕೆಯ ಜೀವನವು ನಿರ್ದಿಷ್ಟ ತಿರುವು ಪಡೆಯಿತು. ಭಾರತದ ಕ್ರೀಡಾ ಪ್ರಾಧಿಕಾರದ ಶಿಲ್ಲಾಂಗ್ ಮತ್ತು ದಿಮಾಪುರ ಕೇಂದ್ರಗಳಲ್ಲಿ ಕೆಲಸ ಮಾಡಿದ ಬೋರೊ ಆಕೆಯನ್ನು ಬಾಕ್ಸಿಂಗ್ ಗೆ ಪರಿಚಯಿಸಿದರು ಮತ್ತು ಅಂದಿನಿಂದ ಲವ್ಲಿನಾಗೆ ಹಿಂತಿರುಗಿ ನೋಡಲಿಲ್ಲ. ಬಾಕ್ಸಿಂಗ್ ನಲ್ಲಿ ತಮ್ಮ ಇಷ್ಟವನ್ನು  ಕಂಡುಕೊಂಡ ಲವ್ಲಿನಾ ಯಾವಾಗಲೂ ಅವಕಾಶಕ್ಕಾಗಿ ಕಾಯುತ್ತಿದ್ದರು. ಮತ್ತು ಇದು ಕೆಲವೇ ತಿಂಗಳಲ್ಲಿ ಸದಾವಕಾಶ ಬಂದಿತು. ತಾನು ಅಧ್ಯಯನ ಮಾಡಿದ ಬರ್ಪಥರ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರವು (ಎಸ್ಎಐ) ಕ್ರೀಡಾ ಪರೀಕ್ಷೆಗಳನ್ನು ನಡೆಸುತ್ತಿತ್ತು  ಮತ್ತು ಲವ್ಲಿನಾ   ಭಾಗವಹಿಸಿದಾಗ ತನ್ನ ಕೌಶಲ್ಯಗಳನ್ನು ತೋರಿಸಿದರು. 2012 ರಿಂದ ತನ್ನ ಅಸಾಧಾರಣ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳುವುದರ ಕಡೆ ಬೋರೊ ಗಮನವಿಟ್ಟರುಉನ್ನತಿಗೇರುವ ತನ್ನ ಪ್ರಯಾಣದಲ್ಲಿ, ಬಾಕ್ಸಿಂಗ್ ನಲ್ಲಿ ಮಹಿಳೆಯರಿಗಿರುವ ಆಸಕ್ತಿಯ ಬಗ್ಗೆ ಪ್ರಶ್ನಿಸುವ  ಸಮಾಜದೊಂದಿಗೆ ಹೋರಾಡಿದರು. ಆದರೆ ಇದು ಅವರ ಮೊದಲ ಮಹತ್ವದ ಮುನ್ನಡೆ, 2018 ರಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆಲ್ಲಲು ಕಾರಣವಾದ ಆಕೆಯ ಆಕಾಂಕ್ಷೆಗಳನ್ನು ಕುಗ್ಗಿಸಲಿಲ್ಲಟೋಕಿಯೊ ಒಲಿಂಪಿಕ್ 2020 ಗೆ ಅರ್ಹತೆ ಪಡೆದ ನಂತರ, ಅವರು ಅಸ್ಸಾಂ ಇತಿಹಾಸದಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಮಹಿಳೆಯಾದರು.

ವೈಯಕ್ತಿಕ ವಿವರಗಳು

ಹುಟ್ಟಿದ ದಿನಾಂಕ : 2 ನೇ ಅಕ್ಟೋಬರ್ 1997

ಮನೆ ಇರುವ ಸ್ಥಳ: ಗೋಲಘಾಟ್, ಅಸ್ಸಾಂ

ತರಬೇತಿ ಶಿಬಿರ : ಅಸ್ಸಿಸಿ, ಇಟಲಿ

ವೈಯಕ್ತಿಕ ತರಬೇತುದಾರರು: ಸಂಧ್ಯಾ ಗುರುಂಗ್

ರಾಷ್ಟ್ರೀಯ ತರಬೇತುದಾರರು : ಮೊಹಮ್ಮದ್  ಅಲಿ ಕಮರ್

ಸಾಧನೆಗಳು:-

- ಕಂಚಿನ ಪದಕ  2018 & 2019 ವಿಶ್ವ ಚಾಂಪಿಯನ್ ಶಿಪ್ ಗಳು

- ಕಂಚಿನ ಪದಕ  2017 & 2021 ಏಷ್ಯನ್ ಚಾಂಪಿಯನ್ ಶಿಪ್ ಗಳು

 ಸರ್ಕಾರಿ ಸಹಾಯಗಳು:-

-           ಕೋವಿಡ್ 19 ರಿಂದ ಚೇತರಿಸಿಕೊಂಡ ನಂತರ ಗುವಾಹಟಿಯಲ್ಲಿ 1 ತಿಂಗಳ ವೈಯಕ್ತಿಕ ತರಬೇತಿ ಶಿಬಿರ

-           ಕ್ರೀಡಾ ಉಪಕರಣಗಳ  ಖರೀದಿ 

-           ಕೋವಿಡ್ 19 ಸೋಂಕು ದೃಢಪಟ್ಟಾಗ ವೈದ್ಯಕೀಯ ವೆಚ್ಚಗಳು ಮತ್ತು ವೈದ್ಯರ ಸಮಾಲೋಚನೆ 

-           ಟೋಕಿಯೊ ಒಲಿಂಪಿಕ್ಸ್ 2020 ಆರಂಭಕ್ಕೂ ಮೊದಲು ಇಟಲಿಯ ಅಸ್ಸಿಸಿಯಲ್ಲಿ 1 ತಿಂಗಳ ತರಬೇತಿ ಶಿಬಿರ

ಧನಸಹಾಯ:-

ಟಿ ಪಿ ಎಸ್

ಸಿ ಟಿ ಸಿ

ಒಟ್ಟು

ರೂ.11,30,300

ರೂ. 7,00,215

ರೂ.18,30,515

ತರಬೇತುದಾರರ ವಿವರಗಳು:

- ತಳಮಟ್ಟಪಡುಮ್ ಚಂದ್ರ ಬೋರೋ ಮತ್ತು ಶಿವ ಸಿಂಗ್

- ಅಭಿವೃದ್ಧಿ/ ಎಲೈಟ್: ಮೊಹಮ್ಮದ್  ಅಲಿ ಕಮರ್ ಮತ್ತು  ಸಂಧ್ಯಾ ಗುರುಂಗ್

***(Release ID: 1742547) Visitor Counter : 67