ಸಂಪುಟ
ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಎಸ್‌ಟಿ) ಮತ್ತು ನೆದರ್‌ಲ್ಯಾಂಡ್‌ನ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಟಿಯು ಡೆಲ್ಫ್ಟ್) ನಡುವೆ ಸಂಶೋಧನಾ ಸಹಯೋಗದ ತಿಳುವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
Posted On:
04 AUG 2021 3:58PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಂಶೋಧನೆಗಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಎಸ್‌ಟಿ) ಮತ್ತು ನೆದರ್‌ಲ್ಯಾಂಡ್‌ನ ದಿ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಟಿಯು ಡೆಲ್ಫ್ಟ್) ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಈ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಒಳಗೊಂಡ ಚಟುವಟಿಕೆಗಳನ್ನು ನಡೆಸಲು ಏಪ್ರಿಲ್ 09, 2021 ಮತ್ತು ಮೇ 17, 2021 ರಂದು ಕ್ರಮವಾಗಿ ಆಯಾ ಸಂಸ್ಥೆಗಳಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು ಮತ್ತು ಇಮೇಲ್ ಮೂಲಕ ವಿನಿಮಯ ಮಾಡಿಕೊಳ್ಳಲಾಗಿತ್ತು.
ತಿಳುವಳಿಕೆ ಒಪ್ಪಂದದ ವಿವರಗಳು:
i. ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮ: ಸಂಸ್ಥೆಗಳು ವಿದ್ಯಾರ್ಥಿಗಳನ್ನು ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಮಟ್ಟದಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಯೋಜನೆಯ ಅಡಿಯಲ್ಲಿ ಅನುಸರಿಸಬೇಕಾದ ಅಧ್ಯಯನದ ಕ್ಷೇತ್ರಗಳು ಮತ್ತು ಮನ್ನಣೆಗಳ ಬಗ್ಗೆ ಸಂಸ್ಥೆಗಳು ಪರಸ್ಪರ ಚರ್ಚಿಸಿ ನಿರ್ಧರಿಸುತ್ತವೆ. ಪದವಿ ತರಬೇತಿಗಾಗಿ ಪ್ರಾಕ್ಟಿಕಂ (ಅಧ್ಯಯನದ ಕೋರ್ಸ್‌ನ ಪ್ರಾಯೋಗಿಕ ವಿಭಾಗ) ವಿನಿಮಯ ಕಾರ್ಯಕ್ರಮವು ಆತಿಥ್ಯ ಪಾಲುದಾರರ ಶೈಕ್ಷಣಿಕ ವ್ಯವಸ್ಥೆ ಮತ್ತು ನಿಯಮಾವಳಿಗಳನ್ನು ಅನುಸರಿಸಬೇಕೆಂದು ಎರಡೂ ಸಂಸ್ಥೆಗಳು ಒಪ್ಪಿಕೊಳ್ಳುತ್ತವೆ.
ii. ಉಭಯ ಪದವಿ/ದ್ವಿ ಪದವಿ ಕಾರ್ಯಕ್ರಮ: ಸಂಸ್ಥೆಗಳು ಪದವಿ ಅಥವಾ ಸ್ನಾತಕೋತ್ತರ ಪದವಿಗಾಗಿ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಬಹುದು, ಇದು ತವರು ರಾಷ್ಟ್ರದ ಸಂಸ್ಥೆಯು ನೀಡುವ ಆರಂಭಿಕ ಪದವಿಯ ಜೊತೆಗೆ ಇರುತ್ತದೆ.
iii. ಇಂಟರ್ನ್‌ಶಿಪ್ ಮತ್ತು ಪ್ರಾಜೆಕ್ಟ್ ಕೆಲಸ: ಸಹಯೋಗಿ ಸಂಸ್ಥೆಯಲ್ಲಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಅನುಸರಿಸುವ ಇಂಜಿನಿಯರಿಂಗ್ ಪ್ರಾಜೆಕ್ಟ್ ಅಸೈನ್‌ಮೆಂಟ್‌ಗಳ ಸಂಶೋಧನೆಯನ್ನು ಸಂಸ್ಥೆಗಳು ವಿನ್ಯಾಸಗೊಳಿಸಬಹುದು ಮತ್ತು ಅಭಿವೃದ್ಧಿಪಡಿಸಬಹುದು.
iv. ಅಧ್ಯಾಪಕರ ವಿನಿಮಯ: ಪಾಲುದಾರರು ಬೋಧಕವರ್ಗದ ವಿನಿಮಯ ಕಾರ್ಯಕ್ರಮವನ್ನು ಪರಿಗಣಿಸಬಹುದು, ಈ ಸಮಯದಲ್ಲಿ ಅಧ್ಯಾಪಕರಿಗೆ ಪಾಲುದಾರ ಸಂಸ್ಥೆಯಲ್ಲಿ ಕೋರ್ಸ್‌ಗಳನ್ನು ನೀಡಲಾಗುತ್ತದೆ, ಇದಕ್ಕಾಗಿ ಕೋರ್ಸ್ ವಿಷಯಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ.
v. ಜಂಟಿ ಸಂಶೋಧನೆ: ಎರಡೂ ಸಂಸ್ಥೆಗಳ ಅಧ್ಯಾಪಕರು ಜಂಟಿ ಸಂಶೋಧನಾ ಕಾರ್ಯಕ್ರಮವನ್ನು ಸಾಮಾನ್ಯ ಆಸಕ್ತಿಯ ಕ್ಷೇತ್ರಗಳಲ್ಲಿ ನಿರ್ದಿಷ್ಟ ಅವಧಿಯೊಂದಿಗೆ ನಡೆಸಬಹುದು.
ಪ್ರಯೋಜನಗಳು:
ಈ ಒಪ್ಪಂದವು ಸಂಭಾವ್ಯ ಆಸಕ್ತಿಯ ಕ್ಷೇತ್ರಗಳಾದ ಬೋಧಕ ವರ್ಗ, ವಿದ್ಯಾರ್ಥಿಗಳು ಮತ್ತು ಸಂಶೋಧಕರು, ವೈಜ್ಞಾನಿಕ ಸಾಮಗ್ರಿಗಳು, ಪ್ರಕಟಣೆಗಳು ಮತ್ತು ಮಾಹಿತಿಗಳ ವಿನಿಮಯ, ಜಂಟಿ ಸಂಶೋಧನಾ ಸಭೆ, ಪಿಎಚ್‌ಡಿ ಕಾರ್ಯಕ್ರಮ, ಉಭಯ ಪದವಿ/ದ್ವಿ ಪದವಿ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡುತ್ತದೆ.
ಈ ಒಪ್ಪಂದದ ಮೂಲಕ ನೆದರ್ಲ್ಯಾಂಡ್ಸ್ ನ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಡಚ್ ಸಾರ್ವಜನಿಕ ತಾಂತ್ರಿಕ ವಿಶ್ವವಿದ್ಯಾಲಯವಾದ ಇ ಡ್ಬ್ಲೂಐ, ಟಿಯು ಡೆಲ್ಫ್ಟ್ ನೊಂದಿಗಿನ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ಜಂಟಿ ಚಟುವಟಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹೀಗಾಗಿ, ದೇಶದ ಎಲ್ಲಾ ವಿಭಾಗಗಳು ಮತ್ತು ಪ್ರದೇಶಗಳು ಪ್ರಯೋಜನ ಪಡೆಯುತ್ತವೆ.
ಈ ಒಪ್ಪಂದವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನಾ ಚಟುವಟಿಕೆಗಳನ್ನು ಮತ್ತು ಅಪ್ಲಿಕೇಶನ್ ಸಾಧ್ಯತೆಗಳನ್ನು ಅನ್ವೇಷಿಸಲು ಉತ್ತೇಜನ ನೀಡುತ್ತದೆ.
***
(Release ID: 1742325)
Visitor Counter : 257
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam