ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  
                
                
                
                
                
                
                    
                    
                        ಕೋವಿಡ್-19 ಲಸಿಕೆ ನೀಡಿಕೆಯ ಪರಿಷ್ಕೃತ ವರದಿ
                    
                    
                        
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 49.85 ಕೋಟಿ ಡೋಸ್ ಗಿಂತ ಹೆಚ್ಚಿನ ಕೋವಿಡ್-19 ಲಸಿಕೆ ಪೂರೈಕೆ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.75 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಲಭ್ಯ
                    
                
                
                    Posted On:
                03 AUG 2021 9:37AM by PIB Bengaluru
                
                
                
                
                
                
                ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ದೇಶಾದ್ಯಂತ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಖಾತ್ರಿಪಡಿಸುವ ಮೂಲಕ, ಅವುಗಳು ಆಂದೋಲನವನ್ನು ಸಮರ್ಪಕವಾಗಿ ಆಯೋಜಿಸಲು ಪೂರಕವಾಗಿ ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಖಚಿತಪಡಿಸುವ ಮೂಲಕ ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಅಭಿಯಾನಕ್ಕೆ ವೇಗ ನೀಡಿದೆ.
ದೇಶವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆಯನ್ನು ಪೂರೈಸುತ್ತಿದೆ. ಅಭಿಯಾನ ಸಾರ್ವತ್ರೀಕರಣದ ಹೊಸ ಹಂತದ ಭಾಗವಾಗಿ, ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75% ಲಸಿಕೆಯನ್ನು ಖರೀದಿಸಿ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸುತ್ತಿದೆ.  
	
		
			|   ಲಸಿಕೆ ಡೋಸ್ ಗಳಲ್ಲಿ  |   03 ಆಗಸ್ಟ್ 2021 | 
		
			|   ಪೂರೈಕೆಯಾದ ಲಸಿಕೆ ಪ್ರಮಾಣ |   49,85,51,660 | 
		
			|   ಸದ್ಯದಲ್ಲೇ ಲಭ್ಯವಾಗಲಿರುವ ಲಸಿಕೆ ಪ್ರಮಾಣ |   20,94,890 | 
		
			|   ಬಳಕೆಯಾದ ಲಸಿಕೆ ಪ್ರಮಾಣ |   47,52,49,554 | 
		
			|   ಬಳಕೆಯಾಗದ ಉಳಿದಿರುವ ಲಸಿಕೆ ಪ್ರಮಾಣ   |   2,75,88,573 | 
	
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಕೇಂದ್ರ ಸರ್ಕಾರವು ಎಲ್ಲಾ ಮೂಲಗಳಿಂದ 49.85 ಕೋಟಿಗಿಂತ ಹೆಚ್ಚಿನ ಅಂದರೆ 49,85,51,660 ಡೋಸ್ ಲಸಿಕೆಯನ್ನು ಖರೀದಿಸಿ, ವಿತರಿಸಿದೆ. ಜತೆಗೆ, 20,94,890 ಡೋಸ್ ಲಸಿಕೆ ಅತಿ ಶೀಘ್ರವೇ ಲಭ್ಯವಾಗಲಿದೆ.
ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ದತ್ತಾಂಶದ ಪ್ರಕಾರ, 49.85 ಕೋಟಿ ಡೋಸ್ ಲಸಿಕೆಯ ಪೈಕಿ ಸವಕಳಿ ಸೇರಿದಂತೆ 47,52,49,554 ಡೋಸ್ ಲಸಿಕೆ ಬಳಕೆಯಾಗಿದೆ. 
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಬಳಕೆಯಾಗದ 2.75 ಕೋಟಿಗಿಂತ ಹೆಚ್ಚಿನ ಅಂದರೆ 2,75,88,573 ಡೋಸ್ ಲಸಿಕೆ ಬಳಕೆಗೆ ಲಭ್ಯವಿದೆ. 
***
                
                
                
                
                
                (Release ID: 1741791)
                Visitor Counter : 281