ಉಕ್ಕು ಸಚಿವಾಲಯ

ಉಕ್ಕು ವಲಯದಿಂದ ದ್ರವರೂಪದ ವೈದ್ಯಕೀಯ ಆಮ್ಲಜನಕ ಪೂರೈಕೆ

Posted On: 02 AUG 2021 3:05PM by PIB Bengaluru

ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಉಕ್ಕು ಕಂಪನಿಗಳ ದ್ರವರೂಪದ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಉತ್ಪಾದನೆಯ ಒಟ್ಟು ಸಾಮರ್ಥ್ಯದ ವಿವರಗಳು ಈ ಕೆಳಗಿನಂತಿವೆ:-

(ದಿನಕ್ಕೆ ಟನ್‌ಗಳಲ್ಲಿ)

ರ್ಷ

2018-19

2019-20

2020-21

2021-22

ಒಟ್ಟು ಸಾಮರ್ಥ್ಯ

2492

2494

2748

4102

ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ, ಸಾರ್ವಜನಿಕ ಮತ್ತು ಖಾಸಗಿ ವಲಯದ ಉಕ್ಕು ಸ್ಥಾವರಗಳು 2021ರ ಏಪ್ರಿಲ್ 1ರಿಂದ ಜುಲೈ 25ರ ನಡುವೆ ಒಟ್ಟಾರೆಯಾಗಿ 230262 ಟನ್ ʻಎಲ್‌ಎಂಒʼ ಪೂರೈಸಿವೆ. ಈ ಸಂಬಂಧ ಸ್ಥಾವರವಾರು ವಿವರಗಳನ್ನು  ಅನುಬಂಧ-1ರಲ್ಲಿನೀಡಲಾಗಿದೆ.

ಎರಡನೇ ಅಲೆಯ ಉತ್ತುಂಗದ ಸಮಯದಲ್ಲಿ, ಉಕ್ಕು ವಲಯವು ʻಎಲ್‌ಎಂಒʼ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿತು. 2021ರ ಏಪ್ರಿಲ್ 01ರಂದು 538 ಮೆಟ್ರಿಕ್ ಟನ್‌ ʻಎಲ್‌ಎಂಒʼ ಸರಬರಾಜು ಮಾಡಲಾಗಿತ್ತು. 2021ರ ಮೇ 13ರ ವೇಳೇಗೆ ಈ ಪ್ರಮಾಣವು 4749 ಮೆಟ್ರಿಕ್ ಟನ್‌ಗೆ ಏರಿತು. 2021ರ ಏಪ್ರಿಲ್-ಜುಲೈ ಅವಧಿಯಲ್ಲಿ ಒದಗಿಸಲಾದ ʻಎಲ್‌ಎಂಒʼನ ರಾಜ್ಯವಾರು ವಿವರಗಳನ್ನು ಅನುಬಂಧ-2ರಲ್ಲಿನೀಡಲಾಗಿದೆ. ದೇಶದಲ್ಲಿ ʻಎಲ್‌ಎಂಒʼ ಉತ್ಪಾದನೆಯನ್ನು ಹೆಚ್ಚಿಸಲು ಉಕ್ಕು ಸ್ಥಾವರಗಳು ತೆಗೆದುಕೊಂಡ ಕ್ರಮಗಳು ಈ ಕೆಳಕಂಡಂತಿವೆ:

(1) ದ್ರವ ಸಾರಜನಕ ಮತ್ತು ದ್ರವ ಆರ್ಗಾನ್ ಉತ್ಪಾದನೆಯನ್ನು ಕಡಿಮೆ ಮಾಡುವುದು.

(2) ಅನಿಲ ರೂಪದ ಆಮ್ಲಜನಕದ ಬಳಕೆ ಕಡಿಮೆಮಾಡುವುದು ಮತ್ತು ಆ ಮೂಲಕ ಉಕ್ಕು ಉತ್ಪಾದನೆ ಕಡಿಮೆ ಮಾಡುವುದು.

ದ್ರವರೂಪದ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹೆಚ್ಚಳಕ್ಕಾಗಿ ಅನಿಲ ರೂಪದ ಆಮ್ಲಜನಕ ಬಳಕೆ ಕಡಿಮೆ ಮಾಡಿದ್ದರಿಂದ 2021ರ ಏಪ್ರಿಲ್-ಜೂನ್ ಅವಧಿಯಲ್ಲಿ ಉಕ್ಕಿನ ಉತ್ಪಾದನೆ ಸುಮಾರು 500,000 ಟನ್‌ಗಳಷ್ಟು ಕುಸಿತಗೊಳ್ಳಲು ಕಾರಣವಾಯಿತು.

ಉಕ್ಕು ಸ್ಥಾವರಗಳಲ್ಲಿ ಉತ್ಪಾದಿಸಲಾದ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ರಸ್ತೆ, ಆಕ್ಸಿಜನ್ ಎಕ್ಸ್‌ಪ್ರೆಸ್ (ರೈಲ್ವೆ) ಮತ್ತು ವಾಯುಪಡೆಯ ಸಾರಿಗೆ ವಿಮಾನಗಳನ್ನು ಬಳಸಿಕೊಂಡು ಅನುಬಂಧ-2 ರಲ್ಲಿ ಸೂಚಿಸಿದಂತೆ ಪೂರೈಸಲಾಯಿತು.

ಅನುಬಂಧ - I

(ಟನ್‌ಗಳಲ್ಲಿ)  

ಸ್ಥಾವರದ ಹೆಸರು

ʻಎಲ್‌ಎಂಒʼ ಉತ್ಪಾದನೆ ಸಾಮರ್ಥ್ಯ

ಪೂರೈಕೆ ಮಾಡಲಾದ ʻಎಲ್‌ಎಂಒʼ (01.04.2021ರಿಂದ 25.07.21)

ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್‌) ಭಿಲಾಯ್‌

40

1661.41

ಸೈಲ್ ಭಿಲೈ  (ಬಿಒಒ ಘಟಕ ಲಿಂಡ್)

350

21255.04

ಸೈಲ್ ಬೊಕಾರೊ

20

1399.23

ಸೈಲ್ ಬೊಕಾರೊ (ಬಿಒಒ ಘಟಕ ಐನಾಕ್ಸ್)

170

10827.94

ಸೈಲ್ ದುರ್ಗಾಪುರ

43

2449.41

ಸೈಲ್ ದುರ್ಗಾಪುರ (ಬಿಒಒ ಘಟಕ ಲಿಂಡ್)

85

6350.9

ಸೈಲ್ ರೂರ್‌ಕೆಲಾ

48

3424.42

ಸೈಲ್ ರೂರ್‌ಕೆಲಾ (ಬಿಒಒ ಘಟಕ ಲಿಂಡ್)

310

18817.36

ಸೈಲ್ ಬರ್ನರ್‌ಪುರ್

70

2334.24

ಆರ್‌ಐಎನ್‌ಎಲ್‌ ವಿಶಾಖಪಟ್ಟಣಂ

130

9947.47

ಟಾಟಾ ಸ್ಟೀಲ್ ಜಮ್‌ಶೆಡ್‌ಪುರ್ (ಲಿಂಡ್‌)

453

21285.961

ಟಾಟಾ ಸ್ಟೀಲ್ ಜೆಮ್‌ಶೆಡ್‌ಪುರ್‌ (AWIPL)

150

11258.26

ಟಾಟಾ ಸ್ಟೀಲ್ ಕಾಳಿಂಗನಗರ

219

10641.03

ಟಾಟಾ ಸ್ಟೀಲ್ ಬಿ.ಎಸ್.ಎಲ್.

244

8126.35

ಜಿಂದಾಲ್ ಸ್ಟೇನ್‌ಲೆಸ್ (ಹಿಸಾರ್) ಲಿ.

9.5

778.337

ಜಿಂದಾಲ್ ಸ್ಟೇನ್‌ಲೆಸ್ ಲಿಮಿಟೆಡ್(ಜೈಪುರ)

52

3105.88

ಎ.ಎಂ.ಎನ್.ಎಸ್ ಹಜೀರಾ (ಐನಾಕ್ಸ್‌)

240

11865.09

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ವಿಜಯನಗರ -(ಬೆಲೋಕ್ಸಿ)

106

8253.03

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ವಿಜಯನಗರ, (ಲಿಂಡ್ ಪಿಎಲ್‌ಸಿ)

537

28023.6

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ವಿಜಯನಗರ ವರ್ಕ್ಸ್‌(ಏರ್ ವಾಟರ್)

100

5891.945

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ವಿಜಯನಗರ ವರ್ಕ್ಸ್ (ಐಜಿಪಿಎಲ್)

130

7184.74

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ದೊಲ್ವಿ (ಸ್ವಂತ)

180

13512.3

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ದೊಲ್ವಿ(ಸ್ವಂತ 2)

124

9414.23

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಸೇಲಂ

17

1696.57

ಜಿಂದಾಲ್ ಸ್ಟೀಲ್ & ಪವರ್, ಅಂಗುಲ್

100

2963.37

ವೇದಾಂತ ಇಎಸ್ಎಲ್, ಬೊಕಾರೊ

20

474.44

ಜೆಎಸ್‌ಡಬ್ಲ್ಯೂ - ಬಿಪಿಎಸ್ಎಲ್, ಝರ್ಸುಗುಡ

25

718.9

ಕಲ್ಯಾಣಿ ಸ್ಟೀಲ್, ಹೊಸಪೇಟೆ

130

6600.3

ಒಟ್ಟು

4102

230262

ಅನುಬಂಧ - II

(ಟನ್‌ಗಳಲ್ಲಿ)

್ರಮ ಸಂಖ್ಯೆ

ರಾಜ್ಯ

ಎಲ್‌ಎಂಒ ಸರಬರಾಜು
(01.04.2021 ರಿಂದ 25.07.2021)

1

ಮಹಾರಾಷ್ಟ್ರ

30310.85

2

ಮಧ್ಯ ಪ್ರದೇಶ

11477.19

3

ಛತ್ತೀಸ್‌ಗಢ

7404.96

4

ಆಂಧ್ರ ಪ್ರದೇಶ

30016.79

5

ಜಾರ್ಖಂಡ್

6137.571

6

ಪಶ್ಚಿಮ ಬಂಗಾಳ

15224.03

7

ಬಿಹಾರ

4622.83

8

ಒಡಿಶಾ

12750.9

9

ಉತ್ತರ ಪ್ರದೇಶ

15080.2

10

ಗುಜರಾತ್

7563.24

11

ಕರ್ನಾಟಕ

44107.79

12

ತೆಲಂಗಾಣ

17178.21

13

ತಮಿಳುನಾಡು

10725.33

14

ಹರಿಯಾಣ

8419.707

15

ದೆಹಲಿ

2136.75

16

ಅಸ್ಸಾಂ

1921.95

17

ಕೇರಳ

1436.58

18

ಗೋವಾ

715.75

19

ಪಂಜಾಬ್

1842.72

20

ರಾಜಸ್ಥಾನ

700.45

21

ಜಮ್ಮು ಮತ್ತು ಕಾಶ್ಮೀರ

18.16

22

ಉತ್ತರಾಖಂಡ

470.28

ಒಟ್ಟು

230262

ಕೇಂದ್ರ ಉಕ್ಕು ಸಚಿವ  ಶ್ರೀ ರಾಮ್‌ ಚಂದ್ರ ಪ್ರಸಾದ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

***



(Release ID: 1741555) Visitor Counter : 190