ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ 47.22 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ
ಚೇತರಿಕೆ ದರ 97.35%ಗೆ ಸುಧಾರಣೆ
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ಪತ್ತೆ
ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 4,13,718ಕ್ಕೆ ಇಳಿಕೆ; ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.31%ಗೆ ಇಳಿಕೆ
ದೈನಂದಿನ ಪಾಸಿಟಿವಿಟಿ ದರ 2.81%ಗೆ ಇಳಿಕೆ; ಸತತ 56 ದಿನಗಳಿಂದ 5% ಮಟ್ಟದಿಂದ ಕೆಳಗೆ
Posted On:
02 AUG 2021 9:39AM by PIB Bengaluru
ಭಾರತದಲ್ಲಿ ಭರದಿಂದ ಸಾಗಿರುವ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 47.2 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ ಒಟ್ಟು 47,22,23,639 ಡೋಸ್ ಲಸಿಕೆ ನೀಡಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿ ಪ್ರಕಾರ, 55,99,690 ಆಂದೋಲನಗಳಲ್ಲಿ ಈ ಸಾಧನೆ ಮಾಡಲಾಗಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 17,06,598 ಡೋಸ್ ಲಸಿಕೆ ಹಾಕಲಾಗಿದೆ.
ಈ ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ:
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
1st Dose
|
1,03,11,380
|
2nd Dose
|
78,56,466
|
ಮುಂಚೂಣಿ ಕಾರ್ಯಕರ್ತರು
|
1st Dose
|
1,79,78,353
|
2nd Dose
|
1,13,65,816
|
18-44 ವಯೋಮಾನದವರು
|
1st Dose
|
15,70,22,578
|
2nd Dose
|
88,94,835
|
45-59 ವಯೋಮಾನದವರು
|
1st Dose
|
10,65,50,619
|
2nd Dose
|
3,94,29,559
|
60 ವರ್ಷ ದಾಟಿದವರು
|
1st Dose
|
7,61,31,656
|
2nd Dose
|
3,66,82,377
|
ಒಟ್ಟು
|
47,22,23,639
|
ಕೋವಿಡ್-19 ಬೃಹತ್ ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ.
ದೇಶದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,08,57,467 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 36,946 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಕೆ ದರ ಪ್ರಸ್ತುತ 97.35%ಗೆ ಸುಧಾರಣೆ ಕಂಡಿದೆ.
ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಸತತ 36 ದಿನಗಳಿಂದ ದೈನಂದಿನ ಹೊಸ ಕೊರೊನಾ ಪ್ರಕರಣಗಳ ಪ್ರಮಾಣ 50,000 ಮಟ್ಟದಿಂದ ಕೆಳಗೆ ಮುಂದುವರಿಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ, ದೈನಂದಿನ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ.
ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ ಪ್ರಸ್ತುತ 4,13,718ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.31% ಇದೆ.
ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವ ಪರಿಣಾಮ, ಕಳೆದ 24 ತಾಸುಗಳಲ್ಲೇ 14,28,984 ಪರೀಕ್ಷೆಗಳನ್ನು ನಡೆಸಲಾಗಿದೆ. ಇದರೊಂದಿಗೆ ದೇಶಾದ್ಯಂತ ಒಟ್ಟು 46.96 ಕೋಟಿಗಿಂತ ಹೆಚ್ಚಿನ ಅಂದರೆ 46,96,45,494 ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದೆಡೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ ಪ್ರಸ್ತುತ 2.37%ಗೆ ಮತ್ತು ದೈನಂದಿನ ಪಾಸಿಟಿವಿಟಿ ದರ ಇದೀಗ 2.81%ಗೆ ಇಳಿಕೆ ಕಂಡಿದೆ. ದೈನಂದಿನ ಪಾಸಿಟಿವಿಟಿ ದರ ಸತತ 56 ದಿನಗಳಿಂದ 5% ಮಟ್ಟದಿಂದ ಕೆಳಗೆ ಮುಂದುವರಿದಿದೆ.
***
(Release ID: 1741428)
Visitor Counter : 304