ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ಕುರಿತ ಮಿಥ್ಯೆಗಳು ಮತ್ತು ವಾಸ್ತವಾಂಶಗಳು


ಕೋವಿಡ್-19 ಲಸಿಕೆ ವ್ಯಾಪ್ತಿ ಮತ್ತು ಲಸಿಕೆ ಕಾರ್ಯಕ್ರಮದ ವೇಗವನ್ನುಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ

ಉತ್ತರ ಪ್ರದೇಶದಲ್ಲಿ ಲಸಿಕೆಗಾಗಿ ಅನುಸರಿಸಲಾದ 'ಕ್ಲಸ್ಟರ್ ವಿಧಾನ' ಮತ್ತು ಮಹಿಳೆಯರಿಗಾಗಿ ವಿಶೇಷ ʻಪಿಂಕ್‌ ಬೂತ್‌ʼಗಳ ಸ್ಥಾಪನೆಯು ರಾಜ್ಯದ ಲಸಿಕೆ ವ್ಯಾಪ್ತಿ ಹೆಚ್ಚಳಕ್ಕೆ ನೆರವಾಗಿದೆ

ಬಿಹಾರದಲ್ಲಿ ಲಸಿಕೆ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿದೆ

Posted On: 30 JUL 2021 4:20PM by PIB Bengaluru

ಭಾರತದ ರಾಷ್ಟ್ರೀಯ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ವೈಜ್ಞಾನಿಕ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಪುರಾವೆಗಳು, ವಿಶ್ವಆರೋಗ್ಯಸಂಸ್ಥೆಯ ಮಾರ್ಗಸೂಚಿಗಳು ಹಾಗೂ ಜಾಗತಿಕವಾಗಿ ಅನುಸರಿಸಲಾಗುತ್ತಿರುವ ಅತ್ಯುತ್ತಮ ಕಾರ್ಯ ವಿಧಾನಗಳ ಆಧಾರದ ಮೇಲೆ ರೂಪಿಸಲಾಗಿದೆ. ಅಲ್ಲದೆ, ಇದನ್ನು ವ್ಯವಸ್ಥಿತ ಹಾಗೂ ಸಮಗ್ರ ಯೋಜನೆಯೊಂದಿಗೆ ಬೆಸೆಯಲಾಗಿದ್ದು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು  ಹಾಗೂ ಒಟ್ಟಾರೆಯಾಗಿ ಜನರ ಪರಿಣಾಮಕಾರಿ ಹಾಗೂ ದಕ್ಷ ಪಾಲ್ಗೊಳ್ಳುವಿಕೆಯ ಮೂಲಕ ಜಾರಿಗೆ ತರಲಾಗುತ್ತದೆ. ಲಸಿಕೆ ಕಾರ್ಯಕ್ರಮ ಕುರಿತಾಗಿ ಭಾರತ ಸರಕಾರದ ಬದ್ಧತೆ ಮೊದಲಿನಿಂದಲೂ ಅಚಲ ಮತ್ತು ಸಕ್ರಿಯವಾಗಿದೆ. ಲಸಿಕೆಯ ವೇಗವಷ್ಟೇ ಅಲ್ಲದೆ, ಲಸಿಕೆ ವ್ಯಾಪ್ತಿಯನ್ನು ಸಹ ಹೆಚ್ಚಿಸಲು ಹಾಗೂ ವಿಸ್ತರಿಸಲು ಕೇಂದ್ರ ಸರಕಾರ ನಿರಂತರವಾಗಿ ರಾಜ್ಯಗಳಿಗೆ ಬೆಂಬಲ ನೀಡುತ್ತಿದೆ. ದೇಶಾದ್ಯಂತ ಕೋವಿಡ್‌-19 ಲಸಿಕೆ ಅಭಿಯಾನದ ನೂತನ ಹಂತದ ಭಾಗವಾಗಿ, ಕೇಂದ್ರ ಸರಕಾರವು ಎಲ್ಲಾ ವಯಸ್ಕ ಜನರಿಗೆ ಲಸಿಕೆ ನೀಡುವ ಸಲುವಾಗಿ ರಾಜ್ಯಗಳಿಗೆ 75% ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುತ್ತಿದೆ.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೋವಿಡ್-19 ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಎರಡೂ ರಾಜ್ಯಗಳು ತಮ್ಮ ಎಲ್ಲಾ ಜನತೆಗೆ ಸಂಪೂರ್ಣವಾಗಿ ಲಸಿಕೆ ಹಾಕಲು ಮೂರು ವರ್ಷಗಳೇ ಬೇಕಾಗಬಹುದು ಎಂದು ಆರೋಪಿಸಿ ಕೆಲವು ಮಾಧ್ಯಮ ವರದಿಗಳು ಬಂದಿವೆ.

ಆದರೆ, ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸುವುದು ಅಗತ್ಯವಾಗಿದೆ. ಮಾಧ್ಯಮ ವರದಿಯು ದಾರಿ ತಪ್ಪಿಸುವಂಥದ್ದಾಗಿದ್ದು, ಕೋವಿಡ್ಲಸಿಕೆ ವೇಗವನ್ನು ಕಡಿಮೆ ಎಂದು ತೋರಿಸುವ ಪ್ರಯತ್ನ ಇಲ್ಲಿ ನಡೆದಿದೆ. ಇದಕ್ಕಾಗಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಸಮಯದಲ್ಲಿ ಆರಂಭಿಕವಾಗಿ ಇದ್ದ ಲಸಿಕೆ ಕಾರ್ಯಕ್ರಮದ ಸರಾಸರಿ ದರವನ್ನು ಇದರಲ್ಲಿ ಪರಿಗಣಿಸಲಾಗಿದೆ. ಅಲ್ಲದೆ, ಇದೇ ಅಂಕಿ-ಅಂಶಗಳನ್ನು ಬಳಸಿ, ರಾಜ್ಯಗಳು ತಮ್ಮೆಲ್ಲಾ ಜನತೆಗೆ ಲಸಿಕೆ ನೀಡಲು ಹಲವು  ವರ್ಷಗಳು ಹಿಡಿಯಲಿದೆ ಎಂದು ವರದಿ ಮಾಡಲಾಗಿದೆ.

ಅಷ್ಟೇ ಅಲ್ಲದೆ, ವಿಶ್ವದಾದ್ಯಂತ (ಭಾರತವೂ ಸೇರಿದಂತೆ) ಲಸಿಕೆಗಳ ಲಭ್ಯತೆಯು ಅತ್ಯಂತ ಕಡಿಮೆ ಇದ್ದಾಗಿನ ಸಮಯದ ಸರಾಸರಿಯನ್ನು ಬಳಸಿ, ಲಸಿಕೆ ಪೂರೈಕೆಯು ಸಾಕಷ್ಟು ಹೆಚ್ಚಿರಬಹುದೆಂದು ನಿರೀಕ್ಷಿಸಿಲಾದ ಪ್ರಸ್ತುತ ದತ್ತಾಂಶದೊಂದಿಗೆ ಅದನ್ನು ಹೋಲಿಸುವುದರಿಂದ (ಬಹಿರ್ಗಣನೆ) ಜಾಗತಿಕ ಸಮಸ್ಯೆಯಾದ ʻಲಸಿಕೆ ಹಿಂಜರಿಕೆʼಗೂ ಅದು ಕಾರಣವಾಗಬಹುದು.

ವಾಸ್ತವದಲ್ಲಿ, ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಲಸಿಕೆ ಲಭ್ಯತೆ ಮತ್ತು ಲಸಿಕೆಯ ಪ್ರಮಾಣವು ದೇಶಾದ್ಯಂತ ನಿರಂತರವಾಗಿ ಸುಧಾರಿಸುತ್ತಿದೆ. ಜನಸಂಖ್ಯೆಯ  ದೃಷ್ಟಿಯಿಂದ ಉತ್ತರ ಪ್ರದೇಶ ಭಾರತದ ಅತಿದೊಡ್ಡ ರಾಜ್ಯ ವಾಗಿದೆ ಎಂಬುದನ್ನು ಸಹ ನೆನಪಿನಲ್ಲಿಡಬೇಕು. 2011 ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ 19.95 ಕೋಟಿ. ಬ್ರೆಜಿಲ್, ರಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಅನೇಕ ದೇಶಗಳ ಒಟ್ಟಾರೆ ಜನಸಂಖ್ಯೆಗಿಂತಲೂ ಇದು ಹೆಚ್ಚು.

ಲಸಿಕೆಗಾಗಿ ಜನರ ದೊಡ್ಡ ದಂಡು ಮತ್ತು ಗಣನೀಯ ಪ್ರಮಾಣದಲ್ಲಿ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ಬೃಹತ್ಗಾತ್ರದ ಹೊರತಾಗಿಯೂ, ಉತ್ತರ ಪ್ರದೇಶವು ತನ್ನ ಎಲ್ಲಾ ಅರ್ಹ ನಾಗರಿಕರಿಗೆ ಸಾಧ್ಯವಾದಷ್ಟು ಬೇಗ ಉಚಿತ ಲಸಿಕೆಯನ್ನು ನೀಡಲು ಬದ್ಧವಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಮಾಸಿಕ ಲಸಿಕೆ ವ್ಯಾಪ್ತಿ ಇದಕ್ಕೆ ಸಾಕ್ಷಿಯಾಗಿದೆ. ನಿಟ್ಟಿನಲ್ಲಿ ರಾಜ್ಯವು ಸಕ್ರಿಯವಾಗಿ ಕೆಲಸಮಾಡಿದೆ. ಕಳೆದ ಜನವರಿಯಲ್ಲಿ ಮಾಸಿಕ ಕೇವಲ 4.63 ಲಕ್ಷದಷ್ಟಿದ್ದ ಲಸಿಕೆ ವ್ಯಾಪ್ತಿಯನ್ನು ನಿರಂತರವಾಗಿ 1.54 ಕೋಟಿಗೆ ಸತತವಾಗಿ ಹೆಚ್ಚಿಸುತ್ತಾ ಬಂದಿದೆ. ಲಸಿಕೆ ವ್ಯಾಪ್ತಿಯ ವಿಷಯದಲ್ಲಿ ಪ್ರಸ್ತುತ ಉತ್ತರ ಪ್ರದೇಶವು ಅಗ್ರಹಣ್ಯ ರಾಜ್ಯಗಳಲ್ಲಿ ಒಂದಾಗಿದೆ.

ಚಿತ್ರದಲ್ಲಿನ ಪ್ರವೃತ್ತಿಯು ರಾಜ್ಯದ ಲಸಿಕೆ ವ್ಯಾಪ್ತಿಯಲ್ಲಿ ಸುಧಾರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆಪ್ರತಿ ತಿಂಗಳೂ ಇದರ ಗತಿ ಶರವೇಗದಲ್ಲಿ ಹೆಚ್ಚುತ್ತಿದೆ. ಇದಲ್ಲದೆ, ಉತ್ತರ ಪ್ರದೇಶ ಸರಕಾರವು ಗರಿಷ್ಠ ಸಂಖ್ಯೆಯ ಜನರನ್ನು ತಲುಪುವ ಮೂಲಕ ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನದಲ್ಲಿ ಭಾಗವಾಗುವ ಸಲುವಾಗಿ ಅನೇಕ ನವೀನ ಕ್ರಮಗಳನ್ನು ಕೈಗೊಂಡಿದೆ.

ಲಸಿಕೆ ನೀಡುವಿಕೆಗೆ ʻಕ್ಲಸ್ಟರ್ವಿಧಾನʼ ಅನುಸರಣೆ ಹಾಗೂ ಲಸಿಕೆ ಪಡೆಯಲು ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ವಿಶೇಷ 'ಗುಲಾಬಿ ಬೂತ್'ಗಳ ಸ್ಥಾಪನೆಯಂತಹ ನವೀನ ಕ್ರಮಗಳು ಸಕಾರಾತ್ಮಕ ಫಲಿತಾಂಶವನ್ನು ನೀಡಿದ್ದು, ರಾಜ್ಯದ ಒಟ್ಟಾರೆ ಲಸಿಕೆ ವ್ಯಾಪ್ತಿ ಹೆಚ್ಚಳಕ್ಕೆ ಕೊಡುಗೆ ನೀಡಿವೆ. ಉತ್ತರ ಪ್ರದೇಶವು ಕೆಲಸದ ಸ್ಥಳಗಳಲ್ಲಿ ವ್ಯಾಪಕವಾಗಿ ಲಸಿಕೆ ಸೆಷನ್ಗಳನ್ನು ಆಯೋಜಿಸಿದ್ದು, ಬೀದಿ ವ್ಯಾಪಾರಿಗಳು, ತರಕಾರಿ ಮಾರುವವರು, ವ್ಯಾಪಾರಿಗಳು, ಸರಕು ಸಾಗಾಣಿಕೆದಾರರು ಮತ್ತು ಮಾಧ್ಯಮ ಸಿಬ್ಬಂದಿಯಂತಹ ಸೋಂಕಿನ ಅಪಾಯ ಹೆಚ್ಚಿರುವ ಸಮುದಾಯಕ್ಕೂ ಆದ್ಯತೆ ಮೇರೆಗೆ ಲಸಿಕೆ ನೀಡಲಾಗಿದೆ. ಎಲ್ಲಾ ಕ್ರಮಗಳಿಂದಾಗಿ ಉತ್ತರ ಪ್ರದೇಶದ ಲಸಿಕೆ ವ್ಯಾಪ್ತಿ 30ನೇ ಜುಲೈ 2021ಕ್ಕೆ 4.67 ಕೋಟಿಗೆ ತಲುಪಿದೆ.

ಬಿಹಾರದಲ್ಲಿ ಲಸಿಕೆ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿದ್ದೆಬಿಹಾರದ ಮಾಸಿಕ ಲಸಿಕೆ ವ್ಯಾಪ್ತಿಯನ್ನು   ಕೆಳಗೆ ಕಾಣಬಹುದು:

ಅಲ್ಲದೆ, ಲಸಿಕೆಯು ಜೈವಿಕ ಉತ್ಪನ್ನವಾಗಿದ್ದು, ಉತ್ಪಾದನೆಯ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ ಎಂಬ ವಿಷಯವನ್ನೂ ಇಲ್ಲಿ ಪ್ರಸ್ತಾಪಿಸುವುದು ಪ್ರಸ್ತುತವೆನಿಸುತ್ತದೆ. ಒಮ್ಮೆ ಉತ್ಪಾದಿಸಿದ ನಂತರ, ಲಸಿಕೆಗಳನ್ನು ಗುಣಮಟ್ಟ ಮತ್ತು ಸುರಕ್ಷತೆಗಾಗಿ ಪರೀಕ್ಷಿಸಬೇಕಾಗಿದೆ. ಹೀಗಾಗಿ, ಲಸಿಕೆಯ ಉತ್ಪಾದನೆಯು ದೀರ್ಘ ಕಾಲಿಕ ಪ್ರಕ್ರಿಯೆಯಾಗಿದ್ದುತಕ್ಷಣವೇ ಅವುಗಳನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ.

***



(Release ID: 1741109) Visitor Counter : 199