ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಸರ್ಕಾರ ಸದೃಢ ಭಾರತ (ಫಿಟ್ ಇಂಡಿಯಾ)ವನ್ನು ಜನಾಂದೋಲನವಾಗಿ ಮಾಡಿದೆ: ಶ್ರೀ ಅನುರಾಗ್ ಠಾಕೂರ್

Posted On: 29 JUL 2021 4:28PM by PIB Bengaluru

ಪ್ರಮುಖ ಮುಖ್ಯಾಂಶಗಳು:

  • ಸಚಿವಾಲಯವು ಸದೃಢ ಭಾರತ ಚಳವಳಿಯ ಅಡಿಯಲ್ಲಿ ವಿವಿಧ ಬಾಧ್ಯಸ್ಥರ ಸಹಯೋಗದಲ್ಲಿ ಅನೇಕ ಚಟುವಟಿಕೆಗಳು ಮತ್ತು ಪ್ರಚಾರದ ಮೂಲಕ ಸದೃಢತೆಯ ಜಾಗೃತಿಯನ್ನು ಪಸರಿಸುತ್ತಿದೆ.
  • ವಿವಿಧ ವಯೋಮಾನದವರಿಗಾಗಿ ಫಿಟ್ ಇಂಡಿಯಾ ವಯಸ್ಸಿಗೆ ಸೂಕ್ತವಾದ ಸದೃಢತೆಯ ಶಿಷ್ಟಾಚಾರಗಳನ್ನೂ ಪರಿಚಯಿಸಿದೆ.

ಸಚಿವಾಲಯವು ಫಿಟ್ ಇಂಡಿಯಾ ಚಳವಳಿಯ ಅಡಿಯಲ್ಲಿ ಎಲ್ಲ ಬಾಧ್ಯಸ್ಥರ ಸಹಯೋಗದಲ್ಲಿ ವಿವಿಧ ಚಟುವಟಿಕೆಗಳು ಮತ್ತು ಪ್ರಚಾರದ ಮೂಲಕ ಸದೃಢತೆಯ ಬಗ್ಗೆ ಜಾಗೃತಿಯನ್ನು ಸಕ್ರಿಯವಾಗಿ ಪಸರಿಸುತ್ತಿದೆ. ಸಚಿವಾಲಯ ಕೈಗೊಂಡಿರುವ ಪ್ರಮುಖ ಆನ್ ಲೈನ್/ಆಫ್ ಲೈನ್ ಚಟುವಟಿಕೆಗಳಲ್ಲಿ  ಪ್ಲಾಗ್ ರನ್, ಶಾಲಾ ಪ್ರಮಾಣೀಕರಣ ವ್ಯವಸ್ಥೆ, ಯುವ ಕ್ಲಬ್ ಪ್ರಮಾಣೀಕರಣ ವ್ಯವಸ್ಥೆ, ಶಾಲಾ ಸಪ್ತಾಹ ಆಚರಣೆಗಳು, ಸೈಕ್ಲೋಥಾನ್, ಯೋಗ ದಿನಾಚರಣೆ, ಸ್ವಾತಂತ್ರ್ಯದ ಓಟ, ಲಾಕ್ ಡೌನ್ ಸಮಯದಲ್ಲಿ ಸಕ್ರಿಯ ದಿನ ಸರಣಿಗಳುಚಾಂಪಿಯನ್ ಮಾತುಕತೆ, ಸಂವಾದ ಸರಣಿ, ದೇಶೀಯ ಕ್ರೀಡೆಗಳ ಸರಣಿ, ಫಿಟ್ ಇಂಡಿಯಾ ವಿಷಯಾಧಾರಿತ ಅಭಿಯಾನಗಳು ಮತ್ತು ಪ್ರಭಾತ್ ಪೇರಿಗಳು ಸೇರಿವೆ. ಇದಲ್ಲದೆ, ವಿವಿಧ ವಯೋಮಾನದವರಿಗೆ ಫಿಟ್ ಇಂಡಿಯಾ ವಯೋಮಾನಕ್ಕೆ ಸೂಕ್ತವಾದ ಸದೃಢತೆ ಶಿಷ್ಟಾಚಾರಗಳನ್ನು ಸಹ ಪರಿಚಯಿಸಿದೆ.

ಫಿಟ್ ಇಂಡಿಯಾ ಚಳವಳಿಯ ಆರಂಭದಿಂದಲೂ, ಸಚಿವಾಲಯವು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕೆಲವು ಸರಳ ದೈಹಿಕ ಚಟುವಟಿಕೆಗಳ ಪ್ರದರ್ಶನಗಳ ಮೂಲಕ ಸಕ್ರಿಯವಾಗಿ ಸದೃಢತೆಯ ಜಾಗೃತಿಯನ್ನು ಪಸರಿಸುತ್ತಿದೆ. ಸಾಂಸ್ಥಿಕ ಸಂಸ್ಥೆಗಳನ್ನು ಫಿಟ್ ಇಂಡಿಯಾ ಚಳವಳಿಯ ಅಡಿಯಲ್ಲಿ ಆಯೋಜಿಸಲಾಗುತ್ತಿರುವ  ಎಲ್ಲ ಚಟುವಟಿಕೆಗಳು/ಕಾರ್ಯಕ್ರಮಗಳಲ್ಲಿ ಅಂದರೆ ಸದೃಢ ಭಾರತ ಸ್ವಾತಂತ್ರ್ಯದ ಓಟ, ಫಿಟ್ ಇಂಡಿಯಾ ಸೈಕ್ಲಥಾನ್ ಗಳಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗುತ್ತಿದೆ

ಫಿಟ್ ಇಂಡಿಯಾವನ್ನು ಜನಾಂದೋಲನವಾಗಿ ಮಾಡುವಲ್ಲಿ ಕೇಂದ್ರ ಸರ್ಕಾರದ ಪಾತ್ರ ನಿರ್ಣಾಯಕವಾಗಿದ್ದು, ಕಾರ್ಯಕ್ರಮಕ್ಕಾಗಿ ಯಾವುದೇ ಪ್ರತ್ಯೇಕ ನಿಧಿಯನ್ನು ಹಂಚಿಕೆ ಮಾಡಲಾಗಿರುವುದಿಲ್ಲ

ಮಾಹಿತಿಯನ್ನು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಲೋಕಸಭೆಗೆ ಇಂದು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

***



(Release ID: 1740495) Visitor Counter : 238