ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಪವನ ಶಕ್ತಿ ಉತ್ಪಾದನೆಯಲ್ಲಿ ಭಾರತದಲ್ಲಿಯೇ ತಯಾರದ ಶೇ.70ರಷ್ಟು ಉಪಕರಣ ಬಳಕೆ
ಪವನ ಶಕ್ತಿ ಯೋಜನೆಗಳಿಗೆ ಉತ್ಪಾದನೆ ಆಧರಿಸಿ ಪ್ರೋತ್ಸಾಹ(ಜಿಬಿಐ)
ಪವನಶಕ್ತಿ ಉತ್ಪಾದಿಸುವ ಬಿಡಿಭಾಗಗಳ ಮೇಲೆ ಸೀಮಾ ಸುಂಕ ವಿನಾಯ್ತಿ
Posted On:
29 JUL 2021 2:54PM by PIB Bengaluru
ಕೇಂದ್ರ ಸರ್ಕಾರ ಅನುಮೋದಿತ ಮಾದರಿಗಳು ಮತ್ತು ಉತ್ಪಾದಕರ ಪಟ್ಟಿಯನ್ನು ಸಿದ್ಧಪಡಿಸಿದೆ ಮತ್ತು ಪವನಶಕ್ತಿ ಯೋಜನೆಗಳಲ್ಲಿ ಅನುಮೋದಿತ ಪಟ್ಟಿಯಲ್ಲಿರುವ ಉತ್ಪಾದಕರು ಉತ್ಪಾದಿಸಿದ ಸಾಧನಗಳನ್ನು ಮಾತ್ರ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಶೇ.70ಕ್ಕೂ ಅಧಿಕ ಸಾಧನಗಳು ಭಾರತದಲ್ಲಿಯೇ ತಯಾರದವುಗಳು. ದೇಶದಲ್ಲಿ ಪವನಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನ ಉತ್ತೇಜನಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಈ ಕೆಳಗಿನ ಅಂಶಗಳು ಸೇರಿವೆ.
- ಸ್ವಯಂಚಾಲಿತ ಮಾರ್ಗದ ಮೂಲಕ ಶೇ.100ರವರೆಗೆ ವಿದೇಶಿ ನೇರ ಬಂಡವಾಳ (ಎಫ್ ಡಿಐ) ಗೆ ಅವಕಾಶ.
- 2025ರ ಜೂನ್ 30ರೊಳಗೆ ಕಾರ್ಯಾರಂಭ ಮಾಡಲಿರುವ ಯೋಜನೆಗಳಿಗೆ ಸೌರ ಮತ್ತು ಪವನ ವಿದ್ಯುತ್ ಅಂತರರಾಜ್ಯ ಮಾರಾಟಕ್ಕೆ ಇಂಟರ್ ಸ್ಟೇಟ್ ಟ್ರಾನ್ಸಮಿಷನ್ ಸಿಸ್ಟಂ (ಐಎಸ್ ಟಿಎಸ್) ನಿಂದ ಮನ್ನಾ.
- 2022ರವರೆಗ ನವೀಕರಿಸಬಹುದಾದ ಖರೀದಿ ಬಾಧ್ಯತೆ (ಆರ್ ಪಿಒ)ಯ ಪ್ರಗತಿ ಪಥ ಘೋಷಣೆ.
- ಪ್ಲಗ್ ಮತ್ತು ಪ್ಲೇ ಆಧಾರದ ಮೇಲೆ ನವೀಕರಿಸಬಹುದಾದ ಇಂಧನ ಡೆವಲ್ಲಪರ್ಸ್ ಗಳಿಗೆ ಭೂಮಿ ಮತ್ತು ಪ್ರಸರಣವನ್ನು ಒದಗಿಸಲು ಬೃಹತ್ ನವೀಕರಿಸಬಹುದಾದ ಇಂಧನ ಪಾರ್ಕ್ ಗಳನ್ನು ಸ್ಥಾಪಿಸುವುದು.
- ಹೊಸ ಪ್ರಸರಣಾ ಮಾರ್ಗಗಳನ್ನು ಸ್ಥಾಪಿಸುವುದು ಮತ್ತು ನವೀಕರಿಸಬಹುದಾದ ವಿದ್ಯುತ್ ಸಾಗಾಣೆಗೆ ಹೊಸ ಉಪಕೇಂದ್ರ ಸಾಮರ್ಥ್ಯವನ್ನು ಸೃಷ್ಟಿಸುವುದು.
- ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಸಗುಮಗೊಳಿಸಲು ಯೋಜನಾ ಅಭಿವೃದ್ಧಿ ಕೋಶವನ್ನು ಸ್ಥಾಪಿಸುವುದು.
- ಗ್ರಿಡ್ ಸಂಪರ್ಕಿತ ಸೌರ ಫಲಕಗಳು ಮತ್ತು ಪವನ ಯೋಜನೆಗಳಿಂದ ವಿದ್ಯುತ್ ಖರೀದಿಗಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಆಧರಿಸಿದ ನಿರ್ದಿಷ್ಠ ಹರಾಜು ಮಾರ್ಗಸೂಚಿಗಳನ್ನು ಸಿದ್ಧಪಡಿಸುವುದು.
- ನವೀಕರಿಸಬಹುದಾದ ಇಂಧನ ಉತ್ಪಾದಕರಿಗೆ ವಿತರಣಾ ಪರವಾನಗಿದಾರರಿಂದ ಸಕಾಲಕ್ಕೆ ಪಾವತಿಯನ್ನು ಖಾತ್ರಿಪಡಿಸಲು ಲೆಟರ್ ಆಫ್ ಕ್ರೆಡಿಟ್ (ಎಲ್ ಸಿ) ಅಥವಾ ಮುಂಗಡ ಪಾವತಿ ಅಧಿಕಾರವನ್ನು ನೀಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
- ನವೀಕರಿಸಬಹುದಾದ ಇಂಧನ ಯೋಜನೆಗಳ ಅನುಷ್ಠಾನ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಕೌಶಲ್ಯಹೊಂದಿದ ಮಾನವಶಕ್ತಿ ಕ್ರೂಢೀಕರಿಸಲು ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ನಡೆಸುವುದು.
- ಮೇಲಿನ ಕ್ರಮಗಳ ಜೊತೆಗೆ, ಪವನಶಕ್ತಿಯನ್ನು ಉತ್ತೇಜಿಸಲು ಈ ಕೆಳಗಿನ ನಿರ್ದಿಷ್ಠ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ಪವನ ವಿದ್ಯುತ್ ಜನರೇಟರ್ ಗಳ ತಯಾರಿಕೆಗೆ ಅಗತ್ಯವಾದ ಕೆಲವು ಘಟಕಗಳ ಮೇಲೆ ಸೀಮಾ ಸುಂಕ ವಿನಾಯ್ತಿ ನೀಡಲಾಗಿದೆ.
- 2017ರ ಮಾರ್ಚ್ 31 ಕ್ಕೂ ಮುನ್ನ ಅಥವಾ ಆನಂತರ ಕಾರ್ಯಾರಂಭ ಮಾಡಿದ ಪವನಶಕ್ತಿ ಯೋಜನೆಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹ(ಜಿಬಿಐ) ನೀಡಲಾಗುವುದು.
- ಚೆನ್ನೈನ ರಾಷ್ಟ್ರೀಯ ಪವನಶಕ್ತಿ ಕೇಂದ್ರದ ಮೂಲಕ ಸಂಭಾವ್ಯ ತಾಣಗಳನ್ನು ಗುರುತಿಸುವುದು ಮತ್ತು ಪವನ ಶಕ್ತಿ ಸಂಪನ್ಮೂಲ ಮೌಲ್ಯಮಾಪನ ಸೇರಿದಂತೆ ತಾಂತ್ರಿಕ ನೆರವು ನೀಡಲಾಗುವುದು.
ಪವನಶಕ್ತಿ ಸಂಪನ್ಮೂಲನವು ಹೆಚ್ಚು ನಿರ್ದಿಷ್ಠ ಜಾಗವನ್ನು ಅವಲಂಬಿಸಿದೆ ಮತ್ತು ಅದು ವಾಣಿಜ್ಯೀಕವಾಗಿ ಬಳಸಿಕೊಳ್ಳುವ ಸಾಮರ್ಥ್ಯವು ಏಳು ರಾಜ್ಯಗಳಲ್ಲಿ ಮಾತ್ರ ಅಂದರೆ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಮಾತ್ರ ಲಭ್ಯವಿದೆ. ಯೋಜನೆಯ ತಾಂತ್ರಿಕ- ಆರ್ಥಿಕ ಕಾರ್ಯಸಾಧ್ಯತೆ ಆಧರಿಸಿ ಖಾಸಗಿ ಡೆವಲ್ಲಪರ್ಸ್ ಗಳು ಪವನಶಕ್ತಿ ಯೋಜನೆಗಳನ್ನು ಸ್ಥಾಪಿಸುತ್ತಿದ್ದಾರೆ.
ದೇಶದಲ್ಲಿ ಒಟ್ಟು 20ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಪವನವಿದ್ಯುತ್ ಯೋಜನೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು ಟೆಂಡರ್ ಗಳನ್ನು ಆಹ್ವಾನಿಸಿವೆ, ಅವುಗಳಲ್ಲಿ ಈಗಾಗಲೇ 14,332 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ. 30.06.2021ರವರೆಗೆ ದೇಶದಲ್ಲಿ 39,486 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲಾಗಿದೆ.
ಕೇಂದ್ರ ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ ಸಿಂಗ್ ಅವರು ಲೋಕಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
***
(Release ID: 1740348)
Visitor Counter : 449